Myrusu Travel Places: ದಸರಾಗೆ ಹೋದ್ರೆ ಮೈಸೂರಿನ ಈ ಸ್ಥಳಗಳನ್ನೂ ಕಣ್ತುಂಬಿಕೊಂಡು, ಸುಂದರ ಅನುಭವ ನಿಮ್ಮದಾಗಿಸಿಕೊಳ್ಳಿ

Best Places To Visit In Mysuru: ಸಾಮ್ಯಾವಾಗಿ ಈ ಸಮಯದಲ್ಲಿ ಮೈಸೂರಿಗೆ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಈ ಬಾರಿ ಮೈಸೂರಿಗೆ ಹೋದಾಗ ಕೇವಲ ದಸರಾ ಮೆರಗನ್ನು ಮಾತ್ರವಲ್ಲದೇ ಕೆಲ ಸ್ಥಳಗಳನ್ನು ಸಹ ನೋಡಿಕೊಂಡು ಬನ್ನಿ. ಮೈಸೂರಿನ ಒಳಗೆ ಬಹಳ ಹತ್ತಿರದಲ್ಲಿ ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಎಂಬುದು ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವೊಮ್ಮೆ ಪ್ರಯಾಣ (Travel) ಮಾಡುವಾಗ, ಕೆಲವು ಸ್ಥಳಗಳು ನಮಗೆ ಬಹಳ ಸುಂದರ ಅನುಭವ ನೀಡುತ್ತದೆ. ಇಂತಹ ಸ್ಥಳಗಳಲ್ಲಿ ಮೈಸೂರು (Mysuru) ಕೂಡ ಒಂದು. ಮೈಸೂರಿನಲ್ಲಿ ಭೇಟಿ ನೀಡಲು ಅತ್ಯುತ್ತಮವಾದ ಸ್ಥಳಗಳಿದ್ದು, ಅವುಗಳ ವೈಭವ ಮತ್ತು ರಾಜಕಳೆ ನಮ್ಮನ್ನ ಆಕರ್ಷಿಸುತ್ತವೆ. ಇಲ್ಲಿನ ಕೆಲ ಸ್ಥಳಗಳು ರಾಜರ ಮತ್ತು ಅರಮನೆಗಳ (Palace) ಯುಗದಲ್ಲಿ ಕಳೆದುಹೋಗುವಂತೆ ಮಾಡುತ್ತದೆ. ಮೈಸೂರು ದಸರಾ (Mysore Dasara) ಆರಂಭವಾಗುತ್ತಿದೆ. ಸಾಮ್ಯಾವಾಗಿ ಈ ಸಮಯದಲ್ಲಿ ಮೈಸೂರಿಗೆ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಈ ಬಾರಿ ಮೈಸೂರಿಗೆ ಹೋದಾಗ ಕೇವಲ ದಸರಾ ಮೆರಗನ್ನು ಮಾತ್ರವಲ್ಲದೇ ಕೆಲ ಸ್ಥಳಗಳನ್ನು ಸಹ ನೋಡಿಕೊಂಡು ಬನ್ನಿ. ಮೈಸೂರಿನ ಒಳಗೆ ಬಹಳ ಹತ್ತಿರದಲ್ಲಿ ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಎಂಬುದು ಇಲ್ಲಿದೆ.  

ಮೈಸೂರು ಅರಮನೆ

ಮೈಸೂರಿನ ಜನಪ್ರಿಯ ಸ್ಥಳಗಳಲ್ಲಿ ಮೈಸೂರು ಅರಮನೆ ಮೊದಲ ಸ್ಥಾನದಲ್ಲಿದೆ. ಮೈಸೂರನ್ನು ಏಳು ಶತಮಾನಗಳ ಕಾಲ ಆಳಿದ ಒಡೆಯರ್ ರಾಜವಂಶದ ಆಡಳಿತಗಾರರ ನಿವಾಸವಾಗಿತ್ತು. ಪ್ರತಿ ವರ್ಷ 2.7 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಈ ಅರಮನೆಯನ್ನು ಭಾರತದಲ್ಲಿಯೇ ಅತಿ ದೊಡ್ಡ ಪ್ರವಾಸಿ ಸ್ಥಳವೆಂದು ಪರಿಗಣಿಸಲಾಗಿದೆ. ಅರಮನೆಯು ಮಂಟಪಗಳು, ದೊಡ್ಡ ಸಭಾಂಗಣಗಳು ಇತಿಹಾಸದ ಕಥೆಯನ್ನು ಹೇಳುತ್ತವೆ.

ವಿಳಾಸ: ದೇಶಿಕಾ ರಸ್ತೆ, ಎದುರು. ನಗರ ಬಸ್ ನಿಲ್ದಾಣ, ದೇವರಾಜ ಮೊಹಲ್ಲಾ, ಚಾಮರಾಜಪುರ, ಮೈಸೂರು

ಹೋಗುವುದು ಹೇಗೆ: ಹತ್ತಿರದ ವಿಮಾನ ನಿಲ್ದಾಣವು ಈ ಅರಮನೆಯಿಂದ 11 ಕಿಮೀ ದೂರದಲ್ಲಿದೆ. ಬಸ್​ ನಿಲ್ದಾಣ ಸಹ ಹತ್ತಿರದಲ್ಲಿದ್ದು ನೀವು ಅಲ್ಲಿಂದ ಈ ಅರಮನೆಗೆ ಕ್ಯಾಬ್ ಅಥವಾ ಸಿಟಿ ಬಸ್​ ಬಳಸಬಹುದು.

ಸಮಯ: ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ

ಕಾರಂಜಿ ಕೆರೆ

90 ಎಕರೆಯ ಈ ಕೆರೆ ನಿಜಕ್ಕೂ ಅದ್ಭುತ ಸ್ಥಳಗಳಲ್ಲಿ ಒಂದು.  ಕರ್ನಾಟಕದ ಅತಿ ದೊಡ್ಡ ಕೆರೆ ಮೈಸೂರಿನ ಅತ್ಯಂತ ಸುಂದರವಾದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಕಾರಂಜಿ ಸರೋವರವು ಚಾಮುಂಡಿ ಬೆಟ್ಟಗಳ ತಪ್ಪಲಿನಲ್ಲಿದೆ ಮತ್ತು ಪ್ರಕೃತಿಯ ರಮಣೀಯ ದೃಶ್ಯಗಳನ್ನು ಆನಂದಿಸಲು ಅತ್ಯುತ್ತಮ ಆಯ್ಕೆ ಎಂದರೆ ತಪ್ಪಲ್ಲ. 70 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಹೊಂದಿರುವ ಭಾರತದ ಅತಿದೊಡ್ಡ ವಾಕ್-ಥ್ರೂ ಪ್ಲೇಸ್​ ಇದು.

ಇದನ್ನೂ ಓದಿ: ನವರಾತ್ರಿ ಹಬ್ಬದ ಸಮಯದಲ್ಲಿ ಈ ಸ್ಪೆಷಲ್​ ರೆಸಿಪಿಗಳನ್ನು ಮಿಸ್​ ಮಾಡ್ಬೇಡಿ

ಹೋಗುವುದು ಹೇಗೆ: ಅರಮನೆಯು ರೈಲ್ವೆ ನಿಲ್ದಾಣದಿಂದ 5 ಕಿಮೀ ದೂರದಲ್ಲಿದೆ. ಮೃಗಾಲಯದ ಪಕ್ಕದಲ್ಲಿದೆ. ಬಸ್​ ಸಹ ಸುಲಭವಾಗಿ ಸಿಗುತ್ತದೆ.

ಸಮಯ: ಬುಧ-ಸೋಮ 8:30 ರಿಂದ ಸಂಜೆ 5.30, ಮಂಗಳವಾರ ಓಪನ್ ಆಗಿರುವುದಿಲ್ಲ

ಮೆಲೋಡಿ ವ್ಯಾಕ್ಸ್​ ಮ್ಯೂಸಿಯಂ

ಭಾರತದ ಮೂರನೇ ಅತಿದೊಡ್ಡ ಆರ್ಟ್ ಮ್ಯೂಸಿಯಂ, ಮೆಲೋಡಿ ವರ್ಲ್ಡ್. ಹೆಸರೇ ಸೂಚಿಸುವಂತೆ, ಮ್ಯೂಸಿಯಂ ನೂರಕ್ಕೂ ಹೆಚ್ಚು ಮೇಣದ ಪ್ರತಿಮೆಗಳು ಮತ್ತು ಮುನ್ನೂರಕ್ಕೂ ಹೆಚ್ಚು ಸಂಗೀತ ವಾದ್ಯಗಳ ಸಂಗ್ರಹವನ್ನು ಹೊಂದಿದೆ. ಜಾಝ್, ಪಾಪ್, ಚೈನೀಸ್, ಟ್ರೈಬಲ್, ರಾಕ್, ಪಂಜಾಬಿ ಭಾಂಗ್ರಾ, ಹಿಪ್ ಹಾಪ್ ಮುಂತಾದ ವಿವಿಧ ಪ್ರಕಾರಗಳು, ಶಿಲಾಯುಗದಿಂದ ಆಧುನಿಕ ವಾದ್ಯಗಳು ಮತ್ತು ಬ್ಯಾಂಡ್‌ಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಮೈಸೂರಿನ ಅತ್ಯಂತ ಪ್ರಸಿದ್ಧವಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

ವಿಳಾಸ: 1, ವಿಹಾರ ಮಾರ್ಗ, ಕುರುಬರ ಹಳ್ಳಿ, ಸಿದ್ಧಾರ್ಥ ಲೇಔಟ್, ಮೈಸೂರು

ಸಮಯ: ಪ್ರತಿದಿನ ಬೆಳಗ್ಗೆ 9:30 ರಿಂದ ಸಂಜೆ 7:00 ರವರೆಗೆ

 ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್

ಮೈಸೂರು ಮೃಗಾಲಯ ಎಂದು ಕರೆಯಲ್ಪಡುವ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ನಮ್ಮ ದೇಶದಲ್ಲಿ ಕಂಡುಬರುವ ಪ್ರಾಣಿಗಳಲ್ಲದೆ, ಈ ಮೃಗಾಲಯವು ವಿದೇಶಿ ಪ್ರಾಣಿಗಳನ್ನು ಸಹ ಹೊಂದಿದೆ.

ಸ್ಥಳ: ಮೃಗಾಲಯ ಮುಖ್ಯರಸ್ತೆ, ಇಂದಿರಾ ನಗರ, ಇಟ್ಟಿಗೆ ಗೂಡು, ಮೈಸೂರುಹೋಗುವುದು ಹೇಗೆ: ಮೈಸೂರು ಅರಮನೆಯ ಸಮೀಪದಲ್ಲಿದೆ, ಇಲ್ಲಿಗೆ ಕ್ಯಾಬ್, ಟ್ಯಾಕ್ಸಿ ಮೂಲಕ ತಲುಪಬಹುದು

ಸಮಯ: 8:30 ರಿಂದ 5:30 ರವರೆಗೆ (ಮಂಗಳವಾರ ಓಪನ್ ಇರುವುದಿಲ್ಲ)

ಇದನ್ನೂ ಓದಿ: ಕಾಫಿ ಜೊತೆ ದಾವಣಗೆರೆ ಬಿಸಿ ಬಿಸಿ ಬಜ್ಜಿ ತಿನ್ನೋದೇ ಖುಷಿ, ಬೆಂಗಳೂರಿನ ಈ ಸ್ಥಳಗಳಲ್ಲಿ ಸಿಗೋ ಮಿರ್ಚಿಗಿಲ್ಲ ಸಾಟಿ

ಚಾಮುಂಡಿ ಬೆಟ್ಟ

ಮೈಸೂರಿಗೆ ಹೋದ ಮೇಲೆ ಚಾಮುಂಡಿ ಬೆಟ್ಟಕ್ಕೆ ಹೋಗದೇ ಬರಲಾಗುವುದಿಲ್ಲ. ಇದು ಮೈಸೂರಿನಿಂದ 13 ಕಿಮೀ ದೂರದಲ್ಲಿದೆ ಮತ್ತು ಬೆಟ್ಟಗಳ ಮೇಲೆ ಸುಂದರವಾದ ಶಿಲ್ಪಕಲೆ ಚಾಮುಂಡೇಶ್ವರಿ ದೇವಸ್ಥಾನವಿದೆ. ಕುಟುಂಬ ಸಮೇತ ಭೇಟಿ ನೀಡಲು ಮೈಸೂರಿನಲ್ಲಿ ಇದು ಅತ್ಯಂತ ಪ್ರಸಿದ್ಧ ಸ್ಥಳವಾಗಿದೆ.
Published by:Sandhya M
First published: