ಹೊಸದಾಗಿ ಮದುವೆಯಾಗುವ ನವಜೋಡಿಗೆ (Couples) ತಮ್ಮ ಮದುವೆಯ (Marriage) ಮೊದಲ ರಾತ್ರಿಯನ್ನು (First Night) ಸೊಗಸಾಗಿ ಮತ್ತು ರೊಮ್ಯಾಂಟಿಕ್ (Romantic) ಆಗಿ ಕಳೆಯಲು ಬಯಸುತ್ತಾರೆ. ಸಂಗಾತಿಯೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗಿ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಕಳೆಯಲು ಇಚ್ಛಿಸುತ್ತಾರೆ. ಅದು ಬೀಚ್ (Beach), ಫಾಲ್ಸ್, ಪ್ರಕೃತಿಯ (Nature) ಸುಂದರ ತಾಣಗಳಿಗೆ ತೆರಳಿ ಎಂಜಾಯ್ ಮಾಡಲು ನೋಡುತ್ತಾರೆ. ಮದುವೆಯ ನಂತರ ದಂಪತಿಗೆ ಹನಿಮೂನ್ ಹೋಗಲು ಯಾವ ಸ್ಥಳ ಆಯ್ಕೆ ಮಾಡಿಕೊಳ್ಳುವುದು ಎಂಬುದೇ ಪೇಚಿನ ಸಂಗತಿ. ನಿಮ್ಮ ಹನಿಮೂನ್ (Honeymoon) ಗೆ ನೀವು ಕಡಿಮೆ ಬಜೆಟ್ ನಲ್ಲಿ ಈ ಜಾಗಗಳಿಗೆ ತೆರಳಿ ನಿಮ್ಮ ಸುಂದರ ರಾತ್ರಿಯನ್ನು ಮತ್ತಷ್ಟು ರೊಮ್ಯಾಂಟಿಕ್ ಆಗಿ ಕಳೆಯಬಹುದು. ಹನಿಮೂನ್ ಹೋಗುವಾಗ ಸ್ಥಳ, ಋತು ಮತ್ತು ಚಟುವಟಿಕೆಗಳ ಜೊತೆಗೆ ಬಜೆಟ್ ಬಗ್ಗೆಯೂ ನಿಗಾ ವಹಿಸಬೇಕಾಗುತ್ತದೆ. ಹಾಗಾದರೆ ಮದುವೆಯ ನಂತರ ನೀವು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಬಜೆಟ್ ಸ್ನೇಹಿ ಈ ಹನಿಮೂನ್ ತಾಣಗಳಿಗೆ ಹೋಗಬಹುದು.
ಕೇರಳ: ಕೇರಳವನ್ನು ಪೂರ್ವದ ವೆನಿಸ್ ಎಂದು ಕರೆಯಲಾಗುತ್ತದೆ. ಈ ಸುಂದರ ಹನಿಮೂನ್ ತಾಣವು, ವರ್ಷವಿಡೀ ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಂದ ತುಂಬಿರುತ್ತದೆ. ಇಲ್ಲಿ ನೀರಿನ ಮೇಲೆ ತೇಲುತ್ತಿರುವ ಹೌಸ್ಬೋಟ್ ನಲ್ಲಿ ವಿಹರಿಸಲು ಮತ್ತು ಪ್ರಕೃತಿಯನ್ನು ಆನಂದಿಸಲು ಜನರು ದೂರ ದೂರುಗಳಿಂದ ಬರುತ್ತಾರೆ. ಕೇರಳದ ಅಲೆಪ್ಪಿಯಲ್ಲಿ ಚಹಾ ತೋಟಗಳು, ಪರ್ವತಗಳು ಮತ್ತು ಅನೇಕ ಸುಂದರ ತಾಣಗಳನ್ನು ನೋಡಬಹುದು.
ಅಂಡಮಾನ್ ಮತ್ತು ನಿಕೋಬಾರ್: ಹಾಲಿವುಡ್ ಶೈಲಿಯಲ್ಲಿ ನಿಮ್ಮ ಪ್ರಣಯ ಹಾಗೂ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳಬೇಕು. ಸಂಗಾತಿಯೊಂದಿಗೆ ಸ್ವಚ್ಛಂಧವಾಗಿ ವಿಹರಿಸಲು ಅಂಡಮಾನ್ ಮತ್ತು ನಿಕೋಬಾರ್ ಬೆಸ್ಟ್ ಪ್ಲೇಸ್. ಇಲ್ಲಿನ ಕಡಲತೀರ, ಮರಳು, ತಾಳೆ ಮರಗಳಿಗೆ ಕಟ್ಟಿದ ನೆರಳಿನ ಉಯ್ಯಾಲೆಗಳು, ಸ್ಕೂಬಾ ಡೈವಿಂಗ್, ಗ್ಲಾಸ್ ಬೋಟ್ ರೈಡ್ ಮತ್ತು ವಿಂಡ್ ಸರ್ಫಿಂಗ್ ನಿಮ್ಮ ಹನಿಮೂನ್ ನ್ನು ಮನಮೋಹಕಗೊಳಿಸುತ್ತದೆ.
ಇದನ್ನೂ ಓದಿ: ಕಿಸ್ ಡೇ ಗೆ ಏನ್ ಗಿಫ್ಟ್ ಕೊಡೋದು ಅಂತ ಯೋಚ್ನೆ ಮಾಡ್ತಿದ್ರೆ ಇಲ್ಲಿದೆ ಸೂಪರ್ ಐಡಿಯಾ
ಜಮ್ಮು ಮತ್ತು ಕಾಶ್ಮೀರ: ದೆಹಲಿ-ಎನ್ಸಿಆರ್ ಸುತ್ತಮುತ್ತ ಉತ್ತಮ ಹನಿಮೂನ್ ತಾಣವನ್ನು ಹುಡುಕುತ್ತಿದ್ದರೆ, ಜಮ್ಮು ಮತ್ತು ಕಾಶ್ಮೀರವು ಉತ್ತಮ ಆಯ್ಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಪ್ರೇಮ ಪಕ್ಷಿಗಳಿಗೆ ಬಹಳ ಪ್ರಸಿದ್ಧವಾದ ಸ್ಥಳವಾಗಿದೆ. ಹಿಮದ ಹೊದಿಕೆಯಿಂದ ಆವೃತವಾದ ಎತ್ತರದ ಪರ್ವತಗಳು, ಮೊಘಲ್ ಉದ್ಯಾನಗಳು ಮತ್ತು ಹಚ್ಚ ಹಸಿರಿನ ಕಣಿವೆಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಉತ್ತರಾಖಂಡ: ಉತ್ತರಾಖಂಡ ಯಾವಾಗಲೂ ದೆಹಲಿ-ಎನ್ಸಿಆರ್ನಲ್ಲಿ ವಾಸಿಸುವವರಿಗೆ ಉತ್ತಮ ಪ್ರವಾಸಿ ತಾಣವೆಂದು ಕರೆಯಲ್ಪಟ್ಟಿದೆ. ನೀವು ಕಡಿಮೆ ಬಜೆಟ್ನಲ್ಲಿ ಸುಂದರವಾದ ಮತ್ತು ರೋಮ್ಯಾಂಟಿಕ್ ಸ್ಥಳಕ್ಕೆ ಹೋಗಲು ಬಯಸಿದರೆ ಉತ್ತರಾಖಂಡವು ಅತ್ಯುತ್ತಮ ಆಯ್ಕೆಯಾಗಿದೆ. ನೈನಿತಾಲ್ನಿಂದ ಔಲಿಯವರೆಗೆ ಹಿಮದ ತುಂಬಿರುತ್ತದೆ. ಇದು ಅತ್ಯುತ್ತಮ ಹನಿಮೂನ್ ಪ್ಲೇಸ್ ಎಂದು ಪರಿಗಣಿಲ್ಪಟ್ಟಿದೆ. ನೀವು ಔಲಿಯಲ್ಲಿ ಜಿಪ್ ಲೈನ್, ಟ್ರೆಕ್ಕಿಂಗ್, ಸ್ಕೀಯಿಂಗ್ ಮುಂತಾದ ಚಟುವಟಿಕೆಗಳನ್ನು ಆನಂದಿಸಬಹುದು.
ಗೋವಾ: ನಿಮ್ಮ ಹನಿಮೂನ್ ಸೊಗಸಾಗಿರಬೇಕಾದರೆ ಗೋವಾ ಉತ್ತಮ ಆಯ್ಕೆ. ತಾಳೆ ಮರಗಳಿಂದ ಸುತ್ತುವರಿದ ಬೀಚ್, ಪುರಾತನ ಚರ್ಚ್ಗಳು ಮತ್ತು ಕ್ರೀಡಾ ಚಟುವಟಿಕೆಗಳು ಗೋವಾದ ವೈಶಿಷ್ಟ್ಯಗಳಾಗಿವೆ. ಕಡಲ ತೀರಗಳು ನಿಮ್ಮನ್ನು ರೊಮ್ಯಾಂಟಿಕ್ ಆಗಿಸುತ್ತವೆ.
ಗುಜರಾತ್: ಚಳಿಗಾಲ ಮದುವೆ ಸೀಸನ್ ಶುರುವಾಗುತ್ತದೆ. ಡಿಸೆಂಬರ್ನಿಂದ ಫೆಬ್ರವರಿ ನಡುವೆ ಹನಿಮೂನ್ಗೆ ಹೋಗಲು ಯೋಜಿಸುತ್ತಿದ್ದರೆ, ನೀವು ಗುಜರಾತ್ಗೆ ಹೊರಡಬಹುದು. ಗುಜರಾತಿನ ಕಛ್ ತಾಣ ಅತ್ಯುತ್ತಮ ಸ್ಥಳವಾಗಿದೆ. ಶಾಪಿಂಗ್, ಡೆಸರ್ಟ್ ಸಫಾರಿ ಮತ್ತು ಚಂದ್ರನ ಬೆಳಕಿನಲ್ಲಿ ಮರಳಿನ ಮೇಲೆ ರಾತ್ರಿಯ ಭೋಜನ ಸಖತ್ ಮಜಾ ಕೊಡುತ್ತದೆ.
ರಾಜಸ್ಥಾನ: ರಾಯಲ್ ಹನಿಮೂನ್ ಅನ್ನು ಆಚರಿಸಲು ಬಯಸಿದರೆ ರಾಜಸ್ಥಾನ ಬೆಸ್ಟ್ ಆಯ್ಕೆ. ಸರೋವರ ವಿಹಾರದಿಂದ ಮರುಭೂಮಿಯಲ್ಲಿ ಒಂಟೆ ಸವಾರಿಯವರೆಗೆ ಈ ಸ್ಥಳವು ನಿಮ್ಮ ಮಧುಚಂದ್ರವನ್ನು ರೋಮ್ಯಾಂಟಿಕ್ ಮತ್ತು ರಾಯಲ್ ಆಗಿಸುತ್ತದೆ. ನೀವು ಅಕ್ಟೋಬರ್ ನಿಂದ ಫೆಬ್ರವರಿ ನಡುವೆ ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಜೈಸಲ್ಮೇರ್, ಉದಯಪುರ, ಮೌಂತಾಬು ಮುಂತಾದ ಅನೇಕ ಅದ್ಭುತ ಸ್ಥಳಗಳಿವೆ.
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶವು ಜನರು ಆನಂದಿಸಲು ಸ್ವಿಟ್ಜರ್ಲೆಂಡ್ಗೆ ಹೋಗುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. ಹಿಮಾಚಲ ಪ್ರದೇಶದ ಹಸಿರು ಕಣಿವೆಗಳು, ಹಿಮದಿಂದ ಆವೃತವಾದ ಶಿಖರಗಳು ನಿಮ್ಮ ಪ್ರಣಯಕ್ಕೆ ಕಿಚ್ಚು ಹಚ್ಚುತ್ತವೆ.
ಡಾರ್ಜಲಿಂಗ್: ಡಾರ್ಜಲಿಂಗ್ ಅನ್ನು ವಿಶ್ವದ ಉನ್ನತ ದರ್ಜೆಯ ಗಿರಿಧಾಮಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ನಿಮ್ಮ ಹನಿಮೂನ್ ಅನ್ನು ಇಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಆನಂದಿಸಬಹುದು. ಸಿಂಗಮಡಿ ರೋಪ್ವೇ, ಟೈಗರ್ ಹಿಲ್ಸ್, ಟಾಯ್ ಟ್ರೈನ್ ಜೊತೆಗೆ ಹಚ್ಚ ಹಸಿರಿನ ಪ್ರದೇಶಗಳು ಮತ್ತು ಸುಂದರವಾದ ಚಹಾ ತೋಟಗಳಿಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಈ Valentine's Day ದಿನ ನಿಮ್ಮ ಪ್ರೇಯಸಿ ಜೊತೆ ಈ ಬೀಚ್ಗಳಿಗೆ ವಿಸಿಟ್ ಕೊಡಿ
ಕರ್ನಾಟಕ: ಕರ್ನಾಟಕ ಕೂಡ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಕರ್ನಾಟಕದ ಕೂರ್ಗ್ ಅನ್ನು ಭಾರತದ 'ಸ್ಕಾಟ್ಲೆಂಡ್' ಎಂದೂ ಕರೆಯುತ್ತಾರೆ. ಹನಿಮೂನ್ ಗೆ ಈ ಗಿರಿಧಾಮವು ಪರಿಪೂರ್ಣವಾಗಿದೆ. ಸೂರ್ಯಾಸ್ತ ನೋಡುತ್ತ ಪ್ರೇಮದ ಅಮಲಿನಲ್ಲಿ ತೇಲುವುದು ಖುಷಿ ಕೊಡುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ