Rakhi Celebration: ರಾಖಿ ಕಟ್ಟಿ ಆದ್ಮೇಲೆ ಒಳ್ಳೆ ಊಟ ಕೊಡ್ಸಿ ಮಾರ್ರೆ, ಈ ಜಾಗಗಳಿಗೆ ಹೋಗಿ ಸಖತ್ ಊಟ ಸಿಗುತ್ತೆ

Near Me Restaurants Bengaluru: ಗಿಫ್ಟ್​ ಜೊತೆಗೆ ಒಂದು ಸರ್ಪ್ರೈಸ್​ ಡಿನ್ನರ್​ ಅಥವಾ ಲಂಚ್​ ಪಾರ್ಟಿ ಕೊಟ್ಟರೆ ಅವರ ಸಂತೋಷಕ್ಕೆ ಮಿತಿ ಇರುವುದಿಲ್ಲ. ನೀವು ಬೆಂಗಳೂರಿನಲ್ಲಿದ್ದು, ರಾಖಿಗೆ ಸರ್ಪ್ರೈಸ್​ ಕೊಡಬೇಕು ಅಂತ ಇದ್ದರೆ ಈ ಸ್ಥಳಗಳು ಬೆಸ್ಟ್​ ಅಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಕ್ಷಾಬಂಧನ (Raksha Bandhan) ಹತ್ತಿರದಲ್ಲಿದೆ, ಈಗಾಗಲೇ ಅದಕ್ಕೆ ಭರ್ಜರಿ ತಯಾರಿ ಆರಂಭವಾಗಿದೆ. ಹೆಣ್ಣು ಮಕ್ಕಳು ಅಣ್ಣ – ತಮ್ಮಂದಿರಿಗಾಗಿ ರಾಖಿ ಖರೀದಿಯನ್ನು ಆರಂಭಿಸಿದ್ದಾರೆ. ಯಾರಿಗೆ ಯಾವ ರೀತಿಯ ರಾಖಿ ಕಟ್ಟಬೇಕು ಎಂಬುದನ್ನ ನಿರ್ಧರಿಸಿದ್ದಾರೆ. ಹಾಗೆಯೇ ರಾಖಿ ಕಟ್ಟಿಸಿಕೊಂಡ ಮೇಲೆ ಅಕ್ಕ ಅಥವಾ ತಂಗಿಗೆ ಗಿಫ್ಟ್​ ಕೊಡದಿದ್ದರೆ ಹೇಗೆ ಹೇಳಿ. ಗಿಫ್ಟ್​ ಜೊತೆಗೆ ಒಂದು ಸರ್ಪ್ರೈಸ್​ ಡಿನ್ನರ್​ ಅಥವಾ ಲಂಚ್​ ಪಾರ್ಟಿ ಕೊಟ್ಟರೆ ಅವರ ಸಂತೋಷಕ್ಕೆ ಮಿತಿ ಇರುವುದಿಲ್ಲ. ನೀವು ಬೆಂಗಳೂರಿನಲ್ಲಿದ್ದು, ರಾಖಿಗೆ ಸರ್ಪ್ರೈಸ್​ ಕೊಡಬೇಕು ಅಂತ ಇದ್ದರೆ ಈ ಸ್ಥಳಗಳು ಬೆಸ್ಟ್​ ಅಂತೆ. ಇಲ್ಲಿದೆ ಫುಲ್ ಡೀಟೆಲ್ಸ್​

ಪಾರ್ಕ್ ಹೋಟೆಲ್, ಅಶೋಕ್ ನಗರ್, ಬೆಂಗಳೂರು

ನೀವು ಈ ಬಾರಿ ಸ್ವಲ್ಪ ವಿಭಿನ್ನವಾಗಿ ಸರ್ಪ್ರೈಸ್​ ಕೊಡಬೇಕು ಎಂದರೆ ಈ ಹೋಟೆಲ್ ಬೆಸ್ಟ್ ನಿಮಗೆ. ಕ್ಯಾಂಡಲ್ ಲೈಟ್ ಡಿನ್ನರ್ ಎಂದರೆ ಯಾವ ಹುಡುಗಿಯರು ಇಷ್ಟಪಡುವುದಿಲ್ಲ ಹೇಳಿ. ಅದರಲ್ಲೂ ಅಣ್ಣ ಅಥವಾ ತಮ್ಮನ ಜೊತೆ ಎಂದರೆ ಬಹಳ ವಿಶೇಷವಾಗಿರುತ್ತದೆ. ನೀವು ಇಲ್ಲಿ ಮೊದಲೇ ಬುಕ್​ ಮಾಡಿದ್ದರೇ, ಎಲ್ಲಾ ವ್ಯವಸ್ಥೆಯನ್ನು ಸಹ ಮಾಡಿರುತ್ತಾರೆ.

ಸಮಯ: 07:00 PM - 11:00 PM1:00 PM - 4:00 PM

ಸ್ಥಳ: 14, 7, ಮಹಾತ್ಮ ಗಾಂಧಿ ರೆಡ್, ಎಲ್ಲಪ್ಪ ಗಾರ್ಡನ್, ಎಲ್ಲಪ್ಪ ಚೆಟ್ಟಿ ಲೇಔಟ್, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560042

ಮೊಬೈಲ್​ ನಂಬರ್: 080 2559 4666

 ದಿ ಓನ್ಲಿ ಪ್ಲೇಸ್​, ಮ್ಯೂಸಿಯಂ ರೋಡ್​, ಬೆಂಗಳೂರು

ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಅದ್ಬುತ ರೆಸ್ಟೊರೆಂಟ್‌ನಲ್ಲಿ ರುಚಿಕರವಾದ ಆಹಾರಗಳ ಜೊತೆ ನೀವು ತಂಗಿ ಅಥವಾ ಅಕ್ಕನೊಂದಿಗೆ ಸಮಯ ಕಳೆಯಬಹುದು. ಆಹ್ಲಾದಕರ ವಾತಾವರಣ, ಉತ್ಸಾಹದಿಂದ ಇರುವ ಸಿಬ್ಬಂದಿ ಮತ್ತು ರುಚಿಕರ ಆಹಾರವು ದಿ ಓನ್ಲಿ ಪ್ಲೇಸ್‌ನಲ್ಲಿ ನಿಮಗಾಗಿ ಕಾಯುತ್ತಿದೆ ಎನ್ನಬಹುದು. ಬೆಂಗಳೂರಿನಲ್ಲಿ ತಿನ್ನಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಆದರೆ ಇದು ಕೇವಲ ನಾನ್​ ವೆಜ್​ ರೆಸ್ಟೊರೆಂಟ್​ ಆಗಿದೆ.



ವಿಳಾಸ: 13, ಮ್ಯೂಸಿಯಂ ರಸ್ತೆ, ಅಂಚೆ ಕಚೇರಿ ಹಿಂಭಾಗ, ಬೆಂಗಳೂರು

ಸಮಯ: ಸೋಮವಾರದಿಂದ ಗುರುವಾರದವರೆಗೆ (ಮಧ್ಯಾಹ್ನ 12- ಮಧ್ಯಾಹ್ನ 3, ರಾತ್ರಿ 7- 11 ಗಂಟೆ)

ಗ್ರೀನ್ ಥಿಯರಿ

ಸಸ್ಯಗಳು ಮತ್ತು ಉದ್ಯಾನ ಕೊಳ ಹೀಗೆ ಹಸಿರಿನಿಂದ ತುಂಬಿರುವ ಈ ವಿಭಿನ್ನ ರೆಸ್ಟೊರೆಂಟ್‌ನಲ್ಲಿ ಪಿಜ್ಜಾಗಳು, ಬರ್ಗರ್‌ಗಳು, ಸಿಜ್ಲರ್‌ಗಳು ಮತ್ತು ಸ್ಯಾಂಡ್‌ವಿಚ್‌ ಹೀಗೆ ಅನೇಕ ಆಪ್ಷನ್​ಗಳಿದ್ದು, ಬೇಕಾದ ಆಹಾರವನ್ನು ಆರ್ಡರ್​ ಮಾಡಬಹುದು. ಸಲಾಡ್, ಕಾಫಿ ಅಥವಾ ಚಹಾ ಸಹ ಇಲ್ಲಿ ಲಭ್ಯವಿದೆ. ಇವರ ಎರಡು ಶಾಖೆಗಳು ಬೆಂಗಳೂರಿನಲ್ಲಿದೆ.



 ವಿಳಾಸ: 15, ಕಾನ್ವೆಂಟ್ ರಸ್ತೆ, ಅಶೋಕ್ ನಗರ, ಬೆಂಗಳೂರು

ಮೊಬೈಲ್ ನಂಬರ್: +918041663836

ಸಮಯ: ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆ

 ಲಿಟಲ್​ ಇಟಾಲಿ

ಸಸ್ಯಾಹಾರ ಬೇಕು ಆದರೆ ಸ್ವಲ್ಪ ವಿಭಿನ್ನವಾಗಿ ಬೇಕು ಎನಿಸಿದರೆ ಈ ಸ್ಥಳವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಈ ಸಸ್ಯಾಹಾರಿ ಇಟಾಲಿಯನ್ ರೆಸ್ಟೊರೆಂಟ್‌ನಲ್ಲಿ ಪಿಜ್ಜಾಗಳು, ಚೀಸ್-ಲೋಡೆಡ್ ಲಸಾಂಜಗಳು ಮತ್ತು ಸ್ವೀಟ್ಸ್​ ಟ್ರೈ ಮಾಡಲೇಬೇಕು.ಇಲ್ಲಿ ಜೈನ ಆಯ್ಕೆಗಳು ಸಹ ಲಭ್ಯವಿದೆ.

ಇದನ್ನೂ ಓದಿ: ಅಣ್ಣಂಗೆ ಕಟ್ಟೋಕೆ ಸೂಪರ್ ರಾಖಿ ಬೇಕಾ? ಹಾಗಾದ್ರೆ ಬೆಂಗಳೂರಿನ ಈ ಸ್ಥಳಗಳು ಬೆಸ್ಟ್​ ಅಂತೆ ನೋಡಿ

ವಿಳಾಸ: ಕಟ್ಟಡ 7, M-415, HRBR ಲೇಔಟ್, 2ನೇ ಬ್ಲಾಕ್, ಕಲ್ಯಾಣ್ ನಗರ, ಬೆಂಗಳೂರು

ಸಮಯ: ಬೆಳಗ್ಗೆ 10 ರಿಂದ ರಾತ್ರಿ 9.30

ಮೊಬೈಲ್​ ನಂಬರ್: +917978584695



ಪಾಕಶಾಲಾ, ಇಂದಿರಾ ನಗರ , ಬೆಂಗಳೂರು

ನೀವು ದರ್ಶಿನಿ ಶೈಲಿಯ ರೆಸ್ಟೋರೆಂಟ್ ಹುಡುಕುತ್ತಿದ್ದರೆ ಪಾಕಶಾಲಾಗೆ ಹೋಗಿ. ಇದು ನಗರದಾದ್ಯಂತ ವಿವಿಧ ಶಾಖೆಗಳನ್ನು ಹೊಂದಿದೆ. ಹಲವಾರು ರೀತಿಯ ಸೂಪ್‌ಗಳು, ಚೈನೀಸ್ ಆಹಾರ ಮತ್ತು ಸಂಜೆಯ ಸ್ನ್ಯಾಕ್ಸ್​ ಎಲ್ಲವೂ ಇಲ್ಲಿ ಲಭ್ಯವಿದೆ. ನಿಮ್ಮ ಕುಟುಂಬದ ಜೊತೆ ಹೋಗಲು ಇದು ಉತ್ತಮ ಸ್ಥಳ. ಇವರ ವಿವಿಧ ಶಾಖೆಗಳಿವೆ, ನಿಮಗೆ ಯಾವುದು ಹತ್ತಿರವಿದೆ ಅದಕ್ಕೆ ಹೋಗಬಹುದು.

ಇದನ್ನೂ ಓದಿ:ಬಾಳೆ ಎಲೆ ಬರೀ ಉಂಡು ಎಸೆಯೋಕಷ್ಟೇ ಅಲ್ಲ, ತ್ವಚೆಯ ಅಂದ ಹೆಚ್ಚಿಸಲೂ ಬಳಸಬಹುದು!

ವಿಳಾಸ: 335, 1ನೇ ಮಹಡಿ, ಐಡಿಯಲ್ ಹೋಮ್ ಟೌನ್‌ಶಿಪ್, ಹಂತ 1, ರಾಜರಾಜೇಶ್ವರಿ ನಗರ, ಬೆಂಗಳೂರು

ಮೊಬೈಲ್ ನಂಬರ್: +918028604460

ಸಮಯ: ಬೆಳಗ್ಗೆ 7 ರಿಂದ ರಾತ್ರಿ 9.30ರವರೆಗೆ
Published by:Sandhya M
First published: