Filter coffee: ಕಾಫಿ ಪ್ರಿಯರಾ! ಇಲ್ಲಿದೆ ನೋಡಿ ಬೆಂಗಳೂರಿನಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಸಿಗುವ 10 ಸ್ಥಳಗಳು

ಸಾಕಷ್ಟು ಚಿಕೋರಿ ಹಾಕಿ, ತಾಜಾವಾಗಿ ತಯಾರಿಸುವ ಕಾಫಿ ಮನಸ್ಸಿಗೆ ಮುದ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನಲ್ಲಿ ಎಷ್ಟೇ ಐಷರಾಮಿ ಕೆಫೆಗಳು (cafe) ಇದ್ದರೂ ಮತ್ತು ತರವಾರಿ ಕಾಫಿಗಳು ಲಭ್ಯವಿದ್ದರೂ, ಫಿಲ್ಟರ್ ಕಾಫಿ (Filter coffee) ಸಂಸ್ಕೃತಿ ಇಂದಿಗೂ ಬದಲಾಗಿಲ್ಲ. ಈಗಲೂ ಇಲ್ಲಿ ರುಚಿಕರ ಫಿಲ್ಟರ್ ಕಾಫಿ ಸಿಗುತ್ತದೆ. ಫಿಲ್ಟರ್ ಕಾಫಿ ದಪ್ಪವಿರುವುದಿಲ್ಲ ಮತ್ತು ಅದರಲ್ಲಿನ ಹಾಲು (Milk) ನಿಮ್ಮ ನಾಲಗೆಯನ್ನು ಆವರಿಸಿಕೊಳ್ಳುವುದಿಲ್ಲ. ಸಾಕಷ್ಟು ಚಿಕೋರಿ ಹಾಕಿ, ತಾಜಾವಾಗಿ ತಯಾರಿಸುವ ಕಾಫಿ ಮನಸ್ಸಿಗೆ ಮುದ ನೀಡುತ್ತದೆ.

ಬೆಂಗಳೂರಿನಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಸಿಗುವ 10 ಸ್ಥಳಗಳು ಈ ಕೆಳಗಿನಂತಿವೆ :

1. ಇಂಡಿಯಾ ಕಾಫಿ ಹೌಸ್ : ಚರ್ಚ್ ಸ್ಟ್ರೀಟ್
ಬೆಂಗಳೂರು ಉದ್ಯಾನ ನಗರಿಯಿಂದ ಐಟಿ ಹಬ್ ಆಗಿ ಬದಲಾದರೂ ಕೂಡ, ಚರ್ಚ್ ಸ್ಟ್ರೀಟ್‍ನಲ್ಲಿರುವ ಇಂಡಿಯಾ ಕಾಫಿ ಹೌಸ್ ಹೆಚ್ಚಿನ ಬದಲಾವಣೆ ಕಂಡಿಲ್ಲ. ಅದೇ ಹಳೆ ಶೈಲಿಯ ಕಪ್‍ಗಳು, ನೌಕರರ ಬದಲಾಗದ ಸಮವಸ್ತ್ರಗಳ ಮೂಲಕ ಇಂದಿಗೂ ಅದು ತನ್ನತನವನ್ನು ಉಳಿಸಿಕೊಂಡಿದೆ. ಸಂತಸದ ವಿಷಯವೆಂದರೆ, 1950ರಿಂದಲೂ ಅಲ್ಲಿಯ ಕಾಫಿಯ ರುಚಿ ಕೂಡ ಬದಲಾಗಿಲ್ಲ. ಭಾರತದ ಕಾಫಿ ಬೋರ್ಡ್‍ನಿಂದ ಸ್ಥಾಪಿಸಲ್ಪಟ್ಟಿರುವ (ರಾಜ್ಯವು ದೇಶದಲ್ಲಿ ಶೇಕಡಾ 70 ರಷ್ಟು ಕಾಫಿಯನ್ನು ಉತ್ಪಾದಿಸುತ್ತದೆ) ಈ ಕಾಫಿ ಹೌಸ್, ಭಾರತದ ಮೊದಲ ಕಾಫಿ ಸರಪಣಿಯಾಗಿದೆ ಮತ್ತು ಅದರ ಯಶಸ್ಸು ಇಂದಿಗೂ ಹಾಗೆಯೇ ಇದೆ.

2. ಸಿಟಿಆರ್, ಶ್ರೀ ಸಾಗರ್ ಹೋಟೆಲ್ : 7ನೇ ಅಡ್ಡ ರಸ್ತೆ , ಮಲ್ಲೇಶ್ವರಂ
ಗರಿಗರಿಯಾದ ಬೆಣ್ಣೆ ಮಸಾಲೆ ದೋಸೆಗೆ ಹೆಸರುವಾಸಿಯಾಗಿರುವ ಹೋಟೆಲ್ ಇದು. ಆದರೆ, ಇಲ್ಲಿ ಬೆಣ್ಣೆ ಮಸಾಲೆ ದೋಸೆ ಮತ್ತು ಇತರ ತಿನಿಸುಗಳಷ್ಟೇ ಚೆನ್ನಾಗಿರುತ್ತದೆ ಎಂದುಕೊಂಡರೆ, ನಿಮ್ಮ ಊಹೆ ತಪ್ಪು. ಇಲ್ಲಿ ರುಚಿಕರ ಫಿಲ್ಟರ್ ಕಾಫಿ ಕೂಡ ಸಿಗುತ್ತದೆ.

3. ಬ್ರಾಹ್ಮಣರ ಕಾಫಿ ಬಾರ್ : ಶಂಕರಪುರ , ಬಸವನಗುಡಿ
1960ರಲ್ಲಿ ಆರಂಭವಾದ ಬ್ರಾಹ್ಮಣರ ಕಾಫಿ ಬಾರ್ ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚು. ಇಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳಲು ಯಾವುದೇ ಆಸನಗಳಿಲ್ಲ, ಹೋಟೆಲಿನ ಮುಂದೆ ರಸ್ತೆ ಬದಿಯಲ್ಲೇ ನಿಂತು ಕಾಫಿ ಕುಡಿಯಬೇಕು. ಆದರೂ ಇಲ್ಲಿನ ಕಾಫಿ ರುಚಿಗೆ ಮನಸೋತು ಬರುವ ಗ್ರಾಹಕರ ದಂಡೇ ಹೋಟೆಲಿನ ಮುಂದೆ ನೆರೆದಿರುತ್ತದೆ. ಕಾಫಿ ಅಷ್ಟೇ ಅಲ್ಲ, ಇಲ್ಲಿ ಸಿಗುವ ತಿಂಡಿಗಳ ಮೆನು ಕೂಡ ದಶಕಗಳಿಂದಲೂ ಹಾಗೆಯೇ ಇದೆ. ಅಂದರೆ ಇಲ್ಲಿ ಇಡ್ಲಿ , ವಡೆ, ಖಾರ ಬಾತ್ ಮತ್ತು ಕೇಸರಿ ಬಾತ್ ಮಾತ್ರ ಸಿಗುತ್ತದೆ. ಆದರೆ ಕಾಫಿಯ ಜೊತೆ ಜೊತೆಗೆ ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ತಿಂಡಿಗಳ ಜೊತೆ ನೀಡುವ ತೆಂಗಿನಕಾಯಿ ಚಟ್ನಿ.

4. ಫಿಲ್ಟರ್ ಕಾಫಿ : ಎಚ್‍ಆರ್‌ಬಿಆರ್‌ ಲೇಔಟ್, ಕಲ್ಯಾಣ್ ನಗರ
ಹೆಸರೇ ಸೂಚಿಸುವಂತೆ ಈ ಜಾಗ ಅತ್ಯುತ್ತಮ ಫಿಲ್ಟರ್ ಕಾಫಿಗೆ ಹೆಸರುವಾಸಿ. ಈ ರೆಸ್ಟೋರೆಂಟ್‍ನಲ್ಲಿ ಆರೋಗ್ಯಕರ ಕರುಪಟ್ಟಿ ಕಾಫಿ ಕೂಡ ಸಿಗುತ್ತದೆ. ಫಿಲ್ಟರ್ ಕಾಫಿ ಮಾತ್ರವಲ್ಲ, ಇಲ್ಲಿ ಸಿಗುವ ಚೆನ್ನೈ ಶೈಲಿಯ ದೋಸೆಗಳಿಗಾಗಿ ಕೂಡ ಜನ ಮುಗಿ ಬೀಳುತ್ತಾರೆ.

5. ಎಂಟಿಆರ್ 1924 : ಸೇಂಟ್‌ ಮಾರ್ಕ್ಸ್‌ ರಸ್ತೆ
ಮಾವಳ್ಳಿ ಟಿಫಿನ್ ರೂಂ ಸುಮಾರು ಒಂದು ಶತಮಾನದಿಂದ ಬೆಂಗಳೂರಿನ ಆಹಾರ ಸಂಸ್ಕೃತಿಯ ಒಂದು ಭಾಗವಾಗಿದೆ. ಭೋಜನ ಮಾಡುವವರು ಕಾಯ್ದಿರಿಸುವಿಕೆಗಾಗಿ ದಿನಗಳ ಕಾಲ ಕಾಯಬೇಕಿದ್ದ ಏಕೈಕ ರೆಸ್ಟೋರೆಂಟ್ ಆಗಿದ್ದ ಎಂಟಿಆರ್, ನಗರದಲ್ಲಿ ಹಲವಾರು ಯಶಸ್ವಿ ಶಾಖೆಗಳನ್ನು ಹೊಂದಿದೆ. ಇಲ್ಲಿನ ಫಿಲ್ಟರ್ ಕಾಫಿಯ ರುಚಿಗೆ ಸಾಟಿಯಿಲ್ಲ, ಜೊತೆಗೆ ಎಂಟಿಆರ್ ಬೆಣ್ಣೆ ದೋಸೆಯು ಕೂಡ ಅಷ್ಟೇ ರುಚಿಕರ.

6. ವಿದ್ಯಾರ್ಥಿ ಭವನ: ಗಾಂಧಿ ಬಜಾರ್ ಮುಖ್ಯ ರಸ್ತೆ , ಬಸವನಗುಡಿ
ಬೆಂಗಳೂರಿನಲ್ಲಿ ವಿದ್ಯಾರ್ಥಿ ಭವನ 1940ರಿಂದಲೂ ಇದೆ. ಭಾನುವಾರದ ಬೆಳಗ್ಗಿನ ಸಮಯದಲ್ಲಿ ಇಲ್ಲಿ ಒಂದು ಟೇಬಲ್ ಪಡೆಯಬೇಕೆಂದರೆ ಹರಸಾಹಸ ಪಡಬೇಕಾಗುತ್ತದೆ, ಅದಕ್ಕಾಗಿ ಗಾಂಧಿ ಬಜಾರಿನ ಬೀದಿಯಲ್ಲಿ ಜನ ಸರತಿಯ ಸಾಲಿನಲ್ಲಿ ನಿಂತಿರುತ್ತಾರೆ. ಇಲ್ಲಿಯ ಫಿಲ್ಟರ್ ಕಾಫಿ ಮಾತ್ರವಲ್ಲ, ಮಸಾಲೆ ದೋಸೆಯು ಕೂಡ ಚಪ್ಪರಿಸಿಕೊಂಡು ತಿನ್ನುವಂತೆ ಇರುತ್ತದೆ.

ಇದನ್ನು ಓದಿ: Vastu Tips: ಮನೆಯಲ್ಲಿ ಎಲ್ಲೆಂದರಲ್ಲಿ ಅಲ್ಲಿ ಅಕ್ವೇರಿಯಂ ಇಡಬೇಡಿ, ಅದೃಷ್ಟ ಕೈ ಕೊಡುತ್ತೆ

7. ಏರ್‍ಲೈನ್ಸ್ ಹೋಟೆಲ್‌ : ಎಸ್‍ಬಿಐ ರಸ್ತೆ, ಅಶೋಕ್ ನಗರ
ದಶಕಗಳಿಂದಲೂ ಕಾಫಿ ಪ್ರಿಯರ ಮೆಚ್ಚಿನ ತಾಣವಾದ ಏರ್‍ಲೈನ್ಸ್ ಹೋಟೆಲ್‌ನಲ್ಲಿ ವಾರಾಂತ್ಯದ ದಿನಗಳಲ್ಲಿ ಹಿರಿಯ ನಾಗರಿಕರಿಂದ ಹಿಡಿದು ಯುವ ಬೈಕರ್‌ಗಳವರೆಗೆ ವಿವಿಧ ವಯೋಮಾನದವರನ್ನು ಕಾಣಬಹುದು. ಇಲ್ಲಿ ಆಲದ ಮರದ ಕೆಳಗೆ ಕುಳಿತು ಬಿಸಿ ಬಿಸಿ ಕಾಫಿ ಮತ್ತು ಇಡ್ಲಿಗಳನ್ನು ಸವಿಯುವುದೇ ಒಂದು ಖುಷಿ. ಅಥವಾ ನೀವು ಬಯಸಿದರೆ ಅಲ್ಲೇ ಪಕ್ಕದಲ್ಲಿರುವ ಕಾರ್ನರ್ ಹೌಸ್‍ಗೆ ಹೋಗಿ , ಬಿಸಿ ಚಾಕಲೇಟ್ ಫಡ್ಜ್ ಸಂಡೆಯನ್ನು ಕೂಡ ಸವಿಯುವ ಸಂತೋಷ ಪಡೆಯಬಹುದು.

8. ವೀಣಾ ಸ್ಟೋರ್ : ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ
ಮಲ್ಲೇಶ್ವರಂನ ಖ್ಯಾತ ಉಪಾಹಾರ ಗೃಹ ವೀಣಾ ಸ್ಟೋರ್‌ನಿಂದ ತಿಂಡಿಯನ್ನು ಕಟ್ಟಿಸಿಕೊಂಡು ಹೋಗಬಹುದು ಅಥವಾ ಅಲ್ಲೇ ಪಾದಚಾರಿ ಮಾರ್ಗದಲ್ಲಿ ನಿಂತು ಸೇವಿಸಬಹುದು. ಆದರೆ ಬೆಳಗ್ಗಿನ ತಿಂಡಿ ಇರಲಿ ಅಥವಾ ಸಂಜೆಯ ತಿನಿಸಿರಲಿ - ಅಲ್ಲಿಗೆ ಬೇಗ ಬನ್ನಿ ಎನ್ನುತ್ತಾರೆ ಅವರು. ವೀಣಾ ಸ್ಟೋರ್‌ನ ಗರಿಗರಿ ವಡೆ ಮತ್ತು ಶಾವಿಗೆ ಹೆಚ್ಚು ಜನಪ್ರಿಯ ತಿನಿಸುಗಳು. ಎಲ್ಲರಿಗೂ ಅಲ್ಲಿ ಸಿಗುವ ತೆಂಗಿನಕಾಯಿ ಚಟ್ನಿ ಅಚ್ಚುಮೆಚ್ಚು. ಇಲ್ಲಿ ಫಿಲ್ಟರ್ ಕಾಫಿ ಮಾತ್ರ ಇಡೀ ದಿನ ಲಭ್ಯವಿರುತ್ತದೆ.

ಇದನ್ನು ಓದಿ: Vastu Tips: ಶನಿ ದೋಷ ನಿವಾರಣೆಗೆ ಮನೆಯಲ್ಲಿ ಇರಿಸಿ ನವಿಲು ಗರಿ

9. ಐಟಿಸಿ ವಿಂಡ್ಸರ್ : ಗಾಲ್ಫ್ ಕೋರ್ಸ್ ರಸ್ತೆ
ಬೆಂಗಳೂರಿನ ಹೆಚ್ಚಿನ ಐಷಾರಾಮಿ ಹೋಟೆಲ್‌ಗಳಲ್ಲಿ ಒಳ್ಳೆಯ ಫಿಲ್ಟರ್ ಕಾಫಿ ಸಿಗುವುದಿಲ್ಲ, ಆದರೆ ಐಟಿಸಿ ವಿಡ್ಸರ್ ಅದಕ್ಕೆ ಅಪವಾದದಂತಿದೆ. ಅವರ ದಕ್ಷಿಣ ಭಾರತೀಯ ರೆಸ್ಟೋರೆಂಟ್‍ನಲ್ಲಿ ಯಾವಾಗಲೂ ರುಚಿಕರ ಫಿಲ್ಟರ್ ಕಾಫಿ ಸಿಗುತ್ತದೆ.

10. ಕೋಥಾಸ್ ಕಾಫಿ: ಸಂಪಿಗೆ ರಸ್ತೆ , ಮಲ್ಲೇಶ್ವರಂ
ಕೋಥಾಸ್ ನಗರದ ಅತ್ಯಂತ ಹಳೆಯ ಫಿಲ್ಟರ್ ಕಾಫಿ ಬ್ರ್ಯಾಂಡ್‌ಗಳಲ್ಲಿ ಒಂದು. ಈ ಪುಟ್ಟ ಕೆಫೆಯಲ್ಲಿ ಹಲವಾರು ಬಗೆಯ ಕೋಲ್ಡ್ ಕಾಫಿಗಳು ಸಿಗುತ್ತವೆ, ಆದರೆ ಇಲ್ಲಿನ ಫಿಲ್ಟರ್ ಕಾಫಿ ಮುಖ್ಯ ಆಕರ್ಷಣೆ. ಅವರ ಔಟ್‍ಲೆಟ್‍ನಲ್ಲಿ ನೀವು ಫಿಲ್ಟರ್ ಕಾಫಿಯನ್ನು ಕೂಡ ಖರೀದಿಸಬಹುದು.
First published: