Best Idli Place: ಬೆಂಗಳೂರಿನಲ್ಲಿ ಮೃದುವಾದ ಇಡ್ಲಿ ಸವಿಯಲು ಈ ಸ್ಥಳಗಳು ಬೆಸ್ಟ್​ ಅಂತೆ

Near Me Places: ನಿಮಗೆ ಬೆಂಗಳೂರಿನಲ್ಲಿ ಅದ್ಭುತ ಇಡ್ಲಿ ಸಿಗುವ ಹಳೆಯ ಮತ್ತು ಅತ್ಯಂತ ಸಾಂಪ್ರದಾಯಿಕ ಸ್ಥಳಗಳಿವೆ. ಹಾಗಾದ್ರೆ ಬೆಂಗಳೂರಿನಲ್ಲಿ ಬೆಸ್ಟ್ ಇಡ್ಲಿ ಸಿಗುವ ಸ್ಥಳಗಳ ಲಿಸ್ಟ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (Bengaluru) ವಿವಿಧತೆಯಲ್ಲಿ ಏಕತೆಯ ಪ್ರತೀಕ ಎನ್ನಬಹುದು. ದೋಸೆ (Dosa), ಇಡ್ಲಿಯಿಂದ (Idli) ಹಿಡಿದು ಬರ್ಗರ್ ಪಿಜ್ಜಾವರೆಗೆ ಇಲ್ಲಿ ಆಹಾರದ ವಿಭಿನ್ನ ಪದಾರ್ಥಗಳು ಲಭ್ಯವಿದೆ. ಇನ್ನು ಇಲ್ಲಿ ಒಂದೊಂದು ಆಹಾರಕ್ಕೆ ಪ್ರಸಿದ್ದವಾದ ಸ್ಥಳಗಳಿವೆ. ಅದಕ್ಕೆ ಉದಾಹರಣೆ ಎಂದರೆ ಇಡ್ಲಿ. ಇಡ್ಲಿ ಎಂದರೆ ದಕ್ಷಿಣ ಭಾರತೀಯರಿಗೆ (South India) ಅದೇನೋ ಪ್ರೀತಿ. ಮೃದುವಾದ ಇಡ್ಲಿಯ ಜೊತೆ ಸಾಂಬಾರ್, ಚಟ್ನಿ ಇದ್ದರೆ ಆಹಾ, ಅದನ್ನು ವರ್ಣಿಸುವುದು ಕಷ್ಟವೇ ಎನ್ನಬಹುದು. ನಿಮಗೆ ಬೆಂಗಳೂರಿನಲ್ಲಿ ಅದ್ಭುತ ಇಡ್ಲಿ ಸಿಗುವ ಹಳೆಯ ಮತ್ತು ಅತ್ಯಂತ ಸಾಂಪ್ರದಾಯಿಕ ಸ್ಥಳಗಳಿವೆ. ಹಾಗಾದ್ರೆ ಬೆಂಗಳೂರಿನಲ್ಲಿ ಬೆಸ್ಟ್ ಇಡ್ಲಿ ಸಿಗುವ ಸ್ಥಳಗಳ ಲಿಸ್ಟ್ ಇಲ್ಲಿದೆ.

ಬ್ರಾಹ್ಮಣರ ಕಾಫಿ ಬಾರ್, ಬಸವಗುಡಿ
ಈ ಒಂದು ಸಣ್ಣ ಸ್ಥಳ ಹಲವಾರು ವಿಚಾರಗಳಿಗೆ ಫೇಮಸ್ ಎನ್ನಬಹುದು, ಇದು ಬೆಳಗಿನ ತಿಂಡಿಗೆ ಹೆಚ್ಚು ಪ್ರಸಿದ್ದವಾಗಿದೆ. ಅದರಲ್ಲೂ ಇಡ್ಲಿ ಹೆಚ್ಚು ಎನ್ನಬಹುದು. ಕೆಲ ಜನ ಇಲ್ಲಿಗೆ ಕೇವಲ ಇಡ್ಲಿಗಾಗಿ ಬರುತ್ತಾರೆ ಎಂದರೆ ತಪ್ಪಾಗಲಾರದು. ನೀವು ಸಹ ಇಡ್ಲಿ ಪ್ರಿಯರಾಗಿದ್ದರೆ ಇಲ್ಲಿಗೆ ಒಮ್ಮೆ ವಿಸಿಟ್ ಮಾಡಲೇಬೇಕು.

ವಿಳಾಸ:  Ranga Ro Rd, ಶಂಕರ ಮಠದ ಹತ್ತಿರ, ಶಂಕರಪುರ, ಬೆಂಗಳೂರು, ಕರ್ನಾಟಕ 560004
ಮೊಬೈಲ್ ನಂಬರ್: 098450 30234
ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ
ಮಧ್ಯಾಹ್ನ 3 ರಿಂದ 7 ಗಂಟೆ

ಮಾವಳ್ಳಿ ಟಿಫಿನ್ ರೂಮ್, ಲಾಲ್ಬಾಗ್ ರೋಡ್
ಈ ಮಾವಳ್ಳಿ ಟಿಫಿನ್ ರೂಮ್ ಅಥವಾ ಎಂಟಿಆರ್ ಬಗ್ಗೆ ಹೆಚ್ಚು ಹೇಳುವುದು ಬೇಡ. ಇದು ಬೆಂಗಳೂರಿನ ಬೆಸ್ಟ್ ಸ್ಥಳಗಳಲ್ಲಿ ಒಂದು. ಇಲ್ಲಿ ದೋಸೆಗಳು, ಕಾಫಿ ಎಲ್ಲವೂ ರುಚಿಕರ. ಹಾಗೆಯೇ ಇಲ್ಲಿನ ರವೆ ಇಡ್ಲಿ ಕೂಡ ಹೆಚ್ಚು ಫೇಮಸ್ ಇದ್ದು, ಒಮ್ಮೆ ತಿಂದರೆ ಪದೇ ಪದೇ ಹೋಗದೇ ಇರಲಾರಿರಿ. ಈ ರವೆ ಇಡ್ಲಿಯಲ್ಲಿರುವ ಗೋಡಂಬಿ ಅದರ ರುಚಿಯನ್ನು ಹೆಚ್ಚಿಸುತ್ತದೆ.

ವಿಳಾಸ: 14, ಲಾಲ್ ಭಾಗ್ ಮೇನ್ ರೋಡ್, ದೊಡ್ಡಮಾವಳ್ಳಿ, ಸುಧಾಮ ನಗರ್, ಬೆಂಗಳೂರು, ಕರ್ನಾಟಕ
ಸಮಯ: ಬೆಳಗ್ಗೆ 6.30ರಿಂದ 11
ಮೊಬೈಲ್ ನಂಬರ್: 098868 94128
ಮಧ್ಯಾಹ್ನ: 11.30 ರಾತ್ರಿ 8.30 (9.30)

ಉಮೇಶ್ ದೋಸಾ ಪಾಯಿಂಟ್, ಶೇಷಾದ್ರಿಪುರಂ
ಉಮೇಶ್ ದೋಸಾ ಪಾಯಿಂಟ್ನಿಂದ ನೀವು . Zomato ನಲ್ಲಿ ಆರ್ಡರ್ ಮಾಡಬಹುದು ಅಥವಾ ಅಲ್ಲಿಗೆ ಹೋಗಿ ಸವಿಯಬಹುದು. ಇಲ್ಲಿನ ಟೇಸ್ಟ್ ನಿಮ್ಮ ಇಡ್ಲಿಯ ಕನಸನ್ನು ನನಸಾಗಿಸುತ್ತದೆ ಎನ್ನಬಹುದು.ಮೃದುವಾದ ಇಡ್ಲಿಗಳನ್ನು ಆನಂದಿಸಲು ಉತ್ತಮ ಸ್ಥಳ ಇದು ಎನ್ನಬಹುದು.

ವಿಳಾಸ: 21, 1ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು, ಕರ್ನಾಟಕ 560020
ಸಮಯ: ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆ

ಇದನ್ನೂ ಓದಿ: ರಾಜರಾಜೇಶ್ವರಿ ನಗರದ ಕಡೆ ಹೋದ್ರೆ ಈ ರೆಸ್ಟೋರೆಂಟ್ ಗಳಿಗೆ ಹೋಗೋದು ಮಿಸ್ ಮಾಡ್ಬೇಡಿ

ತಾಜಾ ತಿಂಡಿ, ಜಯನಗರ
ತಟ್ಟೆ ಇಡ್ಲಿಯೊಂದಿಗೆ ರುಚಿಕರವಾದ ಸಾಂಬಾರ್ ಅನ್ನು ಸವಿಯಲು ಇದು ಬೆಸ್ಟ್ ಸ್ಥಳ ಎನ್ನಬಹುದು. ಇದರ ಹಲವಾರು ಔಟ್ಲೆಟ್ಗಳಿದ್ದು, ಕೇವಲ ಇಡ್ಲಿ ಮಾತ್ರವಲ್ಲದೇ ಬೇರೆ ತಿಂಡಿಗಳು ಸಹ ನಿಮಗೆ ರುಚಿಕರವಾಗಿ ಸಿಗುತ್ತದೆ. ಇನ್ನು ಕೇವಲ ತಟ್ಟೆ ಇಡ್ಲಿ ಮಾತ್ರವಲ್ಲ ಸಾಂಬಾರ್ ಡಿಪ್ ಮಾಡಿರುವ ಇಡ್ಲಿ ಇನ್ನೂ ರುಚಿಕರ. ನೀವು ಒಂದು ಸಂಡೇ ಇಲ್ಲಿಗೆ ತಿಂಡಿಗೆ ಹೊದರೆ , ಎಲ್ಲಾ ವೀಕೆಂಡ್ ಹೋಗುತ್ತೀರ.

ವಿಳಾಸ: 1004, 26ನೇ ಮುಖ್ಯ ರಸ್ತೆ, 4ನೇ ಟಿ ಬ್ಲಾಕ್ ಪೂರ್ವ, ಜಯನಗರ 9ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560041
ಸಮಯ: ಬೆಳಗ್ಗೆ 7 ಗಂಟೆಯಿಂದ 12.30
ಮಧ್ಯಾಹ್ನ 4.30 ಯಿಂದ ರಾತ್ರಿ 9.30
ಮೊಬೈಲ್ ನಂಬರ್: 080 4091 2277

ವೀಣಾ ಸ್ಟೋರ್ಸ್, ಮಲ್ಲೇಶ್ವರಂ
ನಿಮಗೆ ಬೇಕಾದ ಅತ್ಯಂತ ಮೃದುವಾದ, ನಯವಾದ ಇಡ್ಲಿಗಳು ವೀಣಾ ಸ್ಟೋರ್ಸ್‌ನಲ್ಲಿ ಸಿಗುತ್ತದೆ. ಬೆಣ್ಣೆಯಂತಹ ಇಡ್ಲಿಗಳಿಗೆ ಅದ್ಭುತವಾದ ಸ್ಥಳ ಎಂದರೆ ಇದು ಎನ್ನಬಹುದು. ಇಲ್ಲಿ ಒಂದು ಲೋಟ ಕಾಫಿ ಜೊತೆ ಇಡ್ಲಿ ಸವಿದರೆ, ನಿಮ್ಮ ದಿನಕ್ಕೆ ಅದ್ಬುತ ಆರಂಭ ನೀಡಿದ್ದಂತೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ

ವಿಳಾಸ: 183, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 560003
ಸಮಯ: ಬೆಳಗ್ಗೆ 8.30 ರಿಂದ 12
ಮಧ್ಯಾಹ್ನ 3.30ರಿಂದ 8.30
ಮೊಬೈಲ್ ನಂಬರ್: 080 2334 4838
Published by:Sandhya M
First published: