Pav Bhaji Near Me: ಸ್ಪೈಸಿ ಪಾವ್ ಬಾಜಿ ಸವಿಯಲು ಬೆಂಗಳೂರಿನ ಈ ಸ್ಥಳಗಳು ಬೆಸ್ಟ್ ಅಂತೆ

Best Pav Bhaji Places Near Me: ಬೆಂಗಳೂರಿನಲ್ಲಿರುವ 5 ಅತ್ಯುತ್ತಮ ಪಾವ್ ಬಾಜಿ ಸ್ಥಳಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ. ನಿಮಗೆ ಯಾವುದು ಹತ್ತಿರವೋ ಅಲ್ಲಿಗೆ ಹೋಗಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1850 ರ ದಶಕದಲ್ಲಿ ಮುಂಬೈನಲ್ಲಿ (Mumbai) ಆರಂಭವಾದ ಈ ಪಾವ್ ಬಾಜಿ ಸದ್ಯ ಎಲ್ಲೆಡೆ ಬಹಳ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದಲ್ಲಿ ಸಂಜೆಯ ಸ್ನ್ಯಾಕ್ಸ್ ಆಗಿ ಪರಿವರ್ತನೆಯಾಗಿದ್ದು, ಈಗ ಸಾವಿರಾರು ಭಾರತೀಯರ ಮನೆಗಳನ್ನು ತಲುಪಿದೆ.  ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಣ್ಣೆಯಲ್ಲಿ ಫ್ರೈ ಮಾಡಿದ ಪಾವ್‌ಗಳೊಂದಿಗೆ ಬಾಜಿ ಯಾರ ಬಾಯಲ್ಲಿ ನೀರೂರಿಸಬಹುದು. ಬೆಂಗಳೂರಿನಲ್ಲಿರುವ 5 ಅತ್ಯುತ್ತಮ ಪಾವ್ ಬಾಜಿ ಸ್ಥಳಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ. ನಿಮಗೆ ಯಾವುದು ಹತ್ತಿರವೋ ಅಲ್ಲಿಗೆ ಹೋಗಿ, ಅಲ್ಲದೇ ಈ ಸ್ಥಳಗಳಿಗೆ ನಿಜಕ್ಕೂ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.  

ಗೋಲಿ ವಡಾ ಪಾವ್ , ವಿವಿಧ ಶಾಖೆಗಳಿದೆ

ಗೋಲಿ ವಡಾ ಪಾವ್  ಅಂಗಡಿಗಳಲ್ಲಿ ಪಾವ್ ಬಾಜಿ ಸಿಗುತ್ತಾ ಎಂದು ಹಲವಾರು ಜನರು ಹುಬ್ಬೇರಿಸಬಹುದು. ಆದರೆ ಇಲ್ಲಿನ ಪಾವ್ ಬಾಜಿ ನಿಜವಾಗಿಯೂ ಎಷ್ಟು ಜನಪ್ರಿಯವಾಗಿದೆ ಎಂದರೆ ಜನ ಹುಡುಕಿಕೊಂಡು ಹೋಗುತ್ತಾರೆ. ಸಂಜೆಯ ಸ್ನ್ಯಾಕ್ಸ್​ಗಾಗಿ ನೀವು ಇಲ್ಲಿಗೆ ಭೇಟಿ ನೀಡಿದಾಗ, ಇಲ್ಲಿ ಪಾವ್ ಬಾಜಿಯನ್ನು ಆರ್ಡರ್ ಮಾಡಿ.

ವಿಳಾಸ: ಸಂಖ್ಯೆ 5, 9ನೇ ಮುಖ್ಯ ಅಂಗಡಿ ಬೀದಿ, 9ನೇ ಅಡ್ಡ ರಸ್ತೆ, 2ನೇ ಬ್ಲಾಕ್, ಜಯನಗರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಪಕ್ಕ, ಬೆಂಗಳೂರು, ಕರ್ನಾಟಕ 560011

ಸಮಯ: ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ

ಮೊಬೈಲ್ ನಂಬರ್: +91 8040958282. +91 7829326741

ಸುಖ್ ಸಾಗರ್ ರೆಸ್ಟೋರೆಂಟ್, ವಿವಿಧ ಶಾಖೆಗಳಿದೆ

ಬೆಂಗಳೂರಿನ ಅತ್ಯುತ್ತಮ ಪಾವ್ ಬಾಜಿ ಸ್ಥಳಗಳಲ್ಲಿ ಒಂದಾದ ಸುಖ್ ಸಾಗರ್ ತನ್ನ ದಕ್ಷಿಣ ಮತ್ತು ಉತ್ತರ ಭಾರತೀಯ ಆಹಾರಗಳಿಗೆ ಹೆಚ್ಚು ಫೇಮಸ್​. ಇಲ್ಲಿರುವ ಪಾವ್ ಬಾಜಿ ಬಹಳ ರುಚಿಕರವಾಗಿದೆ. ನೀವು ಇಲ್ಲಿ ಬೆಣ್ಣೆಯಿಂದ ತುಂಬಿದ ಮಸಾಲೆಯುಕ್ತ ಪಾವ್ ಬಾಜಿ ಇಷ್ಟಪಡುತ್ತೀರಿ.

ವಿಳಾಸ: WJMF+86H, 100 ಅಡಿ ರಸ್ತೆ, 5ನೇ ಬ್ಲಾಕ್, ಕೋರಮಂಗಲ, ಬೆಂಗಳೂರು, ಕರ್ನಾಟಕ 560095

ಸಮಯ: ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ

ಮೊಬೈಲ್ ನಂಬರ್​: 080 26634132

ಲೋಕೇಶ್ ಪಾವ್ ಬಾಜಿ ಮತ್ತು ವಡಾ ಪಾವ್ ಸ್ಟಾಲ್, ಇಂದಿರಾನಗರ

ಬೆಂಗಳೂರಿನಲ್ಲಿ ಅಧಿಕೃತ ಮುಂಬೈ ಶೈಲಿಯ ಪಾವ್ ಬಾಜಿಯನ್ನು ತಿನ್ನಲು ಇಂದಿರಾನಗರದಲ್ಲಿರುವ ಲೋಕೇಶ್ ಪಾವ್ ಬಾಜಿ ಮತ್ತು ವಡಾ ಪಾವ್ ಸ್ಟಾಲ್ ನಿಮ್ಮ ಲಿಸ್ಟ್‌ನಲ್ಲಿರಬೇಕು. ಅವರ ವಿಶೇಷ ಪಾವ್ ಬಾಜಿಯಿಂದ ಹಿಡಿದು ಜೈನ್ ಪಾವ್ ಬಾಜಿಯವರೆಗೆ 8 ವಿಧದ ಪಾವ್ ಬಾಜಿಯನ್ನು ನೀವಿಲ್ಲಿ ಸವಿಯಬಹುದು.

ವಿಳಾಸ: 56A, 9ನೇ ಮುಖ್ಯ ರಸ್ತೆ, ಹಂತ 2, ಹೊಯ್ಸಳ ನಗರ, ಇಂದಿರಾನಗರ, ಬೆಂಗಳೂರು, ಕರ್ನಾಟಕ 560038

ಸಮಯ: ಸಂಜೆ 4:30 ರಿಂದ ರಾತ್ರಿ 10:30 ರವರೆಗೆ

ಮೊಬೈಲ್ ನಂಬರ್​: 090364 47326

ಇದನ್ನೂ ಓದಿ: ನಂಬಿದ್ರೆ ನಂಬಿ ಆಲೂಗಡ್ಡೆಯ ಈ ಆಹಾರಗಳು ತೂಕ ಇಳಿಸಲು ಸಹಾಯ ಮಾಡುತ್ತೆ

ಸೋಡಾಬಾಟಲ್ ಓಪನರ್ ವಾಲಾ, ಲ್ಯಾವೆಲ್ಲೆ ರಸ್ತೆ

ನಿಮ್ಮ ನೆಚ್ಚಿನ ಬೀದಿ ತಿಂಡಿಗೆ ಐಷಾರಾಮಿ ಟಚ್​ ಕೊಡುವ ಈ  ಸೋಡಾಬಾಟಲ್ ಓಪನರ್ ವಾಲಾದಲ್ಲಿಪಾವ್ ಬಾಜಿ ನಿಜವಾಗಿಯೂ ರಿಫ್ರೆಶ್ ಮತ್ತು ಚೀಸೀ ಆಗಿರುತ್ತದೆ. ಇಲ್ಲಿ ಒಮ್ಮೆ ಮಿಸ್​ ಮಾಡದೇ ವಿಸಿಟ್​ ಮಾಡಲೇಬೇಕು.

ವಿಳಾಸ: 25/4, ಹಾರ್ಲೆ ಡೇವಿಡ್ಸನ್ ಶೋರೂಮ್ ಎದುರು, ಲ್ಯಾವೆಲ್ಲೆ ರಸ್ತೆ, ಬೆಂಗಳೂರು

ಸಮಯ: 8:30 ರಿಂದ 12 ರವರೆಗೆ

ಮೊಬೈಲ್​ ನಂಬರ್: +91 7022255299

ಬಾಂಬೆ ಅಡ್ಡಾ, ಕೋರಮಂಗಲ

ಒಂದು ಬೌಲ್‌ನಲ್ಲಿ ಬೆಣ್ಣೆಯಿಂದ ಫ್ರೈ ಮಾಡಿದ ಪಾವ್‌, ಮಸಾಲೆಯುಕ್ತ ಬಾಜಿ ತುಂಬಿದ ದೊಡ್ಡ ಬಟ್ಟಲು ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. ಬಾಂಬೆ ಅಡ್ಡಾದಲ್ಲಿ ಸ್ವಿಟ್ಜರ್ಲೆಂಡ್‌ನ ಚೀಸ್ ಫಂಡ್ಯೂ ಎಂಬ ಚೀಸೀ ಪರಿಕಲ್ಪನೆಯೊಂದಿಗೆ ವಿಭಿನ್ನ ಪಾವ್​ ಬಾಜಿ ಸಿಗುತ್ತದೆ.

ಇದನ್ನೂ ಓದಿ: ಮೊದಲ ಗೌರಿ ಹಬ್ಬಕ್ಕೆ ಏನೇನು ಮಾಡ್ಬೇಕು? ಟೆನ್ಶನ್​ ಬಿಡಿ, ಇಲ್ಲಿದೆ ಎಲ್ಲಾ ಮಾಹಿತಿ!

ವಿಳಾಸ: 6, Z1 ಕನ್ಸ್​ಟ್ರಕ್ಷನ್​ ಬಿಲ್ಡಿಂಗ್, 5 ನೇ ಮಹಡಿ, ಸಪ್ನಾ ಬುಕ್ ಹೌಸ್ ಮುಂದೆ, 20 ನೇ ಮುಖ್ಯ ರಸ್ತೆ, ಕೋರಮಂಗಲ 7 ನೇ ಬ್ಲಾಕ್, ಬೆಂಗಳೂರು

ಸಮಯ: ಮಧ್ಯಾಹ್ನ 12 ರಿಂದ 1 ರವರೆಗೆ

ಮೊಬೈಲ್ ನಂಬರ್: 080 49653211
Published by:Sandhya M
First published: