Bachelor Party: ಬ್ಯಾಚುಲರ್ ಪಾರ್ಟಿ ಮಾಡಲು ಭಾರತದ ಈ ಸ್ಥಳಗಳೇ ಬೆಸ್ಟ್

ಬ್ಯಾಚುಲರ್ ಪಾರ್ಟಿ ಮಾಡಲು ಹಾಗೂ ನೀವೂ ನೋಡಲೇ ಬೇಕಾದ ಭಾರತದಲ್ಲಿನ ಸೂಕ್ತ ಸ್ಥಳಗಳ ಬಗ್ಗೆ ನಿಮಗಾಗಿ ಇಲ್ಲಿದೆ ಹೇರಳ ಮಾಹಿತಿ ಮತ್ತು ಈ ಸ್ಥಳಗಳ ವಿಶೇಷತೆಯನ್ನು ತಿಳಿದುಕೊಳ್ಳಿ .

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಮದುವೆಯ (Marriage) ನಂತರ ಸ್ನೇಹಿತರ (Friends) ಜೊತೆ ಹಾಯಾಗಿ ಪ್ರವಾಸ (Tour) ಹೋಗಲು ಸಾಧ್ಯ ಇಲ್ಲ ಎನ್ನುವವರು ನೀವಾಗಿದ್ದರೆ, ಮದುವೆಗೆ ಕೊಂಚ ದಿನವಿರುವಾಗಲೇ ಸ್ನೇಹಿತರ ಜೊತೆ ಬ್ಯಾಚುಲರ್ ಪಾರ್ಟಿ (Bachelor Party) ಮಾಡೇ ಮಾಡುತ್ತೀರಿ ಅಲ್ಲವೇ? ಬ್ಯಾಚುಲರ್ ಪಾರ್ಟಿಯಲ್ಲಿನ ಮಸ್ತಿಯೇ ವಿಭಿನ್ನ. ಆದರೆ, ನಗರದ ಪಬ್ (Pub), ಹೊಟೇಲ್‍ಗಳಲ್ಲಿ (Hotel) ಪಾರ್ಟಿ (Party) ಮಾಡುವುದು ಬೋರ್ ಎನಿಸುತ್ತದೆಯೇ? ಹಾಗಾದರೆ, ಬ್ಯಾಚುಲರ್ ಪಾರ್ಟಿ ಮಾಡಲು ಹಾಗೂ ನೀವೂ ನೋಡಲೇ ಬೇಕಾದ ಭಾರತದಲ್ಲಿನ ಸೂಕ್ತ ಸ್ಥಳಗಳ ಬಗ್ಗೆ ನಿಮಗಾಗಿ ಇಲ್ಲಿದೆ ಹೇರಳ ಮಾಹಿತಿ ಮತ್ತು ಈ ಸ್ಥಳಗಳ ವಿಶೇಷತೆಯನ್ನು ತಿಳಿದುಕೊಳ್ಳಿ .

1. ಗೋವಾ
ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಸ್ಥಳ ಗೋವಾ. ಅದರಲ್ಲೂ ಯುವಜನರ ಪಾಲಿಗಂತೂ ಮನರಂಜನೆಯ ಸ್ವರ್ಗ. ಇದನ್ನು ಭಾರತದ ಪಾರ್ಟಿ ಕ್ಯಾಪಿಟಲ್ ಎಂದು ಕರೆಯುತ್ತಾರೆ. ಸುಂದರ ಕಡಲ ತೀರಗಳು, ಬೀಯರ್, ಕ್ಯಸೀನೋಗಳು ಮತ್ತು ನೈಟ್‍ಕ್ಲಬ್‍ಗಳು ಇತ್ಯಾದಿಗಳನ್ನು ಹೊಂದಿರುವ ಗೋವಾ ಬ್ಯಾಚುಲರ್ ಪಾರ್ಟಿಗೆ ಹೇಳಿ ಮಾಡಿಸಿದಂತಹ ಸ್ಥಳ.

 • ಉಳಿದುಕೊಳ್ಳಲು ಸ್ಥಳ: ನಿಮ್ಮ ಬಜೆಟ್‍ಗೆ ಅನುಗುಣವಾಗಿ ಇಲ್ಲಿ ವಾಸಕ್ಕೆ ಸ್ಥಳಗಳು ಸಿಗುತ್ತವೆ. ಏರ್ ಬಿಎನ್‍ಬಿಯಿಂದ ಹಿಡಿದು ಐಷಾರಾಮಿ ಲೀಲಾ ವರೆಗೆ ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. ಗೋವಾದಲ್ಲಿ ಬಜೆಟ್ ಹೊಟೇಲ್‍ಗಳಿಗೆ ಮತ್ತು ಕಡಲ ತೀರದ ವಿಲ್ಲಾಗಳಿಗೆ ಕೊರತೆ ಇಲ್ಲ.
  ಹೋಗಲು ಉತ್ತಮ ಸಮಯ : ಅಕ್ಟೋಬರ್ ನಿಂದ ಮಾರ್ಚ್ ಗೋವಾಗೆ ಭೇಟಿ ನೀಡಲು ಉತ್ತಮ ಸಮಯ.

 • ಏನೆಲ್ಲಾ ಮಾಡಬಹುದು: ಮಸ್ತಿ ಮಾಡುವ ಪಾರ್ಟಿ ಪ್ರಿಯರ ಗುಂಪು ನಿಮ್ಮದಾಗಿದ್ದರೆ ಗೋವಾ ನಿಮಗೆ ಖಂಡಿತಾ ಹಿಡಿಸುತ್ತದೆ. ಕಡಲ ತೀರದಲ್ಲಿ ನೀವು ಬೇಕಾದಂತೆ ಸಮಯ ಕಳೆಯ ಬಹುದು, ರಾತ್ರಿಯ ಖಾಸಗಿ ಪಾರ್ಟಿಗಾಗಿ ವಿಹಾರ ನೌಕೆಯನ್ನು ಬುಕ್ ಮಾಡಬಹುದು. ಮಸಾಜ್ ಮಾಡಿಸಿಕೊಳ್ಳಬಹುದು.


2. ಕಸೋಲ್
ನಿಸರ್ಗ ಪ್ರಿಯರು ನೀವಾಗಿದ್ದರೆ, ಬ್ಯಾಚುಲರ್ಸ್ ಪಾರ್ಟಿ ಮಾಡಲು ಕಸೋಲ್‍ಗೆ ಹೋಗಬಹುದು. ಸುಂದರ ಪಾರ್ವತಿ ಕಣಿವೆಯಿಂದ ಸುತ್ತುವರಿದಿರುವ ಕಸೋಲ್ ಪಟ್ಟಣ ಹಚ್ಚ ಹಸಿರಾದ ವಿಹಾರ ತಾಣ. ಮದ್ಯ, ಡಾನ್ಸ್, ಪಾರ್ಟಿಯ ಮಸ್ತಿಯ ಬದಲು, ಸ್ನೇಹದ ಕ್ಷಣಗಳನ್ನು ವಿಭಿನ್ನವಾಗಿ ಆಚರಿಸಿಕೊಳ್ಳಬೇಕು ಎಂಬ ಆಸೆ ಇದ್ದರೆ ಇಲ್ಲಿ ಬ್ಯಾಚುಲರ್ಸ್ ಪಾರ್ಟಿ ಮಾಡಬಹುದು.

 • ಉಳಿದುಕೊಳ್ಳುವ ಸ್ಥಳ: ವಾಸಕ್ಕೆ ಇಲ್ಲಿ ನದಿಯ ಸಮೀಪದ ಶೌಚಾಲಯ ಸೌಲಭ್ಯವುಳ್ಳ ಟೆಂಟ್‍ಗಳಿವೆ, ಸ್ಥಳೀಯ ಹಾಲಿಡೇ ಹೋಮ್‍ಗಳು ಕೂಡ ಇವೆ.
  ಭೇಟಿಗೆ ಸೂಕ್ತ ಅವಧಿ : ಇಲ್ಲಿಗೆ ವರ್ಷದ ಯಾವ ದಿನ ಬೇಕಾದರೂ ಭೇಟಿ ಕೊಡಬಹುದು. ಆದರೆ ಅಕ್ಟೋಬರ್ – ಜೂನ್ ಸೂಕ್ತ ಸಮಯ.

 • ಏನೆಲ್ಲಾ ಮಾಡಬಹುದು: ಕಸೋಲ್ ಸಣ್ಣ ಸ್ಥಳವಾಗಿರಬಹುದು, ಆದರೆ ಇಲ್ಲಿ ಮನಸ್ಸಿಗೆ ಖುಷಿ ನೀಡುವ ಅನೇಕ ಚಟುವಟಿಕೆಗಳು ಲಭ್ಯ. ಖೀರ್ ಗಂಗಾ ಟ್ರೆಕ್ ಮಾಡಬಹುದು, ತಾಜಾ ಸೇಬುಗಳನ್ನು ತಿನ್ನಬಹುದು ಮತ್ತು ಇಲ್ಲಿನ ಜನಪ್ರಿಯ ನಾಥನ್ ಡಾಬಾದಲ್ಲಿ ಊಟ ಮಾಡಬಹುದು. ಮಲಾನ, ಟೋಶ್ ಅಥವಾ ಚಲಾಲ್‍ಗೂ ಭೇಟಿ ನೀಡಬಹುದು.


3. ಋಷಿಕೇಶ
ನಿಮಗೆ ಮತ್ತು ನಿಮ್ಮ ತಂಡಕ್ಕೆ ಸಾಹಸಮಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಇಷ್ಟ ಎಂದಾದಲ್ಲಿ ಖಂಡಿತಾ ಋಷಿಕೇಶಕ್ಕೆ ಭೇಟಿ ನೀಡಲೇಬೇಕು. ಲೆಕ್ಕವಿಲ್ಲದಷ್ಟು ಜಲಕ್ರೀಡೆಗಳು, ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್, ಭಂಗಿ ಜಂಪಿಂಗ್, ರಾತ್ರಿ ನದಿ ತೀರದಲ್ಲಿ ಕ್ಯಾಂಪ್‍ಫೈರ್ ಹೀಗೆ ನಿಮ್ಮ ತಂಡದ ಮನರಂಜನೆಗೆ ಎಲ್ಲವೂ ಇಲ್ಲಿ ಲಭ್ಯ.

ಇದನ್ನೂ ಓದಿ: The Hemp Cafe: ಸೆಣಬಿನಿಂದ ತಯಾರಾದ ಆರೋಗ್ಯಕರ ಖಾದ್ಯಗಳನ್ನು ನೀವೂ ಸವಿಯಬೇಕಾ? ಹಾಗಿದ್ರೆ ಈ ಕೆಫೆಗೆ ಭೇಟಿ ಕೊಡಿ

 • ಉಳಿದುಕೊಳ್ಳಲು ಸ್ಥಳ: ಇಲ್ಲಿ ಅಷ್ಟೊಂದು ದುಬಾರಿಯಲ್ಲದ ರಿವರ್ ಫೇಸಿಂಗ್ ಬೊಟಿಕ್ ಹೊಟೇಲ್‍ಗಳಿವೆ. ಮೊದಲೇ ಕಾದೀರಿಸಿದರೆ ಉತ್ತಮ ದರ್ಜೆಯ ಕೊಠಡಿಗಳನ್ನು ಪಡೆಯಬಹುದು.

 • ಭೇಟಿಗೆ ಸೂಕ್ತ ಸಮಯ: ಮಾರ್ಚ್ – ಏಪ್ರಿಲ್ ಮತ್ತು ಸೆಪ್ಟೆಂಬರ್ ನವಂಬರ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.


4. ಜೀರೋ ವ್ಯಾಲಿ
ಅರುಣಾಚಲ ಪ್ರದೇಶದಲ್ಲಿರುವ ಜೀರೋ ವ್ಯಾಲಿ ಬ್ಯಾಚುಲರ್ ಪಾರ್ಟಿಗೆ ಮತ್ತೊಂದು ಉತ್ತಮ ತಾಣ. ಇಲ್ಲಿನ ಹಸಿರು, ನೀಲ ಆಕಾಶ, ಕಡಿದಾದ ಪರ್ವತಗಳು ಮತ್ತು ಸ್ಥಳೀಯ ಸಾರಿಗೆ ನಿಮ್ಮನ್ನು ಬೇರೆಯೇ ಪ್ರಚಂಚಕ್ಕೆ ಕರೆದೊಯ್ಯುತ್ತದೆ. ಇಲ್ಲಿ ನಾಲ್ಕು ದಿನಗಳ ಹೊರಾಂಗಣ ಸಂಗೀತೋತ್ಸವ ನಡೆಯುತ್ತದೆ. ಆರಾಮಾಗಿ ಹುಲ್ಲಿನ ಮೇಲೆ ಮಲಗಿ, ರುಚಿಕರ ಖಾದ್ಯಗಳನ್ನು ಸವಿಯುತ್ತಾ ಮತ್ತು ರೈಸ್ ಬೀಯರ್ ಕುಡಿಯುತ್ತಾ ಸ್ನೇಹಿತರ ಜೊತೆ ಆನಂದಿಸಬಹುದು.

 • ಉಳಿದುಕೊಳ್ಳಲು ಸ್ಥಳ: ಜೀರೋ ವ್ಯಾಲಿ ರೆಸಾರ್ಟ್ ಅನ್ನು ಬುಕ್ ಮಾಡಿ ಮತ್ತು ನಮ್ಮ ದೇಶದ ಈಶಾನ್ಯ ಭಾಗದ ಸಂಸ್ಕೃತಿಯ ಸೊಬಗನ್ನು ಸವಿಯಿರಿ.

 • ಭೇಟಿಗೆ ಸೂಕ್ತ ಅವಧಿ: ಅಕ್ಟೋಬರ್ - ಮಾರ್ಚ್ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

 • ಏನೆಲ್ಲಾ ಮಾಡಬಹುದು: ಕ್ಯಾಂಪಿಂಗ್ ಮಾಡಬಹುದು, ಜೀರೋ ಮ್ಯೂಸಿಕ್ ಫೆಸ್ಟಿವಲ್ ಅನ್ನು ಆನಂದಿಸಬಹುದು. ಸ್ಥಳೀಯ ಬೀರ್ ಅನ್ನು ಆನಂದಿಸಬಹುದು.


5. ಪಾಂಡಿಚೇರಿ
ಈಗ ಪುದುಚೇರಿ ಎಂದು ಕರೆಯಲ್ಪಡುವ ಪಾಂಡಿಚೇರಿ, ಸಾಂಸಕೃತಿಕವಾಗಿ ದಕ್ಷಿಣ ಭಾರತೀಯ ನಾಗರೀಕತೆ ಮತ್ತು ಫ್ರೆಂಚ್ ವಾಸ್ತು ಶೈಲಿಯ ಶ್ರೀಮಂತ ಮಿಶ್ರಣದಂತಿದೆ. ಸುಂದರ ಕಡಲ ತೀರಗಳು ಮತ್ತು ತಾಜಾ ಸೀಫುಡ್ ಇಲ್ಲಿನ ವಿಶೇಷ. ಪಾಂಡಿಚೇರಿಯಲ್ಲಿ ಬ್ಯಾಚುಲರ್ಸ್ ಪಾರ್ಟಿ ಮಾಡುವುದಾದರೆ ನಿಮಗೆ ಆನಂದ, ಮನರಂಜನೆ ಸಿಗುವುದು ಖಾತರಿ.

 • ಉಳಿದುಕೊಳ್ಳುವ ಸ್ಥಳ: ಐಷಾರಾಮಿ ಲಾ ವಿಲ್ಲಾ, ಫ್ರೆಂಚ್ ಪ್ರೇರಿತ ಅತಿಥಿಗೃಹಗಳು ಅಥವಾ ಬಜೆಟ್ ಸ್ನೇಹಿ ಹೋಮ್ ಸ್ಟೇಗಳಲ್ಲಿ ಉಳಿದುಕೊಳ್ಳಬಹುದು.

 • ಭೇಟಿ ನೀಡಲು ಸೂಕ್ತ ಸಮಯ: ನವಂಬರ್ ನಿಂದ ಫೆಬ್ರವರಿ.

 • ಏನೆಲ್ಲಾ ಮಾಡಬಹುದು: ಸೈಕ್ಲಿಂಗ್ ನಿಂದ ಸರ್ಫಿಂಗ್ ವರೆಗೆ, ಸ್ಕೂಬಾ ಡೈವಿಂಗ್‍ನಿಂದ ಪ್ಯಾರಾ ಸೇಲಿಂಗ್ ವರೆಗೆ ನಾನಾ ಬಗೆಯ ಸಾಹಸಮಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು. ನಾಟಕಗಳನ್ನು ನೋಡಬಹುದು, ಆರೋವಿಲ್ಲಗೆ ಭೇಟಿ ನೀಡಬಹುದು, ಬೀಚ್‍ನಲ್ಲಿ ತಡ ರಾತ್ರಿಯ ವರೆಗೆ ಪಾರ್ಟಿ ಮಾಡಬಹುದು.


6. ಬಾಂಧವ್‍ಗಢ್ ನ್ಯಾಷನಲ್ ಪಾರ್ಕ್
ಇದು ವೈಲ್ಡ್ ಬ್ಯಾಚಲರ್ ಪಾರ್ಟಿಗೆ ಸೂಕ್ತವಾದ ಸ್ಥಳ. ಒಂದು ಬದಿಯಲ್ಲಿ ವಿಂಧ್ಯಾ ಬೆಟ್ಟಗಳು, ಇನ್ನೊಂದೆಡೆ ಹಚ್ಚಹಸಿರಿನ ಕಾಡು. ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿರುವ ಈ ನ್ಯಾಷನಲ್ ಪಾರ್ಕ್‍ನ ಪ್ರಾಣಿ, ಪಕ್ಷಿ ವೈವಿಧ್ಯ ಮತ್ತು ಸುಂದರ ನಿಸರ್ಗ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಇದನ್ನೂ ಓದಿ: Fashion Tips: ಮಳೆಗಾಲದಲ್ಲೂ ಸೀರೆಯುಟ್ಟು ಕಂಗೊಳಿಸುವ ಆಸೆನಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

 • ಉಳಿದುಕೊಳ್ಳುವ ಸ್ಥಳ: ನ್ಯಾಶನಲ್ ಪಾರ್ಕ್ ಸಮೀಪ ಹೊಟೇಲ್‍ಗಳಿವೆ. ಹೆಚ್ಚು ಹಣ ಖರ್ಚು ಮಾಡಲು ಸಿದ್ಧವಿದ್ದರೆ, ಪೆಂಚ್ ಟೈಗರ್ ರಿಸರ್ವ್ ಅಥವಾ ತಾಜ್ ಹೊಟೆಲ್ ಅವರ ಮಹುವಾ ಕೋಟಿ ಇದೆ. ಬೇಗನೆ ಬುಕ್ ಮಾಡಿದರೆ, ಬಜೆಟ್ ಹೊಟೆಲ್‍ಗಳು ಮತ್ತು ಟ್ರೀ ಹೌಸ್‍ಗಳು ಸಿಗುತ್ತವೆ.

 • ಭೇಟಿಗೆ ಸೂಕ್ತ ಸಮಯ: ಅಕ್ಟೋಬರ್ - ಜೂನ್ .

 • ಏನೆಲ್ಲಾ ಮಾಡಬಹುದು: ವೈಲ್ಡ್ ಲೈಫ್ ಸಫಾರಿಗೆ ಹೋಗಬಹುದು. ತಾಲಾ ಗ್ರಾಮದಲ್ಲಿ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಪಕ್ಷಿ ವೀಕ್ಷಣೆ, ಆನೆ ಸಫಾರಿ ಮಾಡಬಹುದು.


7. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ
ಸುಂದರ ಮತ್ತು ಸ್ವಚ್ಚ ಸಮುದ್ರ ತೀರಗಳ ನಡುವೆ, ವೈವಿಧ್ಯಮಯ ಖಾದ್ಯಗಳನ್ನು ಸವಿಯುತ್ತಾ ಪಾರ್ಟಿ ಮಾಡಬೇಕಿದ್ದರೆ ಇಲ್ಲಿಗೆ ಭೇಟಿ ನೀಡಬೇಕು.

 • ಉಳಿದುಕೊಳ್ಳುವ ಸ್ಥಳ: ನಿಮ್ಮ ಬಜೆಟ್‍ಗೆ ತಕ್ಕಂತೆ ಇಲ್ಲಿ ಹೊಟೇಲ್‍ಗಳಿವೆ. ನೀವು ಸಾಂಪ್ರದಾಯಿಕ ಅಂಡಮಾನೀಸ್ ಶೈಲಿಯ ಕಾಟೇಜ್‍ಗಳನ್ನು ಬುಕ್ ಮಾಡಬಹುದು ಅಥವಾ ರೆಸಾರ್ಟ್‍ಗಳಲ್ಲಿ ಉಳಿದುಕೊಳ್ಳಬಹುದು. ಇಲ್ಲಿ, ಸ್ಪಾ ಮತ್ತು ಸ್ಕೂಬಾ ಸೆಷನ್‍ಗಳನ್ನು ನೀಡುವ ಐಷಾರಾಮಿ ಕಾಟೇಜ್‍ಗಳು ಮತ್ತು ವಿಲ್ಲಾಗಳಿವೆ.

 • ಭೇಟಿಗೆ ಸೂಕ್ತ ಸಮಯ: ನವಂಬರ್ - ಮೇ ವರೆಗೆ.

 • ಏನೆಲ್ಲಾ ಮಾಡಬಹುದು: ಬಜೆಟ್ ಸ್ನೇಹಿಯಾಗಿರುವ ಸ್ಥಳೀಯ ಬಾರುಗಳು, ಕೆಫೆಗಳು ಇಲ್ಲಿವೆ. ಕಡಲ ತೀರಗಳಲ್ಲಿ ಬೀರ್ ಕುಡಿಯುತ್ತಾ ಸನ್ ಬಾತ್ ಮಾಡಬಹುದು. ವಿಹಾರ ನೌಕೆಯನ್ನು ಬುಕ್ ಮಾಡಿ, ಬಂಗಾಳ ಕೊಲ್ಲಿಯಲ್ಲಿ ವಿಹಾರ ಮಾಡಬಹುದು. ವಾಟರ್ ಸ್ಪೋರ್ಟ್ ಕೂಡ ಲಭ್ಯ.


8. ಲಡಾಕ್ : ಜೀವನದಲ್ಲಿ ಒಮ್ಮೆಯಾದರೂ ಲಡಾಕ್‍ಗೆ ರೋಡ್ ಟ್ರಿಪ್ ಮಾಡಬೇಕು. ಇದಕ್ಕೆ ಬ್ಯಾಚಲರ್ ಪಾರ್ಟಿಗಿಂತ ಉತ್ತಮ ನೆಪ ಬೇಕೆ? ಖಾಲಿ ರಸ್ತೆಗಳು, ಸುಂದರ ಕಣಿವೆಗಳು, ಹಿಮದಿಂದ ಆವೃತವಾದ ಪರ್ವತಗಳು, ಕಣ್ಣಿಗೆ ಹಬ್ಬ ನೀಡುವ ಸರೋವರಗಳು ಹೀಗೆ ಇನ್ನೂ ಅನೇಕ ಪ್ರಕೃತಿ ವೈಶಿಷ್ಟ್ಯಗಳನ್ನು ಇಲ್ಲಿ ಕಾಣಬಹುದು.

 • ಉಳಿದುಕೊಳ್ಳುವ ಸ್ಥಳ: ಇದು ಜನಪ್ರಿಯ ಪ್ರವಾಸಿ ತಾಣವಾಗಿರುವ ಕಾರಣ, ಇಲ್ಲ ಹಲವಾರು ಕಡಿಮೆ ಮತ್ತು ಹೆಚ್ಚು ಬೆಲೆಯ ಹೊಟೇಲ್‍ಗಳು ಮತ್ತು ಅತಿಥಿ ಗೃಹಗಳು ಲಭ್ಯ ಇವೆ.

 • ಭೇಟಿಗೆ ಸೂಕ್ತ ಸಮಯ: ಮೇ ಯಿಂದ ಸೆಪ್ಟೆಂಬರ್.

 • ಏನೆಲ್ಲಾ ಮಾಡಬಹುದು: ಮೋಟಾರ್ ಬೈಕ್ ಮೂಲಕ ಸುತ್ತಾಟ, ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್, ಒಂಟೆ ಮತ್ತು ಯಾಕ್ ಸಫಾರಿ, ಸ್ಥಳೀಯ ತಾಣ ವೀಕ್ಷಣೆ, ಸ್ಥಳೀಯ ಆಹಾರ ಸೇವನೆ, ಸೈಕ್ಲಿಂಗ್ ಮತ್ತು ಸ್ಕೀಯಿಂಗ್.


9. ವರ್ಕಲ
ದಕ್ಷಿಣ ಭಾರತದ ಸಮುದ್ರ ತೀರದಲ್ಲಿ ಬ್ಯಾಚುಲರ್ಸ್ ಪಾರ್ಟಿ ಆಚರಿಸಲು ವರ್ಕಲ ಸೂಕ್ತ ತಾಣ. ಇಲ್ಲಿ ನೀವು ಹಿನ್ನೀರಿನ ಪ್ರವಾಸವನ್ನು ಕೂಡ ಮಾಡಬಹುದು.

 • ಉಳಿದುಕೊಳ್ಳುವ ಸ್ಥಳ: ವಾಸಕ್ಕೆ ಇಲ್ಲಿ ಸಾಕಷ್ಟು ಆಯ್ಕೆಗಳಿವೆ. ನಿಮ್ಮ ಬಜೆಟ್‍ಗೆ ತಕ್ಕ ರೆಸಾರ್ಟ್‍ಗಳು, ಹೋಮ್‍ಸ್ಟೇಗಳು ಇಲ್ಲಿವೆ.

 • ಭೇಟಿಗೆ ಸೂಕ್ತ ಸಮಯ: ಇಲ್ಲಿಗೆ ಭೇಟಿ ನೀಡಲು ಚಳಿಗಾಲ ಸೂಕ್ತ ಸಮಯ.

 • ಏನೆಲ್ಲಾ ಮಾಡಬಹುದು: ಕಡಲ ತೀರದಲ್ಲಿ ಪಾರ್ಟಿ, ಹಿನ್ನೀರಿನ ಪ್ರವಾಸ, ಕಡಲ ತೀರದ ನಡಿಗೆ ಮತ್ತು ಸ್ಥಳೀಯ ಆಹಾರವನ್ನು ಆಸ್ವಾದಿಸಬಹುದು.


10. ಗೋಕರ್ಣ
ಗೋಕರ್ಣ ಪ್ರಸಿದ್ಧ ಯಾತ್ರಾ ಸ್ಥಳ ಎಂಬುವುದು ನಿಜ. ಅದೇ ರೀತಿ ಸುಂದರ ಕಡಲ ತೀರಗಳ ತಾಣವೂ ಹೌದು. ಇಲ್ಲಿನ ಪ್ರಮುಖ ಐದು ಬೀಚ್‍ಗಳಾದ, ಗೋಕರ್ಣ ಬೀಚ್, ಕುಡ್ಲೆ ಬೀಚ್, ಓಂ ಬೀಚ್, ಹಾಫ್ ಮೂನ್ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಪಾರ್ಟಿಗೆ ಅತ್ಯಂತ ಸೂಕ್ತ.

ಇದನ್ನೂ ಓದಿ: Sunset: ಸುಂದರ ಸೂರ್ಯಾಸ್ತಮಾನ ಸೆರೆಹಿಡಿಯಲು ಟ್ರಾಫಿಕ್ ಸ್ಟಾಪ್ ಮಾಡಿದ ಜನ!

 • ಉಳಿದುಕೊಳ್ಳುವ ಸ್ಥಳ: ಗೋಕರ್ಣದಲ್ಲಿ ನಿಮ್ಮ ಬಜೆಟ್‍ಗೆ ತಕ್ಕ ಹೊಟೇಲ್‍ಗಳು ಮತ್ತು ರೆಸಾರ್ಟ್‍ಗಳಿವೆ.

 • ಭೇಟಿಗೆ ಸೂಕ್ತ ಅವಧಿ: ಸೆಪ್ಟೆಂಬರ್ - ಏಪ್ರಿಲ್ ವರೆಗೆ .

 • ಏನೆಲ್ಲಾ ಮಾಡಬಹುದು: ಬೀಚ್ ಟ್ರೆಕ್ಕಿಂಗ್, ಫೋಟೋಗ್ರಫಿ, ವಾಟರ್ ಸ್ಪೋಟ್ರ್ಸ್ ಮತ್ತು ಸ್ಥಳೀಯ ಆಹಾರ ಸೇವನೆ.


11. ಹಳೆ ಮನಾಲಿ
ಹೊಸ ಮನಾಲಿಗಿಂತ ಹಳೆ ಮನಾಲಿ ಸಂಪೂರ್ಣ ಭಿನ್ನ. ಇಲ್ಲಿ ನೀವು ಹಿಪ್ಪಿ ಸಂಸ್ಕೃತಿಯನ್ನು ಕಾಣ ಬಹುದು. ಇದು ಕುಟುಂಬ ಸಮೇತ ಪ್ರವಾಸಕ್ಕೆ ಸೂಕ್ತ ತಾಣವಲ್ಲ, ಆದರೆ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಉತ್ತಮ ಜಾಗ.

 • ಉಳಿದುಕೊಳ್ಳುವ ಸ್ಥಳ: ನಿಮ್ಮ ಅಗತ್ಯ ಮತ್ತು ಬಜೆಟ್‍ಗೆ ತಕ್ಕಂತೆ ಹೊಟೇಲ್, ರೆಸಾರ್ಟ್ ಮತ್ತು ಹಾಸ್ಟೆಲ್‍ಗಳು ಲಭ್ಯ.

 • ಭೇಟಿಗೆ ಸೂಕ್ತ ಸಮಯ: ಬೇಸಿಗೆ ಕಾಲದಲ್ಲಿ ಭೇಟಿ ನೀಡಿ.

 • ಏನೆಲ್ಲಾ ಮಾಡಬಹುದು: ಪರ್ವತ ಕ್ರೀಡೆ, ಪ್ಯಾರಾ ಗ್ಲೈಡಿಂಗ್ ಮತ್ತು ಆಹಾರ ಪ್ರವಾಸ ಇತ್ಯಾದಿ.

Published by:Ashwini Prabhu
First published: