Panipuri Near Me: ಬೆಂಗಳೂರಿನ ಈ ಸ್ಥಳಗಳಲ್ಲಿ ಮಿಸ್​ ಮಾಡದೇ ತಿನ್ನಿ ಬಾಯಲ್ಲಿ ನೀರೂರಿಸುವ ಕಟ್ಟಾ ಮೀಟಾ ಪಾನಿಪೂರಿ!

Best Panipuri Near Me: ಸಾಮಾನ್ಯ ಪಾನಿ ಪೂರಿ ಪ್ಲೇಟ್‌ನಲ್ಲಿ ಪೂರಿಗಳೊಂದಿಗೆ ಬರುವ ಹುಣಸೆಹಣ್ಣು ಆಧಾರಿತ ಪಾನಿಗೆ ಬದಲಿಗೆ ಇಲ್ಲಿ ವಿಭಿನ್ನ ಪಾನಿ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾನಿಪೂರಿಯು (Panipuri) ಹೆಚ್ಚಿನ ಭಾರತೀಯ ನಗರದ ಬೀದಿಗಳಲ್ಲಿ (Indian Street Food) ಲಭ್ಯವಿರುವ  ಅತ್ಯಂತ ಜನಪ್ರಿಯ ಚಾಟ್‌ಗಳಲ್ಲಿ ಒಂದಾಗಿದೆ. ಬೆಂಗಳೂರಿನ ಹೆಚ್ಚಿನ ಪಾನಿ ಪೂರಿ ಭಯ್ಯಾಗಳು ಅಲಹಾಬಾದ್‌ನಿಂದ ಬರುತ್ತಾರೆ. ಆದರೆ ನಗರದ ಇನ್ನೂ ಕೆಲವು ಭಾಗಗಳಲ್ಲಿ ಪಾನಿಪೂರಿ ಅದ್ಭುತವಾಗಿ ಸಿಗುತ್ತದೆ. ಹಾಗಾದ್ರೆ ಬೆಂಗಳೂರಿನಲ್ಲಿ (Bengaluru) ಉತ್ತಮ ಪಾನಿಪೂರಿ ಎಲ್ಲಿ ಸಿಗುತ್ತದೆ ಎಂದು ನೀವು ಹುಡುಕುತ್ತಿದ್ದರೆ, ನಾವು ಕೆಲ ಸ್ಥಳಗಳ ಲಿಸ್ಟ್ ಕೊಟ್ಟಿದ್ದು, ನೀವೂ ಹೋಗಿ ಎಂಜಾಯ್ ಮಾಡಿ.

 ರಾಮರಾಜ್ ಪಾನಿಪೂರಿ, ಫ್ರೇಜರ್ ಟೌನ್, ಬೆಂಗಳೂರು

ಅತ್ಯಂತ ಜನಪ್ರಿಯ ಪಾನಿಪೂರಿ ಸ್ಟಾಲ್‌ಗಳಲ್ಲಿ, ರಾಮರಾಜ್ ಅವರ ಪಾನಿ ಪೂರಿ ಸ್ಪಷ್ಟವಾಗಿ ಕೋಲ್ಕತ್ತಾದ ಪುಚ್ಕಾದ ರುಚಿ ನೀಡುತ್ತದೆ. ಸ್ಟೈಸಿ ಪಾನಿ ಮತ್ತು ಪೂರಿಗಳು. ಆಲೂಗಡ್ಡೆ ಸ್ಟಫಿಂಗ್ ಮಸಾಲಾಗಳ ಸರಿಯಾದ ಮಿಶ್ರಣ. ಆಹಾ ಇಲ್ಲಿ ಒಮ್ಮೆಯಾದರೂ ಪಾನಿಪೂರಿ ಸವಿಯಲೇ ಬೇಕು.

ವಿಳಾಸ: 94, ಮಸೀದಿ ರಸ್ತೆ, ಕ್ಲೇವೆಲ್ಯಾಂಡ್​ ರೋಡ್​, ಪುಲಕೇಶಿ ನಗರ

ಮೊಬೈಲ್ ನಂಬರ್: +919036591328

ಸಮಯ: ಬೆಳಗ್ಗೆ 11 ರಿಂದ ರಾತ್ರಿ 10ರ ವರೆಗೆ

ಇದನ್ನೂ ಓದಿ: ಮದುವೆ ಡೇಟ್​ ಹತ್ತಿರ ಇದ್ರೆ ತ್ವಚೆಯ ಆರೈಕೆಯನ್ನು ಹೀಗೆ ಮಾಡಿ

ಪಾನಿಪೂರಿ ಅಂಗಡಿ, ಜೆಎನ್​ಸಿ ಕಾಲೇಜ್​ ಎದುರು, ಕೋರಮಂಗಲ, ಬೆಂಗಳೂರು

ಜೆಎನ್‌ಸಿ ಕಾಲೇಜಿನ ಹೊರಗಿನ ಪಾನಿಪೂರಿ ಸ್ಟಾಲ್  ವಿದ್ಯಾರ್ಥಿಗಳ ಫೇವರೇಟ್ ಸ್ಥಳ. ಸಾಮಾನ್ಯವಾಗಿ ಸ್ಟಾಲ್‌ನ ಸುತ್ತಲೂ ಕಿಕ್ಕಿರಿದು ತುಂಬಿರುವ ಜೆಎನ್‌ಸಿ ವಿದ್ಯಾರ್ಥಿಗಳ ಹಾಗೂ ಸುತ್ತಲಿನ ನಿವಾಸಿಗಳ ಅತ್ಯಂತ ಪ್ರೀತಿಯ ತಾಣವಾಗಿದೆ. ಸುತ್ತಮುತ್ತಲಿನ ಇತರ ಪಾನಿಪೂರಿ ಸ್ಟಾಲ್‌ಗಳಿದ್ದರೂ, ಆಲೂ ಸ್ಟಫಿಂಗ್ ಮತ್ತು ಪಾನಿಗಾಗಿ ಜನರನ್ನು ಇದು ಸೆಳೆಯುತ್ತದೆ.

ವಿಳಾಸ: 57-58, ಜ್ಯೋತಿ ನಿವಾಸ್ ಕಾಲೇಜು ರಸ್ತೆ, 5ನೇ ಎ ಬ್ಲಾಕ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, ಕೋರಮಂಗಲ, ಬೆಂಗಳೂರು

ಸಮಯ: ಬೆಳಗ್ಗೆ 12 ರಿಂದ ರಾತ್ರಿ 8ರ ವರೆಗೆ

ಅನಿಲ್ ಕುಮಾರ್ ಪಾನಿ ಪೂರಿ, ನ್ಯೂ ಬಿಇಎಲ್ ರಸ್ತೆ, ಬೆಂಗಳೂರು

ನ್ಯೂ ಬಿಇಎಲ್ ರಸ್ತೆಯಲ್ಲಿರುವ ಅನಿಲ್ ಕುಮಾರ್ ಅವರ ಸ್ಟಾಲ್ ಎಂಎಸ್ ರಾಮಯ್ಯ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ಚಾಟ್​ ಸೆಂಟರ್​ ಆಗಿದೆ. ದಿನಕ್ಕೊಂದು ರುಚಿಕರವಾದ ಪಾನಿಪೂರಿಗಳನ್ನು ಮಾಡುವ ಕಲೆ ಇವರಿಗೆ ಕರಗತವಾಗಿದೆ. ಪಾನಿಯು ಮಸಾಲೆಗಳ ಹೊರತಾಗಿ ಕೊತ್ತಂಬರಿ ಮತ್ತು ತಾಜಾ ಪುದೀನದ ರುಚಿಯನ್ನು ಹೊಂದಿದ್ದು, ಒಮ್ಮೆ ವಿಸಿಟ್​ ಮಾಡಿದರೆ ಪದೇ ಪದೇ ಹೋಗುತ್ತೀರಿ.

ವಿಳಾಸ: 204, ನ್ಯೂ ಬಿಇಎಲ್​ ರೋಡ್, ಜಲದರ್ಶಿನಿ ಲೇಔಟ್, ಮತ್ತಿಕೆರೆ, ಬೆಂಗಳೂರು

ಮೊಬೈಲ್ ನಂಬರ್: +919535317513

ಸಮಯ: ಬೆಳಗ್ಗೆ 10.30 ರಿಂದ ಸಂಜೆ 6 ರವರೆಗೆ

ರಾಕೇಶ್ ಕುಮಾರ್ ಪಾನಿಪೂರಿ, ಜಯನಗರ, ಬೆಂಗಳೂರು

ಸುತ್ತಮುತ್ತಲಿನ ಅತ್ಯಂತ ಹಳೆಯ ಪಾನಿಪೂರಿ ಸ್ಥಳಗಳಲ್ಲಿ ಒಂದಾದ ರಾಕೇಶ್ ಪಾನಿಪೂರಿ ಮತ್ತು ಚಾಟ್ ಅಧಿಕೃತ ಉತ್ತರ ಭಾರತೀಯ ಚಾಟ್ ಅನ್ನು ಒದಗಿಸುತ್ತದೆ. 1994 ರಲ್ಲಿ ಬನಾರಸ್‌ನಿಂದ ಬಂದ ಶ್ರೀ ರಾಕೇಶ್ ಅವರಿಂದ ಪ್ರಾರಂಭವಾದ ಈ ಔಟ್‌ಲೆಟ್ ಪಾನಿ ಪೂರಿ ಮತ್ತು ಆಲೂ ಚಾಟ್‌ಗೆ ಹೆಚ್ಚು ಹೆಸರುವಾಸಿಯಾಗಿದೆ. ಅನೇಕ ಕಾಲೇಜುಗಳು ಮತ್ತು ಇತರ ಸಂಸ್ಥೆಗಳ ಸಮೀಪದಲ್ಲಿ ಈ ಅಂಗಡಿ ಇದ್ದು,  ಈ ಸ್ಥಳವು ಅದರ ಚಾಟ್‌ಗಾಗಿ ಹೆಚ್ಚು ಜನಪ್ರಿಯವಾಗಿದೆ.

ವಿಳಾಸ: 69, 8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು

ಮೊಬೈಲ್ ನಂಬರ್: +917204789668

ಸಮಯ: ಬೆಳಗ್ಗೆ 10 ರಿಂದ ರಾತ್ರಿ 11 ಗಂಟೆಯ ವರೆಗೆ

ಇದನ್ನೂ ಓದಿ: ಕಣ್ಮನ ಸೆಳೆಯುವ ಮೈಸೂರಿನ 7 ಅರಮನೆಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಶ್ರೀ ಚಾರ್ಟ್ ಪಾಯಿಂಟ್, ಜಯನಗರ, ಬೆಂಗಳೂರು

‘ವೈಟ್ ಪಾನಿ’ಗೆ ಜನಪ್ರಿಯವಾಗಿರುವ ಶ್ರೀ ಚಾಟ್ ಪಾಯಿಂಟ್ ಬೆಂಗಳೂರಿನ ಜಯನಗರದ 3ನೇ ಬ್ಲಾಕ್‌ನಲ್ಲಿದೆ. ಸಾಮಾನ್ಯ ಪಾನಿ ಪೂರಿ ಪ್ಲೇಟ್‌ನಲ್ಲಿ ಪೂರಿಗಳೊಂದಿಗೆ ಬರುವ ಹುಣಸೆಹಣ್ಣು ಆಧಾರಿತ ಪಾನಿಗೆ ಬದಲಿಗೆ ಇಲ್ಲಿ ವಿಭಿನ್ನ ಪಾನಿ ನೀಡುತ್ತಾರೆ.

ವಿಳಾಸ: 81/ಬಿ, ಅರಬಿಂದೋ ಮಾರ್ಗ, 3ನೇ ಬ್ಲಾಕ್, ಜಯನಗರ, ಬೆಂಗಳೂರು

ಸಮಯ: ಬೆಳಗ್ಗೆ 10 ರಿಂದ ರಾತ್ರಿ 9ರ ವರೆಗೆ
Published by:Sandhya M
First published: