Palaces In Mysuru: ಕಣ್ಮನ ಸೆಳೆಯುವ ಮೈಸೂರಿನ 7 ಅರಮನೆಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ

Best Palaces of Mysuru: ಆದರೆ, ಬೆಂಕಿ ಕಾಣಿಸಿಕೊಂಡ ನಂತರ ಸ್ಟುಡಿಯೋವನ್ನು ಮುಚ್ಚಲಾಯಿತು. ಈಗ ಅರಮನೆಯನ್ನು ಪರಿಸರ ಸ್ನೇಹಿ ಹೆರಿಟೇಜ್ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

ಮೈಸೂರು ಅರಮನೆ

ಮೈಸೂರು ಅರಮನೆ

  • Share this:
ಅರಮನೆ ನಗರಿ (City Of Palace) ಎಂದು ಹೆಸರುವಾಸಿಯಾಗಿರುವ ಮೈಸೂರು (Mysuru)  ಪ್ರವಾಸಿಗರನ್ನು (Tourist) ಸೆಳೆಯುವ ಅದ್ಭುತ ಸ್ಥಳಗಳಲ್ಲಿ ಒಂದು. ಈ ಊರಿನಲ್ಲಿ ನೋಡಲು ಹಲವಾರು ಸ್ಥಳಗಳಿವೆ. ಅದರಲ್ಲೂ, ಅರಮನೆ ನಗರಿಯ ಮುಖ್ಯವಾದ ಅರಮನೆಗಳನ್ನು ನೋಡದೇ ಇರುವುದು ಹೇಗೆ. ಮೈಸೂರಿನ 7 ಅದ್ಬುತ ಅರಮನೆಗಳ (Palace) ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಮೈಸೂರು ಅರಮನೆ (ಅಂಬಾ ವಿಲಾಸ ಅರಮನೆ)

ನಗರದ ಹೆಮ್ಮೆಯ ಆಸ್ತಿ ಮತ್ತು ಅತ್ಯಂತ ಸಾಂಪ್ರದಾಯಿಕ ಹೆಗ್ಗುರುತು ಭವ್ಯವಾದ ಮೈಸೂರು ಅರಮನೆ. ಈಗ ಪ್ರತಿ ವರ್ಷ 6 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುವ ಭಾರತದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಮೂಲತಃ ಐದನೇ ಶತಮಾನದಲ್ಲಿ ನಿರ್ಮಿಸಲಾದ ಈ ಅರಮನೆಯನ್ನು ಹಲವಾರು ಬಾರಿ ಬೀಳಿಸಿ ಪುನರ್ನಿರ್ಮಿಸಲಾಗಿದೆ ಮತ್ತು ನವೀಕರಿಸಲಾಗಿದೆ. ಹಿಂದೂ, ಮೊಘಲ್, ರಜಪೂತ ಮತ್ತು ಗೋಥಿಕ್ ಶೈಲಿಯ ವಾಸ್ತುಶಿಲ್ಪದ ಮಿಶ್ರಣಗಳೊಂದಿಗೆ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ಮೂರು ಅಂತಸ್ತಿನ ಅರಮನೆಯನ್ನು ನಿರ್ಮಿಸಲಾಗಿದೆ.

ಭೇಟಿ ನೀಡಲು ಸರಿಯಾದ ಸಮಯ: ಅರಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಝಗಮಗಿಸುವ ಲೈಟ್​ನಲ್ಲಿ ನೋಡಲು ದಸರಾ ಸಮಯದಲ್ಲಿ ಭೇಟಿ ನೀಡಬೇಕು

.ಹೋಗುವುದು ಹೇಗೆ: ನೀವು ಬಸ್‌ಗಳ ಮೂಲಕ ಸುಲಭವಾಗಿ ಅರಮನೆಯನ್ನು ತಲುಪಬಹುದು. ಈ ಬಸ್ ನಿಲ್ದಾಣದಲ್ಲಿ KSRTC ಬಸ್ಸುಗಳು ನಿಯಮಿತ ಮತ್ತು ಕಡಿಮೆ ಅಂತರದಲ್ಲಿ ಕಾರ್ಯನಿರ್ವಹಿಸುತ್ತವೆ.

best palaces of mysuru near me you must visit
ಮೈಸೂರು ಅರಮನೆ


ಲಲಿತ್​ ಮಹಲ್ ಅರಮನೆ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಬಿಳಿ ಬಣ್ಣದ ಲಲಿತ್ ಮಹಲ್ ಅರಮನೆಯು ಮೈಸೂರಿನ ಅತ್ಯಂತ ಸೊಗಸಾದ ಅರಮನೆಗಳಲ್ಲಿ ಒಂದಾಗಿದೆ. 1921 ರಲ್ಲಿ ನಿರ್ಮಿಸಲಾದ ಲಲಿತ ಮಹಲ್ ಅರಮನೆಯು ಮೈಸೂರಿನ ಅರಮನೆಗಳಲ್ಲಿ ಎರಡನೆಯದು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ IV ಅರಮನೆಯನ್ನು ನಿರ್ಮಿಸಲು ಮುಂಬೈನಿಂದ ವಾಸ್ತುಶಿಲ್ಪಿ ಇ.ಡಬ್ಲ್ಯೂ.ಫ್ರಿಚ್ಲಿಯನ್ನು ಕರೆಸಿದ್ದರು. ಇದನ್ನು ಅಂದಿನ ಭಾರತದ ವೈಸರಾಯ್ ಅವರ ವಿಶೇಷ ವಾಸ್ತವ್ಯಕ್ಕಾಗಿ ನಿರ್ಮಿಸಲಾಗಿತ್ತು. ನಂತರ ಇದನ್ನು ಮಹಾರಾಜರ ಯುರೋಪಿಯನ್ ಅತಿಥಿಗಳಿಗೆ ಅತಿಥಿ ಗೃಹವಾಗಿ ಬಳಸಲಾಯಿತು. ಸದ್ಯ ಈ ಅರಮನೆಯನ್ನು 5 ಸ್ಟಾರ್ ಹೋಟೆಲ್​ ಆಗಿ ಮಾಡಲಾಗಿದೆ.

ಭೇಟಿ ನೀಡಲು ಒಳ್ಳೆಯ ಸಮಯ: ಯಾವುದೇ ಸಮಯದಲ್ಲಿ ಅರಮನೆಗೆ ಭೇಟಿ ನೀಡಬಹುದು.

ಹೋಗುವುದು ಹೇಗೆ: ಇದು ಮೈಸೂರು ವಿಮಾನ ನಿಲ್ದಾಣದಿಂದ ಸರಿಸುಮಾರು 14 ಕಿಮೀ ಮತ್ತು ಮೈಸೂರು ರೈಲು ನಿಲ್ದಾಣದಿಂದ 7 ಕಿಮೀ ದೂರದಲ್ಲಿದೆ.ಜಗನ್ಮೋಹನ ಅರಮನೆ

ಸುಂದರ ಜಗನ್ಮೋಹನ ಅರಮನೆಯು ಮೈಸೂರು ನಗರದ ಮಧ್ಯಭಾಗದಲ್ಲಿದೆ. ಮಹಾರಾಜ ಕೃಷ್ಣರಾಜ ಒಡೆಯರ್ III ಇದನ್ನು 1869 ರಲ್ಲಿ ನಿರ್ಮಿಸಿದ್ದಾರೆ. ಮುಖ್ಯ ಅರಮನೆಯಾದ ಅಂಬಾ ವಿಲಾಸ್ ಅಪಘಾತದಲ್ಲಿ ಸುಟ್ಟುಹೋದ ನಂತರ ರಾಜಮನೆತನವು ಇಲ್ಲಿಗೆ ಸ್ಥಳಾಂತರಗೊಂಡು ವಾಸಿಸುತ್ತಿತ್ತು. ಇಂದು ಜಗಮೋಹನ್ ಅರಮನೆಯನ್ನು ಆರ್ಟ್ ಗ್ಯಾಲರಿಯಾಗಿ ಮಾಡಲಾಗಿದ್ದು, ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಭಾರತದ ಅತ್ಯುತ್ತಮ ಕಲಾ ಗ್ಯಾಲರಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜಗನ್ಮೋಹನ ಅರಮನೆಯು ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 5.30 ರವರೆಗೆ ಓಪನ್​ ಇರುತ್ತದೆ.

ಭೇಟಿ ನೀಡಲು ಒಳ್ಳೆಯ ಸಮಯ: ಬೆಳಗ್ಗೆ 8 ರಿಂದ ಸಂಜೆ 5.30 ರವರೆಗೆ

ಹೋಗುವುದು ಹೇಗೆ: ಇದು ಮೈಸೂರು ರೈಲು ನಿಲ್ದಾಣದಿಂದ 2 ಕಿಮೀ ಮತ್ತು KSRTC ಬಸ್ ನಿಲ್ದಾಣದಿಂದ 2 ಕಿಮೀ ದೂರದಲ್ಲಿದೆ.

ಚೆಲುವಾಂಭ ಅರಮನೆ

ಮೈಸೂರು-ಕೃಷ್ಣರಾಜ ಸಾಗರ ರಸ್ತೆಯಲ್ಲಿರುವ ಚೆಲುವಾಂಬ ಮ್ಯಾನ್ಷನ್ ನಗರದ ವಾಯುವ್ಯ ಭಾಗದಲ್ಲಿದೆ. ಮೈಸೂರು ರೈಲ್ವೇ ನಿಲ್ದಾಣದ ಬಳಿ ಇರುವ ಈ ಅರಮನೆಯನ್ನು ಮಹಾರಾಜ ಕೃಷ್ಣರಾಜ ಒಡೆಯರ್ IV ರ ಮೂರನೇ ಪುತ್ರಿ ರಾಜಕುಮಾರಿ ಚೆಲುವಾಜಮ್ಮಣ್ಣಿಗಾಗಿ 1911 ರಲ್ಲಿ ನಿರ್ಮಿಸಲಾಯಿತು. ರಾಜವಂಶದ ಇತರ ಕಟ್ಟಡಗಳಂತೆ, ಕಟ್ಟಡವು ವಿಶಾಲವಾದ ಪ್ರದೇಶದಲ್ಲಿದೆ ಮತ್ತು ಸುಂದರವಾದ ಉದ್ಯಾನವನಗಳಿಂದ ಕೂಡಿದೆ. ಪ್ರಸ್ತುತ, ಇದು ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಾಗಿದೆ. ಸಾರ್ವಜನಿಕರಿಗೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಭೇಟಿ ನೀಡಲು ಸರಿಯಾದ ಸಮಯ: ಹೂಬಿಡುವ ಅವಧಿಯಲ್ಲಿ ಹೋಗುವುದು ಉತ್ತಮ

ಹೋಗುವುದು ಹೇಗೆ: ಅರಮನೆಯು ಮೈಸೂರು ರೈಲು ನಿಲ್ದಾಣದಿಂದ 2 ಕಿಮೀ ಮತ್ತು KSRTC ಬಸ್ ನಿಲ್ದಾಣದಿಂದ 3 ಕಿಮೀ ದೂರದಲ್ಲಿದೆ.

ಜಯಲಕ್ಷ್ಮಿ ವಿಲಾಸ ಅರಮನೆ

ಜಯಲಕ್ಷ್ಮಿ ವಿಲಾಸವನ್ನು 1905 ರಲ್ಲಿ ಮಹಾರಾಜ ಚಾಮರಾಜ ಒಡೆಯರ್ ಅವರು ತಮ್ಮ ಹಿರಿಯ ಮಗಳು, ರಾಜಕುಮಾರಿ ಜಯಲಕ್ಷ್ಮಿ ಅಮ್ಮನಿಗಾಗಿ ನಿರ್ಮಿಸಿದರು. ಈ ಅರಮನೆಯನ್ನು ಆರಂಭದಲ್ಲಿ ಮೊದಲ ರಾಜಕುಮಾರಿ ಮ್ಯಾನ್ಷನ್ ಎಂದು ಕರೆಯಲಾಗುತ್ತಿತ್ತು. ಇದು ಕುಕ್ಕರಹಳ್ಳಿ ಕೆರೆಯ ಪಶ್ಚಿಮದಲ್ಲಿ ನಿರ್ಮಿಸಲಾಗಿದೆ. ಇದು ಈಗ ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿದೆ. ಈ ಮಹಲು ಪ್ರಸ್ತುತ ಮೂರು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ - ಪುರಾತತ್ತ್ವ ಶಾಸ್ತ್ರ, ಜಾನಪದ ಮತ್ತು ಸಾಮಾನ್ಯ ವಸ್ತುಸಂಗ್ರಹಾಲಯಗಳಲ್ಲಿ ಬೆಲೆಬಾಳುವ ಕಲಾಕೃತಿಗಳ ಪ್ರದರ್ಶನ ಮಾಡಲಾಗುತ್ತದೆ.

ಇದನ್ನೂ ಓದಿ: ಅದೆಷ್ಟೇ ಹಸಿವಾಗಿದ್ದರೂ ಮಧ್ಯಾಹ್ನದ ಊಟಕ್ಕೆ ಈ ಆಹಾರಗಳನ್ನು ತಿನ್ನಲೇಬೇಡಿ

ಭೇಟಿ ನೀಡಲು ಸರಿಯಾದ ಸಮಯ: ಅರಮನೆಗೆ ವರ್ಷಪೂರ್ತಿ ಭೇಟಿ ನೀಡಬಹುದು.

ಹೋಗುವುದು ಹೇಗೆ: ಅರಮನೆಯು ಮೈಸೂರು ರೈಲು ನಿಲ್ದಾಣದಿಂದ 5 ಕಿಮೀ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ 5 ಕಿಮೀ ದೂರದಲ್ಲಿದೆ.ರಾಜೇಂದ್ರ ವಿಲಾಸ ಅರಮನೆ

ಚಾಮುಂಡಿ ಬೆಟ್ಟದ ಮೇಲಿರುವ ರಾಜೇಂದ್ರ ವಿಲಾಸ ಅರಮನೆಯನ್ನು ಒಡೆಯರ್ ರಾಜರು ಬೇಸಿಗೆಯ ಅರಮನೆಯಾಗಿ ಬಳಸುತ್ತಿದ್ದರು. 1000 ಅಡಿ ಎತ್ತರದಲ್ಲಿ, ಅರಮನೆಯು ನಗರದ ಉತ್ತಮ ನೋಟವನ್ನು ನೀಡಿತು. ಅರಮನೆಯು 1938-1939 ರಲ್ಲಿ ಪೂರ್ಣಗೊಂಡಿತು. ಇದನ್ನು ರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಐಷಾರಾಮಿ ಹೋಟೆಲ್ ಆಗಿ ಪರಿವರ್ತಿಸಿದರು. ಹೋಟೆಲ್ ರಾಜಸ್ಥಾನಿ ವಾಸ್ತುಶಿಲ್ಪದ ಮಿಶ್ರಣಗಳೊಂದಿಗೆ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾದ 25 ಸೂಟ್‌ಗಳನ್ನು ಹೊಂದಿತ್ತು. ಆದರೆ, 1980 ರ ದಶಕದಲ್ಲಿ ಕಾರ್ಮಿಕರ ಸಮಸ್ಯೆಗಳಿಂದ ಇದನ್ನು ಮುಚ್ಚಲಾಯಿತು.

ಭೇಟಿ ನೀಡಲು ಸರಿಯಾದ ಸಮಯ: ಅರಮನೆಗೆ ವರ್ಷಪೂರ್ತಿ ಭೇಟಿ ನೀಡಬಹುದು.

ಹೋಗುವುದು ಹೇಗೆ: ನಗರದಿಂದ ಕೇವಲ 13 ಕಿಮೀ ದೂರದಲ್ಲಿದೆ.

ಚಿತ್ತರಂಜನ್ ಅರಮನೆ

ಚಿತ್ತ ರಂಜನ್ ಅರಮನೆಯನ್ನು ಮೂಲತಃ ಮೈಸೂರು ಮಹಾರಾಜರು ಒಡೆಯರ್ ರಾಜವಂಶದ ರಾಜಕುಮಾರಿಯರಿಗಾಗಿ ನಿರ್ಮಿಸಿದರು. ಇದನ್ನು 1916 ರಲ್ಲಿ ನಿರ್ಮಿಸಲಾಯಿತು. ಜನಪ್ರಿಯ ಟಿವಿ ಧಾರಾವಾಹಿ 'ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್' ಸೇರಿದಂತೆ ಹಲವಾರು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಆದರೆ, ಬೆಂಕಿ ಕಾಣಿಸಿಕೊಂಡ ನಂತರ ಸ್ಟುಡಿಯೋವನ್ನು ಮುಚ್ಚಲಾಯಿತು. ಈಗ ಅರಮನೆಯನ್ನು ಪರಿಸರ ಸ್ನೇಹಿ ಹೆರಿಟೇಜ್ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

ಇದನ್ನೂ ಓದಿ: ಮದುವೆ ಡೇಟ್​ ಹತ್ತಿರ ಇದ್ರೆ ತ್ವಚೆಯ ಆರೈಕೆಯನ್ನು ಹೀಗೆ ಮಾಡಿ

ಭೇಟಿ ನೀಡಲು ಸರಿಯಾದ ಸಮಯ: ಅರಮನೆಗೆ ವರ್ಷಪೂರ್ತಿ ಭೇಟಿ ನೀಡಬಹುದು.

ಹೋಗುವುದು ಹೇಗೆ: ವಿನೋಬ ರೋಡ್​, ಜಯಲಕ್ಷ್ಮೀಪುರಂ, ಮೈಸೂರು
Published by:Sandhya M
First published: