North Indian Restaurants: ಕೋರಮಂಗಲ ಕಡೆ ಹೋದ್ರೆ ಈ ಉತ್ತರ ಭಾರತೀಯ ರೆಸ್ಟೋರೆಂಟ್​ಗಳಿಗೆ ವಿಸಿಟ್​ ಮಾಡಿ

Near Me: ನೀವು ಕೋರಮಂಗಲ ಕಡೆ ಹೋದಾಗ ಅಲ್ಲಿಅತ್ಯುತ್ತಮ ಉತ್ತರ ಭಾರತೀಯ ರೆಸ್ಟೋರೆಂಟ್‌ಗಳನ್ನು ಹುಡುಕುವುದಕ್ಕೆ ಪರದಾಡುತ್ತಿದ್ರೆ ನಾವು ಸಹಾಯ ಮಾಡ್ತೀವಿ. ಇಲ್ಲಿನ ಬೆಸ್ಟ್​ ರೆಸ್ಟೋರೆಂಟ್​ಗಳ ಲಿಸ್ಟ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋರಮಂಗಲ (Koramangala) ಎಂದರೆ ಆಹಾರಗಳಿಗೆ (Food) ಹೆಚ್ಚು ಫೇಮಸ್​ ಎನ್ನಬಹುದು. ಈ ಏರಿಯಾಗೆ ಹೋದರೆ ಅಲ್ಲಿ ವಿಸಿಟ್​ ಮಾಡಲು ಬಹಳಷ್ಟು ಕೆಫೆ, ರೆಸ್ಟೋರೆಂಟ್ (restaurants) ​, ಚಾಟ್​ ಶಾಪ್​ಗಳಿವೆ. ಇಲ್ಲಿ ಸಿಗುವ ಆಹಾರದ ವಿಧಗಳು ಹಲವಾರು. ಇನ್ನು ಸಾಮಾನ್ಯವಾಗಿ ಉತ್ತರ ಭಾರತೀಯ ಆಹಾರಗಳು ಎಂದರೆ ಹಲವಾರಿಗೆ ಇಷ್ಟ. ನೀವು ಕೋರಮಂಗಲ ಕಡೆ ಹೋದಾಗ ಅಲ್ಲಿಅತ್ಯುತ್ತಮ ಉತ್ತರ ಭಾರತೀಯ (North Indian)  ರೆಸ್ಟೋರೆಂಟ್‌ಗಳನ್ನು ಹುಡುಕುವುದಕ್ಕೆ ಪರದಾಡುತ್ತಿದ್ರೆ ನಾವು ಸಹಾಯ ಮಾಡ್ತೀವಿ. ಇಲ್ಲಿನ ಬೆಸ್ಟ್​ ರೆಸ್ಟೋರೆಂಟ್​ಗಳ ಲಿಸ್ಟ್ ಇಲ್ಲಿದೆ.

ಗ್ರಾಮೀಣ(Gramin)

ರಹೇಜಾ ಆರ್ಕೇಡ್‌ನಲ್ಲಿರುವ ಒಂದು ಹಳ್ಳಿಯ ಅನುಭವ ನೀಡುವ ಸಸ್ಯಾಹಾರಿ ರೆಸ್ಟೋರೆಂಟ್​ ಇದಾಗಿದ್ದು, ಇದು ಪಾಕೆಟ್​ ಸ್ನೇಹಿ ಕೂಡ. ನೀವು ಊಟದ ಸಮಯಕ್ಕೆ ಹೋದರೆ ಥಾಲಿ ಮಿಸ್​ ಮಾಡಬಾರದು.  ರೊಟ್ಟಿ, ಸಬ್ಜಿ, ದಾಲ್ ಮತ್ತು ರಾಯತ, ಪಾಪಡ್‌ನಂತಹ ಅದ್ಭುತ ಆಹಾರಗಳನ್ನು ಈ ಥಾಲಿ ಹೊಂದಿದ್ದು, ಅವರ ಮಸಾಲೆ ತಂದೂರಿ ಚಾಟ್, ಕ್ರೀಮ್​ ಮುಘಲೈ ಪಾಲಕ್ ಕೋಫ್ತಾ ಮತ್ತು ಅವರ ಬೆಣ್ಣೆ-ಸ್ಮಿಯರ್ಡ್ ಆಲೂ ಪರಾಠಗಳನ್ನು ಪ್ರಯತ್ನಿಸಲೇಬೇಕು.

ವಿಳಾಸ: ರಹೇಜಾ ಆರ್ಕೇಡ್, ನೆಲ ಮಹಡಿ, 20, 20 ನೇ ಮುಖ್ಯ ರಸ್ತೆ, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +918041104104

ಸುಲ್ತಾನ್​ ಆಫ್​ ಸ್ಪೈಸಿಸ್​ (Sultans Of Spice)

ಬೆಸ್ಟ್​ ಉತ್ತರ ಭಾರತದ ಆಹಾರ ಸವಿಯಬೇಕು ಎಂದರೆ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಟೇಬಲ್ ಅನ್ನು ಬುಕ್ ಮಾಡಿ. ಅವರ ಬಫೆಟ್‌ಗಳಲ್ಲಿ ಉತ್ತರ ಭಾರತೀಯ ಅತ್ಯುತ್ತಮವಾದ ಆಹಾರಗಳನ್ನು ಒಳಗೊಂಡಿರುತ್ತವೆ.  ಬಫೆ ಮೆನು ಪ್ರತಿದಿನ ಬದಲಾಗುತ್ತಿರುತ್ತದೆ.  ಕಬಾಬ್‌ಗಳು ಮತ್ತು ಫ್ರೈಡ್​ ಪನೀರ್‌ಗಳನ್ನು ನಿಜಕ್ಕೂ ಮಿಸ್​ ಮಾಡ್ಬಾರ್ದು. ಅಫೀಮ್ ಕಾ ಗುಲ್ಲಾ {ತರಕಾರಿ ಪ್ಯಾಟೀಸ್}, ತಂದೂರಿ ಚಿಕನ್ ಮತ್ತು ಮಟನ್ ಕೀಮಾ ಬಿರಿಯಾನಿಗಳು ಸಹ ರುಚಿಕರವಾಗಿರುತ್ತದೆ.

ವಿಳಾಸ: ಬಲುಪಟಾಲ್ ಹೋಟೆಲ್, 60 ಜನಕ್ ರಸ್ತೆ, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್​ ನಂಬರ್: +919742431818

ಇದನ್ನೂ ಓದಿ: ಟ್ರಿಪ್​ ಹೋದಾಗ ಈ ಮಾರ್ಕೆಟ್​ಗಳಿಗೆ ವಿಸಿಟ್​ ಮಾಡೋದು ಮಿಸ್​ ಮಾಡ್ಬೇಡಿ

ಪಂಜಾಬ್ ಗ್ರಿಲ್ (Punjab Grill)

ಪಂಜಾಬ್​ ಗ್ರಿಲ್​ ಇದು ನಿಜಕ್ಕೂ ವಿಭಿನ್ನವಾದ ರೆಸ್ಟೋರೆಂಟ್​ ಆಗಿದ್ದು, ವಾರದ ದಿನಗಳಲ್ಲಿ ಮಧ್ಯಾಹ್ನ ಕಾರ್ಪೊರೇಟ್‌ ಜನರನ್ನು ಗುರಿಯಾಗಿಟ್ಟುಕೊಂಡು ಬಫೆಟ್‌ ವ್ಯವಸ್ಥೆ ಮಾಡುತ್ತಾರೆ.  ಅವರ ಮೆನು ಬಹಳ ದೊಡ್ಡದಿದ್ದು, ಇದು ನಿಜಕ್ಕೂ ಉತ್ತಮ ಸ್ಥಳವಾಗಿದೆ. ಇಲ್ಲಿನ ಮುರ್ಗ್ ಮಲೈ ಟಿಕ್ಕಾ, ಮಸಾಲೆಗಳ ಗೋಷ್ಟ್ ಮತ್ತು ಅವರ ಅದ್ಭುತವಾದ ದಮ್ ಕಿ ಬಿರಿಯಾನಿ ಕೂಡ ನಿಮಗೆ ಇಷ್ಟವಾಗದೇ ಇರದು.

ಆರ್ಡರ್ ಮಾಡಿ: ಇಲ್ಲಿ ಕ್ಲಿಕ್ ಮಾಡಿ 

ಓಂ ಪ್ಯೂರ್ ವೆಜ್ (Om Pure veg)

ರಹೇಜಾ ಆರ್ಕೇಡ್‌ನಲ್ಲಿರುವ ಈ ಚಿಕ್ಕ ರೆಸ್ಟೋರೆಂಟ್‌ನಲ್ಲಿ ಸರಳವಾದ ಹಾಗೂ ರುಚಿಕರವಾದ ಆಹಾರಗಳು ಲಭ್ಯವಿದ್ದು, ಅವರ ಥಾಲಿಯನ್ನು ಒಮ್ಮೆ ಟ್ರೈ ಮಾಡಲೇಬೇಕು. , ಒಮ್ಮೆ ಬಂದ ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ. ರೂ 200 ಕ್ಕಿಂತ ಕಡಿಮೆ ದರದಲ್ಲಿ, ನೀವು ಮೂರು ರೀತಿಯ ಪಲ್ಯ ಅಥವಾ ಕರಿ, ದಾಲ್, ಅನ್ನ, ರೊಟ್ಟಿಗಳು ಮತ್ತು ಇತರ ಅದ್ಭುತ ಆಹಾರಗಳನ್ನು ಸವಿಯಬಹುದು. ಈ ರೆಸ್ಟೋರೆಂಟ್ ಸಬುದಾನ ವಡಾ, ಪಕೋಡಗಳು ಮತ್ತು ಖಿಚಡಿಯಂತಹ ತಿಂಡಿಗಳನ್ನು ಸಹ ಹೊಂದಿದ್ದು, ಒಮ್ಮೆ ವಿಸಿಟ್​ ಮಾಡಿ.

ವಿಳಾಸ: ರಹೇಜಾ ಆರ್ಕೇಡ್, 18, ನೆಲ ಮಹಡಿ, 7ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +918040989595

ಕೊಪ್ಪರ್ ಕಡಾಯಿ (Kopper Kadai)

ನಿಮ್ಮ ಹಳೆಯ ಉತ್ತರ ಭಾರತೀಯ ಆಹಾರಗಳು ಆಧುನಿಕ ಶೈಲಿಯಲ್ಲಿ ಬೇಕು ಎಂದಾಗ ಈ ರೆಸ್ಟೋರೆಂಟ್ ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೇ ಹೊಸ ಹೊಸ ಪ್ರಯೋಗ ಮಾಡಲು ಇಷ್ಟಪಡುವವರಿಗೆ, ಇಲ್ಲಿನ ಮೆನು ನಿರಾಶೆಗೊಳಿಸುವುದಿಲ್ಲ. ನೀವು ಗನ್ನಾ ಚಿಕನ್ ಟ್ರೈ ಮಾಡಲೇಬೇಕು. ಮತ್ತೊಂದು ರುಚಿಕರ ಆಹಾರ ಎಂದರೆ ಕೋಲ್ಮಿ ಕಬಾಬ್ಸ್, ಇದನ್ನು ಕಾರ್ನ್ ಮತ್ತು ಆಲೂಗಡ್ಡೆಗಳಿಂದ ತಯಾರಿಸಲಾಗುತ್ತದೆ. ಕೋರಮಂಗಲ ಕಡೆ ಹೊದರೆ ಒಮ್ಮೆ ವಿಸಿಟ್​ ಮಾಡಿ.

ಇದನ್ನೂ ಓದಿ: ಮಲೆನಾಡಿನ ಹಸಿರ ಸಿರಿಯಲ್ಲಿ ಮೈಮರೆಯಿರಿ! ಶಿವಮೊಗ್ಗ ಪ್ರವಾಸಕ್ಕೆ ಹೋಗೋಣ ಬನ್ನಿರಿ...

ವಿಳಾಸ: ಸಿಗ್ನಸ್ ಚೇಂಬರ್ಸ್, ನೆಲ ಮಹಡಿ, ಜ್ಯೋತಿ ನಿವಾಸ್ ಕಾಲೇಜು ರಸ್ತೆ, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +919035057515
Published by:Sandhya M
First published: