ಬೆಂಗಳೂರು (Bengaluru) ನಗರ ವಿವಿಧತೆಯಲ್ಲಿ ಏಕತೆಯ ಬೀಡು. ಇದು ದೇಶದ ಹೈಟೆಕ್ ಉದ್ಯಮದ ಕೇಂದ್ರ. ಇದು ರಾತ್ರಿಜೀವನ ಮತ್ತು ಉದ್ಯಾನವನಗಳಿಗೆ ಹೆಚ್ಚು ಹೆಸರುವಾಸಿ ಎನ್ನಬಹುದು. ಈ ಆಧುನಿಕ ನಗರದೊಳಗೆ ಜಯನಗರ (Jayanagar) ಎಂದರೆ ಸ್ವಲ್ಪ ಹೆಚ್ಚು ಪ್ರಸಿದ್ಧ. ಹಾಗೆಯೇ ಈ ನಗರ ನಾನ್ವೆಜ್ ರೆಸ್ಟೋರೆಂಟ್ಗಳಿಗೆ (Non Veg) ಹೆಚ್ಚು ಫೇಮಸ್. ನೀವು ನಾನ್ ವೆಜ್ ಪ್ರಿಯರಾಗಿದ್ದು, ಜಯನಗರದಲ್ಲಿದ್ದರೆ, ಅಲ್ಲಿನ ಬೆಸ್ಟ್ ನಾನ್ವೆಜ್ ರೆಸ್ಟೊರೆಂಟ್ಗಳ ಲಿಸ್ಟ್ ಇಲ್ಲಿದೆ.
ಎಂಪೈರ್ ರೆಸ್ಟೋರೆಂಟ್ ಜಯನಗರ
ಎಂಪೈರ್ ರೆಸ್ಟೋರೆಂಟ್ ಸಣ್ಣದಾಗಿ ಪ್ರಾರಂಭವಾಗಿ, ಇದೀಗ ಭಾರತದಾದ್ಯಂತ ರೆಸ್ಟೋರೆಂಟ್ಗಳ ಸರಪಳಿಯಾಗಿ ಬೆಳೆದಿದೆ. ಅವರು ಮಸಾಲೆಯುಕ್ತ ಚಿಲ್ಲಿ ಸಾಸ್ನಲ್ಲಿ ಬೇಯಿಸಿದ ಸಮುದ್ರಾಹಾರಗಳಲ್ಲಿ ಪರಿಣತಿ ಹೊಂದಿದ್ದಾರೆ ಎಂದರೆ ನಿಜಕ್ಕೂ ತಪ್ಪಾಗಲಾರದು. ಅವರ ಕೆಲವು ಜನಪ್ರಿಯ ಭಕ್ಷ್ಯಗಳೆಂದರೆ ಅವರ ಫಿಯರಿ ಬಾಸಾ ಫಿಶ್ ಫಿಲೆಟ್ ಮತ್ತು ಅವರ ಹಾಟ್ ಚಿಲ್ಲಿ ಟೈಗರ್ ಪ್ರಾನ್ಸ್. ನಿಮಗೆ ಮಸಾಲೆಯುಕ್ತ ಆಹಾರ ಇಷ್ಟವಿಲ್ಲದಿದ್ದರೆ ಅವರು ರುಚಿಕರವಾದ ಚಿಕನ್ ಬಿರಿಯಾನಿಯನ್ನೂ ಸಹ ನೀವಿಲ್ಲಿ ಟ್ರೈ ಮಾಡಬಹುದು.
ವಿಳಾಸ: ಸಂ. 4, ಓಲ್ಡ್ ನಂಬರ್. 464, 21ನೇ C ಕ್ರಾಸ್ ರೋಡ್, 3ನೇ ಬ್ಲಾಕ್, NMKRV ಕಾಲೇಜ್ ಎದುರು, ಜಯನಗರ, ಬೆಂಗಳೂರು, ಕರ್ನಾಟಕ 560011,
ಸಮಯ: ಶನಿ-ಭಾನು: 12:30pm - 3am; ಸೋಮ-ಶುಕ್ರ: 12:30pm - 1am
ರಂಗಣ್ಣ ಮಿಲಿಟರಿ ಹೋಟೆಲ್
ನೀವು ಜಯನಗರಕ್ಕೆ ಹೋಗಿದ್ದರೆ ರಂಗಣ್ಣ ಮಿಲಿಟರಿ ಹೋಟೆಲ್ನಲ್ಲಿನಾನ್ವೆಜ್ ತಿನ್ನಲು ಮರೆಯದಿರಿ. ಅವರು ನೇರವಾದ ಮಾಂಸಾಹಾರಿ ಮೆನುವನ್ನು ನೀಡುತ್ತಾರೆ. ಅವರು ನೀಡುವ ವಸ್ತುಗಳ ಸಂಖ್ಯೆ ಜಾಸ್ತಿ ಇಲ್ಲ. ಆದರೆ ಅವೆಲ್ಲವೂ ಸಾಕಷ್ಟು ರುಚಿಕರವಾಗಿರುತ್ತವೆ. ಅವರ ನಾಟಿ ಶೈಲಿಯ ಚಿಕನ್ ಸ್ಥಳೀಯರ ಫೇವರೇಟ್.
ವಿಳಾಸ: 61 ಕೆಆರ್ ರೋಡ್, ಜಿಆರ್ ರೋಡ್, 5ನೇ ಬ್ಲಾಕ್ ಜಯನಗರ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಎದುರು, ಬೆಂಗಳೂರು, ಕರ್ನಾಟಕ,
ಸಮಯ: ಮಂಗಳವಾರ - ಭಾನುವಾರ: 7:30am - 4pm, 7pm - 10pm (ಸೋಮವಾರ ಕ್ಲೋಸ್)
ಕಬಾಬ್ ಮ್ಯಾಜಿಕ್
ಕಬಾಬ್ ಮ್ಯಾಜಿಕ್ ಒಂದು ಫಾಸ್ಟ್ ಫುಡ್ ರೆಸ್ಟೊರೆಂಟ್ ಆಗಿದ್ದು, ಇದು ಗ್ರಿಲ್ ಚಿಕನ್ಗೆ ಹೆಚ್ಚು ಫೇಮಸ್. ಅಲ್ಲದೇ ಗ್ರಿಲ್ ಆಹಾರಗಳ ಪಾಕವಿಧಾನಗಳಲ್ಲಿ ಪರಿಣತಿ ಹೊಂದಿದೆ.ಇಲ್ಲಿನ ಮೆನುವು ಭಾರತೀಯ ಮತ್ತು ಚೈನೀಸ್ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ, ಅದು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಗ್ರಿಲ್ ಚಿಕನ್ ಅನ್ನು ಒಂದೆರಡು ಬೇರೆ ಆಹಾರಗಳ ಜೊತೆ ಆರ್ಡರ್ ಮಾಡಬಹುದು. ಅವರ ಹಾಟ್ 'ಎನ್ ಸ್ಪೈಸಿ ಗ್ರಿಲ್ಡ್ ಚಿಕನ್ ಅನ್ನು ಪ್ರಯತ್ನಿಸಲು ಮರೆಯದಿರಿ.
ಇದನ್ನೂ ಓದಿ: Tonsillitis ನೋವಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದಿನಿಂದ ಹೋಗಲಾಡಿಸಬಹುದು ನೋಡಿ
ವಿಳಾಸ: ನಂ.69, ಕನಕಪುರ ರೋಡ್, 7ನೇ ಬ್ಲಾಕ್ ಯಡಿಯೂರ್ ಬಸ್ ಸ್ಟಾಪ್, ಜಯನಗರ, ಬೆಂಗಳೂರು, ಕರ್ನಾಟಕ 560085
ಸಮಯ: ಬೆಳಗ್ಗೆ 11 ರಿಂದ ರಾತ್ರಿ 12 ಗಂಟೆ
ಬಿರಿಯಾನಿ ಮನೆ
ಬಿರಿಯಾನಿ ಮನೆ ಮಾಂಸ ಪ್ರಿಯರನ್ನು ಸಂತುಷ್ಠಗೊಳಿಸುವ ಉಪಾಹಾರ ಗೃಹವಾಗಿದೆ. ಭಾರತದಲ್ಲಿನ ಹೆಚ್ಚಿನ ಮಾಂಸಾಹಾರಿ ರೆಸ್ಟೋರೆಂಟ್ಗಳಂತೆ, ಇಲ್ಲಿನ ಮುಖ್ಯ ಮಾಂಸದ ಆಯ್ಕೆಗಳು ಕೋಳಿ ಮತ್ತು ಮೀನುಗಳಾಗಿವೆ. ಬಿರಿಯಾನಿ ಮಾನೆ ರುಚಿಕರವಾದ ಮಸಾಲಾ ಫಿಶ್ ಫ್ರೈ ಅನ್ನು ನೀಡುತ್ತದೆ. ನೀವು ಅವರ ತಂದೂರಿ ಚಿಕನ್ ಲೆಗ್ಗಳನ್ನು ಪ್ರಯತ್ನಿಸಲು ಮರೆಯಬೇಡಿ. ಅವರು ಪ್ರತಿದಿನವೂ ವಿಭಿನ್ನ ವಿಶೇಷತೆಯೊಂದಿಗೆ ನಿಮಗೆ ಆಹಾರವನ್ನು ನೀಡುತ್ತಾರೆ.
ವಿಳಾಸ: #266/B, ಕನಕಪುರ ಮುಖ್ಯ ರಸ್ತೆ, ಜಯನಗರ 7ನೇ ಬ್ಲಾಕ್, ಬೆಂಗಳೂರು
ಸಮಯ: 11:30am - 3:30pm, 6:30pm - 10:30pm (ಪ್ರತಿದಿನ)
ಮೇಘನಾ ಫುಡ್ಸ್
ಮೇಘನಾ ಫುಡ್ಸ್ ಕೇವಲ ಒಂದು ಸಣ್ಣ ಸ್ಥಳದಲ್ಲಿ ಪ್ರಾರಂಭವಾಗಿ ಈಗ ಅವರು ನಗರದ ಸುತ್ತಲೂ ಐದು ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಆಂಧ್ರ ಶೈಲಿಯ ಆಹಾರವನ್ನು ನೀಡುವುದರಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಅವರ ಮಟನ್ ಪೆಪ್ಪರ್ ಫ್ರೈ, ಚಿಕನ್ ಮಹಾರಾಜ ಮತ್ತು ಅವರ ಸಿಗ್ನೇಚರ್ ಚಿಕನ್ ಮೇಘನಾ ಟ್ರೈ ಮಾಡಲೇಬೇಕು.
ಇದನ್ನೂ ಓದಿ: ಪದೇ ಪದೇ IVF ಫೇಲ್ ಆಗೋಕೆ ಇದೇ ಕಾರಣವಂತೆ? ಮುಂದೇನು? ಈ ಸ್ಟೋರಿ ಓದಿ
ವಿಳಾಸ: 52, 1ನೇ ಮಹಡಿ, 33ನೇ ಕ್ರಾಸ್, ಕೆಫೆ ಕಾಫಿ ಡೇ ಹತ್ತಿರ, 4ನೇ ಬ್ಲಾಕ್, ಜಯನಗರ 080-22448080, ಬೆಂಗಳೂರು
ಸಮಯ: 12pm - 3:30pm, 7pm - 10:30pm
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ