Health Tips: ಕೆಮ್ಮಿಗೆ ಪರಿಹಾರ ನೀಡುವ ಮನೆಮದ್ದುಗಳು..!

ಜೇನುತುಪ್ಪವು ಕೆಮ್ಮಿನ ತೀವ್ರತೆಯನ್ನು ಕೆಮ್ಮಿನ ಸಿರಪ್​ಗಿಂತಲೂ ಬಹುಬೇಗನೆ ಕಡಿಮೆ ಮಾಡುತ್ತದೆಯಂತೆ. ಜೇನುತಪ್ಪದಂತೆಯೇ ಮನೆಯಲ್ಲೇ ಸಿಗುವ ಸಾಕಷ್ಟು ಪದಾರ್ಥಗಳು ಕೆಮ್ಮಿನ ನಿವಾರಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ನೀವು ಕೆಮ್ಮಿನಿಂದ ಬಳಲುತ್ತಿದ್ದರೆ, ಅದರಿಂದ ಬಹುಬೇಗನೆ ಮುಕ್ತಿ ಪಡೆಯಲು ಈ ಕೆಳಗೆ ನೀಡಿದಂತಹ ನೈಸರ್ಗಿಕವಾದ ಪರಿಹಾರಗಳನ್ನು ಬಳಸಿ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾದಿಂದಾಗಿ ಈಗಂತೂ ಒಬ್ಬ ವ್ಯಕ್ತಿ ಸುಮ್ಮನೆ ಕೆಮ್ಮಿದರೆ ಸಾಕು ಪ್ರತಿಯೊಬ್ಬರೂ ಅವರತ್ತ ಅನುಮಾನದಿಂದಲೇ ನೋಡುವಂತಹ ಪರಿಸ್ಥಿತಿ ಬಂದೊದಗಿದೆ ಎಂದರೆ ತಪ್ಪಾಗಲಾರದು. ನೀವು ಸಾಮಾನ್ಯವಾಗಿ ಕೆಮ್ಮಿನಿಂದ ಬಳಲುತ್ತಿದ್ದರೆ, ನಿಮಗೆ ಸರಿಯಾಗಿ ಉಸಿರಾಡಲು ಮತ್ತು ನಿದ್ರೆ ಮಾಡಲು ಆಗುವುದಿಲ್ಲ. ನೀವು ಕೆಮ್ಮಿನಿಂದ ಮುಕ್ತಿ ಪಡೆಯಲು ಅನೇಕ ಮಾತ್ರೆಗಳನ್ನು ತೆಗೆದುಕೊಂಡಿದ್ದರೂ ಏನು ಪ್ರಯೋಜನ ಆಗುವುದಿಲ್ಲ. ಕೆಲವೊಮ್ಮೆ ಈ ಔಷಧಿಗಳಿಗಿಂತಲೂ ಹೆಚ್ಚಾಗಿ ಈ ನೈಸರ್ಗಿಕ ಪರಿಹಾರಗಳು ಉತ್ತಮವಾಗಿ ಮತ್ತು ತ್ವರಿತವಾಗಿ ಪರಿಹಾರ ನೀಡುತ್ತವೆ.

ಮುಂದಿನ ಬಾರಿ ನೀವು ಕೆಮ್ಮಿನಿಂದ ಬಳಲುತ್ತಿದ್ದರೆ, ಅದರಿಂದ ಬಹುಬೇಗನೆ ಮುಕ್ತಿ ಪಡೆಯಲು ಈ ಕೆಳಗೆ ನೀಡಿದಂತಹ ನೈಸರ್ಗಿಕವಾದ ಪರಿಹಾರಗಳನ್ನು ಬಳಸಿ ನೋಡಿ.

Cold, Child, germs, ಶೀತ, ಮಗು, ಸೂಕ್ಷ್ಮಜೀವಿಗಳು, Here is a few prevention strategies to keep your child from catching a cold ae
ಸಾಂದರ್ಭಿಕ ಚಿತ್ರ


ಜೇನುತುಪ್ಪ: ಬ್ರಿಟಿಷ್ ಮೆಡಿಕಲ್ ಜರ್ನಲ್​ನಲ್ಲಿರುವ ಏಪ್ರಿಲ್ 2021 ರ ವಿಮರ್ಶೆಯ ಪ್ರಕಾರ, ಜೇನುತುಪ್ಪವು ಕೆಮ್ಮಿನ ತೀವ್ರತೆಯನ್ನು ಕೆಮ್ಮಿನ ಸಿರಪ್​ಗಿಂತಲೂ ಬಹುಬೇಗನೆ ಕಡಿಮೆ ಮಾಡುತ್ತದೆಯಂತೆ. ಆಗಸ್ಟ್ 2012 ರಲ್ಲಿ ಪೀಡಿಯಾಟ್ರಿಕ್ಸ್​ನಲ್ಲಿ ನಡೆದ ಅಧ್ಯಯನವು ಮಲಗುವ ಸಮಯದಲ್ಲಿ ಜೇನುತುಪ್ಪವು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: Happy Birthday Anant Nag: ಅನಂತ್​ ನಾಗ್​ ಬಗ್ಗೆ ತಿಳಿಯಲೇಬೇಕಾದ ಆಸಕ್ತಿಕರ ವಿಷಯಗಳಿವು..!

ಜೇನುತುಪ್ಪವು ಕೆಮ್ಮು ನಿಗ್ರಹಕವಾಗಿ ಕಾರ್ಯನಿರ್ವಹಿಸುತ್ತದೆ. ಕೆಮ್ಮಿನ ಸಿರಪ್​ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿದೆ ಎಂದು ಮಿನ್ಸೋಟಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಲಿನ್ ಗೆರ್ಶಾನ್ ಹೇಳುತ್ತಾರೆ.

ಇದಲ್ಲದೆ, ಜೇನುತುಪ್ಪವು ಗಂಟಲಿನ ಉರಿಯೂತವನ್ನು ಶಾಂತಗೊಳಿಸುತ್ತದೆ. ಕೇವಲ ಒಂದು ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ಅದು ನಿಮ್ಮ ಕೆಮ್ಮನ್ನು ನಿವಾರಿಸಬಹುದು. ಇದು ವೈರಸ್ ವಿರೋಧಿ ಗುಣವನ್ನು ಹೊಂದಿದೆ ಎಂದು ಡಾ. ಗೆರ್ಶಾನ್ ಹೇಳುತ್ತಾರೆ.

ಶುಂಠಿ:  ಶುಂಠಿಯು ಸಹ ನಿಮ್ಮ ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. 2013ರಲ್ಲಿ ನಡೆದಂತಹ ಒಂದು ಅಧ್ಯಯನದ ಪ್ರಕಾರ ಬಿಸಿ ನೀರಿನಲ್ಲಿ ಮುಳುಗಿಸಿಟ್ಟ ಶುಂಠಿ ಸಾಮಾನ್ಯ ಶೀತವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಮೇಘನಾ ರಾಜ್​ ಮಗ Raayan Raj Sarja ನಾಮಕರಣದಲ್ಲಿ ಚಿರು ಸ್ನೇಹಿತರ ಸಮಾಗಮ..!

ಶುಂಠಿಯು ಪ್ರೋಕೈನೆಟಿಕ್ ಪರಿಣಾಮವನ್ನು ಹೊಂದಿದ್ದು, ಇದು ನೀವು ತಿಂದಂತಹ ಆಹಾರವನ್ನು ನಿಮ್ಮ ಹೊಟ್ಟೆ ಮತ್ತು ಸಣ್ಣ ಕರುಳಿನ ಮೂಲಕ ಆಹಾರವನ್ನು ಬೇಗನೆ ಸಾಗಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸಹ ವೇಗಗೊಳಿಸುತ್ತದೆ ಮತ್ತು ಇದರಿಂದ ನಿಮ್ಮ ಶೀತವನ್ನು ಸಹ ನಿವಾರಿಸುತ್ತದೆ ಎಂದು ಡಾ. ಗೆರ್ಶಾನ್ ಹೇಳುತ್ತಾರೆ.

ಒಂದು ಕಪ್ ಶುಂಠಿ ಚಹಾವನ್ನು ತಯಾರಿಸಿಕೊಂಡು ಕುಡಿಯಿರಿ. ಒಂದು ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಒಂದು ಕಪ್ ನೀರಿನಲ್ಲಿ ಹಲವಾರು ನಿಮಿಷಗಳ ಕಾಲದವರೆಗೆ ನೆನೆಸಿಡಿ ಮತ್ತು ನಂತರ ಅದನ್ನು ಬಳಸಿ.

ಹ್ಯೂಮಿಡಿಫೈಯರ್ ಬಳಸಿ

ವಿಶೇಷವಾಗಿ ರಾತ್ರಿಯಲ್ಲಿ ಒಣ ಕೆಮ್ಮಿಗೆ ಮನೆ ಪರಿಹಾರಗಳ ವಿಷಯಕ್ಕೆ ಬಂದಾಗ ಇದು ತುಂಬಾ ಹಳೆಯ ಉಪಾಯವಾಗಿದೆ. "ಶುಷ್ಕ ಗಾಳಿಯು ಕಿರಿಕಿರಿ ಉಂಟುಮಾಡುತ್ತದೆ. ಆದ್ದರಿಂದ ಈ ಹ್ಯೂಮಿಡಿಫೈಯರ್ ಕೆಮ್ಮಿಗೆ ಸಹಾಯ ಮಾಡುತ್ತದೆ" ಎಂದು ಡಾ. ಗೆರ್ಶಾನ್ ಹೇಳುತ್ತಾರೆ. ತೇವಾಂಶ ಭರಿತ ಗಾಳಿಯು ಗಂಟಲಿನ ಕಿರಿಕಿರಿಯನ್ನು ಹೋಗಲಾಡಿಸಿ ಉಸಿರಾಡಲು ಸುಲಭವಾಗಿಸುತ್ತದೆ.

ವೈದ್ಯರ ಬಳಿ ಯಾವಾಗ ಹೋಗಬೇಕು

ಹೆಚ್ಚಿನ ಕೆಮ್ಮುಗಳು ಆತಂಕ ಕಾರಿಯಲ್ಲ ಮತ್ತು ಸ್ವತಃ ಕಡಿಮೆ ಆಗುತ್ತದೆ. ನಿಮ್ಮ ಕೆಮ್ಮು ಎಂಟು ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ಜ್ವರ, ತಲೆನೋವು, ಆಯಾಸ ಅಥವಾ ಉಸಿರಾಟದ ತೊಂದರೆ ಸೇರಿದಂತೆ ಇತರ ರೋಗಲಕ್ಷಣಗಳನ್ನು ನೀವು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಬಹುದು.
Published by:Anitha E
First published: