• Home
  • »
  • News
  • »
  • lifestyle
  • »
  • Nachos Near Me: ಚೀಸ್​ ಡಿಪ್ ನ್ಯಾಚೋಸ್​ ಮಸ್ತ್ ಆಗಿ ಸಿಗುವ ಬೆಂಗಳೂರಿನ ಸ್ಥಳಗಳಿವು, ಒಮ್ಮೆ ವಿಸಿಟ್​ ಮಾಡಿ

Nachos Near Me: ಚೀಸ್​ ಡಿಪ್ ನ್ಯಾಚೋಸ್​ ಮಸ್ತ್ ಆಗಿ ಸಿಗುವ ಬೆಂಗಳೂರಿನ ಸ್ಥಳಗಳಿವು, ಒಮ್ಮೆ ವಿಸಿಟ್​ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Best Nachos Near Me: ನೀವು ಬೆಂಗಳೂರಿನಲ್ಲಿ (Bengaluru)  ನ್ಯಾಚೋಸ್​ ಹುಡುಕುತ್ತಿದ್ದರೆ, ಬೆಸ್ಟ್​ ನ್ಯಾಚೋಸ್​ ಸಿಗುವ ಸ್ಥಳಗಳ ಲಿಸ್ಟ್ ನಾವು ನೀಡಲಿದ್ದು, ಒಮ್ಮೆ ವಿಸಿಟ್​ ಮಾಡಿ ಟ್ರೈ ಮಾಡಿ.

  • Share this:

ಹುರಿದ ಕಡಲೆಕಾಯಿ ಮತ್ತು ಚಿಪ್ಸ್ (Chips), ಸ್ಯಾಂಡ್ವಿಚ್​ (Sandwich) ಹೀಗೆ ನಮಗೆ ಇಷ್ಟವಾಗುವ ಆಹಾರಗಳ ಪಟ್ಟಿಯಲ್ಲಿ (Food List) ಹಲವಾರಿದೆ. ಹಾಗೆಯೇ, ಈ ಲಿಸ್ಟ್​ನಲ್ಲಿ ನ್ಯಾಚೋಸ್ (Nachos) ಕೂಡ ಒಂದು. ಇದನ್ನು ಸ್ಟಾರ್ಟರ್​ ಆಗಿ ಸಹ ಹೋಟೆಲ್​ಗಳಲ್ಲಿ ಸಹ ನೀಡುತ್ತಾರೆ. ಜನರಿಗೆ ಸಿನಿಮಾ ನೋಡುವಾಗ ಸಹ ಈ ನ್ಯಾಚೋಸ್​ ಇಷ್ಟಪಡುತ್ತಾರೆ. ಗ್ವಾಕ್ ಅಥವಾ ಚೀಸ್‌ನಲ್ಲಿ (Cheese) ಡಿಪ್ ಮಾಡಿ ಇದನ್ನು ಸವಿಯುವುದು ಏನೋ ಆನಂದ ನೀಡುತ್ತದೆ. ನೀವು ಬೆಂಗಳೂರಿನಲ್ಲಿ (Bengaluru)  ನ್ಯಾಚೋಸ್​ ಹುಡುಕುತ್ತಿದ್ದರೆ, ಬೆಸ್ಟ್​ ನ್ಯಾಚೋಸ್​ ಸಿಗುವ ಸ್ಥಳಗಳ ಲಿಸ್ಟ್ ನಾವು ನೀಡಲಿದ್ದು, ಒಮ್ಮೆ ವಿಸಿಟ್​ ಮಾಡಿ ಟ್ರೈ ಮಾಡಿ.


 ಸ್ಯಾಂಚೆಜ್, ಅಶೋಕ್ ನಗರ, ಬೆಂಗಳೂರು


ಅವರು ಇತ್ತೀಚೆಗೆ Sanchos ನಿಂದ Sanchez  ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಆದರೆ ಮೆಕ್ಸಿಕನ್ ಮೆನು ಸವಿಯಲು ಇಲ್ಲಿಗೆ ವಿಸಿಟ್​ ಮಾಡಲೇಬೇಕು. ನಿಮ್ಮ ಪ್ಲೇಟ್ ನ್ಯಾಚೋಸ್ ಜೊತೆಗೆ, ನಿಮ್ಮ ಟೇಬಲ್‌ನಲ್ಲಿ ಇನ್ನೊಂದಿಷ್ಟು ರುಚಿಕರ ಆಯ್ಕೆಗಳಿದ್ದರೆ ನಿಮ್ಮ ದಿನ ಪರಿಪೂರ್ಣವಾಗುವುದರಲ್ಲಿ ಯವುದೇ ಅನುಮಾನವಿಲ್ಲ.  ಚೀಸ್‌ನಿಂದ ಹುಳಿ ಕ್ರೀಮ್‌ವರೆಗೆ ಮತ್ತು ಚಿಲ್ಲಿ ಕಾನ್ ಕಾರ್ನೆ ಜೊತೆಗೆ ನೀವು ನ್ಯಾಚೋಸ್​ ಸವಿಯಬಹುದು.


ವಿಳಾಸ: ಯುಬಿ ಸಿಟಿ, 20ನೇ, ವಿಟ್ಟ್ ಮಲ್ಯ ರಸ್ತೆ, ಅಶೋಕ್ ನಗರ, ಬೆಂಗಳೂರು


ಮೊಬೈಲ್ ನಂಬರ್: +918553077550


ಆರ್ಬರ್ ಬ್ರೂಯಿಂಗ್ ಕಂಪನಿ, ಅಶೋಕ್ ನಗರ, ಬೆಂಗಳೂರು


ನಿಮ್ಮ ಪಿಂಟ್ ಕ್ರಾಫ್ಟ್ ಬಿಯರ್‌ನೊಂದಿಗೆ ಬೆಸ್ಟ್​ ನ್ಯಾಚೋಸ್​ ಎಂಜಾಯ್ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ. ಬೀನ್ ನ್ಯಾಚೋಸ್ ಇಲ್ಲಿನ ಫೇಮಸ್​ ಪದಾರ್ಥವಾಗಿದ್ದು, ಮಿಸ್​ ಮಾಡದೇ ಟ್ರೈ ಮಾಡಲೇಬೇಕು. ಅಲ್ಲದೇ, ಇಲ್ಲಿ ನಾನ್​ವೆಜ್​ ಪದಾರ್ಥಗಳು ಸಹ ಬಹಳ ರುಚಿಕರವಾಗಿರುತ್ತದೆ.


ವಿಳಾಸ: ಅಲೈಡ್ ಗ್ರಾಂಡೆ ಪ್ಲಾಜಾ, 3 ನೇ ಮಹಡಿ, 8, ಮಗ್ರತ್ ರಸ್ತೆ, ಅಶೋಕ್ ನಗರ, ಬೆಂಗಳೂರು


ಸಮಯ: +918050144477


 ದಿ ಓಪನ್ ಬಾಕ್ಸ್, ಅಶೋಕ್ ನಗರ, ಬೆಂಗಳೂರು


ಇಲ್ಲಿನ ಪಾಪ್ಡಿ ನ್ಯಾಚೋಸ್‌ ಮಿಸ್​ ಮಾಡದೇ ಸೇವಿಸಲೇಬೇಕು.  ನ್ಯಾಚೋಸ್‌ನೊಂದಿಗೆ ಕ್ಲಾಸಿಕ್ ಪಾಪ್ಡಿ ಚಾಟ್ ಅನ್ನು ತಿಂದರೆ ಆಹಾ, ಅದರ ರುಚಿ ಅದ್ಭುತ. ಮಸಾಲೆಯುಕ್ತ ಚಿಕನ್ ಹಾಗೂ ಕೆಲ ವೆಜ್​ ಪದಾರ್ಥಗಳನ್ನು ಮಿಸ್​ ಮಾಡಬಾರದಂತೆ. ವೀಕೆಂಡ್​ ಸಮಯದಲ್ಲಿ ಇಲ್ಲಿ ಜನಜಂಗುಳಿ ಸೇರಿರುತ್ತದೆ.


ವಿಳಾಸ: ಹಾಲ್ಸಿಯಾನ್ ಕಾಂಪ್ಲೆಕ್ಸ್, 4 ನೇ ಮಹಡಿ, 9, ಸೇಂಟ್ ಮಾರ್ಕ್ಸ್ ರಸ್ತೆ, ಅಶೋಕ್ ನಗರ, ಬೆಂಗಳೂರು


ಇದನ್ನೂ ಓದಿ: ಮೂಗು ಚುಚ್ಚಿಸುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ


ಸಮಯ: +917022211100


ಚಿಲ್ಲಿ'ಸ್ ಅಮೆರಿಕನ್ ಗ್ರಿಲ್ & ಬಾರ್, ರಾಜಾಜಿ ನಗರ, ಬೆಂಗಳೂರು


ಸರಳವಾದ ಚೀಸ್ ಸಾಸ್‌, ಚಿಲ್ಲಿಸ್ ಕ್ವೆಸೊ, ಜಲಪೆನೋಸ್ ಮತ್ತು ಕಪ್ಪು ಬೀನ್ಸ್ ಜೊತೆಗೆ ಕ್ಲಾಸಿಕ್ ಶೈಲಿಯ ನ್ಯಾಚೋಸ್ ಅನ್ನು ಇಲ್ಲಿ ಮಾತ್ರ ನೀವು ಸವಿಯಲು ಸಾಧ್ಯ. ಕೇವಲ ನ್ಯಾಚೋಸ್​ ಮಾತ್ರವಲ್ಲದೇ, ಸಂಜೆ ನಿಮ್ಮ ಡ್ರಿಂಕ್ಸ್ ಜೊತೆ ಎಂಜಾಯ್ ಮಾಡಲು ಇದು ಸೂಕ್ತವಾದ ಸ್ಥಳ ಎನ್ನಬಹುದು.




ವಿಳಾಸ: ಫೀನಿಕ್ಸ್ ಮಾರ್ಕೆಟ್ ಸಿಟಿ, 20, ನೆಲ ಮಹಡಿ, ವೈಟ್‌ಫೀಲ್ಡ್, ಬೆಂಗಳೂರು


ಮೊಬೈಲ್ ನಂಬರ್: +918067266406


ವಿಳಾಸ: ಓರಿಯನ್ ಮಾಲ್, 2ನೇ ಮಹಡಿ, ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು


ಮೊಬೈಲ್ ನಂಬರ್: +918022682125


ವಿಳಾಸ: 13, ದಿ ಬೇ, RMZ ಇಕೋವರ್ಲ್ಡ್, ಬೆಳ್ಳಂದೂರು, ಬೆಂಗಳೂರು


ಮೊಬೈಲ್ ನಂಬರ್: +918618260391


ಕೋರಮಂಗಲ ಸೋಶಿಯಲ್, ಕೋರಮಂಗಲ, ಬೆಂಗಳೂರು


ನೀವು ಗರಿಗರಿಯಾದ ನ್ಯಾಚೋಸ್​ ಸೇವನೆ ಮಾಡಬೇಕು ಎಂದರೆ ಈ ಸ್ಥಳಕ್ಕೆ ಈ ವೀಕೆಂಡ್​ ಹೋಗಿ. ಟ್ಯಾಕೋ ಸೂಪ್, ಮೆಕ್ಸಿಕನ್ ಟೊಮೆಟೊ ಸಾರು ಹೀಗೆ ಇಲ್ಲಿ ನ್ಯಾಚೋಸ್​ ಜೊತೆ ಟ್ರೈ ಮಾಡಲು ಬಹಳ ವೆರೈಟಿ ಇದೆ.


ಇದನ್ನೂ ಓದಿ: ಮಹಿಳೆಯರಲ್ಲಿ ಕಾಣಿಸುವ ಈ ಆರೋಗ್ಯ ಸಮಸ್ಯೆಗಳು ಮೆನೋಪಾಸ್ ಲಕ್ಷಣವಂತೆ


ವಿಳಾಸ: 118, ಕೋರಮಂಗಲ ಇಂಡಸ್ಟ್ರಿಯಲ್ ಏರಿಯಾ, 7ನೇ ಬ್ಲಾಕ್, ಕೋರಮಂಗಲ, ಬೆಂಗಳೂರು


ಮೊಬೈಲ್ ನಂಬರ್: +918043723295

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು