Beauty Tips: ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಈ ಫೇಸ್ ಪ್ಯಾಕ್​ಗಳು ಉತ್ತಮ ಪರಿಹಾರ

Monsoon Skin Care: ಮಳೆಗಾಲದಲ್ಲಿ ತ್ವಚೆಯ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯವಾಗುತ್ತದೆ. ಬೇರೆ ಯಾವುದೋ ಉತ್ಪನ್ನಗಳನ್ನು ಬಳಸುವ ಮೊದಲು ಮನೆಯಲ್ಲಿಯೇ ಫೇಸ್ ಪ್ಯಾಕ್​ಗಳನ್ನು ತಯಾರಿಸಿ ಬಳಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೇಸಿಗೆ ಮತ್ತು ಚಳಿಗಾಲದಲ್ಲಿ ನಮ್ಮ ಚರ್ಮದ ಆರೈಕೆಯಲ್ಲಿ ನಾವು  ಹೆಚ್ಚು  ಗಮನ ನೀಡುತ್ತೇವೆ. ಬೇಸಿಗೆಯಲ್ಲಿ ಬಿಸಿಲಿನ ಬೇಗೆ ಮತ್ತು ಚಳಿಗಾಲವು ಒಂದು ರೀತಿಯ ಚರ್ಮದ ತೊಂದರೆಗಳನ್ನು ತಂದರೆ, ಈ ಮಳೆಗಾಲ ಬೇರೆ ತರಹದ ಚರ್ಮ ಸಮಸ್ಯೆಗಳನ್ನು ತರುತ್ತದೆ. ಬೇಸಿಗೆಗಾಲ ಮತ್ತು ಚಳಿಗಾಲದಂತೆಯೇ ಮಳೆಗಾಲದಲ್ಲಿ ಸಹ ನಾವು ಚರ್ಮದ ಬಗ್ಗೆ ಕಾಳಜಿವಹಿಸುವ ಅವಶ್ಯಕತೆ ಇರುತ್ತದೆ. ಮಳೆಗಾಲದ ಸಮಯದಲ್ಲಿ ಹೆಚ್ಚು ತೇವಾಂಶ ಮತ್ತು ಬೆವರಿನ ಸಮಸ್ಯೆಯಯನ್ನು ನಾವು ಅನುಭವಿಸುತ್ತೇವೆ. ವಾತಾವರಣದಲ್ಲಿನ ಬದಲಾವಣೆ ನಮ್ಮ ಚರ್ಮದ ಎಣ್ಣೆಯ ಅಂಶವನ್ನು ಹೆಚ್ಚಿಸುತ್ತದೆ. ಅದರಲ್ಲೂ ಸೂಕ್ಷ್ಮ ಚರ್ಮದವರಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಮಳೆಗಾಲದಲ್ಲಿ ಬರುವ ಚರ್ಮದ ತೊಂದರೆಗಳು ಚಳಿಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಮಳೆಗಾಲ, ನಿರ್ದಿಷ್ಟವಾಗಿ, ಫಂಗಸ್ ಸೋಂಕು ಮತ್ತು ಮೊಡವೆಗಳನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ನಿಮ್ಮ ಚರ್ಮದ ಆರೋಗ್ಯದ ಕಾಳಜಿವಹಿಸುವುದು ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ ವರ್ಷಪೂರ್ತಿ  ನೋಡಿಕೊಳ್ಳುವುದು ಅವಶ್ಯಕ. ಹಾಗಾಗಿ ನಿಮ್ಮ ಚರ್ಮದ ಹೊಳಪಿಗೆ ಮಳೆಗಾಲದಲ್ಲಿ ಬಳಸಬೇಕಾಗಿರುವ ಫೇಸ್ ಮಾಸ್ಕ್​ಗಳ ಪಟ್ಟಿ ಇಲ್ಲಿದೆ.

ಓಟ್ ಮೀಲ್ , ರೋಸ್ ವಾಟರ್ ,  ಜೇನು ,  ಮೊಸರು

ಒಂದು ಬೌಲ್​ನಲ್ಲಿ 1 ಟೀ ಸ್ಪೂನ್ ಓಟ್ ಮೀಲ್,  ರೋಸ್ ವಾಟರ್ ಮತ್ತು 1 ಟೀ ಸ್ಪೂನ್ ಜೇನುತುಪ್ಪ ಮತ್ತು ಮೊಸರು ಹಾಕಿ ಮಿಶ್ರಣ ಮಾಡಿ. ಅದನ್ನು ನಯವಾಗಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಓಟ್ ಮೀಲ್ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಂಡರೆ, ರೋಸ್ ವಾಟರ್  ಕಲೆಗಳನ್ನು ನಿವಾರಣೆ ಮಾಡಿ,  ಚರ್ಮವನ್ನು ರಿಫ್ರೆಶ್ ಮಾಡುತ್ತದೆ. ಮೊಸರು ಉತ್ತಮ ಬ್ಯಾಕ್ಟೀರಿಯಾಗಳಿಂದ ತುಂಬಿದ್ದು ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಹಾಗೂ ಜೇನುತುಪ್ಪವು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಚೆರ್ರಿ ಹಣ್ಣಿನಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ಅರಿಶಿನ , ನಿಂಬೆ , ರೋಸ್ ವಾಟರ್, ಕಡಲೇ ಹಿಟ್ಟು,

ಒಂದು ಚಿಟಿಕೆ ಅರಿಶಿನದೊಂದಿಗೆ ಒಂದು ಟೀ ಚಮಚ  ಕಡಲೇ ಹಿಟ್ಟು ಸೇರಿಸಿ ಮಿಶ್ರಣ ಮಾಡಿ. ನಂತರ ಅದಕ್ಕೆ  2 ರಿಂದ 3 ಹನಿ ನಿಂಬೆ ರಸವನ್ನು ಹಿಂಡಿ ಮತ್ತು 1 ರಿಂದ 2 ಟೀಸ್ಪೂನ್ ರೋಸ್ ವಾಟರ್ ಸೇರಿಸಿ ಪೇಸ್ಟ್ ಮಾಡಿ ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಅದನ್ನು ಸುಮಾರು 15 ನಿಮಿಷಗಳ ನಂತರ ತೊಳೆಯಿರಿ. ಇದರಲ್ಲಿ ಕಡಲೇ ಹಿಟ್ಟು ಮುಖದ ಮೇಲಿನ ಮೊಡವೆಗಳಿಂದ ಮುಕ್ತಿ ನೀಡುತ್ತದೆ. ನಿಂಬೆ ರಸದಲ್ಲಿ ವಿಟಮಿನ್ ಸಿ ಚರ್ಮವನ್ನು ಸುಕ್ಕಾಗದಂತೆ ತಡೆಯುತ್ತದೆ.  ಅರಿಶಿನವು ನಿಮಗೆ ನೈಸರ್ಗಿಕ, ಆರೋಗ್ಯಕರ ಹೊಳಪನ್ನು ನೀಡುತ್ತದೆ.

ತಾಜಾ ಹಣ್ಣುಗಳು

ಒಂದು ಬಟ್ಟಲಿನಲ್ಲಿ,  ಸಣ್ಣ ಬಾಳೆ ಹಣ್ಣು, ಸೇಬು, ಪೀಚ್, 1 ಸ್ಟ್ರಾಬೆರಿ  ಮತ್ತು 1 ಟೀ ಸ್ಪೂನ್ ಜೇನುತುಪ್ಪವನ್ನು ಹಾಕಿ ಪೇಸ್ಟ್ ಮಾಡಿ. ಇದನ್ನು 15 ನಿಮಿಷಗಳ ಕಾಲ ಮುಖದ ಮೇಲೆ ಹಚ್ಚಿ ನಂತರ ತಣ್ಣೀರಿನಿಂದ  ತೊಳೆಯಿರಿ. ಇದು ಚರ್ಮದ ಸೂಕ್ಷ್ಮ ಗೆರೆಗಳು, ಕಲೆಗಳನ್ನು ತೆಗೆದುಹಾಕುತ್ತದೆ. ಹಣ್ಣುಗಳಲ್ಲಿ ಉರಿಯೂತ ನಿವಾರಕ ಅಂಶಗಳೂ ಇವೆ. ಆದ್ದರಿಂದ, ಇದು ಮೊಡವೆಗಳಿಂದ ಮುಕ್ತಿ ನೀಡುತ್ತದೆ.

ಶ್ರೀಗಂಧ , ಅರಿಶಿನ

ಒಂದು ಬಟ್ಟಲಿನಲ್ಲಿ 1 ಚಮಚ ಶ್ರೀಗಂಧದ ಪುಡಿ ಮತ್ತು 1/2 ಟೀ ಸ್ಪೂನ್ ಅರಿಶಿನ ಪುಡಿಯನ್ನು ತೆಗೆದುಕೊಳ್ಳಿ.  ಅದಕ್ಕೆ ರೋಸ್ ವಾಟರ್ ಸೇರಿಸಿ ದಪ್ಪ ಪೇಸ್ಟ್ ಮಾಡಿ. ಆ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಸುಮಾರು  10 ನಿಮಿಷಗಳ ನಂತರ  ತಣ್ಣೀರಿನಿಂದ ತೊಳೆಯಿರಿ. ಈ ಪ್ಯಾಕ್ ಚರ್ಮದಲ್ಲಿರುವ  ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
Published by:Sandhya M
First published: