Bangle Stores Near Me: ಗೌರಿ ಹಬ್ಬಕ್ಕೆ ಹೊಸಾ ಡಿಸೈನ್ ಬಳೆಗಳು ಬಂದಿವೆ, ನೋಡಿದ್ರಾ?

Bangles Shop Near Me: ಅದಕ್ಕೆ ಸೀರೆ, ಕಿವಿ ಓಲೆ , ಬಳೆ ಹೀಗೆ ಎಲ್ಲವನ್ನೂ ಮ್ಯಾಚಿಂಗ್ ಮಾಡುತ್ತಾರೆ. ಈ ಗೌರಿ ಹಬ್ಬಕ್ಕೆ ನಿಮ್ಮ ಸೀರೆಗೆ ಮ್ಯಾಚ್​ ಆಗುವ ಬಳೆ (Bangles) ಎಲ್ಲಿ ಸಿಗುತ್ತದೆ ಎಂದು ಹುಡುಕುತ್ತಿದ್ರೆ, ಬೆಂಗಳೂರಿನ ಕೆಲ ಶಾಪ್​ಗಳ ಲಿಸ್ಟ್​ ಇಲ್ಲಿದೆ.

ಬಳೆಗಳು

ಬಳೆಗಳು

  • Share this:
ಶ್ರಾವಣ (Shravana) ಆರಂಭವಾಗಿದೆ, ಸಾಲು ಸಾಲು ಹಬ್ಬಗಳು (Festival) ಬರುತ್ತಿವೆ. ನಾಗರಪಂಚಮಿ, ವರಮಹಾಲಕ್ಷ್ಮಿ, ಗೌರಿ-ಗಣೇಶ ಹೀಗೆ. ಒಟ್ಟಿಗೆ ಹಬ್ಬಗಳು ಬಂದ ಮೇಲೆ ಅದರ ಸಿದ್ದತೆಯ ಕೆಲಸ ಕೂಡ ಬಹಳಷ್ಟಿರುತ್ತದೆ. ಈಗಷ್ಟೇ ಹೆಂಗಳೆಯರು ವರಮಹಾಲಕ್ಷ್ಮಿ ಮುಗಿಸಿದ್ದಾರೆ. ಗೌರಿ ಹಬ್ಬ (Gowri Festival) ಬರುತ್ತಿದೆ. ಗೌರಿ ಹಬ್ಬ ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಬಹಳ ಮುಖ್ಯವಾದ ಹಬ್ಬ. ಈ ದಿನ ಪೂಜೆಯನ್ನು ಸುಂದರವಾಗಿ ಮಾಡುವುದರ ಜೊತೆಗೆ ತಾವೂ ಸಹ ಅಂದವಾಗಿ ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಸೀರೆ, ಕಿವಿ ಓಲೆ , ಬಳೆ ಹೀಗೆ ಎಲ್ಲವನ್ನೂ ಮ್ಯಾಚಿಂಗ್ ಮಾಡುತ್ತಾರೆ. ಈ ಗೌರಿ ಹಬ್ಬಕ್ಕೆ ನಿಮ್ಮ ಸೀರೆಗೆ ಮ್ಯಾಚ್​ ಆಗುವ ಬಳೆ (Bangles) ಎಲ್ಲಿ ಸಿಗುತ್ತದೆ ಎಂದು ಹುಡುಕುತ್ತಿದ್ರೆ, ಬೆಂಗಳೂರಿನ ಕೆಲ ಶಾಪ್​ಗಳ ಲಿಸ್ಟ್​ ಇಲ್ಲಿದೆ.

ಭವಾನಿ ಕಂಗನ್ಸ್, ಗಾಂಧಿ ಬಜಾರ್, ಬೆಂಗಳೂರು

ಈ ಅಂಗಡಿಯಲ್ಲಿ ನಿಮಗೆ ಯಾವುದೇ ಬಳೆ ಸಿಗಲ್ಲ ಎನ್ನುವ ಮಾತಿಲ್ಲ. ಬಹಳಷ್ಟು ವರ್ಷಗಳಿಂದ ಈ ಅಂಗಡಿ ಬೆಂಗಳೂರಿನಲ್ಲಿದ್ದು, ನಿಮ್ಮ ಸೀರೆಗೆ ಮ್ಯಾಚಿಂಗ್ ಬಳೆಗಳು ಇಲ್ಲಿ ಸಿಗುತ್ತದೆ. ಅಲ್ಲದೇ ಈ ಅಂಗಡಿಯಲ್ಲಿ ನಿಮಗೆ ಗಾಜಿನ ಬಳೆ, ಮೆಟಲ್, ಡಿಸೈನ್​ ಡಿಸೈನ್​ ಬಳೆಗಳು ಸಿಗುತ್ತದೆ. ನೀವು ಅವರಿಗೆ ಸೀರೆಯನ್ನು ತೆಗೆದುಕೊಂಡು ಹೋಗಿ ತೋರಿಸಿದರೆ ಸಾಕು, ಆ ಬಣ್ಣದ ಬಳೆ ನಿಮಗೆ ಸಿಗುತ್ತದೆ. ಈ ಗೌರಿ ಹಬ್ಬಕ್ಕೆ ನಿಮ್ಮ ಬಳೆಯನ್ನು ಇಲ್ಲಿಂದ ಖರೀದಿ ಮಾಡಬಹುದು.

ವಿಳಾಸ: ಸಂಖ್ಯೆ 73, ಡಿವಿಜಿ ರಸ್ತೆ, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು, ಕರ್ನಾಟಕ 560004

ಸಮಯ: ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ

 ಮಹಾದೇವ್ ಬ್ಯಾಂಗಲ್ ಸ್ಟೋರ್, ಚಿಕ್ಕಪೇಟೆ, ಬೆಂಗಳೂರು

ಬಳೆಗಳು ಇಲ್ಲದೇ ಯಾವುದೇ ಹಬ್ಬ ಮುಗಿಯುವುದಿಲ್ಲ. ಬಂದ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದರಿಂದ ಹಿಡಿದು, ಹಬ್ಬದ ದಿನ ವಿಶೇಷವಾಗಿ ಕಾಣಲು ನಮಗೆ ಸಹ ಬಳೆಗಳು ಬೇಕು, ಅದರಲ್ಲೂ ಹೆಣ್ಣು ಮಕ್ಕಳಿಗೆ ತಮ್ಮ ಬಟ್ಟೆಗೆ ಮ್ಯಾಚಿಂಗ್ ಬಳೆ ಬೇಕೇ ಬೇಕು. ನಿಮಗೆ ಬೇಕಾದ ಸೈಜ್​, ಬೇಕಾದ ಬಣ್ಣ ಹಾಗೂ ಮೆಟಿರಿಯಲ್​ನಲ್ಲಿ ಬಳೆ ಬೇಕು ಎಂದರೆ ಚಿಕ್ಕಪೇಟೆಯಲ್ಲಿರುವ ಮಹಾದೇವ್ ಬ್ಯಾಂಗಲ್ ಸ್ಟೋರ್ ಬೆಸ್ಟ್ ಚಾಯ್ಸ್​ ಎನ್ನಬಹುದು. ಇಲ್ಲಿ ಒಮ್ಮೆ ಒಳಗೆ ಹೋದರೆ ನಿಮಗೆ ಹಾಗೂ ನಿಮ್ಮ ಮನೆಯಲ್ಲಿರುವ ಎಲ್ಲಾ ಹೆಣ್ಣು ಮಕ್ಕಳಿಗೆ ಬೇಕಾದ ಬಳೆ ಸಿಗುತ್ತದೆ.

ವಿಳಾಸ:  XHCF+GMV, ಸಂಖ್ಯೆ 73, ಡಿವಿಜಿ ರಸ್ತೆ, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು, ಕರ್ನಾಟಕ 560004

ಸಮಯ: ಬೆಳಗ್ಗೆ 8.30 ರಿಂದ ರಾತ್ರಿ 9.10ರ ವರೆಗೆ

ಮೊಬೈಲ್ ನಂಬರ್: 099274 43353

ಅಶೋಕ್​ ಬ್ಯಾಂಗಲ್ಸ್ , ಬಳೆಪೇಟೆ, ಬೆಂಗಳೂರು

ಬೆಂಗಳೂರಿನ ಬಳೆಪೇಟೆಯ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇಲ್ಲಿ ನಿಮಗೆ ಎಲ್ಲಾ ಬಳೆ ಸಿಗುತ್ತದೆ. ಹಾಗೆಯೇ ನೀವು ಇಲ್ಲಿರುವ ಈ ಅಶೋಕ ಬ್ಯಾಂಗಲ್ಸ್ ಶಾಪ್​ಗೆ ಹೋಗಲೇಬೇಕು. ಇಲ್ಲಿ ಮ್ಯಾಚಿಂಗ್ ಬಳೆಯಿಂದ ಹಿಡಿದು ಕಿವಿ ಓಲೆ ಸಹ ಸಿಗುತ್ತದೆ. ನಿಮ್ಮ ಬಟ್ಟೆಯನ್ನು ಅಲ್ಲಿ ತೆಗೆದುಕೊಂಡು ಹೋಗಿ ಬಣ್ಣಕ್ಕೆ ತಕ್ಕ ಬಳೆ ಹಾಗೂ ಓಲೆ ಖರೀದಿ ಮಾಡಬಹುದು.



ಇದನ್ನೂ ಓದಿ: ಕಾಲ್ಗೆಜ್ಜೆ ಅಲಂಕಾರಕ್ಕೆ ಮಾತ್ರ ಅಲ್ಲ, ಆರೋಗ್ಯಕ್ಕೂ ಉತ್ತಮ - ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ

ವಿಳಾಸ: 89 ಲಕ್ಷ್ಮಣ್ ರೋಡ್​, ಬಳೆಪೇಟೆ ರೋಡ್​, ಉಡುಪಿ ಕೃಷ್ಣ ಹೋಟೆಲ್​ ಹತ್ತಿರ, ಬೆಂಗಳೂರು

ಸಮಯ: ಬೆಳಗ್ಗೆ 8.30 ರಿಂದ ರಾತ್ರಿ 9 ಗಂಟೆಗೆ

ಮೊಬೈಲ್ ನಂಬರ್:  098449 00809

ಮಹಿಲಾ ಬ್ಯಾಂಗಲ್ಸ್ ಸ್ಟೋರ್​, ಗಾಂಧಿ ಬಜಾರ್, ಬೆಂಗಳೂರು

ಈ ಮೂರು ಫ್ಲೋರ್​ನ ಅಂಗಡಿಯಲ್ಲಿ ನಿಮಗೆ ಏನು ಸಿಗಲ್ಲ ಎಂಬುದಿಲ್ಲ. ಬಳೆ, ಸರ, ಕಿವಿ ಓಲೆ, ಬಾಡಿಗೆಗೆ ಆಭರಣಗಳು ಹೀಗೆ ಎಲ್ಲವೂ ಸಿಗುತ್ತದೆ. ನಿಮಗೆ ಇಲ್ಲಿ ದೇವರ ಪೂಜೆಗೆ ಹಾಕುವ ಆಭರಣಗಳು ಸಹ ಸಿಗುತ್ತದೆ. ನಿಮಗೆ ಕೇವಲ ಗೌರಿ ಹಬ್ಬ ಮಾತ್ರ ಅಲ್ಲ, ಯಾವುದೇ ಕಾರ್ಯಕ್ರಮವಿದ್ದರೂ ಇಲ್ಲಿಗೆ ಭೇಟಿ ನೀಡಿದರೆ, ಎಲ್ಲವೂ ಸಿಗುತ್ತದೆ.

ವಿಳಾಸ: 16, 1, ಡಿವಿಜಿ ರಸ್ತೆ, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು, ಕರ್ನಾಟಕ 560004

ಮೊಬೈಲ್ ನಂಬರ್: 080 2667 1014

ಸಮಯ: ಬೆಳಗ್ಗೆ 9.30 ರಿಂದ ರಾತ್ರಿ 8.30ರ ವರೆಗೆ

ಝೀಬಾ ಫ್ಯಾಷನ್ ಸ್ಟೋರ್, ಆರ್​ಟಿ ನಗರ್, ಬೆಂಗಳೂರು

ಈ ಫ್ಯಾಷನ್​ ಸ್ಟೋರ್​ನಲ್ಲಿ ನಿಮಗೆ ಲೇಟೆಸ್ಟ್​ ಟ್ರೆಂಡಿಂಗ್ ಆಭರಣಗಳು ಸಿಗುತ್ತದೆ. ನಿಮ್ಮ ಸೀರೆಗೆ ಮ್ಯಾಚ್​ ಆಗುವ ಬೆಸ್ಟ್​ ಬಳೆಗಳು ಬೇಕು ಎಂದರೆ ಇಲ್ಲಿಗೆ ವಿಸಿಟ್​ ಮಾಡಬಹುದು. ಅಲ್ಲದೇ, ಇಲ್ಲಿ ನಿಮಗೆ ನಿಮ್ಮ ಸೀರೆಗೆ ಸೂಟ್​ ಆಗುವ ಕಿವಿ ಓಲೆ ಸಹ ಲಭಿಸುತ್ತದೆ. ಈ ಬಾರಿ ಗೌರಿ ಹಬ್ಬಕ್ಕೆ ಟ್ರೈ ಮಾಡಬಹುದು.

best matching bangles store near me in bengaluru you must visit
ಬಳೆಗಳು


ಇದನ್ನೂ ಓದಿ: ಗೌರಿ ಪೂಜೆಗೆ ವಿಭಿನ್ನ ರೀತಿಯ ಹಾರಗಳನ್ನು ನೀವೇ ಮಾಡಿ

ವಿಳಾಸ: 19, 5 ನೇ ಮುಖ್ಯ, 7 ನೇ ಅಡ್ಡ ರಸ್ತೆ, ಬಾಟಾ ಶೋ ರೂಮ್ ಎದುರು, ಗಂಗಾನಗರ, ಆರ್​ಟಿ ನಗರ, ಬೆಂಗಳೂರು, ಕರ್ನಾಟಕ 560032

ಮೊಬೈಲ್ ನಂಬರ್: 098450 82809

ಸಮಯ: ಬೆಳಗ್ಗೆ 10.30 ರಿಂದ ರಾತ್ರಿ 8.30 ರವರೆಗೆ
Published by:Sandhya M
First published: