Jewelry Shops: ಮದುವೆಗೆ ಲೇಟೆಸ್ಟ್ ಡಿಸೈನ್ ಚಿನ್ನಾಭರಣ ಬೇಕು ಎಂದ್ರೆ ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ಕೊಡಿ!

Near Me Jewelry Shops: ಬೆಂಗಳೂರಿನಲ್ಲಿ ಆಭರಣ ಶಾಪಿಂಗ್‌ಗಾಗಿ ಕೆಲವು ಜನಪ್ರಿಯ ಸ್ಥಳಗಳು ಎಂದರೆ ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಮತ್ತು ಇಂದಿರಾನಗರ ಎನ್ನಬಹುದು. ನೀವು ಸಹ ನಿಮ್ಮ ವಿಶೇಷ ದಿನಕ್ಕೆ ಆಭರಣಗಳನ್ನು ಹುಡುಕುತ್ತಿದ್ರೆ ಕೆಲ ಅಂಗಡಿಗಳ ಲಿಸ್ಟ್​ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ (India) ಯಾವುದೇ ಮದುವೆ (Wedding) ಅಥವಾ ಸಮಾರಂಭವಿರಲಿ ಅವುಗಳು ಆಭರಣಗಳಿಲ್ಲದೆ (Jewelry)  ಪೂರ್ಣಗೊಳ್ಳುವುದಿಲ್ಲ.  ಭಾರತದ ಸಿಲಿಕಾನ್ ವ್ಯಾಲಿ-ಬೆಂಗಳೂರಿನಲ್ಲಿ ಆಭರಣಗಳ ಅಂಗಡಿಗಳಿಗೆ ಯಾವುದೂ ಸಾಟಿಯಿಲ್ಲ ಎನ್ನಬಹುದು. ಇಲ್ಲಿ ವಿಭಿನ್ನ ಶೈಲಿಯ ಆಭರಣಗಳು ಹಾಗೂ ಸಮಕಾಲೀನ ಶೈಲಿಯ ಆಭರಣಗಳು ಸಹ ಲಭ್ಯವಿದ್ದು, ಇದು ಜನರನ್ನು ತನ್ನತ್ತ ಸೆಳೆಯುತ್ತದೆ. ಬೆಂಗಳೂರಿನಲ್ಲಿ ಆಭರಣ ಶಾಪಿಂಗ್‌ಗಾಗಿ ಕೆಲವು ಜನಪ್ರಿಯ ಸ್ಥಳಗಳು ಎಂದರೆ ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಮತ್ತು ಇಂದಿರಾನಗರ ಎನ್ನಬಹುದು. ನೀವು ಸಹ ನಿಮ್ಮ ವಿಶೇಷ ದಿನಕ್ಕೆ ಆಭರಣಗಳನ್ನು ಹುಡುಕುತ್ತಿದ್ರೆ ಕೆಲ ಅಂಗಡಿಗಳ ಲಿಸ್ಟ್​ ಇಲ್ಲಿದೆ.

 ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್

ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್' ಬೆಂಗಳೂರಿನಲ್ಲಿ ಪ್ರಶಸ್ತಿ ವಿಜೇತ ಕುಟುಂಬ ನಡೆಸುವ ಮಳಿಗೆಯಾಗಿದೆ. ಇದು ಬೆಂಗಳೂರಿನ ಅತ್ಯುತ್ತಮ ಆಭರಣ ಮಳಿಗೆಗಳಲ್ಲಿ ಒಂದಾಗಿದ್ದು ಮತ್ತು ಶತಮಾನಕ್ಕೂ ಹೆಚ್ಚು ಕಾಲ ತಮ್ಮ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಇದು ಬೆಂಗಳೂರಿನ ಜನಪ್ರಿಯ ಡೈಮಂಡ್ ಜ್ಯುವೆಲ್ಲರಿ ಅಂಗಡಿಗಳಲ್ಲಿ ಒಂದಾಗಿದೆ ಮತ್ತು ತ್ರಿಕೋನ ಟ್ರಿಲಿಯನ್, ಓವಲ್, ಪಿಯರ್, ಮಾರ್ಕ್ವೈಸ್, ರೇಡಿಯಂಟ್, ಅಸ್ಚರ್, ಬ್ಯಾಗೆಟ್, ಬ್ರಯೋಲೆಟ್, ರೌಂಡ್, ಆಯತಾಕಾರದ ಪಚ್ಚೆ, ಸೇರಿದಂತೆ ವಿವಿಧ ಆಕಾರಗಳ ವಜ್ರಗಳು ಲಭ್ಯವಿದೆ. ಕೃಷ್ಣಯ್ಯ ಚೆಟ್ಟಿ ಅವರು ಆರ್ಡರ್‌ಗಳ ಮೇಲೆ 10-ದಿನಗಳ ರಿಟರ್ನ್ ಪಾಲಿಸಿ ಮತ್ತು ಜೀವಮಾನದ ವಿನಿಮಯ ನೀತಿಯನ್ನು ನೀಡುತ್ತಾರೆ. ಇಲ್ಲಿ ನಿಮ್ಮ ಆಭರಣಗಳಿಗೆ ಉಚಿತ ವಿಮಾ ರಕ್ಷಣೆಯನ್ನು ಮತ್ತು ಭಾರತದೊಳಗೆ ರಿಟರ್ನ್ಸ್ ಶಿಪ್ಪಿಂಗ್ ಸಹ ಇದೆ. ಈ ಅಂಗಡಿಯು ಆನ್‌ಲೈನ್ ಶಾಪಿಂಗ್‌ಗಾಗಿ ವಿಶೇಷ ರಿಯಾಯಿತಿಗಳನ್ನು ಸಹ ಒದಗಿಸುತ್ತದೆ.

ವಿಳಾಸ: 3ಎ, ದ ಟಚ್‌ಸ್ಟೋನ್, ಮೈನ್ ಗಾರ್ಡ್ ಕ್ರಾಸ್ ರೋಡ್, ಆಫ್ ಕಬ್ಬನ್ ರೋಡ್, ಬೆಂಗಳೂರು, ಕೆಎ 560001

ಸಮಯ: 11:30 ರಿಂದ ರಾತ್ರಿ 8 ರವರೆಗೆ

GRT ಜ್ಯುವೆಲರ್ಸ್

ಬೆಂಳೂರಿನಲ್ಲಿರುವ ಅತ್ಯುತ್ತಮ ಆಭರಣ ಮಳಿಗೆಗಳಲ್ಲಿ 'GRT ಜ್ಯುವೆಲರ್ಸ್ ಒಂದಾಗಿದೆ. ಇದು ಒಂದೇ ಸೂರಿನಡಿ ಎಲ್ಲವನ್ನೂ ಒದಗಿಸುವ ಸುಸ್ಥಾಪಿತ ಆಭರಣ ಮಳಿಗೆ ಆಗಿದ್ದು. 1964 ರಲ್ಲಿ ಸ್ಥಾಪಿತವಾದ ಈ ಆಭರಣ ಮಳಿಗೆಯು ಗ್ರಾಹಕರಿಗೆ ಉತ್ತಮ ಶಾಪಿಂಗ್ ವಾತಾವರಣವನ್ನು ಮತ್ತು ಪ್ರತಿ ಬಜೆಟ್‌ಗೆ ತಕ್ಕಂತೆ ವಿಶಾಲ ಆಯ್ಕೆಯನ್ನು ನೀಡುತ್ತದೆ. ಅವರ ಬೃಹತ್ ಸಂಗ್ರಹವು 18 ರಿಂದ 25 ವರ್ಷ ವಯಸ್ಸಿನ ಮಹಿಳೆಯರಿಗೆ ಚಿನ್ನ ಮತ್ತು ವಜ್ರದ ಆಭರಣಗಳನ್ನು ಒಳಗೊಂಡಿದೆ. ಈ ಅಂಗಡಿಯಲ್ಲಿ ಗಿಫ್ಟ್ ವೋಚರ್‌ಗಳು, 100% ಪ್ರಮಾಣೀಕೃತ ಆಭರಣಗಳು, ಜೀವಿತಾವಧಿಯ ವಿನಿಮಯ ಮತ್ತು ಬೈ-ಬ್ಯಾಕ್ ಗ್ಯಾರಂಟಿ ಆಯ್ಕೆಗಳನ್ನು ಸಹ ಲಭ್ಯವಿದೆ. ಉಚಿತ ಶಿಪ್ಪಿಂಗ್ ಮತ್ತು ವಿತರಣಾ ಸೇವೆಗಳು ಸಹ ಇಲ್ಲಿ ಲಭ್ಯವಿದೆ.

ವಿಳಾಸ: 529, 4ನೇ ಬ್ಲಾಕ್ 11ನೇ ಮೈನ್ ರೋಡ್, 33ನೇ ಕ್ರಾಸ್ ರೋಡ್, ಜಯನಗರ, ಬೆಂಗಳೂರು, ಕೆಎ 560011

ಸಮಯ: 10am - 9pm

ಇದನ್ನೂ ಓದಿ: ಬೆಂಗಳೂರಿನ ಈ ಅಂಗಡಿಗಳಲ್ಲಿ ವೆರೈಟಿ ಹೋಳಿಗೆ ಸಿಗುತ್ತೆ, ಯುಗಾದಿಗೆ ಇದೇ ಬೆಸ್ಟ್!

ಕಲ್ಯಾಣ್ ಜ್ಯುವೆಲರ್ಸ್

ಬೆಂಗಳೂರಿನ ಕಲ್ಯಾಣ್ ಜ್ಯುವೆಲರ್ಸ್ ಭಾರತದಾದ್ಯಂತ ಹರಡಿರುವ ಸರಣಿ ಆಭರಣ ಮಳಿಗೆಯಾಗಿದೆ. ಬೆಂಗಳೂರಿನಲ್ಲಿರುವ ಅವರ ಅದ್ಭುತ ಗೋಲ್ಡ್ ಜ್ಯುವೆಲ್ಲರಿ ಶಾಪ್‌ಗಳು ವೈವಿಧ್ಯಮಯ ಸಾಂಪ್ರದಾಯಿಕ ಮತ್ತು ಪುರಾತನ ಸಂಗ್ರಹಗಳನ್ನು ಹೊಂದಿದೆ. ನಿಮ್ಮ ಅಗತ್ಯಗಳಿಗೆ ಸರಿಹೊಂದುವ ವಿಭಿನ್ನ ಮಾದರಿಗಳನ್ನು ತೋರಿಸುವಲ್ಲಿ ನಿಮ್ಮೊಂದಿಗೆ ಸಭ್ಯ ಮತ್ತು ತಾಳ್ಮೆಯಿಂದಿರುವ ಹೆಚ್ಚು ನುರಿತ ಸಿಬ್ಬಂದಿಯನ್ನು ಈ ಅಂಗಡಿ ಹೊಂದಿದೆ. ಶಾಪಿಂಗ್ ಮಾಡುವಾಗ ಅವರು ಅಸಾಧಾರಣ ಅನುಭವವನ್ನು ನೀಡುತ್ತಾರೆ. ಕಲ್ಯಾಣ್ ಮಧ್ಯಪ್ರಾಚ್ಯದಾದ್ಯಂತ ಆಭರಣ ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಕಲ್ಯಾಣ್ ಜ್ಯುವೆಲರ್ಸ್ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಉತ್ತಮ ಆಯ್ಕೆ ಎನ್ನಬಹುದು. ಇಲ್ಲಿ ಇರುವ ಪ್ರತಿಯೊಂದು ಆಭರಣಗಳು BIS 916 ಹಾಲ್ ಮಾರ್ಕ್ ಹೊಂದಿರುತ್ತದೆ.

ವಿಳಾಸ: ಶಾಪ್ ನಂ-120, 11ನೇ ಕ್ರಾಸ್, ಮಾರ್ಗೋಸಾ ರಸ್ತೆ, ಬ್ಯಾಂಕ್ ಆಫ್ ಇಂಡಿಯಾ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 560003

ಸಮಯ: 11am - 9:30pm

ಭೀಮಾ ಜ್ಯುವೆಲ್ಲರ್ಸ್

1925 ರಲ್ಲಿ ಕೇರಳದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಭೀಮಾ ಜ್ಯುವೆಲರ್ಸ್ 90 ವರ್ಷಗಳ ಪರಂಪರೆಯನ್ನು ಹೊಂದಿದೆ. ಆಭರಣಗಳ ಹೊಸ ಶೈಲಿಗಳು ಮತ್ತು ವಿನ್ಯಾಸಗಳನ್ನು ಈ ಅಂಗಡಿ ಹೊಂದಿದ್ದು, ಇಲ್ಲಿ ಅದ್ಭುತವಾದ ವಿವಾಹದ ಆಭರಣ ಸಂಗ್ರಹಣೆಗಳು ಲಭ್ಯವಿದೆ. ಇದು ಬೆಂಗಳೂರಿನ ಅತ್ಯುತ್ತಮ ಚಿನ್ನದ ಆಭರಣ ಮಳಿಗೆಗಳಲ್ಲಿ ಇದಾಗಿದ್ದು, ನಿಮ್ಮ ವಿಶೇಷ ದಿನವನ್ನು ಇನ್ನೂ ವಿಶೇಷವಾಗಿಸಬಹುದು.

ಬೆಂಗಳೂರಿನಲ್ಲಿ ಭೀಮಾ ಜ್ಯುವೆಲ್ಲರ್ಸ್ ಬೆಸ್ಟ್​ ಮಳಿಗೆಗೆಗಳಿರುವ ಏರಿಯಾ ಲಿಸ್ಟ್​

ಡಿಕನ್ಸನ್ ರಸ್ತೆ

ಜಯನಗರ

ಕೋರಮಂಗಲ

ರಾಜಾಜಿನಗರ

HBR ಲೇಔಟ್ ಹತ್ತಿರ

ವೈಟ್‌ಫೀಲ್ಡ್ ಮುಖ್ಯ ರಸ್ತೆ

ಮಹದೇವಪುರ

ವಿಳಾಸ: 45, ಗ್ರೌಂಡ್ ಫ್ಲೋರ್, ಟ್ರೇಡ್ ಸೆಂಟರ್, ಡಿಕೆನ್ಸನ್ ರ್ಡ್, ಮಣಿಪಾಲ್ ಸೆಂಟರ್ ಹತ್ತಿರ, ಬೆಂಗಳೂರು, ಕರ್ನಾಟಕ 560042

ಸಮಯ: ಬೆಳಿಗ್ಗೆ 10:30 ರಿಂದ ರಾತ್ರಿ 8 ರವರೆಗೆ

ಮಲಬಾರ್ ಗೋಲ್ಡ್​ ಆ್ಯಂಡ್​ ಡೈಮಂಡ್ಸ್

​1993 ರಲ್ಲಿ ಸ್ಥಾಪಿಸಲಾಗಿರುವ ಈ ಮಲಬಾರ್ ಗ್ರೂಪ್ ನಿಮ್ಮ ರುಚಿಗೆ ತ್ಕಕಂತೆ ಆಭರಣಗಳನ್ನು ಒದಗಿಸುತ್ತದೆ. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿಸ್ಸಂದೇಹವಾಗಿ ಬೆಂಗಳೂರಿನಲ್ಲಿರುವ ಅತ್ಯುತ್ತಮ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾಗಿದೆ ಎಂದರೆ ತಪ್ಪಲ್ಲ. ನೀವು ಆಭರಣ ಖರೀದಿ ಮಾಡುವ ಆಲೋಚನೆಯಲ್ಲಿದ್ದರೆ ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ನಿಮ್ಮ ಬ್ಲೌಸ್-ಡ್ರೆಸ್​ಗೆ ಸಖತ್ ಎಂಬ್ರಾಯ್ಡರಿ ಮಾಡಿಸ್ಬೇಕಾ? ಬೆಂಗ್ಳೂರಿನ ಈ ಏರಿಯಾಗಳಲ್ಲಿ ಸೂಪರ್​ ಆಗಿ ಮಾಡ್ತಾರೆ ನೋಡಿ!

ವಿಳಾಸ: ಗೀತಾಂಜಲಿ ಜ್ಯುವೆಲ್ಸ್, ಬಿಲ್ಲೆನ ಪ್ಲಾಜ, ಕೃಷ್ಣರಾಜಪುರ, ಬೆಂಗಳೂರು, ಕರ್ನಾಟಕ 560036

ಸಮಯ: 10am - 9pm
Published by:Sandhya M
First published: