Japanese Restaurants:ಬೆಂಗ್ಳೂರಲ್ಲೇ ಜಪಾನಿ ಖಾದ್ಯ ಸವಿಯೋಕೆ ಈ ರೆಸ್ಟೊರೆಂಟ್​ಗಳಿಗೆ ಭೇಟಿ ಕೊಡಿ, ಇಲ್ಲಿನ Sushi ಜಪಾನಿಯರಿಗೂ ಇಷ್ಟವಂತೆ!

Near Me Japanese Restaurants: ನಮ್ಮ ಬೆಂಗಳೂರು ಬಹಳಷ್ಟು ಜಪಾನೀಸ್ ರೆಸ್ಟೋರೆಂಟ್​ಗಳನ್ನು (Restaurants)  ಹೊಂದಿದ್ದು, ಅದ್ಭುತ ರುಚಿ ನೀಡುತ್ತದೆ. ಬೆಂಗಳೂರಿನಲ್ಲಿರುವ ನಮ್ಮ ಅತ್ಯುತ್ತಮ ಜಪಾನೀಸ್ ರೆಸ್ಟೋರೆಂಟ್‌ಗಳ ಲಿಸ್ಟ್​ ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುಶಿ (Sushi), ಸಾಶಿಮಿ, ರಾಮೆನ್, ಕರಾಗೆ, ಟೆಂಪುರಾ, ಉಡಾನ್/ಸೋಬಾ ನೂಡಲ್ಸ್ ಅಥವಾ ಟೆಪ್ಪನ್ಯಾಕಿ - ಜಪಾನೀಸ್ ಆಹಾರದ (Japanese Food)  ವಿಷಯಕ್ಕೆ ಬಂದಾಗ ನಮ್ಮೆಲ್ಲರಿಗೂ ನಮ್ಮ ಫೇವರೇಟ್​ ಫುಡ್​  ಅಂತ ಇದೆ. ಅದನ್ನ ನಾವು ಮತ್ತೆ ಮತ್ತೆ ತಿನ್ನಲು ಬಯಸುತ್ತೇವೆ. ಜಪಾನ್‌ ಆಹಾರಗಳ ಅನುಭವಗಳನ್ನು ಮಾತ್ರ ಅನುಭವಿಸಲು ನೀವು ಟೋಕಿಯೊ (Tokyo) ಅಥವಾ ಕ್ಯೋಟೋಗೆ ಪ್ರವಾಸ ಹೊಗಲು ನಿರ್ಧರಿಸಿದ್ದರೆ ನಮ್ಮ ಬೆಂಗಳೂರು ಬಹಳಷ್ಟು ಜಪಾನೀಸ್ ರೆಸ್ಟೋರೆಂಟ್​ಗಳನ್ನು (Restaurants)  ಹೊಂದಿದ್ದು, ಅದ್ಭುತ ರುಚಿ ನೀಡುತ್ತದೆ. ಬೆಂಗಳೂರಿನಲ್ಲಿರುವ ನಮ್ಮ ಅತ್ಯುತ್ತಮ ಜಪಾನೀಸ್ ರೆಸ್ಟೋರೆಂಟ್‌ಗಳ ಲಿಸ್ಟ್​ ಇಲ್ಲಿದೆ. 

1Q1

ಝೆನ್ ವೈಬ್‌ನೊಂದಿಗೆ ನಗರದ ಮಧ್ಯಭಾಗದಲ್ಲಿರುವ, 1Q1 ಎಲ್ಲರಿಗೂ ಇಷ್ಟವಾಗುವ ದೊಡ್ಡ ಮೆನುವನ್ನು ಹೊಂದಿದೆ. ನೀವು ಚಿಕನ್ ಕಟ್ಸು, ಆಕ್ಟೋಪಸ್ ಟಕೋಯಾಕಿ ಅಥವಾ ಟ್ಯೂನ ಟಾಟಾಕಿಯ ಸಣ್ಣ ಪ್ಲೇಟ್‌ಗಳನ್ನು ಜಪಾನೀ ಸಾಸ್‌ಗಳೊಂದಿಗೆ ತಿನ್ನಬಹುದು ಅಥವಾ ನೀವು ಬೆಂಟೊ ಬಾಕ್ಸ್ , ಡಾನ್‌ಬುರಿ ಸವಿಯಬಹುದು. ವಿವಿಧ ರೀತಿಯ ಸಸ್ಯಾಹಾರಿ ಆಯ್ಕೆಗಳಿದ್ದು, ಸುಶಿ ರೋಲ್‌ಗಳು ಎಲ್ಲರ ಫೇವರೇಟ್​ ಎನ್ನಬಹುದು.

ವಿಳಾಸ: ಎಕ್ಸ್ಪ್ರೆಸ್ ಬಿಲ್ಡಿಂಗ್, ೧, ಕ್ವೀನ್ಸ್ ರೋಡ್, ವಸಂತ್ ನಗರ್, ಬೆಂಗಳೂರು

ಎಡೊ - ಐಟಿಸಿ ಗಾರ್ಡೆನಿಯಾ

ನಿಮ್ಮ ಸಂಗಾತಿ ಮತ್ತು ಸ್ನೇಹಿತರ ಜೊತೆ ಬೆಂಗಳೂರಿನಲ್ಲಿರುವ ಅತ್ಯಂತ ರುಚಿಕರ ಜಪಾನೀಸ್ ಊಟ ಮಾಡಲು ಹೋಗುವುದಾದರೆ ಇದು ಬೆಸ್ಟ್ ಸ್ಥಳ ಎನ್ನಬಹುದು. ಜಪಾನಿನ ಇತಿಹಾಸದ ಎಡೊ ಯುಗದಿಂದ ಸ್ಫೂರ್ತಿ ಹೊಂದಿರುವ ಈ ರೆಸ್ಟೋರೆಂಟ್ ನಿಮ್ಮನ್ನ ಜಪಾನಿಗೆ ಕರೆದುಕೊಂಡು ಹೋಗುತ್ತದೆ. ಸಾಶಿಮಿ ಪ್ಲ್ಯಾಟರ್‌ಗಳು, ಟೆರಿಯಾಕಿ ಚಿಕನ್ ಮತ್ತು ಸಿಂಪಿಗಳು ನಿಜಕ್ಕೂ ಉತ್ತಮ ರುಚಿ ನೀಡುತ್ತದೆ. ಭಾನುವಾರದ ಬ್ರಂಚ್‌ಗಳನ್ನು ಮಿಸ್​ ಮಾಡಬೇಡಿ.

ಇದನ್ನೂ ಓದಿ: ಬೆಂಗಳೂರಲ್ಲಿ ಊಟಕ್ಕಿಂತ ರುಚಿಯಾದ ಬೀಡಾ ಸಿಗೋ ಟಾಪ್ 5 ಸ್ಥಳಗಳಿವು, ಮಿಸ್ ಮಾಡದೇ ಟೇಸ್ಟ್ ಮಾಡಿ!

ವಿಳಾಸ: ITC ಗಾರ್ಡೇನಿಯಾ, 1, ರೆಸಿಡೆನ್ಸಿ ರಸ್ತೆ, ಅಶೋಕ್ ನಗರ, ಬೆಂಗಳೂರು

ಸಾಕೇ

2000 ರ ದಶಕದ ಆರಂಭದಿಂದಲೂ ಸಕೇ ಬಹಳಷ್ಟು ಜನರ ನೆಚ್ಚಿನ ಸ್ಥಳ ಎಂದರೆ ತಪ್ಪಲ್ಲ. ಅಧಿಕೃತ ಸುಶಿ ಆಹಾರ ಇಲ್ಲಿ ಸಿಗುತ್ತದೆ. ಇಲ್ಲಿನ ಆಹಾರಗಳ ದರ ಸಹ ಹೆಚ್ಚಿರುವುದಿಲ್ಲ. ಅಲ್ಲದೇ ಇಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಸಹ ಇಲ್ಲಿ ಬಳಸಲಾಗುವುದಿಲ್ಲ. ಇಲ್ಲಿನ ಆಸನಗಳು ಸಹ ಹೆಚ್ಚು ವಿಭಿನ್ನವಾಗಿದ್ದು, ದಿಂಬುಗಳನ್ನು ಸಹ ಹೊಂದಿದೆ. Miso ಸೂಪ್ ಮತ್ತು ಟ್ಯೂನ ರೋಲ್‌ಗಳನ್ನು ಮಿಸ್​ ಮಾಡ್ದೇ ಟ್ರೈ ಮಾಡಿ.

ವಿಳಾಸ:  90, ಕಾಹ್ ರಸ್ತೆ, ಶಾಂತಿ ನಗರ, ಬೆಂಗಳೂರು

  ಹರಿಮಾ

ಜಪಾನೀಸ್ ಆಹಾರದ ಪ್ರಿಯರಾಗಿದ್ದರೆ ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಪದೇ ಪದೇ ಹೋಗುತ್ತೀರಿ. ನಿಮ್ಮ ಜನ್ಮದಿನವನ್ನು ಸುಶಿ ಪಾರ್ಟಿಯೊಂದಿಗೆ ಆಚರಿಸಲು ಇದು ಸೂಕ್ತ ಸ್ಥಳ ಎನ್ನಲಾಗಿದೆ. ಬೆಂಗಳೂರಿನ ಸುಂದರವಾದ ದೃಶ್ಯಗಳು ಕಾಣುವ ತಾರಸಿ ನೋಟ, ಅತ್ಯುತ್ತಮ ಮಸಾಲೆಯುಕ್ತ ಟ್ಯೂನ ರೋಲ್‌ಗಳು ಮತ್ತು ಹಂದಿಮಾಂಸ ಹೀಗೆ ಇದು ನೀಡುವ ಅನುಭವ ವಿಭಿನ್ನ.  ಡೈಫುಕು ಅಥವಾ ಉಜಿಕಿಂಟೋಕಿಯ ಸಿಹಿ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ.

ವಿಳಾಸ: ದೇವತಾ ಪ್ಲಾಜಾ, 4 ನೇ ಮಹಡಿ, 131, ರೆಸಿಡೆನ್ಸಿ ರಸ್ತೆ, ಅಶೋಕ್ ನಗರ, ಬೆಂಗಳೂರು

ತೆಪ್ಪನ್

ನಿಮ್ಮ ಆಹಾರದೊಂದಿಗೆ ನೀವು ಇನ್ನೂ ಹೆಚ್ಚಿನ ಅನುಭವವನ್ನು ಹುಡುಕುತ್ತಿದ್ದರೆ, ತೆಪ್ಪನ್ ನಿಮಗೆ ಸರಿಯಾದ ಸ್ಥಳ. ನಿಮ್ಮ ತಟ್ಟೆಯಲ್ಲಿನ ಆಹಾರಗಳು ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತದೆ. ಇಲ್ಲಿನ ಮಾಂಸಹಾರಿ ಪದಾರ್ಥಗಳು ನಿಜಕ್ಕೂ ಹೆಚ್ಚು ರುಚಿಕರ. ಇನ್ನು ಸಸ್ಯಾಹಾರಿಗಳು  ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮಸಾಲೆಯುಕ್ತ ತೋಫು, ಆವಕಾಡೊ, ಕ್ಯಾರೆಟ್ ಮತ್ತು ಸೌತೆಕಾಯಿ ಮತ್ತು ಸೋಬಾ ನೂಡಲ್ಸ್‌ನೊಂದಿಗೆ ತಯಾರಿಸಿದ ಮಕಿಯನ್ನು ಆನಂದಿಸಲು ಟೆಪ್ಪನ್‌ಗೆ ನೀವು ಹೋಗಲೇಬೇಕು. ಸುಶಿ, ಮಕಿ, ನಿಗಿರಿ ಅಥವಾ ಅವರ ಕೆ ಮಾಕಿಗಳನ್ನು ಆರ್ಡರ್ ಮಾಡಿ, ಇದರಲ್ಲಿ ಫ್ರೈಡ್ ಪ್ರಾನ್ ಮಕಿ ನಿಮಗೆ ಬಹಳ ಇಷ್ಟವಾಗುತ್ತದೆ.

ವಿಳಾಸ: 1/3, 3 ನೇ ಮಹಡಿ, ಹಲಸೂರು ರಸ್ತೆ, ಹಲಸೂರು, ಬೆಂಗಳೂರು

ಶಿರೋ

ಬೆಂಗಳೂರಿನಲ್ಲಿ ಅತಿ ಹೆಚ್ಚು ಭೇಟಿ ನೀಡುವ ಜಪಾನೀಸ್ ರೆಸ್ಟೋರೆಂಟ್‌ಗಳಲ್ಲಿ ಇದು ಒಂದು ಎನ್ನಲಾಗುತ್ತದೆ. ಒಮ್ಮೆ ಭೇಟಿ ನೀಡಿದರೆ ಪದೇ ಪದೇ ಹೋಗಬೇಕು ಅನಿಸುವುದು ಸಹಜ.  ಭಾನುವಾರದ ಬ್ರಂಚ್​ಗೆ ಇದು ಬೆಸ್ಟ್​ ಎನ್ನಬಹುದು. ನಿಗಿರಿ, ಮಕಿ ಮತ್ತು ಸುಶಿಗಳೊಂದಿಗೆ ಮ್ಯಾಕಿಮೊನೊ ರೋಲ್‌ಗಳನ್ನು ಟ್ರೈ ಮಾಡಿ.

ಇದನ್ನೂ ಓದಿ: ಚಹಾ ಪ್ರಿಯರಿಗೆ ಇಲ್ಲಿದೆ ಬೆಂಗಳೂರಿನ ಟಾಪ್ 5 ರುಚಿಕರ ಟೀ ಅಂಗಡಿಗಳ ಲಿಸ್ಟ್

ಅಲ್ಲದೇ ಇಲ್ಲಿ ನೀವು ಶುಶಿರಿಟೊವನ್ನು ಪ್ರಯತ್ನಿಸಬಹುದು , ಇದು ಸುಶಿ ಮಾಡಿದ ತರಕಾರಿಗಳಿಂದ ಹಿಡಿದು ರೋಲ್‌ನೊಳಗೆ ತುಂಬಿದ ಕೊರಿಯನ್ ಚಿಕನ್‌ನವರೆಗೆ ಎಲ್ಲವನ್ನೂ ಹೊಂದಿರುವ ಬುರ್ರಿಟೋದಂತೆ ಕಾಣುವ ದೊಡ್ಡ ಸುಶಿ ರೋಲ್ ಆಗಿದ್ದು, ಒಬ್ಬರಿಂದ ತಿನ್ನಲು ಕಷ್ಟ.

ವಿಳಾಸ: ಯುಬಿ ಸಿಟಿ ಮಾಲ್, 2 ನೇ ಮಹಡಿ, ವಿಟ್ಟಲ್ ಮಲ್ಯ ರಸ್ತೆ, ಅಶೋಕ್ ನಗರ, ಬೆಂಗಳೂರು
Published by:Sandhya M
First published: