ನಿಮ್ಮ ಬಾಯಲ್ಲಿ ಚೀಸೀ ಪಿಜ್ಜಾ (Cheese Pizza) ಅಥವಾ ಕ್ರೀಮಿ ಮೌತ್ಫುಲ್ ಪಾಸ್ತವನ್ನು (Pasta) ನೋಡಿದ ತಕ್ಷಣ ಬಾಯಲ್ಲಿ ನೀರು ಬಂದರೆ ಇಟಾಲಿಯನ್ ಫುಡ್ ಲವರ್ಸ್ ಕ್ಲಬ್ (Italian Food Lovers Club) ಸೇರಿದ್ದೀರಿ ಎಂದರ್ಥ. ರುಚಿಕರವಾದ ಪಿಜ್ಜಾಗಳು, ಕಕ್ರೀಮಿ ಪಾಸ್ತಾ ಮತ್ತು ಶ್ರೀಮಂತ ಲಸಾಂಜ ಇಟಲಿಯಿಂದ ಬಂದ ಕೆಲವು ಉಡುಗೊರೆಗಳಾಗಿವೆ. ನೀವು ಸ್ನೇಹಿತರೊಂದಿಗೆ ಇಟಾಲಿಯನ್ ಆಹಾರವನ್ನು ಎಂಜಾಯ್ ಮಾಡಬೇಕು ಎಂದರೆ ಬೆಂಗಳೂರಿನಲ್ಲಿರುವ ಅತ್ಯುತ್ತಮ ಇಟಾಲಿಯನ್ ರೆಸ್ಟೋರೆಂಟ್ಗಳ (Italian Restaurants) ಲಿಸ್ಟ್ ಇಲ್ಲಿದೆ.
ಪಿಜ್ಜಾ ಬೇಕರಿ, ಇಂದಿರಾನಗರ
ಇಂದಿರಾನಗರದ ಜನರ ಹಾಟ್ ಫೇವರೇಟ್ ಸ್ಥಳ ಇದು ಎಂದರೆ ತಪ್ಪಾಗಲಾರದು. ಈ ಇಟಾಲಿಯನ್ ರೆಸ್ಟೋರೆಂಟ್ ಪಿಜ್ಜಾ ಬೇಕರಿ ನಿಮ್ಮ ಗ್ಯಾಂಗ್ನೊಂದಿಗೆ ಹೋಗಿ ಎಂಜಾಯ್ ಮಾಡಲು ಸೂಕ್ತವಾದ ಸ್ಥಳವಾಗಿದೆ. ಇಟಾಲಿಯನ್ ಪೆಪ್ಪೆರೋನಿ ಪಿಜ್ಜಾ, ಸಿಹಿಯಾದ ನುಟೆಲ್ಲಾ ಪಿಜ್ಜಾ ಮತ್ತು ಟ್ರಫಲ್ಡ್ ಫಂಗಿ ಪಿಜ್ಜಾ ತುಂಬಾ ರುಚಿಕರವಾಗಿದೆ. ನೀವು ಸ್ಪಾಗೆಟ್ಟಿ ಡ್ಯಾನಿಶ್ ಬ್ಲೂ, ಪೆನ್ನೆ ಅರಾಬಿಯಾಟಾ ಮತ್ತು ಖಾರವಾದ ಪೆನ್ನೆ ರೋಸಾವನ್ನು ಸಹ ಪ್ರಯತ್ನಿಸಬಹುದು.
ವಿಳಾಸ: 2985, 12ನೇ ಮುಖ್ಯ, HAL 2ನೇ ಹಂತ, ಇಂದಿರಾನಗರ, ಬೆಂಗಳೂರು
ಸಮಯ: ಮಧ್ಯಾಹ್ನ 12:30 ರಿಂದ ರಾತ್ರಿ 11 ರವರೆಗೆ
ನಪೋಲಿ ಇಟಾಲಿಯನ್ ಬಿಸ್ಟ್ರೋ, HSR
HSR ಲೇಔಟ್ನಲ್ಲಿರುವ ಈ ವಿಭಿನ್ನ ಇಟಾಲಿಯನ್ ಬಿಸ್ಟ್ರೋ ನಿಮಗಾಗಿ ರುಚಿಕರ ಪಾಸ್ತಾ ಮಾತ್ರವಲ್ಲದೆ ನಿಮ್ಮ ಮಕ್ಕಳಿಗೆ ಅವರ ಕಿಡ್ಸ್ ಪಾಸ್ತಾವನ್ನು ಸಹ ನೀಡುತ್ತದೆ. ನಿಮ್ಮ ಮಗು ತನ್ನ ನೆಚ್ಚಿನ ಸಾಸ್ ಅನ್ನು ಆಯ್ಕೆ ಮಾಡಬಹುದು. ಅಲ್ಲದೇ ಅಲ್ಲಿ ಪೆನ್ನೆ, ಸ್ಪಾಗೆಟ್ಟಿ, ಫ್ಯೂಸಿಲ್ಲಿ ಅಥವಾ ಶೆಲ್ ಪಾಸ್ತಾ ಟ್ರೈ ಮಾಡಬಹುದು. ಇಲ್ಲಿ ಪೆಸ್ಟೊ ಕ್ರೀಮ್ ರಿಸೊಟ್ಟೊವನ್ನು ಪ್ರಯತ್ನಿಸಲು ಮರೆಯಬೇಡಿ.
ವಿಳಾಸ: 646, 12ನೇ ಕ್ರಾಸ್, 27ನೇ ಮುಖ್ಯ, ಸೆಕ್ಟರ್ 1, ಎಚ್ಎಸ್ಆರ್, ಬೆಂಗಳೂರು
ಸಮಯ: ಬೆಳಿಗ್ಗೆ 11 ರಿಂದ ರಾತ್ರಿ 11 ರವರೆಗೆ
ಇದನ್ನೂ ಓದಿ: ಸಿ ಫಾರ್ ಚೈನೀಸ್ ಫುಡ್ ಎನ್ನುವವರು ಈ ರೆಸ್ಟೋರೆಂಟ್ಗಳಿಗೆ ಹೋಗಲೇಬೇಕು
ಬೊಲೊಗ್ನಾ, ಇಂದಿರಾನಗರ
ಕುಟುಂಬ ಕಾರ್ಯಕ್ರಮವನ್ನು ಸಂಭ್ರಮಿಸಲು ಇದು ಉತ್ತಮ ಸ್ಥಳ ಎನ್ನಬಹುದು. ನೀವು ಬೆಂಗಳೂರಿನಲ್ಲಿ ಇಟಾಲಿಯನ್ ರೆಸ್ಟೋರೆಂಟ್ಗಳನ್ನು ಹುಡುಕುತ್ತಿದ್ದರೆ ಅಥವಾ ಕಾಲೇಜು ಸ್ನೇಹಿತರನ್ನು ಭೇಟಿಯಾಗಲು ಯೋಜಿಸಿದ್ದರೆ, ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಬೊಲೊಗ್ನಾಗೆ ಕರೆದುಕೊಂಡು ಹೋಗಬಹುದು. ಕ್ರಂಬ್ ಫ್ರೈಡ್ ಹಾಗೂ ವೆರ್ಡುರ್ ಫ್ರಿಟ್ಟಾ ಸಸ್ಯಾಹಾರಿಗಳು ಪ್ರಯತ್ನಿಸಲೇಬೇಕಾದ ಆಹಾರ ವಾಗಿದೆ. ಮಾಂಸಾಹಾರಿಗಳು ಪೆಸ್ಟೊ ಗ್ರಿಲ್ಡ್ ಚಿಕನ್ ಅನ್ನು ಪ್ರಯತ್ನಿಸಿ.
ವಿಳಾಸ: 759, 1 ನೇ ಮಹಡಿ, 100 ಅಡಿ ರಸ್ತೆ, ಇಂದಿರಾನಗರ, ಬೆಂಗಳೂರು
ಸಮಯ: ಮಧ್ಯಾಹ್ನ 12 ರಿಂದ ರಾತ್ರಿ 11:30 ರವರೆಗೆ
ವೆರಾ ಇಟಾಲಿಯನ್ನೋ, ಕಲ್ಯಾಣ್ ನಗರ್
ಆಹ್ಲಾದಕರ ವಾತಾವರಣ ಮತ್ತು ಆರಾಮದಾಯಕ ಆಸನಗಳೊಂದಿಗೆ, ಬೆಂಗಳೂರಿನಲ್ಲಿರುವ ಉತ್ತಮವಾದ ಇಟಾಲಿಯನ್ ರೆಸ್ಟೋರೆಂಟ್ಗಳಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ನೀವು ಹೋಗಬೇಕಾದ ಸ್ಥಳವೆಂದರೆ ವೆರಾ ಇಟಾಲಿಯನ್. ಮಸಾಲೆಯುಕ್ತ ಚಿಕನ್ ಸಾಸೇಜ್ ಪಾಸ್ತಾ ಮತ್ತು ಎಗ್ ಪಾರ್ಮಿಗಿಯಾನಾವನ್ನು ಟ್ರೈ ಮಾಡಲೇಬೇಕು. ನಾಲ್ಕು ಚೀಸ್ ಪಿಜ್ಜಾವನ್ನು ಆರ್ಡರ್ ಮಾಡಿ ಸವಿಯಿರಿ.
ವಿಳಾಸ: 2ನೇ ಮಹಡಿ, 5M-402/A, HRBR 2ನೇ ಬ್ಲಾಕ್, 5ನೇ ಮುಖ್ಯ ರಸ್ತೆ, ಕಲ್ಯಾಣ್ ನಗರ, ಬೆಂಗಳೂರು
ಸಮಯ: ಮಧ್ಯಾಹ್ನ 12 ರಿಂದ 3:45 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 10:45 ರವರೆಗೆ
ಜೋನಾಸ್, ಇಂದಿರಾನಗರ
ರೂಫ್ಟಾಪ್ ಸೇರಿದಂತೆ ವಿವಿಧ ಆಸನ ಆಯ್ಕೆಗಳೊಂದಿಗೆ ಸುಂದರ ವಾತಾವರಣವನ್ನು ಹೊಂದಿರುವ ಜೋನಾಸ್ ಬೆಂಗಳೂರಿನ ಅತ್ಯುತ್ತಮ ಇಟಾಲಿಯನ್ ರೆಸ್ಟೋರೆಂಟ್ಗಳಲ್ಲಿ ಒಂದಾಗಿದೆ. ಪೆಸ್ಟೊ ಪಾಸ್ತಾ, ಬೆಳ್ಳುಳ್ಳಿ ಬ್ರೆಡ್ನೊಂದಿಗೆ ಚಿಕನ್ ಬೊಲೊಗ್ನೀಸ್ ಪಾಸ್ತಾವನ್ನು ಪ್ರಯತ್ನಿಸಲು ಮರೆಯದಿರಿ. ಪಿಜ್ಜಾ ಪ್ರೇಮಿಗಳಿಗೆ ಜ್ಯೂಸಿ ವೆಜ್ ಡಿಲೈಟ್ ಪಿಜ್ಜಾ, ಬಾರ್ಬೆಕ್ಯೂ ಚಿಕನ್, ಫಿಯರಿ ಪಿಜ್ಜಾ ಬಾಯಲ್ಲಿ ನೀರೂರಿಸುತ್ತದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಸಖತ್ತಾಗಿರೋ North Indian ಊಟ ಸವಿಯಬೇಕು ಅಂದ್ರೆ ಈ ಸ್ಥಳಗಳಿಗೆ ಭೇಟಿ ಕೊಡಿ
ವಿಳಾಸ: ಸ್ನ್ಯಾಪ್ ಫಿಟ್ನೆಸ್ ಎದುರು, 12ನೇ ಮುಖ್ಯ ರಸ್ತೆ, 4ನೇ ಕ್ರಾಸ್, ಎಚ್ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು
ಸಮಯ: ಮಧ್ಯಾಹ್ನ 12 ರಿಂದ ಮಧ್ಯರಾತ್ರಿ 1 ಗಂಟೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ