ವಯಸ್ಸಾಗುವುದು(Age) ಎಂದರೆ ಮುಪ್ಪಡರುವುದು(Old age) ಮತ್ತು ದೈಹಿಕವಾಗಿ(Physical) ವಿಪರೀತ ದುರ್ಬಲರಾಗಿ, ನಿವೃತ್ತರಾಗುವುದು(Retired) ಎಂದರ್ಥವಲ್ಲ. ಅದು ಕಾಲಾನುಸಾರವಾಗಿ ಹಿರಿಯರಾಗುವುದಷ್ಟೆ. ಮೊದಲಿನಂತೆ ಈಗೆಲ್ಲ 60ರ ವಯಸ್ಸು ಅಥವಾ ನಿವೃತ್ತ ಜೀವನ ಎಂದಾಕ್ಷಣ ಗಾಲಿ ಕುರ್ಚಿಯ ಮೇಲೆ ಕುಳಿತು ಸೂರ್ಯಾಸ್ತವನ್ನು(Sunset) ನೋಡುವುದು ಎಂಬ ರೂಪಕ ಕಣ್ಣೆದುರು ಬರುವುದಿಲ್ಲ. ಈಗ ಜಗತ್ತಿನಾದ್ಯಂತ sixty is the new forty ಎನ್ನುವ ಮಾತು ಹೆಚ್ಚು ಸದ್ದು ಮಾಡಲಾರಂಭಿಸಿದೆ. 60ರ ನಿವೃತ್ತಿಯ ಜೀವನ ಬದುಕಿನಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಮಯ.. ಹರೆಯದಲ್ಲಿ ಕಳೆದುಕೊಂಡಿದ್ದ ಸಂತೋಷಗಳನ್ನ(Happiness) ಮರಳಿ ಪಡೆದುಕೊಳ್ಳುವ ಕಾಲ.. ಆರೋಗ್ಯದ(Health) ಜೊತೆಜೊತೆಗೆ ಮನಸ್ಸಿನಲ್ಲಿ ನೆಮ್ಮದಿಯಿಂದ ಇರಬೇಕಾದ ಕಾಲ.. ಹೀಗೆ ಇರಬೇಕು ಅಂದ್ರೆ ನಮ್ಮ ಹಣಕಾಸಿನ ಭದ್ರತೆ ಕೂಡ ಮುಖ್ಯವಾಗಿರಬೇಕು.. ಹೀಗಾಗಿಯೇ ಕೆಲವರು ಹಣವನ್ನು 60ರ ಯೌವ್ವನಕ್ಕಾಗಿ ಈಗಲೇ ಮುಡಿಪಾಗಿ ಇಟ್ಟಿರುತ್ತಾರೆ.. ಸರ್ಕಾರಿ ನೌಕರಿಯಲ್ಲಿ ಇದ್ದವರಿಗೆ ಸರ್ಕಾರದಿಂದ ಪಿಂಚಣಿ ಯೋಜನೆ ಬರುತ್ತದೆ.. ಆದರೆ ಕೆಲವರಿಗೆ ಹಣ ಕೂಡಿಡಲು ಆಗಿರುವುದಿಲ್ಲ ಸರ್ಕಾರದಿಂದ ಪಿಂಚಣಿ ಬರುವುದಿಲ್ಲ.. ಇಂಥವರು 60ರ ಆಸುಪಾಸಿಗೆ ಬರುವ ವೇಳೆ ಹೇಗೆ ಪಿಂಚಣಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ..
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಿಂದ 60ರ ಚಿಂತೆ ದೂರ..
ನಾನಾ ಸಮಸ್ಯೆಗಳಿಂದ ಹಣ ಕೂಡಿಡಲು ಸಾಧ್ಯವಿಲ್ಲ,ಪಿಂಚಣಿ ಸಿಗುವುದಿಲ್ಲ ಎನ್ನುವವರು ಸರ್ಕಾರದ ಪಿಂಚಣಿ ಯೋಜನೆ ಲಾಭ ಪಡೆಯಬಹುದು. ಇಂಥವರಿಗೆ ನ್ಯಾಶನಲ್ ಪೆನ್ಷನ್ ಸ್ಕೀಮ್ (NPS) ಬಹಳ ಉಪಯುಕ್ತವಾಗಿದೆ. ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯಲ್ಲಿ ಹಣ ಇಟ್ಟರೆ ನಿಮ್ಮ ನಿವೃತ್ತಿಯ ಸಮಯದಲ್ಲಿ ನಿಮಗೆ ಸುಮಾರು 34 ಲಕ್ಷ ರೂಪಾಯಿ ಸಿಗುತ್ತದೆ. ಇದಕ್ಕಾಗಿ ನೀವು ಪ್ರತಿ ದಿನ 50 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಗ್ರಾಮೀಣ ಜನ ಸರ್ಕಾರದಿಂದ ಹಣ ಪಡೆದು ಭರ್ಜರಿ ಲಾಭ ಗಳಿಸುವ ಸೂಪರ್ ಐಡಿಯಾ ಇಲ್ಲಿದೆ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ 4 ವಲಯ..
* ಕೇಂದ್ರ ಸರಕಾರದ ಪಿಂಚಣಿ : ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಕೇವಲ ಕೇಂದ್ರ ಸರ್ಕಾರಿ ನೌಕರಿ ಉದ್ಯೋಗಿಗಳಿಗೆಇದೆ.
* ರಾಜ್ಯ ಸರ್ಕಾರದ ಪಿಂಚಣಿ ಯೋಜನೆ: ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ರಾಜ್ಯಸರ್ಕಾರಿ ಪಿಂಚಣಿ ಯೋಜನೆ ಇದೆ.
* ಕಾರ್ಪೊರೇಟ್ ವಲಯ: ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಾರ್ಪೊರೇಟ್ ವಲಯದ ಪಿಂಚಣಿ ಯೋಜನೆ ಲಭ್ಯವಿದೆ..
* ಎಲ್ಲಾ ನಾಗರಿಕ ಮಾದರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಕಾರ್ಪೊರೇಟ್ ವಲಯದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನೌಕರರು ಸೇರಿ ಎಲ್ಲಾ ಮಾದರಿಯ ನಾಗರಿಕರು ಇದರಲ್ಲಿ ಖಾತೆಯ ತೆರೆದುಕೊಂಡು ಪಿಂಚಣಿ ಪಡೆಯಬಹುದಾಗಿದೆ..ಇಲ್ಲಿ ಪಿಂಚಣಿ ಪಡೆಯಲು ಕೆಲಸ ಇರಲೇಬೇಕೆಂಬ ನಿಯಮವಿಲ್ಲ. ಕಂಪನಿಯಲ್ಲಿ ಉದ್ಯೋಗ ಮಾಡದ ವ್ಯಕ್ತಿ ಕೂಡ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
ಇನ್ನು ನಾಗರಿಕ ಮಾದರಿ ಪಿಂಚಣಿಯಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿ ಜೀವನವನ್ನು ಯಾವುದೇ ಟೆನ್ಷನ್ ಇಲ್ಲದೆ ಕಳೆಯಬಹುದು.ಈ ಯೋಜನೆಯಲ್ಲಿ ಬಡ್ಡಿ ದರವು ಪ್ರತಿಶತ 9-12 ರಷ್ಟು ಇರುತ್ತದೆ. ಒಬ್ಬ ವ್ಯಕ್ತಿ ತನ್ನ 25 ನೇ ವರ್ಷದಲ್ಲಿ NPSನಲ್ಲಿ ಪ್ರತಿ ತಿಂಗಳು 1,500 ರೂಪಾಯಿ ಹೂಡಿಕೆ ಮಾಡಲು ಶುರು ಮಾಡಿದರೆ, ಸತತ 35 ವರ್ಷ ಹಣ ಹೂಡಿಕೆ ಮಾಡಬೇಕು. 35 ವರ್ಷದಲ್ಲಿ ಹೂಡಿಕೆ ಮಾಡಿದ ಹಣ ಒಟ್ಟೂ 6.30 ಲಕ್ಷ ರೂಪಾಯಿಯಾಗುತ್ತದೆ. ಆ ಮೊತ್ತಕ್ಕೆ ಬಡ್ಡಿಯ ಹಣ ಸೇರಿದರೆ ಸುಮಾರು 27.9 ಲಕ್ಷ ರೂಪಾಯಿಯಾಗುತ್ತದೆ.
ಇದನ್ನೂ ಓದಿ: PPF ಖಾತೆಯಲ್ಲಿ ಕೇವಲ 7500 ರೂ. ಹೂಡಿಕೆ ಮಾಡಿ, ನಿವೃತ್ತಿ ವೇಳೆ ಸುಲಭವಾಗಿ ಕೋಟ್ಯಾಧಿಪತಿ ಆಗಿ..
ಯಾರು ಹೂಡಿಕೆ ಮಾಡಬಹುದು..?
18 ರಿಂದ 65 ವರ್ಷದೊಳಗಿನ ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಆನ್ಲೈನ್ ಮೂಲಕ ಎನ್ಪಿಎಸ್ನಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಬ್ಯಾಂಕ್ನಲ್ಲಿ ಎನ್ಪಿಎಸ್ ಖಾತೆಯನ್ನು ಹೊಂದಿದ್ದರೆ, ಬ್ಯಾಂಕಿನ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಹೂಡಿಕೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ