Ice Cream Shop Near Me: ಬೆಂಗಳೂರಿನಲ್ಲಿ ಟೇಸ್ಟಿ ಐಸ್​ಕ್ರೀಂ ಎಲ್ಲಿ ಸಿಗುತ್ತೆ? ಇಲ್ಲಿದೆ ಪಾರ್ಲರ್​ಗಳ ಪಟ್ಟಿ

Best Ice Cream Parlors Near Me: ಒಟ್ಟಾರೆ ಐಸ್​ಕ್ರೀಮ್ ಬೇಕು ಎಂಬುದಷ್ಟೇ ಇಲ್ಲಿ ಮುಖ್ಯ. ಹಾಗಾದ್ರೆ ಬೆಂಗಳೂರಿನಲ್ಲಿ (Bengaluru) ರುಚಿಕರ ಐಸ್​ಕ್ರೀಮ್​ಗಳು ಸಿಗುವ ಕೆಲ ಅಂಗಡಿಗಳ ಲಿಸ್ಟ್ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಸ್ ಕ್ರೀಮ್‌ (Ice cream) ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ, ಅದರಲ್ಲೂ ಬೇಸಿಗೆಯಲ್ಲಿ (Summer) ಜೀವಕ್ಕೆ ನೆಮ್ಮದಿ ನೀಡುತ್ತದೆ. ಆದರೆ ಸದ್ಯ ಮಳೆಗಾಲವಿದೆ. ಆದರೂ ಜನರಿಗೆ ಐಸ್​ಕ್ರೀಮ್​ ತಿನ್ನುವ ಬಯಕೆ ಇದೆ. ಮಳೆ ಕಡಿಮೆ ಇರಲಿ, ಜಾಸ್ತಿ ಇರಲಿ ಐಸ್​ಕ್ರೀಮ್ ಪ್ರಿಯರಿಗೆ ಯಾವುದೂ ಮುಖ್ಯವಲ್ಲ. ಒಟ್ಟಾರೆ ಐಸ್​ಕ್ರೀಮ್ ಬೇಕು ಎಂಬುದಷ್ಟೇ ಇಲ್ಲಿ ಮುಖ್ಯ. ಹಾಗಾದ್ರೆ ಬೆಂಗಳೂರಿನಲ್ಲಿ (Bengaluru) ರುಚಿಕರ ಐಸ್​ಕ್ರೀಮ್​ಗಳು ಸಿಗುವ ಕೆಲ ಅಂಗಡಿಗಳ ಲಿಸ್ಟ್ ಇಲ್ಲಿದೆ.

ಮಿಲಾನೊ ಐಸ್ ಕ್ರೀಮ್, ಇಂದಿರಾ ನಗರ, ಬೆಂಗಳೂರು

ಕೇವಲ ಐಸ್ ಕ್ರೀಮ್‌ಗಳಿಗೆ ಮೀಸಲಾಗಿರುವ ಮೂರು ಪುಟ ಉದ್ದದ ಮೆನುವು ನಿಮಗೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ಇಂದಿರಾನಗರದಲ್ಲಿರುವ ಮಿಲಾನೊ ಐಸ್ ಕ್ರೀಮ್ ತನ್ನ  ಡಾರ್ಕ್ ಚಾಕೊಲೇಟ್ ಸುವಾಸನೆ ಮತ್ತು ಸ್ನೇಹಶೀಲ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ರುಚಿಕರವಾದ ಐಸ್‌ಕ್ರೀಮ್ ಕೋನ್‌ಗಳು, ಕೇಕ್‌ಗಳು, ಕ್ರೆಪ್‌ಗಳನ್ನು ಹೊರತುಪಡಿಸಿ,  ಶೇಕ್ಸ್ ಮತ್ತು ಕಾಫಿ ಸಹ ಇಲ್ಲಿ ಸಿಗುತ್ತದೆ.

ವಿಳಾಸ: 460, 2ನೇ ಕ್ರಾಸ್, ಕೃಷ್ಣ ದೇವಸ್ಥಾನ ರಸ್ತೆ, ಇಂದಿರಾನಗರ, ಬೆಂಗಳೂರು

ಮೊಬೈಲ್ ನಂಬರ್: +918041256483

ಸಮಯ: 10:30 am - 11:45 pm

ಕ್ರೀಮ್ ಸ್ಟೋನ್, ಕೋರಮಂಗಲ, ಬೆಂಗಳೂರು

ಬೆಂಗಳೂರಿನಲ್ಲಿ ಮೂರು ಮಳಿಗೆಗಳನ್ನು ಹೊಂದಿರುವ ಕ್ರೀಮ್ ಸ್ಟೋನ್ ಐಸ್ ಕ್ರೀಂಗಳನ್ನು ಅತಿಯಾಗಿ ತಿನ್ನುವ ಜನರಿಗೆ ಸೂಕ್ತವಾದ ಸ್ಥಳವಾಗಿದೆ. ಐಸ್ ಕ್ರೀಮ್ ಕೇಕ್‌ಗಳಿಂದ ಹಿಡಿದು ಐಸ್ ಕ್ರೀಮ್ ಪಿಜ್ಜಾಗಳು, ಬ್ರೌನಿ ಸಿಜ್ಲರ್‌ಗಳು, ಸಕ್ಕರೆ ಇಲ್ಲದ ಸ್ಕೂಪ್‌ಗಳು ಹೀಗೆ ವಿವಿಧ ಆಯ್ಕೆಗಳು ಲಭ್ಯವಿದೆ. ಬೆಂಗಳೂರಿನಲ್ಲಿರುವ ಅತ್ಯುತ್ತಮ ಐಸ್ ಕ್ರೀಮ್ ಪಾರ್ಲರ್‌ಗಳಲ್ಲಿ ಇದು ಸಹ ಒಂದು.

ವಿಳಾಸ: 489/1 GRD ಮಹಡಿ, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +918065730006 ಸಮಯ: 10:00 am - 2:00 am

ಐಬಾಕೋ, ರಾಜಾಜಿನಗರ್, ಬೆಂಗಳೂರು

ನೀವು ವಿಭಿನ್ನ ರುಚಿಗಳನ್ನು ಹುಡುಕುತ್ತಿದ್ದರೆ, ಬೆಂಗಳೂರಿನಲ್ಲಿ ಐಬಾಕೊ ಅತ್ಯುತ್ತಮ ಸ್ಥಳವಾಗಿದೆ. ನಗರದಲ್ಲಿ ಮೂರು ಔಟ್‌ಲೆಟ್‌ಗಳನ್ನು ಹೊಂದಿರುವ ಈ ಐಸ್‌ಕ್ರೀಮ್ ಪಾರ್ಲರ್ ಕ್ಯಾಶುಯಲ್ ಡೇಟ್‌ಗಳಿಗೆ ಸೂಕ್ತವಾದ ತಾಣವಾಗಿದೆ.

ವಿಳಾಸ: 322, 6ನೇ ಮೈನ್ ರೋಡ್, ವೆಸ್ಟ್ ಆಫ್ ಕಾರ್ಡ್ ರೋಡ್, 13ನೇ ಕ್ರಾಸ್, ಮಹಾಲಕ್ಷ್ಮಿಪುರಂ, ರಾಜಾಜಿನಗರ, ಬೆಂಗಳೂರು

ಮೊಬೈಲ್ ನಂಬರ್: +919632339027

ಸಮಯ: 11:00 am - 11:00 pm

ಇದನ್ನೂ ಓದಿ: ಪುರುಷರೇ, ಗಡ್ಡದ ಕೂದಲು ಉದುರುತ್ತಿದ್ರೆ ಹೀಗೆ ಮಾಡ್ಬೇಕಂತೆ

ಆರ್ಟ್​ ಆಫ್​ ಡಿಲೈಟ್​, ರೆಸಿಡೆನ್ಸಿ ರಸ್ತೆ, ಬೆಂಗಳೂರು

ಆರ್ಟ್ ಆಫ್ ಡಿಲೈಟ್‌ಗೆ ಒಮ್ಮೆ ಭೇಟಿ ನೀಡಿದರೆ ಐಸ್ ಕ್ರೀಮ್​ಗಾಗಿ ನೀವು ಪದೇ ಪದೇ ಇಲ್ಲಿಗೆ ಭೇಟಿ ನೀಡುತ್ತೀರಿ. ಐಸ್ ಕ್ರೀಮ್ ಸಂಡೇಗಳಿಂದ ಹಿಡಿದು, ಕೇಕ್, ಕುಕೀಸ್, ಬ್ರೌನಿಗಳು, ಫ್ರೀಕ್ ಶೇಕ್‌ಗಳು ಹೀಗೆ, ಬೆಂಗಳೂರಿನಲ್ಲಿರುವ ಈ  ಐಸ್‌ಕ್ರೀಂ ಪಾರ್ಲರ್‌ನಲ್ಲಿ ನಿಮಗೆ ಸಿಗದ ಯಾವುದೂ ಇಲ್ಲ. ಫ್ರೆಂಚ್ ಫ್ರೈಗಳು ಮತ್ತು ನ್ಯಾಚೋಗಳು ಸಹ ಬಹಳ ರುಚಿಕರವಾಗಿರುತ್ತದೆ.

ವಿಳಾಸ: 44/1, ರೆಸಿಡೆನ್ಸಿ ರಸ್ತೆ, ಬೆಂಗಳೂರು

ಮೊಬೈಲ್ ನಂಬರ್: +91 80 4091 3229

ಸಮಯ: 12:00 pm - 0:30 am

ಪಬ್ರೈಸ್ ಫ್ರೆಶ್ ಮತ್ತು ನ್ಯಾಚುರಲ್​ ಐಸ್‌ಕ್ರೀಮ್‌, ಅಶೋಕ್ ನಗರ್, ಬೆಂಗಳೂರು

ಕೋಲ್ಕತ್ತಾದಿಂದ, ಈಗ ಬೆಂಗಳೂರು ನಗರದಲ್ಲಿ ಪ್ರಸಿದ್ಧವಾದ ಹೆಸರಾಗಿರುವ ಪಬ್ರೈಸ್ ಫ್ರೆಶ್ ಮತ್ತು ನ್ಯಾಚುರಲ್​ ಐಸ್‌ಕ್ರೀಮ್‌ಗಳು ನಿಮಗೆ ಆನಂದವನ್ನು ನೀಡುತ್ತವೆ. ನಗರದಾದ್ಯಂತ ಈಗಾಗಲೇ ಮೂರು ಮಳಿಗೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ವಿವಿಧ ರೀತಿಯ ಐಸ್ ಕ್ರೀಮ್‌ಗಳನ್ನು ಆಯ್ಕೆ ಮಾಡಲು ನಿಮಗೆ ಅವಕಾಶವಿದೆ.

ಇದನ್ನೂ ಓದಿ: ಉತ್ತರಾಖಂಡ್​ ಪ್ರವಾಸಕ್ಕೆ ಹೋದ್ರೆ ಈ ಪ್ಲೇಸ್​ ಮಿಸ್​ ಮಾಡ್ಬೇಡಿ

ವಿಳಾಸ: 6, ವುಡ್ ಸ್ಟ್ರೀಟ್, ಅಶೋಕ್ ನಗರ, ಬ್ರಿಗೇಡ್ ರಸ್ತೆ, ಬೆಂಗಳೂರು

ಮೊಬೈಲ್​ ನಂಬರ್: +919535006187

ಸಮಯ: 11:00 am - 11:30 pm
Published by:Sandhya M
First published: