ಕಣ್ಣಿನ ಸುತ್ತ ಮೂಡುವ ಕಪ್ಪು ಕಲೆ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು

ಶುದ್ಧ ಕೊಬ್ಬರಿ ಎಣ್ಣೆಯನ್ನು ಪ್ರತಿದಿನ ಕಪ್ಪು ಕಲೆಗಳಿರುವ ಭಾಗಕ್ಕೆ ಹಚ್ಚಿದರೂ ಕಲೆಗಳು ಮಾಯವಾಗುತ್ತವೆ. ರಾತ್ರಿ ಮಲಗುವ ವೇಳೆ ತೆಂಗಿನ ಎಣ್ಣೆಯನ್ನು ಕಪ್ಪು ಕಲೆಗಳಿರುವ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.

zahir | news18
Updated:May 30, 2019, 5:32 PM IST
ಕಣ್ಣಿನ ಸುತ್ತ ಮೂಡುವ ಕಪ್ಪು ಕಲೆ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು
@Medium
  • News18
  • Last Updated: May 30, 2019, 5:32 PM IST
  • Share this:
ಆಧುನಿಕ ಜೀವನ ಶೈಲಿಯಲ್ಲಿ ಕಣ್ಣಿನ ಕೆಳಭಾಗದಲ್ಲಿ ಕಪ್ಪು ಕಲೆಗಳು ಮೂಡುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಇಂತಹ ಕಲೆಗಳು ಕಾಣಿಸಿಕೊಂಡಿದ್ದರೆ, ಮುಖದ ಅಂದ ಕಳೆಗುಂದುವುದಲ್ಲದೆ, ಅದುವೇ ಒಂದು ಚಿಂತೆಗೆ ಕಾರಣವಾಗುತ್ತದೆ. ಇಂತಹ ಕಲೆಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ ನಿದ್ರಾಹೀನತೆ ಮತ್ತು ದೇಹದಲ್ಲಿನ ನೀರಿನಾಂಶದ ಕೊರತೆ. ಈ ರೀತಿಯ ಕಲೆಗಳು ಕಾಣಿಸಿಕೊಂಡರೆ  ಕೆಮಿಕಲ್ ಕ್ರೀಮ್ ಮತ್ತು ಮೇಕಪ್​ನ ಮೊರೆ ಹೋಗುವವರೇ ಹೆಚ್ಚು. ಆದರೆ ಇದರಿಂದ ಶಾಶ್ವತ ಪರಿಹಾರವನ್ನು ಮಾತ್ರ ನಿರೀಕ್ಷಿಸುವಂತಿಲ್ಲ. ಹೀಗಾಗಿ ಕಣ್ಣುಗಳ ಭಾಗದಲ್ಲಿ ಮೂಡುವ ಇಂತಹ ಕಪ್ಪು ಕಲೆಗಳನ್ನು ನೈಸರ್ಗಿಕ ವಿಧಾನಗಳ ಮೂಲಕ ಹೋಗಲಾಡಿಸಬಹುದು.

ನೀರು: ಮೊದಲ ಹೇಳಿದಂತೆ ಕಣ್ಣಿನ ಸುತ್ತ ಇಂತಹ ಕಪ್ಪು ಕಲೆಗಳು ಮೂಡಲು ದೇಹದಲ್ಲಿ ನೀರಿನಾಂಶದ ಕೊರತೆ ಕಾರಣ. ಹೀಗಾಗಿ ದಿನಕ್ಕೆ ಕನಿಷ್ಠ 10 ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲ ಪೋಷಕಾಂಶ ಅಡಗಿರುವ ಜ್ಯೂಸ್​ಗಳ ಮೊರೆ ಹೋಗಿ. ಅದರಲ್ಲೂ ಪೈನಾಪಲ್ ಜ್ಯೂಸ್ ಇನ್ನೂ ಉತ್ತಮ.

ವಿಟಮಿನ್ ಕೆ : ಉತ್ತಮ ಆರೋಗ್ಯ ಹೊಂದಲು ದೇಹಕ್ಕೆ ವಿಟಮಿನ್ ಕೆ ಅತ್ಯವಶ್ಯಕ. ಅದೇ ರೀತಿ ಇಂತಹ ಸಮಸ್ಯೆ ಕಾಣಿಸಿದರೆ ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಿ. ಕೋಸುಗಡ್ಡೆ, ಹೂಕೋಸು, ಮತ್ತು ಎಲೆಕೋಸುಗಳಲ್ಲಿ ವಿಟಮಿನ್ ಕೆ ಅಂಶಗಳು ಹೇರಳವಾಗಿರುತ್ತವೆ. ಇದಲ್ಲದೆ ಮಾರುಕಟ್ಟೆಯಲ್ಲಿ ವಿಟಮಿನ್ ಕೆ ಕ್ರೀಮ್​ಗಳು ಸಹ ಲಭ್ಯವಿದೆ. ಅದನ್ನು ಹಚ್ಚುವುದರಿಂದ ಕಣ್ಣಿನ ಭಾಗದ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.

ಸೌತೆಕಾಯಿ: ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್​ಗಳಲ್ಲಿ ಕಣ್ಣಿನ ಭಾಗದಲ್ಲಿ ಸೌತೆಕಾಯಿ ತುಂಡುಗಳನ್ನು ಇರಿಸುವುದು ನೀವು ನೋಡುತ್ತೀರಿ. ಇದೇ ಮಾದರಿಯನ್ನು ಅನುಸರಿಸಿ ನಿಮ್ಮ ಕಣ್ಣಿನ ಭಾಗದ ಕಲೆ ಹೋಗಲಾಡಿಸಬಹುದು. ಹೀಗೆ ಮಾಡಲು, ಮುಖವನ್ನು ಚೆನ್ನಾಗಿ ತೊಳೆದು ಕಣ್ಣಿಗೆ ಸೌತೆಕಾಯಿ ತುಂಡನ್ನು ಇಟ್ಟು ವಿಶ್ರಾಂತಿ ಪಡೆಯಿರಿ. ಪ್ರತಿದಿನ ಅರ್ಧಗಂಟೆಯಂತೆ ಈ ರೀತಿ ಮಾಡುವುದರಿಂದ ಕಣ್ಣಿನ ಸುತ್ತದ ಕಲೆಗಳು ಕಡಿಮೆಯಾಗುತ್ತವೆ. ಸೌತೆಕಾಯಿ ರಸವನ್ನು ಸಹ ಹಚ್ಚಬಹುದು, ಇದರ ಹೊರತಾಗಿ ಆಲೂಗಡ್ಡೆ ತುಂಡುಗಳನ್ನು ಬಳಸಿಕೊಳ್ಳಬಹುದು.

ಬಾದಾಮಿ: ಬಾದಾಮಿ ಎಣ್ಣೆಯನ್ನು ಪ್ರತಿನಿತ್ಯ ಕಣ್ಣಿನ ಸುತ್ತಲೂ ಹಚ್ಚಿದರೂ ಕಪ್ಪು ಕಲೆಗಳ ಸಮಸ್ಯೆ ದೂರವಾಗುತ್ತದೆ. ಮಾರುಕಟ್ಟೆಯಲ್ಲಿ ಶುದ್ಧ ಬಾದಾಮಿ ದೊರೆಯುತ್ತಿದ್ದು, ಅದನ್ನು ಬಳಸಬಹುದು ಅಥವಾ ಬಾದಾಮಿ ಬೀಜಗಳ ಸಿಪ್ಪೆ ಸುಳಿದು ಅರೆದು ಪೇಸ್ಟ್​ ರೀತಿಯಲ್ಲೂ ಹಚ್ಚಬಹುದು. ಇದರಿಂದ ಕಣ್ಣಿನ ಭಾಗದ ಕಪ್ಪು ಕಲೆಗಳು ಮಾಯವಾಗುತ್ತವೆ.

ಅರಿಶಿಣ ಪುಡಿ ಮತ್ತು ಅನಾನಸ್ ರಸ: ಭಾರತೀಯರ ಮನೆಗಳಲ್ಲಿ ಅರಿಶಿಣ ಪುಡಿ ಇದ್ದೇ ಇರುತ್ತದೆ. ಇದನ್ನು ಸ್ವಲ್ಪ ಪೈನಾಪಲ್ ಜ್ಯೂಸ್​ನೊಂದಿಗೆ ಮಿಶ್ರ ಮಾಡಿ ಕಪ್ಪು ಕಲೆಗಳ ಭಾಗಕ್ಕೆ ಹಚ್ಚಿಕೊಳ್ಳಬೇಕು. ಪ್ರತಿದಿನ ಹೀಗೆ ಮಾಡಿ, ಅರ್ಧಗಂಟೆಯ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದರೆ ಕಣ್ಣಿನ ಸುತ್ತ ಮೂಡಿದ ಕಲೆಗಳು ಕಡಿಮೆಯಾಗುತ್ತವೆ.​

ಪುದೀನಾ ರಸ: ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಪುದೀನಾದ ಎಲೆಗಳನ್ನು ಹಿಂಡಿ ರಸ ತೆಗೆಯಬೇಕು. ಈ ರಸವನ್ನು ಕಪ್ಪು ಕಲೆಯಿರುವ ಕಣ್ಣಿನ ಭಾಗಕ್ಕೆ ಹಚ್ಚುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.ತೆಂಗಿನ ಎಣ್ಣೆ: ಶುದ್ಧ ಕೊಬ್ಬರಿ ಎಣ್ಣೆಯನ್ನು ಪ್ರತಿದಿನ ಕಪ್ಪು ಕಲೆಗಳಿರುವ ಭಾಗಕ್ಕೆ ಹಚ್ಚಿದರೂ ಕಲೆಗಳು ಮಾಯವಾಗುತ್ತವೆ. ರಾತ್ರಿ ಮಲಗುವ ವೇಳೆ ತೆಂಗಿನ ಎಣ್ಣೆಯನ್ನು ಕಪ್ಪು ಕಲೆಗಳಿರುವ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಆ ಬಳಿಕ ಮುಖವನ್ನು ತೊಳೆಯಬೇಡಿ. ಇದೇ ರೀತಿ ದಿನನಿತ್ಯ ಮಾಡಿ ಬೆಳಿಗ್ಗೆ ಮುಖ ತೊಳೆದುಕೊಂಡರೆ ಕಪ್ಪು ಕಲೆಗಳ ಸಮಸ್ಯೆ ದೂರವಾಗುತ್ತವೆ. ಇದರೊಂದಿಗೆ ಒತ್ತಡದ ಪರಿಸ್ಥತಿಯನ್ನು ತಿಳಿಗೊಳಿಸಿ ಚೆನ್ನಾಗಿ ನಿದ್ರೆ ಮಾಡುವುದು ಸಹ ಬಹಳ ಮುಖ್ಯ ಎಂಬುದು ನೆನಪಿರಲಿ.

ಇದನ್ನೂ ಓದಿ: ವಿಶ್ವಕಪ್ 2019ಕ್ಕೆ ಕ್ರಿಕೆಟ್ ದೇವರ ಎಂಟ್ರಿ : ಹೊಸ ಇನಿಂಗ್ಸ್ ಆರಂಭಿಸಿದ ಸಚಿನ್ ತೆಂಡೂಲ್ಕರ್
First published:May 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ