ಮಳೆಗಾಲದಲ್ಲಿ ಆರೋಗ್ಯದ ಕಡೆ ಇರಲಿ ಕಾಳಜಿ: ಟೈಫಾಯಿಡ್​ ಜ್ವರಕ್ಕೆ ಮನೆಯಲ್ಲೇ ಇದೆ ಮದ್ದು..!

ಹಾಗೆಯೇ ಹೆಚ್ಚಿನ ನಾರಿನಂಶ ಇರುವ ತರಕಾರಿಗಳಾದ ಕಾಲೇ, ಪರಂಗಿಹಣ್ಣು, ಸಿಹಿಗೆಣಿಸು, ಕಂದು ಬಣ್ಣದ ಅಕ್ಕಿ, ಪುಡಿ ಮಾಡಿದ ಅಕ್ಕಿ ಮತ್ತು ಜೋಳ ಬೆಣ್ಣೆ, ತುಪ್ಪ, ಪೇಸ್ಟ್ರಿಗಳನ್ನು ಸೇವಿಸಬೇಡಿ.

zahir | news18
Updated:July 4, 2019, 4:01 PM IST
ಮಳೆಗಾಲದಲ್ಲಿ ಆರೋಗ್ಯದ ಕಡೆ ಇರಲಿ ಕಾಳಜಿ: ಟೈಫಾಯಿಡ್​ ಜ್ವರಕ್ಕೆ ಮನೆಯಲ್ಲೇ ಇದೆ ಮದ್ದು..!
@Medical News Today
  • News18
  • Last Updated: July 4, 2019, 4:01 PM IST
  • Share this:
ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದ ಬೆನ್ನಲ್ಲೇ ಅನಾರೋಗ್ಯದ ಸಮಸ್ಯೆಗಳೂ ಸಹ ಕಾಣಿಸಿಕೊಳ್ಳಲಿದೆ. ಇದೇ ಸಮಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜ್ವರ ಎಂದರೆ ಟೈಫಾಯಿಡ್. ಸಾಲ್ಮೊನೆಲ್ಲಾ ಎಂಟಾರಿಕಾ ಟೈಪೈ ಎನ್ನುವ ಬ್ಯಾಕ್ಟೀರಿಯಾದಿಂದ ಟೈಫಾಯಿಡ್ ಜ್ವರ ಉಂಟಾಗುತ್ತದೆ. ಈ ಜ್ವರವು ನಾವು ಸೇವಿಸುವ ಆಹಾರ ಮತ್ತು ನೀರಿನಿಂದ ಬರುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮಳೆಗಾಲದಲ್ಲಿ ನಿಮ್ಮ ಆಹಾರದ ಮೇಲೆ ನಿಗಾವಹಿಸಬೇಕಾಗುತ್ತದೆ. ಅದರಲ್ಲೂ ಮಾರುಕಟ್ಟೆಯಲ್ಲಿ ತೆರೆದಿಟ್ಟಿರುವ ಆಹಾರಗಳನ್ನು ಬೇಯಿಸದೇ ತಿನ್ನದಿರುವುದು ಉತ್ತಮ.

ಟೈಫಾಯಿಡ್ ಜ್ವರಕ್ಕೆ ಮುಖ್ಯ ಕಾರಣಗಳು:
ಕಲುಷಿತ ನೀರು ಮತ್ತು ಆಹಾರದ ಸೇವನೆಯಿಂದ ಟೈಫಾಯಿಡ್ ಜ್ವರ ಬರುತ್ತದೆ. ನೀವು ತಿಳಿಯದೇ ಸೇವಿಸಿದ ಕಲುಷಿತ ಆಹಾರದಲ್ಲಿರುವ ಬ್ಯಾಕ್ಟೀರಿಯಾ ರಕ್ತವನ್ನು ಸೇರಿ, ಪಿತ್ತಕೋಶ, ಪಿತ್ತರಸ ನಾಳ ಅಥವಾ ಯಕೃತ್ತು, ಕರಳುಗಳಲ್ಲಿ ನೆಲೆಸುತ್ತವೆ. ಸೋಂಕುಂಟಾದ ವ್ಯಕ್ತಿಯ ಮಲದಲ್ಲಿ ಈ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ರೋಗ ಹರಡುವ ಸಾಧ್ಯತೆಯಿರುತ್ತದೆ. ಹಾಗೆಯೇ ರೋಗಿಯು ಬಳಸಿದ ಬಟ್ಟೆ ಮತ್ತು ವಸ್ತುಗಳನ್ನು ಬಳಸುವುದರಿಂದ ಕೂಡ ಬ್ಯಾಕ್ಟೀರಿಯಾ ನಿಮ್ಮ ದೇಹ ಪ್ರವೇಶಿಸುವ ಸಾಧ್ಯತೆಯಿರುತ್ತದೆ ಎನ್ನುತ್ತಾರೆ ವೈದ್ಯರು.

ರೋಗಲಕ್ಷಣಗಳು:
ಟೈಫಾಯಿಡ್​ ಜ್ವರ ಸಂಪೂರ್ಣ ಲಕ್ಷಣಗಳು ಗೋಚರಿಸಲು ಸಾಮಾನ್ಯವಾಗಿ ಒಂದು ವಾರಗಳ ಕಾಲಬೇಕು. ಆರಂಭದಲ್ಲಿ ತೀವ್ರ ಸ್ವರೂಪದ ಜ್ವರ, ತಲೆನೋವು, ಎದೆ ಬಿಗಿತ, ಹಸಿವು ಇಲ್ಲದಿರುವುದು, ಕೆಮ್ಮು, ಸುಸ್ತು, ಅತಿಸಾರ, ಮಲಬದ್ಧತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಜ್ವರದ ತೀವ್ರತೆ 103 ರಿಂದ 104 ಡಿಗ್ರಿವರೆಗೆ ಏರಬಹುದು.

ಟೈಫಾಯಿಡ್ ಜ್ವರಕ್ಕೆ ಮನೆಮದ್ದು:-

ದ್ರವಾಹಾರ ಸೇವಿಸಿ: ಟೈಫಾಯಿಡ್​ ಕಾಣಿಸಿಕೊಂಡರೆ ಮುಖ್ಯವಾಗಿ ದೇಹವು ನಿರ್ಜಲೀಕರಣ ಸಮಸ್ಯೆಗೆ ಈಡಾಗುತ್ತದೆ. ಹೀಗಾಗಿ ರೋಗಿಯು ಎಲ್ಲಾ ಸಮಯದಲ್ಲೂ ಸಾಕಷ್ಟು ದ್ರವ ರೂಪದ ಆಹಾರಗಳನ್ನು ಸೇವಿಸಬೇಕು. ಇದರಿಂದ ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳಬಹುದು. ಈ ಜ್ವರ ಬಂದರೆ ರೋಗ ನಿರೋಧಕ ಶಕ್ತಿಯು ಕುಂಠಿತವಾಗುತ್ತದೆ. ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಾದ ಪೋಷಕಾಂಶಗಳನ್ನು ದ್ರವರೂಪದಲ್ಲಿ ಸೇವಿಸುವುದು ಉತ್ತಮ. ಅದರಲ್ಲೂ ಹಣ್ಣಿನ ರಸ, ಖನಿಜಯುಕ್ತ ನೀರನ್ನು(ಮಿನರಲ್ ನೀರು) ಹೆಚ್ಚಾಗಿ ಸೇವಿಸಿ. ಹಾಗೆಯೇ ಮೂಸಂಬಿ ಹಣ್ಣನ್ನು ತಿನ್ನುವುದು ಉತ್ತಮ.

ಆ್ಯಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್ ಅಸಿಟಿಕ್ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ಟೈಫಾಯಿಡ್​ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯ ದೇಹದಿಂದ ಶಾಖವನ್ನು ಹೊರಹಾಕುತ್ತದೆ. ಆ ಮೂಲಕ ಜ್ವರದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ:
ಬೆಳ್ಳುಳ್ಳಿ ಅನೇಕ ಆರೋಗ್ಯಕಾರಿ ಅಂಶಗಳಿರುವುದು ಗೊತ್ತಿದೆ. ಇದು ಕೂಡ ಟೈಫಾಯಿಡ್ ಜ್ವರವನ್ನು ಗುಣಪಡಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿರುವುದರಿಂದ ರಕ್ತ ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ಮೂತ್ರಪಿಂಡವು ದೇಹದ ಕಲ್ಮಷಗಳನ್ನು ಹೊರ ಹಾಕಲು ಸಹಕಾರಿಯಾಗಲಿದೆ. ಇದನ್ನು ಅರ್ಧ ಬೇಯಿಸಿ ಅಥವಾ ಹಸಿಯಾಗಿ ಕೂಡ ತಿನ್ನಬಹುದು.

ತುಳಸಿ ಎಲೆ:
ಟೈಫಾಯಿಡ್ ಜ್ವರಕ್ಕೆ ಮತ್ತೊಂದು ರಾಮಬಾಣ ಎಂದರೆ ತುಳಸಿ ಎಲೆ. ಜ್ವರ ಕಾಣಿಸಿಕೊಂಡರೆ ಸಾಧ್ಯವಾದಷ್ಟು ತುಳಸಿ ಎಲೆಯ ರಸವನ್ನು ಸೇವಿಸಿ. ಇದರಿಂದ ಜ್ವರವು ಬೇಗನೆ ಗುಣಮುಖವಾಗುತ್ತದೆ. ಸಾಮಾನ್ಯವಾಗಿ ಟೈಫಾಯಿಡ್ ಲಸಿಕೆಗೆ ತುಳಸಿ ಎಲೆಗಳನ್ನು ಬಳಸಲಾಗುತ್ತದೆ.

ಬಿಸಿ ನೀರಿನ ಸ್ನಾನ:
ಸಾಮಾನ್ಯವಾಗಿ ಟೈಫಾಯಿಡ್ ಜ್ವರ ಕಾಣಿಸಿಕೊಂಡರೆ ಆಯಾಸ ಉಂಟಾಗುತ್ತದೆ. ಈ ಸುಸ್ತನ್ನು ಹೋಗಲಾಡಿಸಲು ಬಿಸಿನೀರಿನ ಸ್ನಾನ ಉತ್ತಮ. ಹಾಗೆಯೇ ಜ್ವರದಿಂದ ಸಂಪೂರ್ಣವಾಗಿ ಗುಣವಾಗುವವರೆಗೆ ತಣ್ಣೀರಿನಿಂದ ಸ್ನಾನ ಮಾಡಬೇಡಿ.

ಇದನ್ನೂ ಗಮನಿಸಿ:

ಇನ್ನು ಭೇಧಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಕಡಿಮೆ ನಾರಿನಾಂಶದ ಪದಾರ್ಥಗಳಾದ ಹಣ್ಣುಗಳು, ಆಲೂಗೆಡ್ಡೆ ಇತ್ಯಾದಿಯನ್ನು ಸೇವಿಸಿರಿ ಭೇದಿ ಆಗುವುದನ್ನು ತಪ್ಪಿಸಬಹುದು. ಹಾಗೆಯೇ ಸಣ್ಣ ನಾರು ಅಥವಾ ಆಹಾರದಲ್ಲಿ ಬೇಗನೆ ಕರಗುವಂತಹ ನಾರಿನಾಂಶವಿರುವ ತರಕಾರಿಗಳಾದ ಪಾಲಕ್ ಸೊಪ್ಪು, ಎಲೆಕೋಸು, ಹೂಕೋಸು, ಕ್ಯಾರೆಟ್​ಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು.

ಅದೇ ರೀತಿ ಖಾರ ಪದಾರ್ಥಗಳಿಂದ ದೂರವಿರುವುದು ಉತ್ತಮ. ಮುಖ್ಯವಾಗಿ ರೋಗಿಗೆ ನೀಡಲಾಗುವ ಆಹಾರದಲ್ಲಿ ಮೆಣಸಿಕಾಯಿಯ ಬಳಕೆ ಕಡಿಮೆಯಿರಲಿ. ಹಾಗೆಯೇ ಹೆಚ್ಚಿನ ನಾರಿನಂಶ ಇರುವ ತರಕಾರಿಗಳಾದ ಕಾಲೇ, ಪರಂಗಿಹಣ್ಣು, ಸಿಹಿಗೆಣಿಸು, ಕಂದು ಬಣ್ಣದ ಅಕ್ಕಿ, ಪುಡಿ ಮಾಡಿದ ಅಕ್ಕಿ ಮತ್ತು ಜೋಳ ಬೆಣ್ಣೆ, ತುಪ್ಪ, ಪೇಸ್ಟ್ರಿಗಳು, ಕರಿದ ಎಣ್ಣೆ ಪದಾರ್ಥಗಳು, ಐಸ್ ಕ್ರೀಮ್, ಕ್ರೀಮ್​ಗಳನ್ನು ಕಡ್ಡಾಯವಾಗಿ ತ್ಯಜಿಸಬೇಕು.
First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ