Health Tips: ದಿಢೀರ್ ಫುಡ್ ಪಾಯ್ಸನ್ ಆದ್ರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

ಸಾಮಾನ್ಯವಾಗಿ ನಾವು ಪ್ರತಿದಿನ ತಿನ್ನುವ ಆಹಾರಕ್ಕಿಂತ ಹೊಸದೇನಾದರೂ ತಿಂದರೆ ಅದು ನಮ್ಮ ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತವೆ. ಅಷ್ಟೇ ಅಲ್ಲದೆ ನಾವು ತಿನ್ನುವ ಆಹಾರವು ಶುಚಿ ಇಲ್ಲದಿದ್ದರೆ ಅಥವಾ ಅರ್ಧ ಬೇಯಿಸಿದ ಆಹಾರಗಳನ್ನು ಸೇವಿಸಿದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಾಮಾನ್ಯವಾಗಿ ನಾವು ಪ್ರತಿದಿನ ತಿನ್ನುವ ಆಹಾರಕ್ಕಿಂತ (Food) ಹೊಸದೇನಾದರೂ ತಿಂದರೆ ಅದು ನಮ್ಮ ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತವೆ. ಅಷ್ಟೇ ಅಲ್ಲದೆ ನಾವು ತಿನ್ನುವ ಆಹಾರವು ಶುಚಿ (Clean) ಇಲ್ಲದಿದ್ದರೆ ಅಥವಾ ಅರ್ಧ ಬೇಯಿಸಿದ ಆಹಾರಗಳನ್ನು ಸೇವಿಸಿದರೆ ಫುಡ್ ಪಾಯಿಸನ್  (Food Poision) ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಹೊಟ್ಟೆ ನೋವು ಅಥವಾ ವಾಂತಿ (Vomiting)-ಬೇಧಿ  ಆರೋಗ್ಯ (Health) ಸಮಸ್ಯೆಯೂ ಬರಬಹುದು. ಹೊಟ್ಟೆಯ ಅಸ್ವಸ್ಥತೆಗೆ ಸಹಾಯ ಮಾಡುವ ಹಲವಾರು ನೈಸರ್ಗಿಕ ಪರಿಹಾರಗಳಿವೆ ಆದ್ದರಿಂದ ಈ ರೀತಿಯ ಸಮಸ್ಯೆಗಳಿಗೆ ಮನೆಯಲ್ಲಿ ಯಾವ ರೀತಿಯ ಮದ್ದುಗಳನ್ನು ಸೇವಿಸಬಹುದು ಎನ್ನುವ ಬಗ್ಗೆ ಲೇಖನದಲ್ಲಿ ತಿಳಿಯೋಣ.

  ಪುದೀನಾ ಚಹಾವನ್ನು ಕುಡಿಯುವುದು ಒಳ್ಳೆಯದು

  ನೀವು ಕೆಲವೊ೦ದು ಅಜೀರ್ಣರೋಗಗಳಿ೦ದ ಬಳಲುತ್ತಿದ್ದಲ್ಲಿ, ಪುದಿನಾವನ್ನು ಮನೆಮದ್ದಿನ ರೂಪದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬಹುದು. ಪುದೀನಾವನ್ನು ಸೇವಿಸಲು ಸುಲಭವಾದ ಮಾರ್ಗವೆಂದರೆ ಪುದೀನಾ ಚಹಾವನ್ನು ಕುಡಿಯುವುದು. ಪುದೀನಾ ಜಠರಗರುಳಿನ ಪ್ರದೇಶದಲ್ಲಿ ಕಂಡುಬರುವ ನಯವಾದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

  ಇದನ್ನೂ ಓದಿ: Homemade CC Cream: ಮನೆಯಲ್ಲಿಯೇ ಸಿಸಿ ಕ್ರೀಮ್ ತಯಾರಿಸುವುದು ಹೇಗೆ? ಇದರ ಪ್ರಯೋಜನಗಳೇನು?

  ಶುಂಠಿ ನರಮಂಡಲ ಮತ್ತು ಹೊಟ್ಟೆಯ ಸ್ನಾಯುಗಳನ್ನು ಶಾಂತಗೊಳಿಸುತ್ತದೆ

  ಅರ್ಧ ಚಮಚ ಶುಂಠಿ ಪುಡಿಯನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಬೆಳಿಗ್ಗೆ ಕುಡಿಯಿರಿ. ಸಿಹಿ ರುಚಿಗೆ ಜೇನುತುಪ್ಪ ಸೇರಿಸಿ. ಇದು ಬೆಳಗಿನ ಬೇನೆ ಮತ್ತು ವಾಕರಿಕೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅದರಂತೆ ಸುಲಭವಾಗಿ ಜೀರ್ಣವಾಗದ ಆಹಾರ ಸೇವಿಸಿದಾಗ ಒಂದು ತುಂಡು ಶುಂಠಿ ತಿಂದರೆ ಬೇಗನೇ ಜೀರ್ಣವಾಗುತ್ತದೆ. ಅಥವಾ ಚಹಾ ಮಾಡುವಾಗ ಚಿಕ್ಕ ಚೂರು ಶುಂಠಿ ಸೇರಿಸಿ ಮಾಡಿದರೂ, ಜೀರ್ಣಕ್ರಿಯೆ ಸುಗಮವಾಗುತ್ತದೆ. ಶುಂಠಿ ನರಮಂಡಲ ಮತ್ತು ಹೊಟ್ಟೆಯ ಸ್ನಾಯುಗಳನ್ನು ಶಾಂತಗೊಳಿಸುತ್ತದೆ, ವಾಕರಿಕೆ ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳನ್ನು ಒಳಗೊಂಡಿರುವ ಲಾಲಾರಸದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.

  ಪ್ರೋಬಯಾಟಿಕ್‌ಗಳೊಂದಿಗೆ ಆಹಾರವನ್ನು ಸೇವಿಸಿ

  ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಮತ್ತು ಇಂಟಿಗ್ರೇಟಿವ್ ಹೆಲ್ತ್ ಪ್ರಕಾರ, ಪ್ರೋಬಯಾಟಿಕ್ ಭರಿತ ಆಹಾರಗಳನ್ನು ತಿನ್ನುವುದು ಮಲಬದ್ಧತೆಯನ್ನು ಸರಾಗಗೊಳಿಸುವ ಮತ್ತು ಅತಿಸಾರವನ್ನು ತಡೆಗಟ್ಟುವುದು ಸೇರಿದಂತೆ ಹಲವಾರು ಜಠರಗರುಳಿನ ಸಮಸ್ಯೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಬಾಳೆಹಣ್ಣು, ಓಟ್ ಮೀಲ್, ಮೊಟ್ಟೆಯ ಬಿಳಿ ಭಾಗಗಳು, ಜೇನುತುಪ್ಪ, ಪೀನಟ್ ಬಟರ್, ಹಿಸುಕಿದ ಆಲೂಗಡ್ಡೆ, ಅಕ್ಕಿ, ಟೋಸ್ಟ್ ನಂತಹ ವಸ್ತುಗಳನ್ನು ಸೇವಿಸಲು ಪ್ರಯತ್ನಿಸಿ.

  ಸಾಧ್ಯವಾದಷ್ಟು ನೀರು ಕುಡಿಯಿರಿ

  ಒಂದು ಲೋಟ ನೀರು ದೇಹದ ಅನೇಕ ಕಾಯಿಲೆಗಳಿಗೆ ಸರಳ ಪರಿಹಾರವಾಗಿದೆ. ದೇಹಕ್ಕೆ ದ್ರವ ಆಹಾರದ ಸೇವನೆ ಕಡಿಮೆಯಾದಾಗ ಮಲಬದ್ಧತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೆಗ್ನೀಷಿಯಂ ಮತ್ತು ಸೋಡಿಯಂ ಸಮೃದ್ಧವಾಗಿರುವ ವಾಟರ್ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಗಾಗಿ ಕರುಳಿನ ಆರೋಗ್ಯ ಸುಧಾರಣೆಯಾಗಲಿದೆ.

  ಇದನ್ನೂ ಓದಿ: Black Beans Benefits: ಕಪ್ಪು ಬೀನ್ಸ್ ನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೋಡಿ

  ಬೆಳ್ಳುಳ್ಳಿ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ

  ಇದು ಪ್ರಬಲವಾದ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಪರಿಣಾಮಗಳಿಂದಾಗಿ ಅತಿಸಾರ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ದು ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ನೀರಿನೊಂದಿಗೆ ತೆಗೆದುಕೊಂಡರೆ ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ದೂರ ಮಾಡಬಹುದು. ಇನ್ನು ಬೆಳ್ಳುಳ್ಳಿಯ ವಾಸನೆಯನ್ನು ತಡೆದುಕೊಳ್ಳಬಹುದು ಎನ್ನುವ ಹಾಗಿದ್ದರೆ ಬೆಳ್ಳುಳ್ಳಿಯ ರಸ ತೆಗೆದು ಸೇವಿಸುವುದು ಕೂಡಾ ಒಳ್ಳೆಯದು.

  ಜೇನು ಒಂದು ಅತ್ಯುತ್ತಮವಾದ ಬ್ಯಾಕ್ಟೀರಿಯಾನಿವಾರಕವಾಗಿದೆ

  ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕಚಮದ ಜೇನು ಬೆರೆಸಿ ದಿನದಲ್ಲಿ ಮೂರು ಬಾರಿ ಕುಡಿದರೆ ವಿಷಾಹಾರದ ಪ್ರಭಾವ ಕಡಿಮೆಯಾಗುತ್ತದೆ. ವಿಶೇಷವಾಗಿ ಹೊಟ್ಟೆಯಲ್ಲಿ ಉರಿ ಹೆಚ್ಚಾಗಿದ್ದು ಹುಳಿತೇಗು ಆವರಿಸಿದ್ದರೆ ಈ ವಿಧಾನ ಅತ್ಯುತ್ತಮವಾದ ಪರಿಹಾರ ಒದಗಿಸುತ್ತದೆ.
  Published by:Swathi Nayak
  First published: