Herbal Tea Shops: ಹರ್ಬಲ್​ ಟೀ ಕುಡಿಬೇಕಾ? ಹಾಗಾದ್ರೆ ಬೆಂಗಳೂರಿನ ಈ ಶಾಪ್​ಗಳಿಗೆ ಹೋಗಿ ರಿಫ್ರೆಶ್​ ಆಗಿ

Near Me Stories: ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಕಷಾಯ ಅಥವಾ ಹರ್ಬಲ್ ಟೀ ಉತ್ತಮವಾಗಿ ಸಿಗುತ್ತದೆ. ಇದು ನಿಮ್ಮನ್ನ ರಿಫ್ರೆಶ್ ಮಾಡುವುದಲ್ಲದೇ ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಬೆಂಗಳೂರಿನಲ್ಲಿ ಬೆಸ್ಟ್ ಹರ್ಬಲ್ ಟೀ ಸಿಗುವ ಅಂಗಡಿಗಳ ಲಿಸ್ಟ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನಲ್ಲಿ (Bengaluru) ಹವಾಮಾನ ಬದಲಾಗಿದೆ. ಬೆಳಗ್ಗೆ ಉರಿ ಬಿಸಿಲಿದ್ದರೆ (Sunny)  ಸಂಜೆ ಧಾರಾಕಾರ ಮಳೆ (Heavy Rain)ಯಾಗುತ್ತದೆ. ಅದರ ನಡುವೆ ಕೊರೊನಾ (Corona) ಸಹ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯದ (Health)  ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಸಹಾಯ ಮಾಡುತ್ತದೆ. ಅದರಲ್ಲೂ ಈ ಹವಾಮಾನದಲ್ಲಿ ಕಷಾಯ ಅಥವಾ ಹರ್ಬಲ್ ಟೀ (Herbal Tea) ಬೆಸ್ಟ್. ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಕಷಾಯ ಅಥವಾ ಹರ್ಬಲ್ ಟೀ ಉತ್ತಮವಾಗಿ ಸಿಗುತ್ತದೆ. ಇದು ನಿಮ್ಮನ್ನ ರಿಫ್ರೆಶ್ ಮಾಡುವುದಲ್ಲದೇ ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಬೆಂಗಳೂರಿನಲ್ಲಿ ಬೆಸ್ಟ್ ಹರ್ಬಲ್ ಟೀ ಸಿಗುವ ಅಂಗಡಿಗಳ ಲಿಸ್ಟ್ ಇಲ್ಲಿದೆ.

ಶಾರೋನ್ ಟೀ ಸ್ಟಾಲ್- ಇಂದಿರಾ ನಗರ ಮತ್ತು ತಿಪ್ಪಸಂದ್ರ
ಈ ಟೀ ಸ್ಟಾಲ್ನಲ್ಲಿ 50 ಕ್ಕೂ ಹೆಚ್ಚು ಬಗೆಯ ಹರ್ಬಲ್ ಟೀಗಳು ಲಭ್ಯವಿದ್ದು, ಬ್ಲೂ ಟೀ, ಶುಂಠಿ ಟೀ ಹೀಗೆ ನಿಮಗೆ ಬೇಕಾದ ವಿಧದಲ್ಲಿ ಸಿಗುತ್ತದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದ ನಂತರ ಪದೇ ಪದೇ ಹೋಗದೇ ಇರಲಾರಿರಿ.

ವಿಳಾಸ: XJFW + ವಾರ್ಮ್, ಹೊಸ ತಿಪ್ಪಸಂದ್ರ ಮುಖ್ಯ ರಸ್ತೆ, ಹೆಚ್ಎಎಲ್ 3ನೇ ಸ್ಟೇಜ್, ಹೊಸ ಕಾಲೋನಿ 515, ಹೊಸ ತಿಪ್ಪಸಂದ್ರ, ಬೆಂಗಳೂರು, ಕರ್ನಾಟಕ 2001
ಸಮಯ: ಬೆಳಗ್ಗೆ 6 ರಿಂದ ರಾತ್ರಿ 8ರ ವರೆಗೆ
ಸಮಯ: 097384 47078

ಮೈ ಟೀ ಹೌಸ್, ಕೋರಮಂಗಲ
ಒಂದು ಕಪ್ ಟೀಯಲ್ಲಿ ಎಲ್ಲಾ ಒತ್ತಡಗಳನ್ನು ನಿವಾರಣೆ ಮಾಡುವ ಶಕ್ತಿ ಇರುತ್ತದೆ ಎಂದರೆ ತಪ್ಪಲ್ಲ. ಸಂಜೆಯ ಮಳೆಯ ನಡುವೆ ಬಿಸಿ ಬಿಸಿ ಶುಠಿ, ಲೆಮೆನ್ ಟೀ ಇದ್ದರೆ ಆಹಾ, ಅದರ ರುಚಿಯೇ ಬೇರೆ. ಇನ್ನು ಇಲ್ಲಿನ ಜರ್ಮೇನಿಯಮ್ ಟೀ ಅನ್ನು ಟ್ರೈ ಮಾಡಲೇಬೇಕು.

ವಿಳಾಸ: # 126, 1 ನೇ ಎ ಕ್ರಾಸ್, ಜ್ಯೋತಿ ನಿವಾಸ್ ಮುಖ್ಯ ರಸ್ತೆ ಜಂಕ್ಷನ್, KHB ಕಾಲೋನಿ, ಕೋರಮಂಗಲ 5 ನೇ ಬ್ಲಾಕ್, ಬೆಂಗಳೂರು, ಕರ್ನಾಟಕ 560095
ಸಮಯ: ಬೆಳಗ್ಗೆ 7 ರಿಂದ ಸಂಜೆ 10
ಮೊಬೈಲ್ ನಂಬರ್: 080 2553 3356

ದಿ ಟೀ ಜರ್ನಿ, ಇಂದಿರಾ ನಗರ
ಈ ಸಣ್ಣ ಟೀ ಕೆಫೆಯು ಚಹಾ ಪ್ರಿಯರ ನೆಚ್ಚಿನ ಸ್ಥಳವಾಗುವುದರಲ್ಲಿ ಅನುಮಾನವಿಲ್ಲ. ನಿಮ್ಮ ನೆಚ್ಚಿನ ಚಹಾದ ಒಂದು ಕಪ್ ಜೊತೆ ಇಲ್ಲಿ ಸಂಜೆ ಕಳೆಯುವುದೇ ಅದ್ಬುತ ಅನುಭವ ಎನ್ನಬಹುದು. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಇಲ್ಲಿ ನೀವೇ ನಿಮಗೆ ಬೇಕಾದ ಚಹಾವನ್ನು ತಯಾರಿಸಬಹುದು. ಇದಕ್ಕಿಂತ ಸಂತೋಷದ ವಿಚಾರ ಮತ್ತೊಂದು ಬೇಕಾ? ನೀವು ನಿಜಕ್ಕೂ ಒಮ್ಮೆಯಾದರೂ ಹೋಗಲೇಬೇಕಾದ ಟೀ ಕೆಫೆ ಇದು ಎಂದರೆ ಅತಿಶಯೋಕ್ತಿಯಲ್ಲ.

ವಿಳಾಸ: #3167, ಇಎಸ್ಐ ಆಸ್ಪತ್ರೆ ರಸ್ತೆ, ಹೆಚ್ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು, ಕರ್ನಾಟಕ.
ಸಮಯ: ಬೆಳಗ್ಗೆ 10 ರಿಂದ ರಾತ್ರಿ 11
ಮೊಬೈಲ್ ನಂಬರ್: 098447 97061

ಇದನ್ನೂ ಓದಿ: ರಾಜರಾಜೇಶ್ವರಿ ನಗರದ ಕಡೆ ಹೋದ್ರೆ ಈ ರೆಸ್ಟೋರೆಂಟ್ ಗಳಿಗೆ ಹೋಗೋದು ಮಿಸ್ ಮಾಡ್ಬೇಡಿ

ಸಬ್ಲೈಮ್ ಹೌಸ್ ಆಫ್ ಟೀ

ಈ ಕೆಫೆ ನೋಡಲು ಸ್ವಲ್ಪ ಕಾಸ್ಟ್ಲಿ ಅನಿಸಬಹುದು, ಆದರೆ ಇಲ್ಲಿನ ಚಹಾ ಮಾತ್ರ ಎಲ್ಲವನ್ನು ಮೀರಿಸುವಂತಿದೆ. ಬೆಂಗಳೂರಿನಲ್ಲಿ ಇದರ 2 ಶಾಖೆಯಿದ್ದು, ಶುಂಠಿ, ಮಸಾಲಾ, ಐಸ್ ಚಹಾ ಹೀಗೆ ಇಲ್ಲಿ ಹಲವಾರು ವಿಧಗಳು ಲಭ್ಯವಿದೆ. ಚಾಯ್ ಪಾಯಿಂಟ್ ಎಲ್ಲಾ ಚಾಯ್ ಪ್ರಿಯರಿಗೆ ಇಷ್ಟವಾಗುತ್ತದೆ. ಇಲ್ಲಿನಿಂದ ನೀವು ವಿಭಿನ್ನ ರೀತಿಯ ಚಹಾ ಪೌಡರ್ಗಳನ್ನು ಸಹ ಖರೀದಿ ಮಾಡಬಹುದು. ಅತ್ಯಂತ ವಿಭಿನ್ನ ಶ್ರೇಣಿಯ ಚಹಾವನ್ನು ಹೊಂದಿರುವ ಮುದ್ದಾದ ಕೆಟಲ್ಗಳು ಯಾವುದೇ ಚಹಾ ಪ್ರಿಯರನ್ನು ಮೆಚ್ಚಿಸಲು ಖಚಿತವಾಗಿದೆ.

ವಿಳಾಸ: ಯುಬಿ ಸಿಟಿ, ಸಬ್ಲೈಮ್ ಹೌಸ್ ಆಫ್ ಟೀ 2ನೇ ಮಹಡಿ, ವಿಟ್ಟಲ್ ಮಲ್ಯ ರಸ್ತೆ, ಬೆಂಗಳೂರು, ಕರ್ನಾಟಕ 560001
ಸಮಯ: ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆ
ಮೊಬೈಲ್ ನಂಬರ್: 063664 47869

ಇನ್ಫಿನಿಟಿಯ ಟೀ ರೂಮ್ ಮತ್ತು ಟೀ ಸ್ಟೋರ್
ಊಲಾಂಗ್ಸ್ನಿಂದ ವಿಭಿನ್ನ ಗಿಡಮೂಲಿಕೆ ಮತ್ತು ಹಣ್ಣಿನ ಮಿಶ್ರಣಗಳು, ಡಾರ್ಜಿಲಿಂಗ್ನಿಂದ ಅಸ್ಸಾಂ, ಗ್ರೀನ್ ಮತ್ತು ವೈಟ್ ಚಹಾಗಳು, ಹೂವಿನ ಚಹಾಗಳು ಕಡಕ್ ಚಾಯ್ ಹೀಗೆ ಇನ್ಫಿನಿಟಿಯಾ ಎಲ್ಲವನ್ನೂ ಹೊಂದಿದೆ. ಈ ಕೊರೊನಾ ಸಮಯದಲ್ಲಿ ಇಲ್ಲಿನ ಚಹಾಗಳು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಎನ್ನಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ

ಸ್ಥಳ: 26, ಇಎಸ್ಐ ಆಸ್ಪತ್ರೆ ರಸ್ತೆ, ಎಚ್ಎಎಲ್ 2 ನೇ ಹಂತ, 100 ಅಡಿ ರಸ್ತೆ, ಇಂದಿರಾನಗರ
ಸಮಯ: ಬೆಳಗ್ಗೆ 8 ರಿಂದ ರಾತ್ರಿ 10
Published by:Sandhya M
First published: