Food for Heart: ದಿಢೀರ್ ಎಂದು ಬರುವ ಹೃದಯಾಘಾತವನ್ನು ತಡೆಯುತ್ತವೆ ಈ ಆಹಾರಗಳು..!

Heart attack :ಕೊಲೆಸ್ಟ್ರಾಲ್ ಕಡಿಮೆ ಮಾಡುವ ಪ್ಲೇಕ್ ರಚನೆಯನ್ನು ಕಡಿಮೆಮಾಡಲು ಸಿಟ್ರಸ್ ಹಣ್ಣುಗಳು ಸಹಾಯಕಾರಿ. ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಪಾರ್ಶ್ವವಾಯು ಮತ್ತು ಇತರ ಹೃದಯದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು

 ಹೃದಯಾಘಾತ

ಹೃದಯಾಘಾತ

  • Share this:
    ಇತ್ತೀಚಿನ ದಿನಗಳಲ್ಲಿ ನಾವು ಗಮನಿಸಿರಬಹುದು ಎಲ್ಲಾದರೂ ಸಾವು(Death) ಸಂಭವಿಸಿದೆ ಎಂದರೆ ಆ ಸಾವು ಹೃದಯಾಘಾತದಿಂದ (Heart attack) ಆಗಿದೆ ಎಂದು ಹೆಚ್ಚಾಗಿ ಹೇಳುವ ಜನರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಅದೇ ಹೃದಯಾಘಾತದಿಂದ ಆಸ್ಪತ್ರೆಗೆ(Hospital) ದಾಖಲಾಗುತ್ತಿರುವ ಅವರ ಸಂಖ್ಯೆ ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಅಧಿಕವಾಗಿದೆ . ಆದರೆ ಈ ರೀತಿ ಹೃದಯಾಘಾತ ಆಗುವುದಕ್ಕೆ ನಾವು ಪ್ರತಿನಿತ್ಯ ಸೇವಿಸುವ ಆಹಾರ(Food) ಪದಾರ್ಥಗಳು ಹಾಗೂ ನಮ್ಮ ಜೀವನ ಶೈಲಿಯೇ(Life style) ಕಾರಣವಾಗಿದೆ..ಕೆಲವೊಮ್ಮೆ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಅಧಿಕ ಕೊಬ್ಬಿನಂಶ (Cholesterol)ಇರುವುದರಿಂದ ಇದು ನಮ್ಮ ಹೃದಯದ ಮೇಲೆ ನೇರ ಹಾನಿ ಮಾಡುವ ಸಾಧ್ಯತೆ ಇರುತ್ತದೆ.. ಹೀಗಾಗಿ ಹೃದಯಾಘಾತ ವಾಗುವುದನ್ನು ತಡೆಯಲು ಯಾವ ಆಹಾರಗಳು ಸೇವಿಸಬೇಕು ಎಂಬುದು ಬಹುಮುಖ್ಯ.. ಹೀಗಾಗಿ ಇದರ ಬಗ್ಗೆ ಮಾಹಿತಿ ಇಲ್ಲಿದೆ..

    1) ಅಗಸೆ ಬೀಜಗಳು

    ಅಗಸೆ ಬೀಜಗಳು ನಮ್ಮ ಅಪಧಮನಿಗಳಿಗೆ ಉತ್ತಮವಾದ ಸೂಪರ್ ಪುಡ್ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.ಅಗಸೆಬೀಜದ ಅಂಶಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ನಿಯಂತ್ರಣ ಮಾಡುತ್ತದೆ ..

    ಇದನ್ನೂ ಓದಿ :ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ತಗ್ಗಿಸಲು ಇಲ್ಲಿವೆ ಸಲಹೆಗಳು

    2)ಬೀನ್ಸ್

    ಹುರುಳಿ ಮತ್ತು ಇದು ಹೃದಯಕ್ಕೆ ಆರೋಗ್ಯಕರ ಆಹಾರ ಎಂದು ಹೆಸರುವಾಸಿಯಾಗಿದೆ. ಹುರುಳಿಕಾಯಿ ಸೇವನೆ ಪ್ಲೇಕ್ ರಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದು.. ಬೀನ್ಸ್ ಸೇವನೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ

    3)ಮೀನು
    ಮೀನಿನಲ್ಲಿ ಒಮೆಗಾ-3ಕೊಬ್ಬಿನಾಮ್ಲಗಳು ತುಂಬಿವೆ. ಮತ್ತು ಈ ಅಂಶಗಳು ಸೆಲ್ಯುಲರ್ ಅಂಟಿ ಕೊಳ್ಳುವಿಕೆ ಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.. ಹೀಗಾಗಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಮೀನಿನ ಸೇವನೆ ಕಡಿಮೆ ಮಾಡುತ್ತದೆ. ಜೊತೆಗೆ ಅಪಧಮನಿಗಳಲ್ಲಿ ಆಗುವ ಪ್ಲೇಕ್ ರಚನೆಯನ್ನು ಸಹ ಮೀನು ಸೇವನೆ ಕಡಿಮೆ ಮಾಡಲಿದೆ..

    4 )ಅರಿಷಿಣ

    ಅರಿಶಿನವು ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ.. ಇದು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ.. ಅರಿಶಿನ ಅಪಧಮನಿಗಳಲ್ಲಿ ಕೊಬ್ಬಿನ ಅಂಶಗಳು ಅಭಿವೃದ್ಧಿಯಾಗುವುದು ತಡೆಯುತ್ತದೆ.. ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಕಾಲಾನಂತರದಲ್ಲಿ ಅಪಧಮನಿಗಳು ಭೇಟಿಯಾಗುವುದನ್ನು ತಡೆಯಲು ಕೆಲಸ ಮಾಡುತ್ತದೆ..

    ಇದನ್ನೂ ಓದಿ :ಹೃದಯ ಸಂಬಂಧಿ ಕಾಯಿಲೆ ನಿಮಗಿದ್ಯಾ? ನೀವು ಕ್ಲಿಕ್ಕಿಸುವ ಸೆಲ್ಫಿ ಹೇಳುತ್ತೆ ಇದಕ್ಕೆ ಉತ್ತರ!

    5 ) ಬೀಟ್ರೋಟ್

    ಬೀಟ್ರೋಟ್ ಗಳಲ್ಲಿ ನೈಟ್ರೇಟ್ ಅಧಿಕವಾಗಿದೆ. ಬೀಟ್ರೋಟ್ ಗಳನ್ನು ಸೇವನೆ ಮಾಡಿದಾಗ ಅವುಗಳು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ.. ನೈಟ್ರಿಕ್ ಆಕ್ಸೈಡ್ ನಮ್ಮ ಹೃದಯ ಸೇರಿದಂತೆ ನಮ್ಮ ದೇಹದ ಹಲವು ಭಾಗಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ..

    6) ಗ್ರೀನ್ ಟೀ

    ನಿಯಮಿತವಾಗಿ ಗ್ರೀನ್ ಟೀ ಸೇವನೆ ಮಾಡುವುದರಿಂದ ಹೃದಯದ ರಕ್ತನಾಳದ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ.. ಗ್ರೀನ್ ಟೀ ಪಾಲಿಫಿನಾಲ್ ಗಳಿಂದ ತುಂಬಿದ್ದು ನಮ್ಮ ಹೃದಯ ಮತ್ತು ರಕ್ತನಾಳಗಳ ಸೇರಿದಂತೆ ದೇಹದ ವಿವಿಧ ಭಾಗಳಿಗೆ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ..

    7) ಸಿಟ್ರಸ್ ಹಣ್ಣು

    ಪ್ರಮುಖವಾಗಿ ಸಿಟ್ರಸ್ ಹಣ್ಣುಗಳಲ್ಲಿ ಜೀವಸತ್ವ ಖನಿಜಗಳು ಉತ್ಕರ್ಷಣ ನಿರೋಧಕಗಳು ಇರುತ್ತವೆ.. ಇವುಗಳು ನಮ್ಮ ದೇಹದ ಹೃದಯರಕ್ತನಾಳದ ವ್ಯವಸ್ಥೆಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ.. ಫ್ಲೇವನಾಯ್ಡ್ ಗಳು ರಕ್ತದಲ್ಲಿನ ಉರಿಯೂತ ಮತ್ತು ಸ್ವತಂತ್ರ ರಾಡಿಕಲ್ ಗಳನ್ನು ಕಡಿಮೆ ಮಾಡುತ್ತದೆ.. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಪ್ಲೇಕ್ ರಚನೆಯನ್ನು ಕಡಿಮೆಮಾಡಲು ಸಿಟ್ರಸ್ ಹಣ್ಣುಗಳು ಸಹಾಯಕಾರಿ. ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಪಾರ್ಶ್ವವಾಯು ಮತ್ತು ಇತರ ಹೃದಯದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು

    ಇನ್ನು ನಮ್ಮ ಹೃದಯ ಸದಾ ಆರೋಗ್ಯವಾಗಿ ಇರಬೇಕು ಎಂದರೆ ಹೆಚ್ಚು ಕೊಬ್ಬಿನಾಂಶವಿರುವ ಮಾಂಸ ಕರಿದ ಆಹಾರಗಳು ಉಪ್ಪಿನಂಶವಿರುವ ಆಹಾರ, ಹೆಚ್ಚು ಕೊಬ್ಬಿನಾಂಶವಿರುವ ಚೀಸ್ ಹಾಗೂ ಸೋಡಾ ಸೇವನೆಯನ್ನು ಕಡಿಮೆ ಮಾಡಬೇಕು..
    Published by:ranjumbkgowda1 ranjumbkgowda1
    First published: