ತೂಕ(Weight) ಇಳಿಸಿ ಕೊಳ್ಳಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ(Dream). ಹೀಗಾಗಿ ಹಲವರು ಪ್ರತಿನಿತ್ಯ ಮನೆಯಲ್ಲಿ(Home) ವಿವಿಧ ರೀತಿಯ ಆಹಾರ(Meals) ಪದ್ಧತಿಗಳನ್ನು ಅನುಸರಿಸಿದರೆ ಇನ್ನು ಕೆಲವರು ಕಟ್ಟುನಿಟ್ಟಾಗಿ ವ್ಯಾಯಾಮ(Exercise) ಸೇರಿದಂತೆ ಡಯಟ್(Diet) ಮಾಡುವ ಮೂಲಕ ತೂಕ ಇಳಿಕೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಾರೆ. ಇದರ ನಡುವೆ ಕೆಲವರಲ್ಲಿ ಬೆಳಗಿನ ಉಪಹಾರ(Morning Breakfast) ಸೇವನೆ ಮಾಡದೇ ಇದ್ದರೆ ತೂಕ ಇಳಿಕೆ ಆಗುತ್ತದೆ ಎಂಬ ನಂಬಿಕೆ ಇದೆ. ಅಂಥವರು ಬೆಳಗಿನ ಉಪಹಾರ ಬಿಟ್ಟು ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದ್ರೆ ಈ ರೀತಿ ಮಾಡಿದ ಕಾರಣಕ್ಕೆ ತೂಕ ಇಳಿಕೆ ಯಾಗುವುದಿಲ್ಲ ಬದಲಿಗೆ ತೂಕ ಸಾಕಷ್ಟು ಏರಿಕೆಯಾಗುತ್ತದೆ. ಹೀಗಾಗಿ ಬೆಳಗಿನ ಉಪಹಾರ ತಪ್ಪಿಸದೇ ತೂಕ ಇಳಿಸಿಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿವೆ.
1) ಬೆಳಗ್ಗೆ ಎದ್ದ ಎರಡು ತಾಸಿನೊಳಗೆ ತಿಂಡಿ ತಿನ್ನಿ: ಅದೆಷ್ಟು ಜನರು ಬೆಳಗ್ಗೆ ಸಮಯದಲ್ಲಿ ತಿಂಡಿ ತಿನ್ನುವುದನ್ನು ಮರೆತುಬಿಡುತ್ತಾರೆ.. ಕೆಲಸದ ಒತ್ತಡದಿಂದ ಕೆಲವರು ತಿಂಡಿ ತಿನ್ನುವುದನ್ನು ಮರೆತರೆ ಇನ್ನೂ ಕೆಲವರು ಸಣ್ಣ ಆಗುತ್ತೇವೆ ಎಂಬ ಭ್ರಮೆಯಿಂದ ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವ ಅಭ್ಯಾಸ ಬಿಟ್ಟು ಬಿಟ್ಟಿರುತ್ತಾರೆ..
ಅದರಲ್ಲೂ ಈ ತೂಕ ಇಳಿಸುವವರು ಬೆಳಗ್ಗೆ ತಿಂಡಿಯನ್ನು ಬಿಟ್ಟೇ ಬಿಡುತ್ತಾರೆ. ಹೀಗೆ ತಿಂಡಿ ತಿನ್ನುವುದನ್ನು ಬಿಟ್ಟರೆ ತೂಕ ಹೆಚ್ಚಳಕ್ಕೆ ಕಾರಣವಾಗಿರುವ ಕ್ಯಾಲರಿ ಅಂಶ ದೇಹದಲ್ಲಿ ಕಡಿಮೆಯಾಗುತ್ತದೆ ಎನ್ನುವ ಭ್ರಮೆ ಅವರದ್ದಾಗಿರುತ್ತದೆ. ಆದರೆ ಹೀಗೆ ಮಾಡುವುದರಿಂದ ದೇಹದಲ್ಲಿ ಕ್ಯಾಲರಿ ಕರಗುವ ಬದಲು ಹೆಚ್ಚಿನ ಪ್ರಮಾಣದ ಕೊಬ್ಬಿನಂಶ ಶೇಖರಣೆಯಾಗುತ್ತದೆ.
ಯಾಕೆಂದರೆ ಬೆಳಗ್ಗೆ ತಿಂಡಿ ತಿನ್ನದೆ ಇರುವುದರಿಂದ ದೇಹಕ್ಕೆ ಹಸಿವಾಗಿರುತ್ತದೆ. ಇದರಿಂದ ನಿಮ್ಮ ದೇಹದ ಹೆಚ್ಚುವರಿ ಕ್ಯಾಲರಿಗಳೆಲ್ಲ ಕೊಬ್ಬಾಗಿ ಪರಿವರ್ತಿತಗೊಳ್ಳಲು ಪ್ರಾರಂಭವಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ. ಹೀಗಾಗಿ ತೂಕ ಇಳಿಸಿಕೊಳ್ಳುವವರು ಬೆಳಗ್ಗೆ ಎದ್ದು ಎರಡು ತಾಸು ಆಗುವುದರೊಳಗೆ ತಿಂಡಿ ತಿನ್ನುವುದು
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಅಮೃತಬಳ್ಳಿ ಸೇವನೆ ಮಾಡುವ ಮುನ್ನ ಎಚ್ಚರ..!
2) ಸೇಬು ಹಣ್ಣು ಸೇವನೆ: ಒಂದು ಸೇಬಿನ ಹಣ್ಣಿನ ಸೇವನೆ ಪ್ರತಿನಿತ್ಯ ನಮ್ಮನ್ನು ವೈದ್ಯರಿಂದ ದೂರವಿಡುತ್ತದೆ ಎಂಬ ಮಾತಿದೆ.. ತೂಕ ಇಳಿಸಿಕೊಳ್ಳುವ ಅವರಿಗೂ ಕೂಡ ಸೇಬಿನ ಹಣ್ಣಿನ ಸೇವನೆ ಉತ್ತಮ. ಹೀಗಾಗಿಯೇ ಡಯಟ್ ಮಾಡುವ ಪ್ರತಿಯೊಬ್ಬರೂ ತಮ್ಮ ಡಯಟ್ ಮೆನುವಿನಲ್ಲಿ ಸೇಬುಹಣ್ಣು ಇಟ್ಟುಕೊಂಡಿರುತ್ತಾರೆ.
ಸೇಬು ಹಣ್ಣುಗಳಲ್ಲಿ ನಾರು, ವಿಟಿಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುತ್ತವೆ. ಹೀಗಾಗಿ ಬೇರೆ ಸ್ನ್ಯಾಕ್ಸ್, ಕರಿದ ಪದಾರ್ಥಗಳನ್ನು ತಿನ್ನುವುದನ್ನು ಬಿಟ್ಟು, ಸೇಬು ಹಣ್ಣು ತಿನ್ನಲು ಶುರು ಮಾಡಿ. ಹೊಟ್ಟೆ ತುಂಬಿಸಿದರೂ ತೂಕ ಹೆಚ್ಚಲು ಈ ಹಣ್ಣುಗಳು ಬಿಡುವುದಿಲ್ಲ
3) ಹೆಚ್ಚು ನೀರು ಸೇವನೆ ಮಾಡಿ: ತೂಕ ಇಳಿಸಿಕೊಳ್ಳಬೇಕು ಎಂದು ಹೇಳುವವರಿಗೆ ಪ್ರತಿಯೊಬ್ಬರೂ ನೀಡುವ ಸಲಹೆ ಹೆಚ್ಚು ನೀರು ಸೇವನೆ ಮಾಡಿ ಎಂದು.. ನಾವು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡುತ್ತೇವೆ ಎಂಬುದು ಸಹ ನಾವು ಅಷ್ಟು ಬೇಗ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ನೀರು ಸೇವನೆ ಮಾಡದೇ ಇದ್ದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.ಹೆಚ್ಚು ನೀರು ಸೇವನೆ ಮಾಡಿದಷ್ಟು ಚಯಾಪಚಯ ಕ್ರಿಯೆ ಹಾಗೂ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ.. ಇದರಿಂದ ದೇಹದಲ್ಲಿ ಶೇಖರಣೆಯಾಗುವ ಕೊಬ್ಬಿನ ಪ್ರಮಾಣ ಕಡಿಮೆ ಇರುತ್ತದೆ.
ಅದರಲ್ಲೂ ಅತಿ ವೇಗವಾಗಿ ತೂಕ ಕಳೆದುಕೊಳ್ಳಬೇಕು ಎಂದು ಬಯಸುತ್ತಿರುವವರು ಬೆಳಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿಗೆ ನಿಂಬೆ ಹಣ್ಣಿನ ರಸ ಜೇನುತುಪ್ಪ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ನಷ್ಟ ಮಾಡಿಕೊಳ್ಳಬಹುದು.
ಅಷ್ಟೇ ಅಲ್ಲ, ನೀವು ಊಟ ಮಾಡುವ ಕೆಲವೇ ಹೊತ್ತುಗಳ ಮೊದಲು ನೀರು ಕುಡಿಯಿರಿ. ಇದು ನಿಮಗೆ ಬೇಗನೆ ಹೊಟ್ಟೆ ತುಂಬಲು ಸಹಾಯ ಮಾಡುತ್ತದೆ. ಕ್ಯಾಲರಿ ಒಳಹೋಗುವುದು ತಪ್ಪುತ್ತದೆ.
ಇದನ್ನೂ ಓದಿ: ಅರಿಶಿನವನ್ನು ಮನೆಯ ಬಳಿಯೇ ಬೆಳೆಸಲು ಇಲ್ಲಿದೆ ಸಕತ್ ಐಡಿಯಾ...!
4) ಸಣ್ಣ ಪ್ಲೇಟ್ ತೆಗೆದುಕೊಳ್ಳಿ: ಇದು ಮಾನಸಿಕವಾಗಿ ಪ್ರಭಾವ ಬೀರುವ ಒಂದು ವಿಷಯ. ನೀವು ಊಟ-ತಿಂಡಿ ಮಾಡಲು ದೊಡ್ಡ ಪ್ಲೇಟ್ ಬಳಸುತ್ತಿದ್ದರೆ, ಇನ್ನು ಮುಂದೆ ಚಿಕ್ಕ ಪ್ಲೇಟ್ ತೆಗೆದುಕೊಳ್ಳಲು ಶುರುಮಾಡಿ.
ಆಗ ನಿಮಗೆ ನಾನು ಅಗತ್ಯಕ್ಕಿಂತ ಜಾಸ್ತಿ ತಿನ್ನುತ್ತಿದ್ದೇನೆ ಎಂದು ಅನ್ನಿಸಲು ಶುರುವಾಗಿ, ಸ್ವಲ್ಪ ಕಡಿಮೆ ಹೊಟ್ಟೆಗೆ ಹಾಕಲು ಪ್ರಾರಂಭಿಸುತ್ತೀರಿ. ಇದರಿಂದ ನಿಧಾನವಾಗಿ ನಿಮ್ಮ ತೂಕವೂ ಇಳಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ