• Home
  • »
  • News
  • »
  • lifestyle
  • »
  • Gujarati Foods Near Me: ಸಾಫ್ಟ್​​ ಡೋಕ್ಲಾದಿಂದ, ಸೂಪರ್ ಟೇಸ್ಟಿ ದಬೇಲಿವರೆಗೆ - ಗುಜರಾತಿ ಫುಡ್​ ಸಿಗೋ ಬೆಂಗಳೂರಿನ ರೆಸ್ಟೊರೆಂಟ್​ಗಳಿವು

Gujarati Foods Near Me: ಸಾಫ್ಟ್​​ ಡೋಕ್ಲಾದಿಂದ, ಸೂಪರ್ ಟೇಸ್ಟಿ ದಬೇಲಿವರೆಗೆ - ಗುಜರಾತಿ ಫುಡ್​ ಸಿಗೋ ಬೆಂಗಳೂರಿನ ರೆಸ್ಟೊರೆಂಟ್​ಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Best Gujarati Foods Near Me: ನಾವು ಬೆಂಗಳೂರಿನ (Bengaluru)  ಅತ್ಯುತ್ತಮ ಗುಜರಾತಿ ಆಹಾರ ಸಿಗುವ ಸ್ಥಳಗಳ ಪಟ್ಟಿಯನ್ನು ಮಾಡಿದ್ದು, ಒಮ್ಮೆಯಾದರೂ ಇಲ್ಲಿಗೆ ವಿಸಿಟ್ ಮಾಡಿ.

  • Share this:

ಗುಜರಾತಿ (Gujarati) ಆಹಾರದ (food) ಬಗ್ಗೆ ಯೋಚಿಸಿದ ಕ್ಷಣವೇ ನಮ್ಮ ನೆನಪಿಗೆ ಬರುವುದು 3 ಈಡಿಯಟ್ಸ್ (idiots) ಎಂಬ ಬಾಲಿವುಡ್ ಚಲನಚಿತ್ರ (Bollywood Film) ಎನ್ನಬಹುದು. ನಿಮಗೆ ನೆನಪಿರಬಹುದು, ಪಿಯಾ ರಾಂಚೊಗೆ “ತುಮ್ ಗುಜರಾತಿ ಲಾಗ್ ಇಟ್ನೆ ಕ್ಯೂಟ್ ಹೋತೇ ಹೋ. ಪರ್ ತುಮ್ ಲೋಗೋ ಕಾ ಖಾನಾ ಇತ್ನಾ ಖತರ್ನಾಕ್ ಕ್ಯುಂ ಹೋತಾ ಹೈ? ನೀವು ಗುಜರಾತಿಗಳು ಬಹಳ ಕ್ಯೂಟ್ ಆಗಿರುತ್ತೀರಿ, ಆದರೆ ನಿಮ್ಮ ಆಹಾರ ವಿಚಿತ್ರವಾಗಿ ಏಕೆ ಇರುತ್ತದೆ ಎಂದು ಹೇಳುತ್ತಾಳೆ. ಧೋಕ್ಲಾ, ಫಫ್ಡಾ, ಖಾಂಡ್ವಾ, ತೇಪ್ಲಾ ಈ ಹೆಸರು ಕೇಳಿದರೆ ನಮಗೆ ಏನೋ ವಿಭಿನ್ನ ಅನಿಸುತ್ತದೆ. ಗುಜರಾತಿ ಆಹಾರವು ಕೇವಲ ರುಚಿಕರ ಮಾತ್ರವಲ್ಲದೇ, ವಿಚಿತ್ರ ಕೂಡ ಎಂದರೆ ತಪ್ಪಲ್ಲ. ಇದು ನಿಜವಾಗಿಯೂ ವಿಶಿಷ್ಟವಾಗಿದೆ ಮತ್ತು ತನ್ನದೇ ಆದ ರೀತಿಯಲ್ಲಿ ರುಚಿಕರವಾಗಿದೆ. ನಾವು ಬೆಂಗಳೂರಿನ (Bengaluru)  ಅತ್ಯುತ್ತಮ ಗುಜರಾತಿ ಆಹಾರ ಸಿಗುವ ಸ್ಥಳಗಳ ಪಟ್ಟಿಯನ್ನು ಮಾಡಿದ್ದು, ಒಮ್ಮೆಯಾದರೂ ಇಲ್ಲಿಗೆ ವಿಸಿಟ್ ಮಾಡಿ.


ಶ್ರೀಜಿ ರೆಸ್ಟೋರೆಂಟ್, ವೈಟ್​ಫೀಲ್ಡ್​


ಮುಂದಿನ ಬಾರಿ ನೀವು ರುಚಿಕರ ಗುಜರಾತಿ ಊಟಕ್ಕೆ ಹಂಬಲಿಸಿದಾಗ, ಶ್ರೀಜಿ ರೆಸ್ಟೋರೆಂಟ್‌ನಿಂದ ರುಚಿಕರವಾದ ಗುಜರಾತಿ ಥಾಲಿಯನ್ನು ನೀವೇ ಆರ್ಡರ್ ಮಾಡಿ. ಕೇವಲ ₹180 ದರದಲ್ಲಿ, ನೀವು ಬಿಸಿ ಫುಲ್ಕಾಗಳು, ಅಧಿಕೃತ ಗುಜುರಾತಿ ಕರಿ, ಸಿಹಿ ದಾಲ್, ಅನ್ನ, ಪಾಪಡ್ ಮತ್ತು ಸಲಾಡ್ ಅನ್ನು ಸವಿಯಬಹುದು. ಇಲ್ಲಿ ನೀವು ಖಿಚಡಿ ಮತ್ತು ಕಡಿಯನ್ನು ಸಹ ಸೇವಿಸಬಹುದು. ಸೂಜಿ ಕಾ ಹಲ್ವಾದೊಂದಿಗೆ ನಿಮ್ಮ ಊಟವನ್ನು ಮುಗಿಸಿ.


ವಿಳಾಸ: 214, ವಜ್ರ ಎಲೈಟ್ ಹೋಮ್, ಐಟಿಪಿಎಲ್ ಬ್ಯಾಕ್ ಗೇಟ್ ಹತ್ತಿರ, ಪಟ್ಟಂದೂರು ಅಗ್ರಹಾರ ರಸ್ತೆ, ಐಟಿಪಿಎಲ್ ಮುಖ್ಯ ರಸ್ತೆ, ವೈಟ್‌ಫೀಲ್ಡ್


ಸಮಯ: ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ


ಮೊಬೈಲ್ ನಂಬರ್: +91 8849454284


ಡಿಲೈಟ್ ಚಾಟ್ ಹೌಸ್, ವಿವಿಧ ಶಾಖೆಗಳಿದೆ


ಧೋಕ್ಲಾ, ಖಾಂಡ್ವಿ,ಜಿಲೇಬಿ ಫಫ್ಡಾ, ದಬೇಲಿ ಎಲ್ಲರ ಫೇವರೇಟ್​. ಆದ್ದರಿಂದ ಮುಂದಿನ ಬಾರಿ ನೀವು ಮಾಡುತ್ತಿರುವ ಎಲ್ಲ ಕೆಲಸವನ್ನೂ ನಿಲ್ಲಿಸಿ ಹತ್ತಿರದ ಡೆಲೈಟ್ ಚಾಟ್ ಹೌಸ್‌ಗೆ ಹೋಗಿ. ಇದು ಬೆಂಗಳೂರಿನ ಅತ್ಯುತ್ತಮ ಗುಜರಾತಿ ಸ್ಥಳಗಳಲ್ಲಿ ಒಂದಾಗಿದೆ. ಅವರ ವೈವಿಧ್ಯಮಯ ದಬೇಲಿಗಳು, ಮೃದುವಾದ ಖಾಂಡ್ವಿ, ಗರಿಗರಿಯಾದ ಹಪ್ಪಳ ಇದಕ್ಕೆ ಸಾಕ್ಷಿಯಾಗಿದೆ.


ಇದನ್ನೂ ಓದಿ: ಧೋನಿ ಪತ್ನಿ, ಸಾಕ್ಷಿಯಂತೆ ನೀವೂ ರೆಡಿಯಾಗ್ಬೇಕಾ? ಇಲ್ಲಿದೆ ಟಿಪ್ಸ್​


ವಿಳಾಸ: ಸಂಖ್ಯೆ 48, ನೆಲ ಮಹಡಿ ಶಾಂತಿ ಆರ್ಕೇಡ್, 7ನೇ ಮುಖ್ಯ ರಸ್ತೆ, ಬೆಂಗಳೂರು, ಕರ್ನಾಟಕ 560102


ಸಮಯ: 8am–10pm


ಮೊಬೈಲ್ ನಂಬರ್: 083102 48230


ಗುಜರಾತಿ ಮೆಸ್, ಜೆಪಿ ನಗರ


ಗುಜರಾತಿ ಮೆಸ್‌ನ ಜೆಪಿ ನಗರದ ವಸತಿ ಪ್ರದೇಶದಲ್ಲಿರುವ ಒಂದು ವಿಭಿನ್ನ ಪುಟ್ಟ ರೆಸ್ಟೋರೆಂಟ್. ನೀವು ಗುಜರಾತಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದರೆ, ಬೆಸ್ಟ್​ ಗುಜರಾತಿ ಮನೆಯ ಆಹಾರ ನಿಮಗೆ ಇಲ್ಲಿ ಸಿಗುತ್ತದೆ. ಗುಜ್ಜು ಸಬ್ಜಿ, ದಾಲ್ ಮತ್ತು ಅನ್ನವನ್ನು ಮಿನಿ ಮತ್ತು ದೈನಂದಿನ ವಿಶೇಷ ಥಾಲಿಗಳನ್ನು ನೀವು ಇಲ್ಲಿ ಸವಿಯಬಹುದು. ಇದು ಬೆಂಗಳೂರಿನಲ್ಲಿರುವ ಅತ್ಯುತ್ತಮ ಗುಜರಾತಿ ಸ್ಥಳಗಳಲ್ಲಿ ಒಂದಾಗಿದೆ.


ವಿಳಾಸ: 56, 3 ನೇ ಅಡ್ಡ ರಸ್ತೆ, R.K ಕಾಲೋನಿ, ಮಾರೇನಹಳ್ಳಿ, 2 ನೇ ಹಂತ, JP ನಗರ, ಬೆಂಗಳೂರು


ಸಮಯ: ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಮತ್ತು ಸಂಜೆ 7:15 ರಿಂದ ರಾತ್ರಿ 10 ರವರೆಗೆ


ಮೊಬೈಲ್ ನಂಬರ್: +91 9886201782, +91 9739528693


ಖಿಚೆ ಚಲೇ ಆವೋ, ಕೋರಮಂಗಲ


ಗುಜರಾತ್ ಮತ್ತು ರಾಜಸ್ಥಾನದ ವಿಶೇಷವಾದ ಖಿಚಿಯಾ ಪಾಪಡ್‌ಗೆ ಕೋರಮಂಗಲದ ಖಿಚೆ ಚಲೇ ಆವೊದಲ್ಲಿ ಫ್ಯೂಷನ್ ಟ್ವಿಸ್ಟ್ ನೀಡಲಾಗಿದೆ. ಅಮೇರಿಕನ್ ಸಲಾಡ್ ಖಿಚಿಯಾ, ನುಟೆಲ್ಲಾ ಬಟರ್‌ಸ್ಕಾಚ್ ಖಿಚ್ಯಾ, ಬಾಂಬೆ ಮಸಾಲಾ ಖಿಚಿಯಾ ಮತ್ತು ರಾಜವಾಡಿ ರಾಜಸ್ಥಾನಿ ಖಿಚಿಯಾ ಇಲ್ಲಿ ಟ್ರೈ ಮಾಡಲೇಬೇಕು. ಇದನ್ನು ಒಂದು ಲೋಟ ಬಿಸಿ ಚಾಯ್ ಜೊತೆ ತಿಂದರೆ ಬಹಳ ರುಚಿಕರವಾಗುತ್ತದೆ.


ವಿಳಾಸ: 11, ಈಟ್ ಸ್ಟ್ರೀಟ್, 80 ಅಡಿ ರಸ್ತೆ, ಇಂಡಿಯನ್ ಆಯಿಲ್ ಪೆಟ್ರೋಲ್ ಸ್ಟೇಷನ್ ಎದುರು, ಕೋರಮಂಗಲ 6ನೇ ಬ್ಲಾಕ್, ಬೆಂಗಳೂರು


ಸಮಯ: 11:30 am to 11:30 pm


ಮೊಬೈಲ್ ನಂಬರ್:  +91 9922417120


ಇದನ್ನೂ ಓದಿ: ಕೇಳದೆ ನಿಮಗೀಗ ಹೃದಯ ವಿದ್ರಾವಕ ಕೂಗು? 60 ಪತ್ನಿಯರ ಸಮಾಧಿ ನಿರ್ಮಾಣಗೊಂಡ ಇತಿಹಾಸ ಇದು!


ಧಬೆಲಿವಾಲಾ, ಜೆಪಿ ನಗರ


ಜೆಪಿ ನಗರದಲ್ಲಿ ಇದ್ದು ನೀವು ಧಬೇಲಿವಾಲಾದಲ್ಲಿ ರುಚಿಕರವಾದ ಧಬೇಲಿಗಳನ್ನು ತಿನ್ನದಿದ್ದರೆ, ನಿಜಕ್ಕೂ ನೀವು ಆಹಾರ ಪ್ರಿಯರಲ್ಲ. ಗುಜರಾತಿನ ಕಚ್ ಪ್ರದೇಶದಲ್ಲಿ ಆವಿಷ್ಕಾರವಾದ ದಾಬೇಲಿ ಭಾರತದಾದ್ಯಂತ ಜನಪ್ರಿಯ ತಿಂಡಿಯಾಗಿದೆ. ರಾಜಧಾನಿ ಸ್ಪೈಸಿ ಧಬೇಲಿ, ಧಬೇಲಿವಾಲಾ ಸ್ಪೆಷಲ್ ಮತ್ತು ಚಾಕೊಲೇಟ್ ಧಬೇಲಿ ಒಮ್ಮೆ ಟ್ರೈ ಮಾಡಿ.


ವಿಳಾಸ:  11, 24 ನೇ ಮುಖ್ಯ ರಸ್ತೆ, ಅಯೋದ್ಯ ನಗರ, ಹಂತ 5, ಜೆಪಿ ನಗರ, ಬೆಂಗಳೂರು


ಸಮಯ: 2 pm to 10 pm


ಮೊಬೈಲ್ ನಂಬರ್:  +91 9900009118

Published by:Sandhya M
First published: