Gift Shops Near Me: ಬೆಂಗಳೂರಿನ ಈ ಅಂಗಡಿಗಳಲ್ಲಿ ಬೆಸ್ಟ್​ ಗಿಫ್ಟ್​ ಸಿಗುತ್ತಂತೆ, ರಾಖಿ ಹಬ್ಬಕ್ಕೆ ಇಲ್ಲಿಂದಲೇ ಖರೀದಿ ಮಾಡಿ

Rakhi Gift To Sister: ಆದರೆ ಏನು ಕೊಡೋದು ಎನ್ನುವುದಕ್ಕಿಂತ ಒಳ್ಳೆಯ ಗಿಫ್ಟ್​ ಎಲ್ಲಿ ಸಿಗುತ್ತೆ ಅಂತ ಹುಡುಕುವುದು ಕಷ್ಟವಾದ್ರೆ ನಾವು ನಿಮಗೆ ಸಹಾಯ ಮಾಡ್ತೀವಿ. ನಿಮ್ಮ ಫೇವರೇಟ್​ ಸಹೋದರಿಗೆ ದಿ ಬೆಸ್ಟ್ ಗಿಫ್ಟ್​ಗಳು ಸಿಗುವ ಬೆಂಗಳೂರಿನ ಟಾಪ್ 5 ಅಂಗಡಿಗಳ ಲಿಸ್ಟ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಖಿ ಹಬ್ಬ (Raksha Bandhan) ಬಂದು ಬಿಟ್ಟಿದೆ, ಗಿಫ್ಟ್​ (Gift) ಬೇರೆ ಏನು ಕೊಡುವುದು ಅನ್ನುವುದನ್ನೇ ಇನ್ನೂ ನಿರ್ಧಾರ ಮಾಡಿಲ್ಲ ಅಂದ್ರೆ ಹೇಗೆ. ವಿಶೇಷ ಸಂದರ್ಭದಲ್ಲಿ ಅಕ್ಕ ಅಥವಾ ತಂಗಿಗೆ ಬೆಸ್ಟ್​ ಗಿಫ್ಟ್​ ಕೊಟ್ಟಿಲ್ಲ ಅಂದ್ರೆ ಸರಿಯಾಗೋದಿಲ್ಲ. ಆದರೆ ಏನು ಕೊಡೋದು ಎನ್ನುವುದಕ್ಕಿಂತ ಒಳ್ಳೆಯ ಗಿಫ್ಟ್​ ಎಲ್ಲಿ ಸಿಗುತ್ತೆ ಅಂತ ಹುಡುಕುವುದು ಕಷ್ಟವಾದ್ರೆ ನಾವು ನಿಮಗೆ ಸಹಾಯ ಮಾಡ್ತೀವಿ. ನಿಮ್ಮ ಫೇವರೇಟ್​ ಸಹೋದರಿಗೆ ದಿ ಬೆಸ್ಟ್ ಗಿಫ್ಟ್​ಗಳು ಸಿಗುವ ಬೆಂಗಳೂರಿನ ಟಾಪ್ 5 ಅಂಗಡಿಗಳ ಲಿಸ್ಟ್​ (Gifts Shops Near Me) ಇಲ್ಲಿದೆ. ನೀವು ಆಯ್ಕೆ ಮಾಡಿ ಅಷ್ಟೇ.

ಏಷ್ಯಾಟಿಕ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್​, ಶಿವಾಜಿ ನಗರ, ಬೆಂಗಳೂರು

ಈ ಸ್ಥಳದಲ್ಲಿ ನಿಮಗೆ ಆ್ಯಂಟಿಕ್ ವಸ್ತುಗಳು ಹೆಚ್ಚು ಲಭ್ಯವಿದೆ. ಇತಿಹಾಸಕ್ಕೆ ಸಂಬಂಧಪಟ್ಟ ಪುಸ್ತಕಗಳು ಮತ್ತು ಆ್ಯಂಟಿಕ್ ಇಷ್ಟಪಡುವವರಿಗೆ ನೀವು ಇಲ್ಲಿಂದ ಗಿಫ್ಟ್ ಕೊಡಬಹುದು. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಏಷ್ಯಾಟಿಕ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಇತಿಹಾಸ ಪುಸ್ತಕದಲ್ಲಿ ಕಾಣುವ ಪುರಾತನ ವಸ್ತುಗಳಿಂದ ತುಂಬಿರುತ್ತದೆ. ನಿಮ್ಮ ಅಕ್ಕ ಅಥವಾ ತಂಗಿ ಪತ್ತೆದಾರಿಯ ಬಗ್ಗೆ ಮತ್ತು ಇತಿಹಾಸದ ಬಗ್ಗೆ ಆಸಕ್ತಿ ಹೊಂದಿದ್ದರೆ ಈ ಸ್ಥಳದಿಂದ ನೀವು ಗಿಫ್ಟ್ ಖರೀದಿ ಮಾಡಬಹುದು. ಷರ್ಲಾಕ್ ಹೋಮ್ಸ್‌ನ  ಭೂತಗನ್ನಡಿಗಳು, ವಿಂಟೇಜ್ ದೂರದರ್ಶಕಗಳು ಮತ್ತು ಚರ್ಮದ ಚೀಲಗಳನ್ನು ಹೊಂದಿರುವ ಹಳೆಯ ಶಾಲಾ ಕ್ಯಾಮೆರಾ ಹೀಗೆ ಇಲ್ಲಿ ಎಲ್ಲವೂ ಸಿಗುತ್ತದೆ.

ವಿಳಾಸ: 133/2, ಮೆಜ್ಜನೈನ್ ಮಹಡಿ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿ ನಗರ, ಬೆಂಗಳೂರು

ಮೊಬೈಲ್ ನಂಬರ್: +91804151791

ಸಮಯ: ಬೆಳಗ್ಗೆ 10 ರಿಂದ ರಾತ್ರಿ 10.30

ಗಿಫ್ಟ್ ಮೈ ಪ್ಲಾಂಟ್ಸ್​, ವೈಟ್​ಫೀಲ್ಡ್​ , ಬೆಂಗಳೂರು

ನಿಮ್ಮ ಅಕ್ಕ ಅಥವಾ ತಂಗಿಗೆ ಗಿಡಗಳ ಬಗ್ಗೆ ಹೆಚ್ಚು ಕಾಳಜಿ ಇದ್ರೆ ಹಾಗೂ ಅವುಗಳನ್ನು ಸಾಕುವ ಆಸಕ್ತಿ ಹೆಚ್ಚಿದ್ದರೆ ಈ ಜಾಗಕ್ಕಿಂತ ನಿಮಗೆ ಮತ್ತೊಂದು ಸೂಕ್ತವಾದ ಸ್ಥಳ ಬೇರೆ ಇಲ್ಲ. ಇಲ್ಲಿ ನಿಮಗೆ ಒಂದಕ್ಕಿಂದ ಒಂದು ಸುಂದರ ಹಾಗೂ ಅದ್ಭುತ ಗಿಡಗಳು ಸಿಗುತ್ತದೆ. ಗಿಡ ಮಾತ್ರವಲ್ಲದೇ ಬೀಜಗಳು ಸಹ ಲಭ್ಯವಿದ್ದು, ಯಾವುದೂ ಇಷ್ಟವಾಗುತ್ತದೆ ಅದನ್ನು ನೀವು ಗಿಫ್ಟ್ ಆಗಿ ನೀಡಬಹುದು. ಇಲ್ಲಿ ಕೇವಲ ಗಿಡ ಮಾತ್ರವಲ್ಲದೇ ಕ್ಯೂಟ್​ ಆಗಿರುವ ಪಾಟ್​ಗಳನ್ನು ಸಹ ನೀಡುತ್ತಾರೆ.


ವಿಳಾಸ: ಇನಾರ್ಬಿಟ್ ಮಾಲ್, 75, ಇಪಿಐಪಿ ಪ್ರದೇಶ, ವೈಟ್‌ಫೀಲ್ಡ್, ಬೆಂಗಳೂರು

ಮೊಬೈಲ್ ನಂಬರ್: +918217848905

ಸಮಯ: ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆ

ವರ್ಣಂ ಕ್ರಾಫ್ಟ್​ ಕಲೆಕ್ಟೀವ್ , ಇಂದಿರಾ ನಗರ, ಬೆಂಗಳೂರು

ಈ ಜಾಗ ಮುಖ್ಯವಾಗಿ ಮನೆ ಅಲಂಕಾರಿಕ ವಸ್ತುಗಳು, ಆಭರಣಗಳು, ಆಟಿಕೆ ಸಾಮಾನುಗಳನ್ನು ಹೊಂದಿದ್ದು, ರಾಖಿ ಹಬ್ಬಕ್ಕೆ ಗಿಫ್ಟ್ ಕೊಡಲು ನಿಮಗೆ ಇಲ್ಲಿ ಹಲವಾರು ಆಯ್ಕೆಗಳು ಸಿಗುತ್ತದೆ. ತಂಗಿಯ ರೂಂ ಡೆಕೋರೇಟ್​ ಮಾಡುವ ವಸ್ತುಗಳನ್ನು ಕೊಡಬಹುದು, ನಿಮಗೆ ಇನ್ನೂ ಪುಟ್ಟ ತಂಗಿ ಇದ್ದರೆ, ಬಹಳ ಉತ್ತಮವಾದ ಆಟಿಕೆಗಳು ಇಲ್ಲಿ ಲಭಿಸುತ್ತದೆ. ಹಾಗೆಯೇ ಕ್ರಾಫ್ಟ್​ ಎಂದ ಮೇಲೆ ವಿಭಿನ್ನ ರೀತಿಯ ಆಭರಣಗಳು ಸಹ ಸಿಗುತ್ತದೆ. ನಿಮ್ಮ ಅಕ್ಕ- ತಂಗಿಗೆ ಒಂದಿಷ್ಟು ಆಭರಣದ ಸೆಟ್​ಗಳನ್ನು ಇಲ್ಲಿ ಖರೀದಿಸಿ ಗಿಫ್ಟ್ ಕೊಟ್ಟರೆ ಸಂತೋಷವಾಗದೇ ಇರದು. ಇನ್ನು ಜಯನಗರ ಮತ್ತು ಇಂದಿರಾ ನಗರದಲ್ಲಿ ಇದರ ಎರಡು ಶಾಖೆಗಳಿದೆ.

ವಿಳಾಸ: 1332 ಕಾವೇರಿ ಶಾಲೆಯ ಹತ್ತಿರ, ಡಂಬಲ್ ರೋಡ್​, ಇಂದಿರಾ ನಗರ ಬೆಂಗಳೂರು.

ಮೊಬೈಲ್ ನಂಬರ್: +91802525036046

ವಿಳಾಸ: ಮ್ಯಾಕ್ಸ್​ ಲೈಫ್​ ಸ್ಟೈಲ್​ ಎದುರಿಗೆ, 12ನೇ ಮುಖ್ಯ ರಸ್ತೆ, 4ನೇ ಬ್ಲಾಕ್​, ಜಯನಗರ ಬೆಂಗಳೂರು

ಮೊಬೈಲ್ ನಂಬರ್: +918026545544

ಇದನ್ನೂ ಓದಿ: ಪುರುಷರ ಬಳಿ ಈ ಶೂಗಳು ಇರಲೇಬೇಕಂತೆ, ಆಗ್ಲೇ ಒಂದ್ ಲುಕ್ ಅಂತಾರೆ ಸ್ಟೈಲಿಸ್ಟ್​ಗಳು

ಜೂಟ್​ ಪ್ರಗ್ನ್ಯಾ, ಮಲ್ಲೇಶ್ವರಂ, ಬೆಂಗಳೂರು

ಹೆಣ್ಣು ಮಕ್ಕಳಿಗೆ ಬ್ಯಾಗ್​ ಎಂದರೆ ಬಹಳ ಇಷ್ಟ. ಅದರಲ್ಲೂ ಫ್ಯಾಷನಬಲ್ ಜೂಟ್​ ಬ್ಯಾಗ್​ ಕೊಟ್ಟರೆ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಮಲ್ಲೇಶ್ವರಂನಲ್ಲಿರುವ ಈ ಸಣ್ಣ ಸ್ಥಳವು ಜೂಟ್​ ವಸ್ತುಗಳಿಂದ ತುಂಬಿದೆ, ವಿವಿಧ ಶೈಲಿಯ ವಿಭಿನ್ನ ಬ್ಯಾಗ್‌ಗಳು, ಆಭರಣಗಳು ಮತ್ತು ನಿಕ್-ನಾಕ್‌ಗಳು ಸೇರಿದಂತೆ ಎಲ್ಲಾ ರೀತಿಯ ಬಣ್ಣ ಮತ್ತು ಮಾದರಿಗಳಲ್ಲಿ ಲಭ್ಯವಿರುತ್ತದೆ.  ಅಜ್ಟೆಕ್ ಪ್ರಿಂಟ್‌ಗಳು, ಲೈಟ್ ಕಸೂತಿ ಅಥವಾ ಮರ್ಲಿನ್ ಮನ್ರೋ ಅಥವಾ ಮೈಕೆಲ್ ಜಾಕ್ಸನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳಿರುವ ಬ್ಯಾಗ್‌ಗಳು ಸಹ ಇಲ್ಲಿ ಸಿಗುತ್ತದೆ. ಆಫ್‌ಬೀಟ್ ಜೂಟ್ ಆಭರಣಗಳಾದ ಬಳೆಗಳು, ಕಿವಿಯೋಲೆಗಳು ಮತ್ತು ನೆಕ್ಲೇಸ್‌ಗಳು ಸಹ ಇಲ್ಲಿ ಸಿಗುತ್ತದೆ.

ವಿಳಾಸ: 134 9ನೇ ಕ್ರಾಸ್​, ಮಲ್ಲೇಶ್ವರಂ, ಬೆಂಗಳೂರು

ಮೊಬೈಲ್ ನಂಬರ್: +918023440344

ಸಮಯ: ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ

A ಟು Z ಗಿಫ್ಟ್​ ಶಾಪ್​, ಗಾಂಧಿ ಬಜಾರ್ , ಬೆಂಗಳೂರು

ಹೆಸರೇ ಹೇಳುವಂತೆ ನಿಮಗೆ ಇಲ್ಲಿ ಯಾವುದೇ ಗಿಫ್ಟ್​ ಸಿಗಲ್ಲ ಎನ್ನುವ ಮಾತಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ನೀವು ಇಲ್ಲಿ ಗಿಫ್ಟ್​ಗಳನ್ನು ಖರೀದಿಸಬಹುದು. ಆಭರಣಗಳು, ವಾಚ್​ಗಳು, ಆಟಿಕೆ ಸಾಮಾನುಗಳು ಹೀಗೆ. ಅಲ್ಲದೇ ನೀವು ಇಲ್ಲಿ ಮೊದಲೇ ವಿಶಿಷ್ಟ ರೀತಿಯ ಗಿಫ್ಟ್​ ಬೇಕು ಎಂದು ತಿಳಿಸಿದ್ದರೆ, ಅದನ್ನು ಸಹ ಮಾಡಿಕೊಡುತ್ತಾರೆ.

ಇದನ್ನೂ ಓದಿ: ರಾಖಿ ಕಟ್ಟಿ ಆದ್ಮೇಲೆ ಒಳ್ಳೆ ಊಟ ಕೊಡ್ಸಿ ಮಾರ್ರೆ, ಈ ಜಾಗಗಳಿಗೆ ಹೋಗಿ ಸಖತ್ ಊಟ ಸಿಗುತ್ತೆ

ವಿಳಾಸ: WHVC+HFV, ಡಿವಿಜಿ ರೋಡ್​, ಗಾಂಧಿ ಬಜಾರ್​, ಬಸವನಗುಡಿ, ಬೆಂಗಳೂರು

ಮೊಬೈಲ್ ನಂಬರ್: 080 2667 5378

ಸಮಯ: ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆ
Published by:Sandhya M
First published: