Home Garden: ನಿಮ್ಮ ಮನೆಗೆ ರಾಯಲ್​ ಲುಕ್​ ಬೇಕಾ? ಹಾಗಾದ್ರೆ ಈ ರೀತಿ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉದ್ಯಾನದ ಮಧ್ಯದಲ್ಲಿಯೇ ಕೋರ್ಟ್ ಯಾರ್ಡ್ ಅನ್ನು ವಿನ್ಯಾಸಗೊಳಿಸುವುದು ಮನೆಯ ಮತ್ತು ಉದ್ಯಾನಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ. ಮನೆಗೆ ಐಷಾರಾಮಿ ಕಳೆ ನೀಡುತ್ತದೆ. ಜಲ್ಲಿ ಕಲ್ಲನ್ನು ಈ ಕೋರ್ಟ್ ಯಾರ್ಡ್‌ಗೆ ಹಾಕುವುದರಿಂದ ಮತ್ತು ಕೆಲ ಸಸ್ಯಗಳನ್ನು ಅದರುದ್ದಕ್ಕೂ ನೆಡುವುದರಿಂದ ಉದ್ಯಾನವನ ಅದ್ಭುತವಾಗಿ ಕಾಣುತ್ತದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • New Delhi, India
  • Share this:

ಮನೆ ಮುಂದೆ ಒಂದು ಸಣ್ಣ ಕೈತೋಟ ಇಲ್ಲಾ ಉದ್ಯಾನವನ ಇದ್ದರೆ ಮನೆಗೆ ಒಂದು ರೀತಿ ಬೇರೆಯದ್ದೇ ಶೋಭೆ. ಅದರಲ್ಲೂ ಬಣ್ಣ-ಬಣ್ಣದ ಹೂಗಳು (Flower), ಅಲಂಕಾರಿಕಾ ಸಸ್ಯಗಳಿದ್ದರಂತೂ ಮನೆಯ (Home) ಅಂದವೇ ಹೆಚ್ಚ ಬಿಡುತ್ತದೆ. ಪ್ರಸ್ತುತ ಮನೆಗಳು ಇಂಟೀರಿಯರ್ ಡಿಸೈನ್‌ (Interior Design) ಇಲ್ಲದೇ ನಿರ್ಮಾಣವೇ ಆಗುವುದಿಲ್ಲ. ಅದು ನಿಮ್ಮ ಸರಳ ಮನೆಯನ್ನೂ ಸಹ ರಿಚ್ಚಾಗಿ ಕಾಣುವಂತೆ ಮಾಡುತ್ತದೆ. ಹಾಗೆಯೇ ಉದ್ಯಾನವನಕ್ಕೂ ಕೆಲವು ಹೊಸ ಟಚ್‌ (New Touch) ನೀಡಿದರೆ ಇದು ಕೂಡ ನಿಮ್ಮ ಮನೆಯ ಅಂದವನ್ನು, ಮೌಲ್ಯವನ್ನು ಹೆಚ್ಚಿಸುತ್ತದೆ.


ಮನೆಯಲ್ಲಿ ಬರೀ ಕೆಲವು ಹೂಗಿಡಗಳನ್ನು ನೆಟ್ಟು ಗಾರ್ಡನ್‌ ಮಾಡುವುದಕ್ಕಿಂತ ನಾವೀಗ ಹೇಳುವ ಕೆಲವು ಟಿಪ್ಸ್‌ ಫಾಲೋ ಮಾಡಿದರೆ ನಿಮ್ಮ ಮನೆಗೆ ಒಂದು ರಾಯಲ್‌ ಲುಕ್‌ ಬರುತ್ತದೆ ನೋಡಿ.


ನಿಮ್ಮ ಮನೆಯ ಮೌಲ್ಯ, ಅಂದವನ್ನು ಹೆಚ್ಚಿಸುವ 6 ಗಾರ್ಡನ್ ಐಡಿಯಾಗಳು


ಸೌರ ಶಕ್ತಿಯ ಬೆಳಕನ್ನು ಸೇರಿಸಿ


ಮನೆಗಳನ್ನು ಬೆಳಗುವುದೇ ಈ ಬೆಳಕು. ಅಂತೆಯೇ ರಾತ್ರಿ ಹೊತ್ತಲ್ಲಿ ನಿಮ್ಮ ಮನೆಯ ಅಂದವಾದ ಗಾರ್ಡನ್‌ ಅನ್ನು ಬೆಳಗಲು ಲೈಟಿಂಗ್ಸ್‌ಗಳನ್ನು ಅಳವಡಿಸಿ. ಅದರಲ್ಲೂ ಸೌರ ಶಕ್ತಿಯ ಬೆಳಕನ್ನು ಅಳವಡಿಸುವುದು ಉತ್ತಮ. ವಿದ್ಯುತ್ ವೈರಿಂಗ್ ಸಾಮಾನ್ಯವಾಗಿ ದುಬಾರಿಯಾಗಿರುವುದರ ಜೊತೆ ಸ್ವಲ್ಪ ಶ್ರಮದಾಯಕವೂ ಹೌದು. ಹಾಳಾದರೆ ರಿಪೇರಿ ಮಾಡುವುದು ಕೂಡ ಕಷ್ಟ. ಹೀಗಾಗಿ ಸೌರ ವಿದ್ಯುತ್‌ ನಿಮ್ಮ ಗಾರ್ಡನ್‌ಗೆ ಒಂದೊಳ್ಳೆ ಆಯ್ಕೆ. ಕಡಿಮೆ ಖರ್ಚು, ಕಡಿಮೆ ಹಣದ ಜೊತೆ ನಿಮ್ಮ ಗಾರ್ಡನ್‌ಗೆ ಲೈಟಿಂಗ್‌ ಹಾಕುವುದು ಅದಕ್ಕೆ ಲಕ್ಸುರಿ ಲುಕ್‌ ನೀಡುತ್ತದೆ.


ಗಾರ್ಡನ್‌ನ ವಾಕಿಂಗ್‌ ದಾರಿಗಳುದ್ದಕ್ಕೂ ಲೈಟಿಂಗ್‌ ಹಾಕುವುದರಿಂದ ಅದು ಉದ್ಯಾನದ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತದೆ.


ಪ್ರವೇಶ ಪ್ರಾಂಗಣ


ಉದ್ಯಾನದ ಮಧ್ಯದಲ್ಲಿಯೇ ಕೋರ್ಟ್ ಯಾರ್ಡ್ ಅನ್ನು ವಿನ್ಯಾಸಗೊಳಿಸುವುದು ಮನೆಯ ಮತ್ತು ಉದ್ಯಾನಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ. ಮನೆಗೆ ಐಷಾರಾಮಿ ಕಳೆ ನೀಡುತ್ತದೆ. ಜಲ್ಲಿ ಕಲ್ಲನ್ನು ಈ ಕೋರ್ಟ್ ಯಾರ್ಡ್‌ಗೆ ಹಾಕುವುದರಿಂದ ಮತ್ತು ಕೆಲ ಸಸ್ಯಗಳನ್ನು ಅದರುದ್ದಕ್ಕೂ ನೆಡುವುದರಿಂದ ಉದ್ಯಾನವನ ಅದ್ಭುತವಾಗಿ ಕಾಣುತ್ತದೆ.


ಇದನ್ನೂ ಓದಿ: Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ


ಹಾಗೆಯೇ ಈ ಪ್ರವೇಶ ಪ್ರಾಂಗಣದಲ್ಲಿ ಉಬ್ಬುತಗ್ಗುಗಳಿಲ್ಲದೇ ಸಮತಟ್ಟಾಗಿರುವಂತೆ ನೋಡಿಕೊಳ್ಳಿ. ದೃಢವಾದ ಸಬ್‌ಸ್ಟ್ರಕ್ಚರ್ ರಚಿಸಲು ಅಲ್ಲಿ ಕಾಂಪ್ಯಾಕ್ಟ್ ರಸ್ತೆ ಬೇಸ್ ಅನ್ನು ಸೇರಿಸಿ. ಜೊತೆಗೆ ಕಾಲಿಗೆ ಹೆಚ್ಚು ಚುಚ್ಚುವಂತಹ ಅನುಭವ ನೀಡದ ಜಲ್ಲಿ ಕಲ್ಲುಗಳನ್ನು ಬಳಸುವುದು ಯೋಗ್ಯ.


ಸುಂದರವಾದ, ಅಲಂಕಾರಿಕಾ ಸಸ್ಯಗಳನ್ನು ಸೇರಿಸಿ


ಸುಂದರವಾದ ಗಾರ್ಡನ್‌ಗೆ ಸಸ್ಯಗಳೇ ಶೋಭೆ. ಹಾಗೆಯೇ ಕೆಲವು ಅಲಂಕಾರಿಕಾ ಸಸ್ಯಗಳನ್ನು, ಸಣ್ಣದಾದ ಪೊದೆಯಂತಹ ಗಿಡಗಳು, ಬಣ್ಣ ಬಣ್ಣದ ಹೂ ಬಿಡುವ ಸಸ್ಯಗಳು ಉದ್ಯಾನಕ್ಕೆ ಹೆಚ್ಚು ಮೆರುಗು ನೀಡುತ್ತವೆ.


ಇವುಗಳನ್ನು ವ್ಯವಸ್ಥಿತವಾಗಿ ಅಥವಾ ಅಲ್ಲಲ್ಲಿ ಇಡಬಹುದು. ಉದ್ಯಾನವನ ಅಂದರೆ ಸುಮ್ಮನೆ ಎಲ್ಲೆಂದರಲ್ಲಿ ಗಿಡಗಳನ್ನು ನೆಟ್ಟು ಬಿಡುತ್ತಾರೆ. ಹೀಗೆ ಮಾಡುವ ಬದಲು ಕೆಲವು ರೀತಿಯಲ್ಲಿ ನೆಟ್ಟರೆ ಅಥವಾ ಆ ಕುಂಡಗಳನ್ನು ಇಟ್ಟರೆ ಮನೆಗೆ ಮತ್ತು ಗಾರ್ಡನ್‌ಗೆ ಲಕ್ಸುರಿ ಕಳೆ ಬರುತ್ತದೆ.


ನಿಮ್ಮ ಗಾರ್ಡನ್‌ನಲ್ಲಿ ಪ್ಲಾಂಟರ್‌ಗಳನ್ನು ಇಡಲು ಕೆಲವು ಸಲಹೆಗಳು ಇಲ್ಲಿವೆ.


- ಒಂದೇ ರೀತಿಯ ಕೆಲ ಮಣ್ಣಿನ ಮಡಕೆಗಳನ್ನು ಅಥವಾ ದೊಡ್ಡದಾದ ಕೆಲವು, ಮತ್ತೆ ಸಣ್ಣದಾದ ಕೆಲವು ಮಡಕೆಗಳ ಸಸ್ಯಗಳನ್ನು ಇಡಬಹುದು.
- ಪ್ರವೇಶ ದ್ವಾರದ ಎರಡೂ ಬದಿಯಲ್ಲಿ ಮಡಕೆಗಳನ್ನು ಜೋಡಿಸಿ
- ಉದ್ಯಾನ ಹಾಸಿಗೆಯ ಸೌಂದರ್ಯವನ್ನು ಹೆಚ್ಚು ಮಾಡುವ ಆಯತಾಕಾರದ ಪ್ಲಾಂಟರ್ಗಳನ್ನು ಬಳಸಿ
- ಒಂದೊಂದು ಮಡಕೆಯಲ್ಲಿ ಬೇರೆ ಬೇರೆ ರೀತಿಯ ಸಸ್ಯ ಇಡಿ. ಜೊತೆಗೆ ಮಡಕೆಗಳನ್ನು ಇಡುವ ಜಾಗದಲ್ಲಿ ಸೂರ್ಯನ ಬೆಳಕು ಬರುತ್ತದೆಯೇ ಎಂಬುದನ್ನು ಗಮನಿಸಿ.




ದೊಡ್ಡದಾದ ವಿಭಿನ್ನ ಗಿಡಗಳನ್ನು ಉದ್ಯಾನವನದಲ್ಲಿ ಇರಿಸಿ


ಚಿಕ್ಕ ಹೂವಿನ ಗಿಡಗಳು, ಕೋರ್ಟ್ ಯಾರ್ಡ್‌, ಬೆಳಕಿನ ಜೊತೆ ದೊಡ್ಡದಾದ ಸಸ್ಯಗಳು ಸಹ ನಿಮ್ಮ ಉದ್ಯಾನವನ್ನು ಐಷಾರಾಮಿಯಾಗಿಸುತ್ತದೆ. ನಿಮ್ಮ ಉದ್ಯಾನವನದಲ್ಲಿ ಸಾಕಷ್ಟು ಜಾಗವಿದ್ದರೆ ಸಣ್ಣ ಸಣ್ಣ ಅಲಂಕಾರಿಕಾ ಸಸ್ಯಗಳ ಜೊತೆ ದೊಡ್ಡದಾದ ಮರಗಳ ರೀತಿಯ ಸುಂದರವಾದವನ್ನು ಇರಿಸಬಹುದು.


ಅದರಲ್ಲೂ ಈ ಮರಗಳಲ್ಲಿ ಚಿಕ್ಕಪುಟ್ಟ ಹೂಗಳು ಬಿಡುವಂತಹ ಮರಗಳಿದ್ದರೆ ಇನ್ನೂ ಚೆಂದ. ಜಪಾನಿನಲ್ಲಿ ಹೆಚ್ಚು ಕಂಡುಬರುವ ಮೇಪಲ್‌ ಮರಗಳು ಇನ್ನೂ ವಿಶೇಷವಾಗಿರುತ್ತವೆ.


ಮೇಪಲ್ ಮರ ಅತ್ಯಂತ ಸುಂದರವಾದ ಮರ. ಇದರ ಎಲೆಗಳು ವರ್ಷದುದ್ದಕ್ಕೂ ಬಹಳ ಅಲಂಕಾರಿಕವಾಗಿರುತ್ತವೆ. ಶರತ್ಕಾಲದಲ್ಲಿ ಅವು ಕೆಂಪು, ಕಿತ್ತಳೆ, ಹಳದಿ ಅಥವಾ ನೇರಳೆ ಬಣ್ಣಕ್ಕೆ ಸಹ ತಿರುಗುತ್ತವೆ.


ಸುಂದರವಾದ ಡೆಕ್ ಅನ್ನು ನಿರ್ಮಿಸಿ


ಉದ್ಯಾನ ವಿನ್ಯಾಸಕ್ಕಾಗಿ ಡೆಕ್ಕಿಂಗ್ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದನ್ನು ನಿರ್ಮಿಸುವುದು ಮತ್ತು ನಿರ್ವಹಣೆ ಮಾಡುವುದು ಸುಲಭವಾಗಿದೆ. ಡೆಕ್‌ ಎಂದರೆ ಒಂದು ರೀತಿಯ ಛಾವಣಿ ಅಥವಾ ಹಾಸಿಗೆ ಇದ್ದಂತೆ. ಈ ಡೆಕ್‌ ಅನ್ನು ಮರದಿಂದ ಮಾಡಿದರೆ ಇನ್ನೂ ಸುಂದರವಾಗಿರುತ್ತದೆ.


ದೊಡ್ಡ ಬಂಡೆ ಇರಿಸಿ


ಉದ್ಯಾನವನದಲ್ಲಿ ದೊಡ್ಡ ಬಂಡೆ ಇರಿಸುವುದು ಉದ್ಯಾನವನಕ್ಕೆ ದೊಡ್ಡ ಮೆರಗು ಬರುತ್ತದೆ. ಸಾಮಾನ್ಯವಾಗಿ ಸಾರ್ವಜನಿಕ ಉದ್ಯಾನವನದಲ್ಲಿ ಇಂತಹ ರಚನೆಗಳನ್ನು ನೋವು ನೋಡುತ್ತೇವೆ. ಅದನ್ನು ಮನೆಯ ಗಾರ್ಡನ್‌ಗಳಲ್ಲೂ ಮಾಡಿದರೆ ನಿಮ್ಮ ಮನೆಯ ಸುತ್ತಲಿನ ಚಿತ್ರಣವೇ ಅದ್ಭುತವಾಗಿ ಮೂಡುತ್ತದೆ.


ಈ ಮೇಲಿನ ಎಲ್ಲಾ ಸುಂದರವಾದ ಟಿಪ್ಸ್‌ಗಳನ್ನು ನಿಮ್ಮ ಉದ್ಯಾನವನದಲ್ಲಿ ಅಳವಡಿಸಿದರೆ ನಿಮ್ಮ ಗಾರ್ಡನ್‌ ಸುಂದರವಾಗಿ ವಿಶೇಷವಾಗಿ ಕಾಣುವುದರ ಜೊತೆ ನಿಮ್ಮ ಮನೆಗೆ ಐಷಾರಾಮಿ ಲುಕ್‌ ನೀಡುತ್ತದೆ.

First published: