Juice Centers: ತಾಜಾ ಹಣ್ಣಿನ ಜ್ಯೂಸ್​ ಸಿಗುವ ಬೆಂಗಳೂರಿನ ಟಾಪ್ 5 ಅಂಗಡಿಗಳಿವು

Near Me Juice Centers: ವಿಶೇಷವಾಗಿ ಬೇಸಿಗೆಯಲ್ಲಿ ಆರೋಗ್ಯಕರ ಪಾನೀಯಗಳು ಅತ್ಯಗತ್ಯ. ಮತ್ತು ಈ ಜ್ಯೂಸ್ ಸೆಂಟರ್ ಅಂತಹ ಹಿತವಾದ ಆರೋಗ್ಯಕರ ಪಾನೀಯಗಳಿಗಾಗಿ ಇದು ಬೆಸ್ಟ್​ ಎನ್ನಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐಸ್ ಕ್ರೀಮ್‌ಗಳು (Ice Creams) , ತಂಪು ಪಾನೀಯ (Cool Drinks) ಎಂದರೆ ಎಲ್ಲರಿಗೂ ಇಷ್ಟ. ಬೇಸಿಗೆಯಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇರುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಇದು ಅಗತ್ಯ ಎನ್ನಬಹುದು. ಈಗ ಚಳಿಗಾಲವಿದ್ದರೂ ಸಹ ಬೆಳಗ್ಗೆ ಬಿಸಿಲಿರುತ್ತದೆ. ಸಾಮಾನ್ಯವಾಗಿ ಪ್ಯಾಕೇಜ್ಡ್​ ಪಾನೀಯಗಳು (Packaged drinks)  ಆರೋಗ್ಯಕ್ಕೆ ಹಾನಿಕಾರಕ (Health) ಎಂದು ವೈದ್ಯರು ಹೇಳುತ್ತಾರೆ. ಅದಕ್ಕಾಗಿ ಜನರು ತಂಪು ಪಾನೀಯಗಳ ಬದಲಿಗೆ ತಾಜಾ ಹಣ್ಣಿನ ಜ್ಯೂಸ್​ಗಳನ್ನು (Fruit Juice) ಹೆಚ್ಚು ಇಷ್ಟಪಡುತ್ತದೆ. ಇದು ಆರೋಗ್ಯಕರ ಮತ್ತು ರುಚಿಕರ ಕೂಡ. ನೀವು ಬೆಂಗಳೂರಿನಲ್ಲಿ ಇಂತಹ ಅತ್ಯುತ್ತಮ ತಾಜಾ ಹಣ್ಣಿನ ಜ್ಯೂಸ್​ ಅಂಗಡಿಯನ್ನು ಹುಡುಕುತ್ತಿದ್ರೆ ಕೆಲ ಅಂಗಡಿಗಳ ಲಿಸ್ಟ್​ ಇಲ್ಲಿದೆ.

 ಜ್ಯೂಸ್ ಜಂಕ್ಷನ್ (HSR ಲೇಔಟ್)

100% ನೈಸರ್ಗಿಕ ವಸ್ತುಗಳನ್ನು ಪೂರೈಸುವುದರಿಂದ ಆರೋಗ್ಯಕರ ಜ್ಯೂಸ್​ಗಳನ್ನು ನೀವಿಲ್ಲಿ ಟ್ರೈ ಮಾಡಬಹುದು. ಹೆಸರೇ ಸೂಚಿಸುವಂತೆ, ಇದು ಎಲ್ಲಾ ರೀತಿಯ ಅತ್ಯುತ್ತಮ ನೈಸರ್ಗಿಕ ಹಣ್ಣಿನ ಜ್ಯೂಸ್​ಗಳನ್ನು ನೀಡುತ್ತದೆ. ಇದು ಗ್ರಾಹಕರ ಉತ್ತಮ ಆರೋಗ್ಯವನ್ನು ಖಾತ್ರಿಪಡಿಸುವ ಆರೋಗ್ಯಕರ, ಪ್ರಧಾನ ಗುಣಮಟ್ಟದ ಮತ್ತು ತಾಜಾ ಹಣ್ಣಿನ ಜ್ಯೂಸ್​ ಒದಗಿಸುತ್ತದೆ. ಜ್ಯೂಸ್‌ಗಳ ಹೊರತಾಗಿ, ಇದು ರುಚಿಕರವಾದ ಸೂಪ್‌ಗಳು, ಸ್ಯಾಂಡ್‌ವಿಚ್‌ಗಳು, ಮಿಲ್ಕ್‌ಶೇಕ್‌ಗಳು ಮತ್ತು ಇತ್ಯಾದಿಗಳನ್ನು ಸಹ ಹೊಂದಿದೆ. ಅವರ ಅನಾನಸ್ ಜ್ಯೂಸ್ ಮತ್ತು ಪನೀರ್ ಚೀಸ್ ಮಶ್ರೂಮ್ ಸ್ಯಾಂಡ್‌ವಿಚ್ ಅನ್ನು ಪ್ರಯತ್ನಿಸಬೇಕು.

ಸ್ಥಳ: 2628, 27ನೇ ಮುಖ್ಯ ರಸ್ತೆ, 1ನೇ ಸೆಕ್ಟರ್, ಎಚ್‌ಎಸ್‌ಆರ್ ಲೇಔಟ್

ಶ್ರೀ ಗಣೇಶ ಫ್ರೂಟ್​ ಜ್ಯೂಸ್​ ಸೆಂಟರ್​  (ರಾಜಾಜಿನಗರ)

ಇದನ್ನೂ ಓದಿ: ಮುಂಬೈ ಸ್ಟೈಲ್​ ಪಾವ್​ಬಾಜಿ ಬೇಕು ಅಂದ್ರೆ ಈ 5 ಅಂಗಡಿಗಳಿಗೆ ಮಿಸ್​ ಮಾಡ್ದೇ ಹೋಗಿ

ನೈಸರ್ಗಿಕ ತಾಜಾ ಹಣ್ಣಿನ ಜ್ಯೂಸ್​ಗಳು ಮತ್ತು ಸುಲಭ ಮತ್ತು ತ್ವರಿತ ದೈನಂದಿನ ಪೋಷಣೆಯ ಹುಡುಕಾಟದಲ್ಲಿದ್ದರೆ ಇದು ನಿಮಗಾಗಿ. ಈ ಜ್ಯೂಸ್ ಸೆಂಟರ್ ಎಲ್ಲಾ ರೀತಿಯ ಜ್ಯೂಸ್‌ಗಳೊಂದಿಗೆ ದೊಡ್ಡ ಮೆನುವನ್ನು ಹೊಂದಿದೆ, ಅತ್ಯಂತ ಸರಿಯಾದ ಬೆಲೆಯಲ್ಲಿ. ದೇಹ ಮತ್ತು ಮನಸ್ಸಿಗೆ ಆರೋಗ್ಯಕರ ಎನ್ನಬಹುದು. ಇಲ್ಲಿನ ಜ್ಯೂಸ್ ಮತ್ತು ಚಾಟ್‌ಗಳನ್ನು ಅತ್ಯಂತ ಸ್ವಚ್ಛವಾಗಿ ತಯಾರಿಸಲಾಗುತ್ತದೆ. ಇದು ಬೆಂಗಳೂರಿನಲ್ಲಿರುವ ಹಳೆಯ ಮತ್ತು ಅತ್ಯಂತ ಜನಪ್ರಿಯ ಜ್ಯೂಸ್ ಸೆಂಟರ್ ಆಗಿದ್ದು, ನಗರದಾದ್ಯಂತ ಹಲವಾರು ಶಾಖೆಗಳನ್ನು ಹೊಂದಿದೆ. ಅವರ ರೋಸ್ ಮಿಲ್ಕ್, ಸ್ಟ್ರಾಬೆರಿ ಜ್ಯೂಸ್, ದಾಬೇಲಿ ಇತ್ಯಾದಿಗಳನ್ನು ಪ್ರಯತ್ನಿಸಬೇಕು.

ಸ್ಥಳ: 19ನೇ ಮುಖ್ಯ, 1ನೇ ‘ಎನ್’ ಬ್ಲಾಕ್, ವಿದ್ಯಾವರ್ಧಕ ಸಂಘದ ರಸ್ತೆ, ರಾಜಾಜಿ ನಗರ

ಡೈಲಿ ಜ್ಯೂಸ್ ಬುಗಲ್ ರಾಕ್ (ಬಸವನಗುಡಿ)

ತಾಜಾ ಹಣ್ಣಿನ ಜ್ಯೂಸ್​ ಸೇವಿಸಲು ಸೂಕ್ತವಾದ ಸ್ಥಳ ಇದು. ಬ್ರ್ಯಾಂಡ್ ಅನ್ನು 2008 ರಲ್ಲಿ ಸಣ್ಣ ಐಸ್ ಕ್ರೀಮ್ ಅಂಗಡಿಯಿಂದ ಆರಂಭಿಸಲಾಗಿದ್ದು. ಅದಕ್ಕೆ ದೊರೆತ ಪ್ರತಿಕ್ರಿಯೆಯು ಇಂದು ನಗರದಾದ್ಯಂತ ತನ್ನ ಹಲವಾರು ಸಂಖ್ಯೆಯ ಶಾಖೆಗಳೊಂದಿಗೆ ಅದರ ಯಶಸ್ವಿ ಪ್ರಯಾಣಕ್ಕೆ ಕಾರಣವಾಗಿದೆ.

ನಿಸ್ಸಂದೇಹವಾಗಿ ಬೆಂಗಳೂರಿನ ಅತ್ಯುತ್ತಮ ಜ್ಯೂಸ್ ಕೇಂದ್ರಗಳಲ್ಲಿ ಒಂದಾಗಿದೆ. ಅತ್ಯುತ್ತಮ ಗುಣಮಟ್ಟದ ವಸ್ತುಗಳು ಮತ್ತು ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಮೆನುವನ್ನು ನಿಯಮಿತ ಫ್ಲೇವರ್‌ಗಳು, ವಿಶೇಷ ಫ್ಲೇವರ್‌ಗಳು, ನೈಜ ಹಣ್ಣಿನ ಐಸ್‌ಕ್ರೀಮ್‌ಗಳು ಎಂದು ಪಟ್ಟಿ ಮಾಡಲಾಗಿದ್ದು, . ಐಸ್ ಕ್ರೀಮ್‌ಗಳನ್ನು ತಯಾರಿಸಲು ತಾಜಾ ಹಣ್ಣುಗಳ ಬಳಕೆಯು ಒಂದು ವಿಶಿಷ್ಟವಾದ ರುಚಿಯನ್ನು ನೀಡುತ್ತದೆ.  ಪ್ರತಿ ಬಾರಿ ನೀವು ಬಸವನಗುಡಿಗೆ ಹೋದಾಗ ಇಲ್ಲಿದೆ ಭೇಟಿ ನೀಡಲೇಬೇಕು.

ಸ್ಥಳ: ಈ ಆಂಜನೇಯ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಬಸವನಗುಡಿ.

ಒನ್ ಇನ್ ಎ ಮೆಲನ್​ (ಕೋರಮಂಗಲ)

ವಿಶೇಷವಾಗಿ ಬೇಸಿಗೆಯಲ್ಲಿ ಆರೋಗ್ಯಕರ ಪಾನೀಯಗಳು ಅತ್ಯಗತ್ಯ. ಮತ್ತು ಈ ಜ್ಯೂಸ್ ಸೆಂಟರ್ ಅಂತಹ ಹಿತವಾದ ಆರೋಗ್ಯಕರ ಪಾನೀಯಗಳಿಗಾಗಿ ಇದು ಬೆಸ್ಟ್​ ಎನ್ನಲಾಗುತ್ತದೆ. ಇದು ಒಂದು ಸಣ್ಣ ಔಟ್‌ಲೆಟ್ ಆಗಿದ್ದು, ಕೆಲವು ರುಚಿಕರವಾದ ಹಣ್ಣಿನ ಜ್ಯೂಸ್​ಗಳ ಜೊತೆಗೆ ಸುವಾಸನೆಯ ಶೇಕ್‌ಗಳು ಸಹ ವಿವಿಧ ರೀತಿಯ ಚಾಟ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳು ಮೆನುವಿನಲ್ಲಿ ಲಭ್ಯವಿದೆ. ಹಣ್ಣಿನ ಜ್ಯೂಸ್​ಗಳು, ಕಡಲೆಕಾಯಿ ಬನಾನಾ ಶೇಕ್, ತಂದೂರಿ ಪನೀರ್ ಸ್ಯಾಂಡ್ವಿಚ್ ಅನ್ನು ಪ್ರಯತ್ನಿಸಬೇಕು.

ಸ್ಥಳ: 404, ಸೋಮೇಶ್ವರ ದೇವಸ್ಥಾನ ರಸ್ತೆ, 7ನೇ ಬ್ಲಾಕ್, ಕೋರಮಂಗಲ

ಜ್ಯೂಸ್ ಶಾಪ್ (ಕಲ್ಯಾಣ ನಗರ)

ಹೆಸರೇ ಸೂಚಿಸುವಂತೆ ಇದು ಕೆಲವು ಪರಿಪೂರ್ಣ ಹಣ್ಣಿನ ಜ್ಯೂಸ್​ಗಳಿಗೆ ಮೀಸಲಾಗಿದೆ. ಅವರು ತಮ್ಮ ಅಂಗಡಿ ಆರಂಭಿಸಿದಾಗಿನಿಂದ ಎಲ್ಲಾ ಹಣ್ಣಿನ ಪಾನೀಯ ಪ್ರಿಯರ ಹೃದಯವನ್ನು ಗೆಲ್ಲುತ್ತಿದ್ದಾರೆ.ಇಲ್ಲಿನ ಜ್ಯೂಸ್​ಗಳು ಹೆಚ್ಚು ರುಚಿಕರವಾಗಿರುತ್ತವೆ.

ಇದನ್ನೂ ಓದಿ: Yummy ಕೇಕ್​ ಸವಿಯಲು ಬೆಂಗಳೂರಿನ ಟಾಪ್ 5 ಕೇಕ್​ ಸೆಂಟರ್​ಗಳು ಇಲ್ಲಿದೆ

ಸ್ಥಳ: ನೆಲ ಮಹಡಿ, 403, 5ನೇ ಮುಖ್ಯ ರಸ್ತೆ, HRBR ಲೇಔಟ್ 2ನೇ ಬ್ಲಾಕ್, ಕಲ್ಯಾಣ್ N, HRBR ಲೇಔಟ್
Published by:Sandhya M
First published: