Diabetes ಇರುವವರು ದಿನನಿತ್ಯ ಆಹಾರದೊಂದಿಗೆ ಇದನ್ನೂ ತಿಂದ್ರೆ ಶುಗರ್ ಕಂಟ್ರೋಲ್​ನಲ್ಲಿ ಇರುತ್ತಂತೆ

Diabetes Food: ನಮ್ಮ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದನೆ ಮಾಡದಿದ್ದರೆ ಅಥವಾ ಉತ್ಪಾದಿಸಿದರೂ ಬಳಸಲು ಸಾಧ್ಯವಾಗದೇ ಇದ್ದಾಗ ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯನ್ನು ಮಧುಮೇಹವೆನ್ನುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಧುಮೇಹ (Diabetes) ಇಂದು ವಿಶ್ವದಾದ್ಯಂತ (World) ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಮಧುಮೇಹದ ಆರಂಭಿಕ ಲಕ್ಷಣಗಳು (Sign) ಹೆಚ್ಚಿನ ಜನರಿಗೆ ಗೊತ್ತಾಗಿ ಬಿಡುತ್ತವೆ ಎಂದು ನೀವು ಭಾವಿಸಬಹುದು. ದುರದೃಷ್ಟವಶಾತ್, ಮಧುಮೇಹವು ಇನ್ನೂ ಆರಂಭದಲ್ಲಿರುವಾಗ (Beginning) ನೀಡುವ ಸೂಚನೆಗಳು ಸ್ಪಷ್ಟವಾಗಿದ್ದರೂ ಇದನ್ನು ಬೇರೆ ತೊಂದರೆ ಎಂದೇ ತಿಳಿದುಕೊಂಡು ಅಲಕ್ಷಿಸಿದ ಬಳಿಕ ಮಧುಮೇಹದ ಯಾವುದೋ ಒಂದು ಪರಿಣಾಮ ಕಂಡುಬಂದ ಬಳಿಕವೇ ಮಧುಮೇಹ ಆವರಿಸಿರುವುದು ಗೊತ್ತಾಗುತ್ತದೆ. ಹೀಗಾಗಿ ಮಧುಮೇಹಕ್ಕೆ ಯಾವುದೇ ಚಿಕಿತ್ಸೆ (Treatment) ಇಲ್ಲವಾದರೂ, ಸ್ಥಿತಿಯನ್ನು ನಿಯಂತ್ರಿಸಬಹುದು ಮತ್ತು ಉಪಶಮನ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹವನ್ನು ನಿರ್ವಹಿಸಲು ನೈಸರ್ಗಿಕವಾಗಿ ಪೋಷಕಾಂಶಗಳು ಮತ್ತು ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಉತ್ತಮ ಆಹಾರ ಸೇವನೆ ಅತ್ಯಗತ್ಯ. ಕಾಲ ಕಾಲಕ್ಕೆ ಸಣ್ಣ ತಿಂಡಿಗಳನ್ನು ತಿನ್ನುವುದರಿಂದ ಮಧುಮೇಹ ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಅಥವಾ ಕಡಿಮೆ ಆಗುವುದನ್ನು ತಡೆಯಬಹುದು.

    ಮಧುಮೇಹ ಎಂದರೇನು..?

    ನಮ್ಮ ಮೇದೋಜೀರಕ ಗ್ರಂಥಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪಾದನೆ ಮಾಡದಿದ್ದರೆ ಅಥವಾ ಉತ್ಪಾದಿಸಿದರೂ ಬಳಸಲು ಸಾಧ್ಯವಾಗದೇ ಇದ್ದಾಗ ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯನ್ನು ಮಧುಮೇಹವೆನ್ನುತ್ತೇವೆ. ಆದರೆ ಈ ಸ್ಥಿತಿ ಒಮ್ಮೆಲೇ ಬಂದಿರುವುದಿಲ್ಲ. ವಯಸ್ಸು ಕಳೆದಂತೆ ನಿಧಾನವಾಗಿ ಆವರಿಸುತ್ತದೆ. ನಮ್ಮ ಮೇದೋಜೀರಕ ಗ್ರಂಥಿ ಅಗತ್ಯವಿದ್ದಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸದೇ ಹೋದಾಗ ರಕ್ತದಲ್ಲಿ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ಹೊರ ಹೋಗುತ್ತದೆ.

    ಇದಕ್ಕೆ ಟೈಪ್ 1 ಮಧುಮೇಹ ಎನ್ನುತ್ತಾರೆ. ಒಂದು ವೇಳೆ ಮೇದೋಜೀರಕ ಗ್ರಂಥಿ ಇನ್ಸುಲಿನ್ ಅನ್ನು ಉತ್ಪಾದಿಸಿದ್ದರೂ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದೇ ಹೋದಾಗಲೂ ರಕ್ತದಲ್ಲಿರುವ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತದೆ. ಇದನ್ನು ಟೈಪ್ 2 ಮಧುಮೇಹ ಎನ್ನುತ್ತಾರೆ.

    ಇದನ್ನೂ ಓದಿ: ಚಳಿಗಾಲದಲ್ಲಿ ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಿ, ಜೋಪಾನ!

    ದೇಹದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಇದನ್ನೂ ಸೇವಿಸಿ

    1) ದಾಲ್ಚಿನ್ನಿ :ದಾಲ್ಚಿನ್ನಿ ಸೋಂಕು ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇವು ಉರಿಯೂತದ ಪರಿಣಾಮವನ್ನು ಕಡಿಮೆ ಮಾಡುವ ಶಕ್ತಿ ಹೊಂದಿವೆ. ಒಂದು ಅಧ್ಯಯನದ ಪ್ರಕಾರ ದಾಲ್ಚಿನ್ನಿ ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ಎಲ್ಲಾ ಪದಾರ್ಥಗಳಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ. ಇದು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ.

    2) ತಾಜಾ ಹಣ್ಣುಗಳು ಮತ್ತು ಒಣ ಹಣ್ಣುಗಳು: ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತವನ್ನು ತಪ್ಪಿಸಲು ತಾಜಾ ಹಣ್ಣುಗಳು ಅಥವಾ ಒಣ ಹಣ್ಣುಗಳನ್ನು ಸಹ ತಿನ್ನಬಹುದು. ಬಾಳೆಹಣ್ಣು, ದ್ರಾಕ್ಷಿ, ಸೇಬು ಮತ್ತು ಕಿತ್ತಳೆಯಂತಹ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ. ಒಣ ಹಣ್ಣುಗಳಲ್ಲಿ ನೀವು ಒಣದ್ರಾಕ್ಷಿಗಳನ್ನು ತಿನ್ನಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

    3) ತುಳಸಿ ಎಲೆ: ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ದೇಹವನ್ನು ಸದೃಢವಾಗಿಡಲು ಇದು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ತುಳಸಿ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    4) ಗ್ಲೂಕೋಸ್ ಮಾತ್ರೆಗಳು: ಕಡಿಮೆ ರಕ್ತದ ಸಕ್ಕರೆಯ ಸಮಸ್ಯೆ ಕಂಡುಬಂದರೆ ನೀವು ಗ್ಲೂಕೋಸ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸಲು 15 ರಿಂದ 20 ಗ್ರಾಂ ಸಾಕು. ಇದನ್ನು ತಿಂದ ನಂತರ 10 ರಿಂದ 20 ನಿಮಿಷಗಳ ಕಾಲ ಕಾಯಿರಿ ಮತ್ತು ನಂತರ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

    5) ಸೊಂಪು: ಸೊಂಪು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ಜೀರ್ಣಕ್ರಿಯೆ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ. ಆ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದರ ಹೊರತಾಗಿ, ಹೃದಯ ಸಂಬಂಧಿ ರೋಗಿಗಳಿಗೆ ಸೊಂಪು ತುಂಬಾ ಪ್ರಯೋಜನಕಾರಿ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿದೆ ನೋಡಿ

    6) ಮಿಠಾಯಿಗಳನ್ನು ಸೇವಿಸಿರಿ: ಅಂಟಂಟಾದ ಮಿಠಾಯಿಗಳು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇವು ವೇಗವಾಗಿ ರಕ್ತಪ್ರವಾಹಕ್ಕೆ ಹೀರಲ್ಪಡುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತವೆ. ಇದನ್ನು ತಿಂದ 15 ನಿಮಿಷಗಳ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.
    Published by:ranjumbkgowda1 ranjumbkgowda1
    First published: