• Home
  • »
  • News
  • »
  • lifestyle
  • »
  • Foods For Brain: ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ ಈ 10 ಪೋಷಕಾಂಶಗಳು

Foods For Brain: ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ ಈ 10 ಪೋಷಕಾಂಶಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Foods To Boost Your Brain: ನಿಮ್ಮ ಮೆದುಳನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ಕೆಲವು ಪೋಷಕಾಂಶಗಳಿಂದ ತುಂಬಿದ ಆಹಾರವನ್ನು ಸೇವಿಸುವುದು ತುಂಬಾನೇ ಮುಖ್ಯವಾಗಿರುತ್ತದೆ ಅಂತ ಹೇಳಬಹುದು.

  • Share this:

ಮನುಷ್ಯನ ದೇಹವು (Body) ಅನೇಕ ಅಂಗಾಂಗಗಳಿಂದ ಕೂಡಿರುತ್ತದೆ ಮತ್ತು ಪ್ರತಿಯೊಂದು ಅಂಗಾಂಗದ ಕಾರ್ಯಗಳನ್ನು ಯಾವುದೇ ಅಡೆತಡೆ ಇಲ್ಲದೆ ನಿಭಾಯಿಸಿಕೊಂಡು ಹೋಗುವಂತೆ ಮಾಡಲು ನಾವು ಅನೇಕ ರೀತಿಯ ಪೋಷಕಾಂಶಗಳಿರುವ ಆಹಾರವನ್ನು (Foods)  ಸೇವಿಸಬೇಕಾಗುತ್ತದೆ. ಆದರೆ ದೇಹದಲ್ಲಿರುವ ಎಲ್ಲಾ ಅಂಗಾಂಗಗಳನ್ನು ಒಂದು ರೀತಿಯಲ್ಲಿ ನಿಭಾಯಿಸುವುದು ನಮ್ಮ ಮೆದುಳು ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಮ್ಮ ಮೆದುಳು (Brain) ನಮ್ಮ ದೇಹದ ಕೇವಲ 3 ಪ್ರತಿಶತದಷ್ಟು ಮಾತ್ರವಿರುತ್ತದೆ, ಆದರೆ ಅದು ಸಾಕಷ್ಟು ಶಕ್ತಿಯನ್ನು ಬಳಸುತ್ತದೆ. ಇದು ನಿಮ್ಮ ದೇಹದ ಸ್ಮರಣೆ, ಆಲೋಚನೆ, ಭಾವನೆಗಳು, ಸ್ಪರ್ಶ ಮತ್ತು ಇತರ ಪ್ರತಿಯೊಂದು ಪ್ರಕ್ರಿಯೆಯನ್ನು ನಿಯಂತ್ರಿಸುವ ಒಂದು ಸಂಕೀರ್ಣ ಅಂಗವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ, ನಿಮ್ಮ ಮೆದುಳನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ಕೆಲವು ಪೋಷಕಾಂಶಗಳಿಂದ ತುಂಬಿದ ಆಹಾರವನ್ನು ಸೇವಿಸುವುದು ತುಂಬಾನೇ ಮುಖ್ಯವಾಗಿರುತ್ತದೆ ಅಂತ ಹೇಳಬಹುದು.


ನಿಮ್ಮ ಮೆದುಳಿಗೆ ಸರಿಯಾದ ಪೋಷಕಾಂಶಗಳನ್ನು ಒದಗಿಸುವ ಆರೋಗ್ಯಕರ ಆಹಾರವನ್ನು ನೀವು ಸೇವಿಸಿದರೆ, ಅದು ಸ್ವಯಂಚಾಲಿತವಾಗಿ ನಿಮ್ಮ ಮಾನಸಿಕ ಸಾಮರ್ಥ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಇತ್ತೀಚೆಗೆ, ಪೌಷ್ಟಿಕ ತಜ್ಞೆಯಾದ ರಾಶಿ ಚೌಧರಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಮೆದುಳಿಗೆ ಅಗತ್ಯವಿರುವ 10 ಅಗತ್ಯ ಪೋಷಕಾಂಶಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ ನೋಡಿ.


ಮೆದುಳಿನ ಆರೋಗ್ಯವನ್ನು ಮತ್ತು ಕಾರ್ಯವನ್ನು ಸುಧಾರಿಸುತ್ತವೆ ಈ ಪೋಷಕಾಂಶಗಳು


"ನಿಮ್ಮ ಮೆದುಳು ಅದರ ಅತ್ಯುತ್ತಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಲು, ನೀವು ಸೇವಿಸುವ ಆಹಾರದಲ್ಲಿ ಈ 10 ಅಗತ್ಯ ಪೋಷಕಾಂಶಗಳು ಇರಲೇಬೇಕಾಗುತ್ತವೆ” ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.


1. ಒಮೆಗಾ-3


ಒಮೆಗಾ-3 ಗಳು ಆರೋಗ್ಯಕರ ಕೊಬ್ಬುಗಳಾಗಿದ್ದು, ಆಲೋಚನೆ ಮತ್ತು ಯೋಚಿಸುವ ಪ್ರಕ್ರಿಯೆಗೆ ಇದು ತುಂಬಾನೇ ಸಹಾಯ ಮಾಡುತ್ತದೆ. ಒಮೆಗಾ-3 ಕೊಬ್ಬು ವ್ಯಕ್ತಿಯ ಕಲಿಕೆ ಮತ್ತು ನೆನಪಿನ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


2. ಕಬ್ಬಿಣ


ಈ ಪ್ರಮುಖ ಖನಿಜವು ಅರಿವಿನ ಬೆಳವಣಿಗೆ ಮತ್ತು ಮೆದುಳಿನ ಕಾರ್ಯಗಳಾದ ಆಮ್ಲಜನಕ ಸಾಗಣೆ, ಡಿಎನ್ಎ ಸಂಶ್ಲೇಷಣೆ, ಮೈಲಿನ್ ಸಂಶ್ಲೇಷಣೆ ಮತ್ತು ನ್ಯೂರೋಟ್ರಾನ್ಸ್ಮಿಟರ್ ಸಂಶ್ಲೇಷಣೆ ಮತ್ತು ಚಯಾಪಚಯ ಕ್ರಿಯೆಗಳಿಗೆ ಕಾರಣವಾಗಿದೆ.


3. ವಿಟಮಿನ್ ಬಿ12


ನಿಮ್ಮ ಆಹಾರದಲ್ಲಿ ವಿಟಮಿನ್ ಬಿ12 ಅನ್ನು ನೀವು ಸೇರಿಸಬೇಕು, ಏಕೆಂದರೆ ಇದು ಮನಸ್ಥಿತಿ ಮತ್ತು ಮಾನಸಿಕ ಕಾರ್ಯಕ್ಷಮತೆಯನ್ನು ಚೆನ್ನಾಗಿರಿಸುತ್ತದೆ.


4. ವಿಟಮಿನ್ ಡಿ


ವಿಟಮಿನ್ ಡಿ ಮೂಳೆಯ ಬೆಳವಣಿಗೆಗೆ ಒಳ್ಳೆಯದು ಎಂದು ಹೆಚ್ಚಿನ ಜನರಿಗೆ ಈಗಾಗಲೇ ತಿಳಿದಿದೆ. ಆದಾಗ್ಯೂ, ಇದು ಮೆದುಳಿಗೆ ಅಷ್ಟೇ ಅವಶ್ಯಕ ಎಂಬ ಅಂಶದ ಬಗ್ಗೆಯೂ ನೀವು ತಿಳಿದಿರಬೇಕು. ಈ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆಯ ಅಪಾಯವನ್ನು ಸಹ ತಡೆಯುತ್ತದೆ.


5. ಸತು


ಇದು ನರಗಳ ಸಂಕೇತಕ್ಕೆ ಕಾರಣವಾದ ಒಂದು ನಿರ್ಣಾಯಕ ಪೋಷಕಾಂಶವಾಗಿದೆ.


ಇದನ್ನೂ ಓದಿ: ಮಕ್ಕಳನ್ನು ಕಾಡುವ ಆರ್‌ಎಸ್‌ವಿ ಸೋಂಕು ತಡೆಗಟ್ಟಲು ಈ ಟಿಪ್ಸ್ ನೆನಪಿರಲಿ


6. ವಿಟಮಿನ್ ಇ


ಇದು ಅರಿವಿನ ಕುಸಿತವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ನಮ್ಮ ಮೆದುಳಿಗೆ ವಯಸ್ಸಾದಂತೆ ಜ್ಞಾಪಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.


7. ಮೆಗ್ನೀಸಿಯಮ್


ದೇಹದಲ್ಲಿ ಕಡಿಮೆ ಮಟ್ಟದ ಮೆಗ್ನೀಸಿಯಮ್ ಮೈಗ್ರೇನ್, ಖಿನ್ನತೆ ಮತ್ತು ಅನೇಕ ನರಸಂಬಂಧಿ ಕಾಯಿಲೆಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಆಹಾರದ ಆಯ್ಕೆಗಳ ಬಗ್ಗೆ ಜಾಗೃತರಾಗಿರಿ ಮತ್ತು ನಿಮ್ಮ ಆಹಾರದಲ್ಲಿ ಮೆಗ್ನೀಸಿಯಮ್ ಪೋಷಕಾಂಶವನ್ನು ಸೇರಿಸಿಕೊಳ್ಳಿರಿ.




8. ಕ್ಯಾಲ್ಸಿಯಂ


ಕ್ಯಾಲ್ಸಿಯಂ ನರಕೋಶಗಳಿಂದ ನ್ಯೂರೋಟ್ರಾನ್ಸ್ಮಿಟರ್ ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.


9. ವಿಟಮಿನ್ ಕೆ


ನೀವು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಅರಿವಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ವಿಟಮಿನ್ ಕೆ ನಿಮಗೆ ತುಂಬಾನೇ ಸಹಾಯ ಮಾಡುತ್ತದೆ ಅಂತ ಹೇಳಬಹುದು.


ಇದನ್ನೂ ಓದಿ: ಕಣ್ಣಿನಿಂದ ಹೃದಯದ ಆರೋಗ್ಯದವರೆಗೆ ಒಮೆಗಾ-3 ಕೊಬ್ಬಿನಾಮ್ಲಗಳ ಪ್ರಯೋಜನಗಳಿವು


10. ಸೆಲೆನಿಯಂ


ಇದು ಮೆದುಳಿನ ಉತ್ಕರ್ಷಣ ನಿರೋಧಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುತ್ತದೆ. ಅಲ್ಲದೆ, ಸಂತಾನೋತ್ಪತ್ತಿ, ಥೈರಾಯ್ಡ್ ಹಾರ್ಮೋನ್, ಚಯಾಪಚಯ, ಡಿಎನ್ಎ ಸಂಶ್ಲೇಷಣೆ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆಯಲ್ಲಿ ಸೆಲೆನಿಯಂ ನಿರ್ಣಾಯಕ ಪಾತ್ರ ವಹಿಸುತ್ತದೆ.

Published by:Sandhya M
First published: