Lungs: ಈ ಪದಾರ್ಥಗಳನ್ನು ತಿಂದ್ರೆ ಶ್ವಾಸಕೋಶ ಸದಾ ಆರೋಗ್ಯವಾಗಿ ಇರುತ್ತದಂತೆ!

Food For Lungs : ಇಂದು ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಪೆಟ್ರೋಲ್-ಡೀಸೆಲ್ ಬಳಕೆಯಿಂದ ಗಾಳಿಯಲ್ಲಿ ಮಾಲಿನ್ಯ ಹೆಚ್ಚಿದೆ. ಅದ್ರಲ್ಲೂ ರಾಷ್ಟ್ರರಾಜಧಾನಿ ದೆಹಲಿ ಇಂತಹ ಪ್ರದೇಶದಲ್ಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಹೆಚ್ಚಿಗೆ ಸುಡುತ್ತಿರುವುದರಿಂದ ವಾಯುಮಾಲಿನ್ಯ ಎಂಬುದು ಪ್ರಮುಖ ದೊಡ್ಡ ಸಮಸ್ಯೆಯಾಗಿ ಮಾರ್ಪಾಟಾಗಿದೆ

ಶ್ವಾಸಕೋಶ

ಶ್ವಾಸಕೋಶ

  • Share this:
    ನಮ್ಮ ಜೈವಿಕ ಗಡಿಯಾರ(Clock) ಸರಿಯಾಗಿ ಕೆಲಸ ಮಾಡಬೇಕೆಂದರೆ ಶ್ವಾಸಕೋಶದ(Lungs) ಆರೋಗ್ಯ ಸರಿಯಾಗಿರುವುದು ಬಹಳ ಮುಖ್ಯ. ಇಂದು ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಪೆಟ್ರೋಲ್-ಡೀಸೆಲ್(Petrol-Diesel) ಬಳಕೆಯಿಂದ ಗಾಳಿಯಲ್ಲಿ ಮಾಲಿನ್ಯ(Air Pollution) ಹೆಚ್ಚಿದೆ. ಅದ್ರಲ್ಲೂ ರಾಷ್ಟ್ರರಾಜಧಾನಿ ದೆಹಲಿ(Delhi) ಇಂತಹ ಪ್ರದೇಶದಲ್ಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಹೆಚ್ಚಿಗೆ ಸುಡುತ್ತಿರುವುದರಿಂದ ವಾಯುಮಾಲಿನ್ಯ ಎಂಬುದು ಪ್ರಮುಖ ದೊಡ್ಡ ಸಮಸ್ಯೆಯಾಗಿ ಮಾರ್ಪಾಟಾಗಿದೆ. ಮಿತಿ ಮೀರುತ್ತಿರುವ ವಾಯುಮಾಲಿನ್ಯದಿಂದ ಶ್ವಾಸಕೋಶ ಹಾಗೂ ಉಸಿರಾಟ ಸಂಬಂಧಿ ಕಾಯಿಲೆಗಳು ಕಾಮನ್ ಆಗಿವೆ. ಇದಕ್ಕಾಗಿ ಉತ್ತಮ ಆಹಾರ ಸೇವನೆ ಅತ್ಯಗತ್ಯ. ಹೀಗಾಗಿ ಶುದ್ಧ ಗಾಳಿ ನೀಡುವ ಶ್ವಾಸಕೋಶವನ್ನು ಆರೋಗ್ಯದಿಂದ ಇಟ್ಟು ಕೊಳ್ಳಬೇಕಾದದ್ದು ಅಗತ್ಯ. ಆಗಿದ್ರೆ ನಮ್ಮ ಶ್ವಾಸಕೋಶವನ್ನು ಹೇಗೆ ಆರೋಗ್ಯದಿಂದ ಇಟ್ಟುಕೊಳ್ಳಲು ಯಾವ ಆಹಾರ ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ

    ಪೌಷ್ಟಿಕಾಂಶ ಭರಿತ ಆಹಾರ ಸೇವನೆಯಿಂದ ಶ್ವಾಸಕೋಶದ ರಕ್ಷಣೆ

    ಎಲ್ಲ ಪ್ರದೇಶಗಳಲ್ಲೂ ವಾಯು ಮಾಲಿನ್ಯದಂತಹ ಸಮಸ್ಯೆ ಇದೆ. ದೀರ್ಘಕಾಲದ ಬ್ರಾಂಕೈಟಿಸ್‌ನಿಂದ ಬಳತ್ತಿರುವವರು, ಹೃದ್ರೋಗ ಸಮಸ್ಯೆ ಮತ್ತು ಮಧುಮೇಹದ ಇರುವವರು ಎಚ್ಚರಿಕೆ ವಹಿಸಬೇಕು. ಹಾಗಾಗಿ ನಾವು ಯಾವಾಗಲೂ ಅಲರ್ಟ್ ಆಗಿಯೇ ಇದ್ದು ಶ್ವಾಸಕೋಶಗಳ ಆರೋಗ್ಯ ಕಾಪಾಡುವಂಥ ಆಹಾರಗಳನ್ನು ನಮ್ಮ ಡಯಟ್‌ನಲ್ಲಿ ಹೆಚ್ಚಾಗಿ ಸೇವಿಸಬೇಕು ಹಾಗೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಇದರಿಂದ ಶಸ್ತ್ರಕ್ರಿಯೆ ಜೊತ ವೈದ್ಯರ ಖರ್ಚನ್ನೂ ಉಳಿಸಬಹುದು

    1)ಬೆಳ್ಳುಳ್ಳಿ :ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಎಂಬ ಫೈಟೋನ್ಯೂಟ್ರಿಯೆಂಟ್ ನಮಗೆ ಹಲವಾರು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ. ಇದರಲ್ಲಿ ಕ್ರಿಮಿನಾಶಕ, ಕ್ಯಾನ್ಸರ್‌ವಿರೋಧಿ ಹಾಗೂ ಬಿಪಿ ತಗ್ಗಿಸುವ ಗುಣಗಳಿವೆ. ಶ್ವಾಸಕೋಶದ ಸಮಸ್ಯೆ ಹಾಗೂ ಲಂಗ್ ಕ್ಯಾನ್ಸರ್ ಇರುವ ರೋಗಿಗಳಲ್ಲಿ ಬೆಳ್ಳುಳ್ಳಿ ಅಧಿಕ ಸೇವನೆಯಿಂದಾಗಿ ಪಾಸಿಟಿವ್ ಬದಲಾವಣೆಗಳಾಗಿವೆ.

    ಇದನ್ನೂ ಓದಿ :ಕೋವಿಡ್-19 ನ್ಯುಮೋನಿಯಾ ಎಂದರೇನು? ಅದರ ರೋಗಲಕ್ಷಣಗಳೇನು ಹಾಗೂ ಚೇತರಿಕೆ ಹೇಗೆ?

    2)ಬೆಲ್ಲ :ಆಯುರ್ವೇದದಲ್ಲಿ ಬೆಲ್ಲದ ಸೇವನೆಯು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೆಲ್ಲವು ಶ್ವಾಸನಾಳದ ಸ್ನಾಯುಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಉಸಿರಾಟವನ್ನು ಸುಲಭಗೊಳಿಸುತ್ತದೆ ಮತ್ತು ಶ್ವಾಸಕೋಶದಲ್ಲಿ ಗಾಳಿಯ ಹರಿವನ್ನು ಹೆಚ್ಚಿಸುತ್ತದೆ.

    3)ಮೀನು : ಮೀನಿನಲ್ಲಿ ಸಿ ವಿಟಮಿನ್ ಮಾತ್ರವಲ್ಲದೆ
    ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ .ಮೀನುಗಳು ಆಂಟಿಕಾರ್ಸಿನೋಜೆನಿಕ್ ಮತ್ತು ಆಂಟಿಆಕ್ಸಿಡೇಟಿವ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಈ ಎಲ್ಲಾ ಗುಣಲಕ್ಷಣಗಳು ಶ್ವಾಸಕೋಶದ ಕಾಯಿಲೆಗಳು ಮತ್ತು ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುತ್ತವೆ.

    4)ಸೇಬು : ದಿನಕ್ಕೊಂದು ಸೇಬಿನ ಹಣ್ಣಿನ ಸೇವನೆ ಎಲ್ಲಾ ರೀತಿಯ ವೈದ್ಯರನ್ನು ದೂರ ಇಡು ವುದು ಎಂಬ ಮಾತಿನಂತೆ, ಪ್ರತಿನಿತ್ಯ ಸೇಬುಹಣ್ಣು ಸೇರಿಸುವುದು ನಮ್ಮ ಶ್ವಾಸಕೋಶದ ಆರೋಗ್ಯಕ್ಕೆ ಸಹಕಾರಿ..
    . ಸೇಬು ತಿನ್ನುವುದರಿಂದ ಶ್ವಾಸಕೋಶದ ಕೆಲಸ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ. ಆಸ್ತಮಾ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆಗಳನ್ನು ಇದು ಕಡಿಮೆ ಮಾಡುತ್ತದೆ.

    5)ವಾಲ್ನಟ್ : ಒಮೆಗಾ -3 ಕೊಬ್ಬಿನಾಮ್ಲಗಳ ಶ್ರೀಮಂತ ವಾಲ್ನಟ್.ವಾಲ್ನಟ್​ನ ನಿಯಮಿತ ಸೇವನೆಯು ಆಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯಕವಾಗಿದೆ.

    6)ಬೀಟ್ರೂಟ್: ಬೀಟ್ರೂಟ್​ನಲ್ಲಿ ಮೆಗ್ನೀಸಿ

    ಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್ ಆಂಟಿಆಕ್ಸಿಡೆಂಟ್​ಗಳು ಸಮೃದ್ಧವಾಗಿವೆ.. ತಜ್ಞರ ಪ್ರಕಾರ, ನೈಟ್ರೇಟ್‌ಗಳು ರಕ್ತನಾಳಗಳನ್ನು ವಿಶ್ರಾಂತಿ ಪಡೆಯಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಆಮ್ಲಜನಕದ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ :ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೇಗೆ ಕಂಡುಬರುತ್ತದೆ..? ಚಿಕಿತ್ಸೆ ಏನು?

    7)ಪಾಲಕ್ :ಪಾಲಕ್ ಹಾಗೂ ಇತರೆ ಗಾಢ ಹಸಿರು ಬಣ್ಣದ ಸೊಪ್ಪು ಮತ್ತು ತರಕಾರಿಗಳು ವಿಟಮಿನ್ ಹಾಗೂ ಮಿನರಲ್‌ಗಳ ಆಗರ. ಇದರಲ್ಲಿರುವ ಫೈಟೋಕೆಮಿಕಲ್‌ಗಳು ಉರಿಯೂತ ಕಡಿಮೆ ಮಾಡಿ, ಆಕ್ಸಿಡೇಟಿವ್ ಹಾನಿ ತಪ್ಪಿಸಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ. ದಿನಕ್ಕೊಂದು ಕಪ್ ಪಾಲಕ್ ಸೇವನೆ ಶ್ವಾಸಕೋಶದ ಆರೋಗ್ಯದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

    8)ಅರಿಶಿಣ :ಅರಿಶಿಣದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರ ಸೇವನೆಯು ಶ್ವಾಸಕೋಶದ ಕಾರ್ಯ ಸಾಮರ್ಥ್ಯವನ್ನು ಸುಧಾರಿಸುತ್ತದೆ
    Published by:ranjumbkgowda1 ranjumbkgowda1
    First published: