Dosa Spots: ಬೆಂಗಳೂರಲ್ಲಿ ಬೆಸ್ಟ್ ವೆರೈಟಿ ದೋಸೆ ಸಿಗುವ ಟಾಪ್ 5 ಸ್ಥಳಗಳ ಲಿಸ್ಟ್ ಇಲ್ಲಿದೆ, ನೀವು ಹೋಗಿದ್ದೀರಾ?

Dosa Hotels In Bengaluru: ಇಲ್ಲಿ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಆಹಾರಗಳು ಲಭ್ಯವಿದೆ. ಬೆಂಗಳೂರಿನಲ್ಲಿ ಈ ವೈವಿಧ್ಯಮಯ ಶುದ್ಧ ಸಸ್ಯಾಹಾರಿ ತಮಿಳಿನ ಪಾಕಪದ್ಧತಿಯಿಂದ, ಉಡುಪಿಯ ಭಕ್ಷ್ಯಗಳವರೆಗೆ, ಹಾಗೆಯೇ ಕರ್ನಾಟಕದ ಕೂರ್ಗ್‌ನ ಕೊಡವ ಪಾಕಪದ್ಧತಿಯ ಮಸಾಲೆಯುಕ್ತ ಹಂದಿಮಾಂಸದ ಆಹಾರವನ್ನು ಒದಗಿಸುವ ರೆಸ್ಟೋರೆಂಟ್‌ಗಳು ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐದು ದಕ್ಷಿಣ ಭಾರತದ (South India) ರಾಜ್ಯಗಳಾದ ಕರ್ನಾಟಕ (Karnataka) , ತಮಿಳುನಾಡು Tamilnadu), ಕೇರಳ (Kerala), ಆಂಧ್ರ ಪ್ರದೇಶ (Andra Pradesh) ಮತ್ತು ತೆಲಂಗಾಣ ಅತ್ಯಂತ ರೋಮಾಂಚಕ ಪಾಕಪದ್ಧತಿಯನ್ನು ಹೊಂದಿವೆ. ಎಲ್ಲಾ ಐದು ಪ್ರದೇಶಗಳ ಆಹಾರವು ತುಂಬಾ ವಿಭಿನ್ನವಾಗಿದೆ. ತೆಂಗಿನಕಾಯಿಯಂತಹ ಸಾಮಾನ್ಯ ಪದಾರ್ಥಗಳ ಬಳಕೆ ಸಾಮಾನ್ಯ. ದಕ್ಷಿಣ ಭಾರತದ ಎಲ್ಲಾ ಪಾಕಪದ್ಧತಿಗಳಲ್ಲಿ ಸ್ಥಳೀಯವಾಗಿ ತಯಾರಿಸಿದ ತರಕಾರಿಗಳಾದ ಬಾಳೆಕಾಯಿ, ಸೋರೆಕಾಯಿ ಅಥವಾ ಬೆಳ್ಳುಳ್ಳಿ, ಶುಂಠಿ ಮತ್ತು ಹುಣಸೆಹಣ್ಣುಗಳನ್ನು ಬಳಸಲಾಗುತ್ತದೆ.  ಹಾಗೆಯೇ ಬೆಂಗಳೂರು ನಗರ ವಿವಿಧತೆಯ ಬೀಡು. ಇಲ್ಲಿ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಆಹಾರಗಳು ಲಭ್ಯವಿದೆ. ಬೆಂಗಳೂರಿನಲ್ಲಿ ಈ ವೈವಿಧ್ಯಮಯ ಶುದ್ಧ ಸಸ್ಯಾಹಾರಿ ತಮಿಳಿನ ಪಾಕಪದ್ಧತಿಯಿಂದ, ಉಡುಪಿಯ ಭಕ್ಷ್ಯಗಳವರೆಗೆ, ಹಾಗೆಯೇ ಕರ್ನಾಟಕದ ಕೂರ್ಗ್‌ನ ಕೊಡವ ಪಾಕಪದ್ಧತಿಯ ಮಸಾಲೆಯುಕ್ತ ಹಂದಿಮಾಂಸದ ಆಹಾರವನ್ನು ಒದಗಿಸುವ ರೆಸ್ಟೋರೆಂಟ್‌ಗಳು ಇದೆ.

ಹಾಗೆಯೇ ಇಲ್ಲಿ ದೋಸೆ ಎಂದರೆ ಜನರಿಗೆ ಬಹಳ ಇಷ್ಟ. ನೀವೂ ಸಹ ಬೆಂಗಳೂರಿನಲ್ಲಿ ರುಚಿಕರ ದಕ್ಷಿಣ ಭಾರತದ ಆಹಾರವನ್ನು ಅಥವಾ ದೋಸೆ ಹೋಟೆಲ್​ ಹುಡುಕುತ್ತಿದ್ರೆ ಕೆಲ ಹೋಟೆಲ್​ಗಳ ಲಿಸ್ಟ್ ಇಲ್ಲಿದೆ.

ಮಾವಳ್ಳಿ ಟಿಫಿನ್ ರೂಮ್ 

ಟಾಪ್ 10 ರೆಸ್ಟೋರೆಂಟ್‌ಗಳಲ್ಲಿ MTR ಕೂಡ ಒಂದು. ಈ ರೆಸ್ಟೋರೆಂಟ್ ನಗರದಾದ್ಯಂತ ಎಂಟು ಶಾಖೆಗಳನ್ನು ಹೊಂದಿದೆ ಮತ್ತು ಬೆರಗುಗೊಳಿಸುವಷ್ಟು ಕಡಿಮೆ ಬೆಲೆಯಲ್ಲಿ ಕೆಲವು ರುಚಿಕರವಾದ ದಕ್ಷಿಣ ಭಾರತೀಯ ಆಹಾರಗಳನ್ನು ಒದಗಿಸುತ್ತದೆ. ಈ ರೆಸ್ಟೋರೆಂಟ್ ಅನ್ನು ಕರ್ನಾಟಕದ ಉಡುಪಿಯ ಮೈಯಾ ಸಹೋದರರು ಸ್ಥಾಪಿಸಿದ್ದು, ಇಲ್ಲಿನ ಅತ್ಯಂತ ಜನಪ್ರಿಯ ಆಹಾರಗಳೆಂದರೆ ತುಪ್ಪದ ಮಸಾಲೆ ದೋಸೆ, ರವಾ ಇಡ್ಲಿ, ಗರಿಗರಿಯಾದ ವಡಾ ಮತ್ತು ಫಿಲ್ಟರ್ ಕಾಫಿ.

ಸ್ಥಳ: 14, ಲಾಲ್ಬಾಗ್ ರೋಡ್, ಮಾವಳ್ಳಿ, ಬಸವನಗುಡಿ ( ಇನ್ನೂ 7 ಬ್ರಾಂಚ್​ಗಳಿವೆ)

ವಿದ್ಯಾರ್ಥಿ ಭವನ್

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಸ್ಟ್ ಕಾಫಿ ಸಿಗುವ ಟಾಪ್ 6 ಸ್ಥಳಗಳ ಲಿಸ್ಟ್ ಇಲ್ಲಿದೆ

ಉತ್ತಮ ದಕ್ಷಿಣ ಭಾರತದ ತಿಂಡಿಯನ್ನು ಇಷ್ಟಪಡುವ ಜನರು ಈ ಸ್ಥಳವನ್ನು ಇಷ್ಟಪಡುತ್ತಾರೆ, ಇಲ್ಲಿನ ಸರಳವಾದ ವಾತಾವರಣ ಮತ್ತು ಗೋಡೆಗಳ ಮೇಲೆ ನೇತಾಡುವ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳು ವಿಭಿನ್ನ ಅನುಭವ ನೀಡುತ್ತದೆ.ಕಡಿಮೆ ಬೆಲೆಗೆ ಉತ್ತಮ ಆಹಾರವು ಈ ಸ್ಥಳದ ವಿಶಿಷ್ಟ.ಈ ರೆಸ್ಟೋರೆಂಟ್ ಹಳೆಯ ಬೆಂಗಳೂರಿನ ಐಕಾನಿಕ್ ಹೆಗ್ಗುರುತಾಗಿದೆ ಮತ್ತು ಅದರ ಗರಿಗರಿಯಾದ ಮಸಾಲೆ ದೋಸೆಗಳು ಮತ್ತು ವಿವಿಧ ದೋಸೆಗಳಿಗೆ ಹೆಸರುವಾಸಿಯಾಗಿದೆ. ಉತ್ತಮ ಪ್ರಮಾಣ ಮತ್ತು ಗುಣಮಟ್ಟದೊಂದಿಗೆ ಶುಚಿಯಾದ, ಆಹಾರವು ವಿದ್ಯಾರ್ಥಿ ಭವನವನ್ನು ನಗರದ ಜನರ ಹಾಟ್​ ಪೇವರೇಟ್​ ಎನ್ನಬಹುದು.

ಸ್ಥಳ: 32, ಗಾಂಧಿ ಬಜಾರ್, ಗಾಂಧಿ ಬಜಾರ್ ಸರ್ಕಲ್ ಹತ್ತಿರ, ಬಸವನಗುಡಿ

ಬ್ರಾಹ್ಮಣರ ಕಾಫಿ ಬಾರ್ (Brahmin's Coffee Bar)

MTR ಖ್ಯಾತಿಯ ಮೂವರು ಮೈಯಾ ಸಹೋದರರಲ್ಲಿ ಒಬ್ಬರು ಆರಂಭಿಸಿರುವ ಕೆಫೆಯು ನಗರದಲ್ಲಿ ದಕ್ಷಿಣ ಭಾರತೀಯ ಆಹಾರಕ್ಕಾಗಿ ಅತಿ ಹೆಚ್ಚು ರೇಟಿಂಗ್ ಪಡೆದ ಕೆಫೆಗಳಲ್ಲಿ ಒಂದು. ಇದು ಅತ್ಯಂತ ಹಳೆಯ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದ್ದು, ಹೆಚ್ಚಿನ ಆಯ್ಕೆ ಇಲ್ಲ. ಆದರೆ ಪ್ರತಿಯೊಂದು ಆಹಾರವು ತನ್ನದೇ ಆದ ಸ್ವಾದವನ್ನು ಹೊಂದಿದೆ. ಇಲ್ಲಿನ ದೋಸೆ ಜನರ ನೆಚ್ಚಿನ ಆಹಾರ ಎನ್ನಬಹುದು.

ಸ್ಥಳ: ರಂಗರಾವ್ ರಸ್ತೆ, ಶಂಕರ ಮಠದ ಹತ್ತಿರ, ಶಂಕರಪುರಂ, ಬಸವನಗುಡಿ ಪ್ರದೇಶ, ಬಸವನಗುಡಿ

 ಶ್ರೀ ಸಾಗರ್ (CTR)

ಬೆಂಗಳೂರಿನಲ್ಲಿ ಅತ್ಯುತ್ತಮ ಬೆಣ್ಣೆ ದೋಸೆಗೆ ಹೆಸರುವಾಸಿಯಾದ ಶ್ರೀ ಸಾಗರ್ ಯಾವಾಗಲೂ ಜನರಿಂದ ಕೂಡಿರುತ್ತದೆ. ಇಲ್ಲಿ ನೀಡುವ ಆಹಾರ ಅತ್ಯುನ್ನತ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಒಮ್ಮೆ ನೀವು ಅದರ ಆಹಾರದ ರುಚಿಯನ್ನು ಅನುಭವಿಸಿದ ನಂತರ, ನೀವು ಮತ್ತೆ ಮತ್ತೆ ಅಲ್ಲಿಗೆ ಹೋಗುವಂತೆ ಮಾಡುವ ಸ್ಥಳಗಳಲ್ಲಿ ಇದೂ ಒಂದು. ಜನರು ಅದರ ಮಂಗಳೂರಿನ ಬಜ್ಜಿ, ಪೂರಿ-ಸಾಗು ಮತ್ತು ಮೆದ್ದೂರ್ ವಡಾದ ರುಚಿಗಾಗಿ ಸಹ ಭೇಟಿ ನೀಡುತ್ತಾರೆ.

ಸ್ಥಳ: 7ನೇ ಕ್ರಾಸ್, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ

ತಾಜಾ ತಿಂಡಿ

ತಾಜಾ ತಿಂಡಿಯು ನಗರದ ಜನರಲ್ಲಿ ಪ್ರಸಿದ್ಧವಾಗಿದೆ. ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮವಾದ ಆಹಾರಕ್ಕಾಗಿ ಮಾತ್ರವಲ್ಲದೆ ಅತ್ಯಂತ ದಕ್ಷ ಸೇವೆಯ ಕಾರಣದಿಂದಾಗಿ ಜನರಿಂದ ತುಂಬಿರುತ್ತದೆ. ಈ ಸ್ಥಳವು ತಾಜಾ ದಕ್ಷಿಣ ಭಾರತೀಯ ತಿಂಡಿಗಳಿಗೆ ಹೆಸರುವಾಸಿಯಾಗಿದ್ದು, ಮನಸ್ಸಿಗೆ ಮುದ ನೀಡುತ್ತದೆ.

ಇದನ್ನೂ ಓದಿ: ಫ್ರೆಂಡ್ಸ್​ ಜೊತೆ ಔಟಿಂಗ್ ಹೋಗ್ಬೇಕು ಅಂದ್ರೆ ಇಲ್ಲಿದೆ ಬೆಸ್ಟ್​ ಕೆಫೆಗಳ ಲಿಸ್ಟ್

ಸ್ಥಳ: 1004, 26ನೇ ಮುಖ್ಯ, ಎಚ್‌ಡಿಎಫ್‌ಸಿ ಬ್ಯಾಂಕ್ ಪಕ್ಕ, 4ನೇ ಟಿ ಬ್ಲಾಕ್, ಜಯನಗರ
Published by:Sandhya M
First published: