Day Care Center: ಬೆಂಗಳೂರಲ್ಲಿ ಕೆಲಸಕ್ಕೆ ಹೋಗೋ ತಾಯಂದಿರ ಪಾಲಿನ ಅತ್ಯಗತ್ಯ ಸ್ಥಳಗಳಿವು

Near Me: ಈ ಡೇ ಕೇರ್​ ಸೆಂಟರ್​ಗಳಲ್ಲಿ ನೀವು ನಿಶ್ಚಿಂತೆಯಿಂದ ಮಕ್ಕಳನ್ನು ಬಿಟ್ಟು ಕೆಲಸ ಮಾಡಬಹುದು. ನಿಮ್ಮ ಮಗು ಸಹ ಚಿಕ್ಕದಿದ್ದು, ಬೆಂಗಳೂರಿನಲ್ಲಿ ಡೇ ಕೇರ್​ ಸೆಂಟರ್​ಗಳನ್ನು ಹುಡುಕುತ್ತಿದ್ರೆ ಇಲ್ಲಿದೆ ಕೆಲ ಲಿಸ್ಟ್​.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಜೀವನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಪೋಷಕರಿಗೆ ಮಕ್ಕಳನ್ನು (Child Care) ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪರಿಸ್ಥಿತಿ ಇದೆ. ಬೆಂಗಳೂರಿನಂತಹ (Bengaluru) ನಗರಗಳಲ್ಲಿ ಗಂಡ ಹೆಂಡತಿ ಇಬ್ಬರೇ ಇರುವ ಕಡೆ ಪುಟ್ಟ ಮಕ್ಕಳನ್ನು ಅದರಲ್ಲೂ 4 ವರ್ಷ ಒಳಗಿನ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವುದು ಕಷ್ಟಕರವಲ್ಲ. ಅದಕ್ಕೆ ಡೇ ಕೇರ್​ ಸೆಂಟರ್​ಗಳು (Day care centers) ಆರಂಭವಾಗಿದ್ದು, ನಿಮ್ಮ ಮಕ್ಕಳನ್ನು ಪೂರ್ತಿ ದಿನ ಆರೈಕೆ ಮಾಡುವ ಜವಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಈ ಡೇ ಕೇರ್​ ಸೆಂಟರ್​ಗಳಲ್ಲಿ ನೀವು ನಿಶ್ಚಿಂತೆಯಿಂದ ಮಕ್ಕಳನ್ನು ಬಿಟ್ಟು ಕೆಲಸ ಮಾಡಬಹುದು. ನಿಮ್ಮ ಮಗು ಸಹ ಚಿಕ್ಕದಿದ್ದು, ಬೆಂಗಳೂರಿನಲ್ಲಿ ಡೇ ಕೇರ್​ ಸೆಂಟರ್​ಗಳನ್ನು ಹುಡುಕುತ್ತಿದ್ರೆ ಇಲ್ಲಿದೆ ಕೆಲ ಲಿಸ್ಟ್​.

KLAY ಡೇಕೇರ್

KLAY ಡೇಕೇರ್ ಮಗುವಿನ ಆರೈಕೆಯನ್ನು ಉತ್ತಮವಾಗಿ ಮಾಡುವ ಕೇರ್​ ಸೆಂಟರ್​ ಎಂದು ಪ್ರಸಿದ್ದವಾಗಿದೆ. ಇದೊಂದು ಚೈನ್​ ಡೇಕೇರ್​ ಸೆಂಟರ್​ ಆಗಿದ್ದು, ಉನ್ನತ ಗುಣಮಟ್ಟದ ಬೋಧನೆ, ಶಿಕ್ಷಣ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಕಾರಣದಿಂದಾಗಿ ಪೋಷಕರು ಈ ಶಾಲೆಯನ್ನು ಆಯ್ಕೆ ಮಾಡುತ್ತಾರೆ.  Klay Prep Schools ಮತ್ತು DayCare ಬೆಂಗಳೂರು ಇಂದಿರಾನಗರದಲ್ಲಿರುವ ಮಕ್ಕಳ ಕೇಂದ್ರವಾಗಿದೆ.ಬೆಳಿಗ್ಗೆ 9:30 ರಿಂದ 11:30 ರವರೆಗೆ ಹಾಗೂ ಡೇಕೇರ್ ಬೆಳಿಗ್ಗೆ 8:30 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸುತ್ತವೆ.

ವಿಳಾಸ: 263 6ನೇ ಮುಖ್ಯ ರಕ್ಷಣಾ ಕಾಲೋನಿ, ಇಂದಿರಾನಗರ, ಬೆಂಗಳೂರು, ಕರ್ನಾಟಕ - 560038

ಮೊಬೈಲ್​ ನಂಬರ್​: 7676708888

ಇಮೇಲ್​: admissions@klayschools.com

ಕ್ಯೂಬಿ ಟೇಲ್ಸ್​ (CUBBY TALES)

ಮಕ್ಕಳ ಯೋಗಕ್ಷೇಮದ ವಿಚಾರವಾಗಿ ಹೆಚ್ಚಿನ ಬದ್ಧತೆಯೊಂದಿಗೆ, ಈ ಡೇ ಕೇರ್​ ಮಕ್ಕಳ ಆರೈಕೆ ಮಾಡುತ್ತದೆ. ಕ್ಯೂಬಿ ಟೇಲ್ಸ್ ಪ್ರಿಸ್ಕೂಲ್ ಒಂದು ಕನಸಿನ ಯೋಜನೆಯಾಗಿದೆ ಮತ್ತು ನಮ್ಮ ಚಿಕ್ಕ ಮಕ್ಕಳಿಗೆ ಸುರಕ್ಷಿತ ಮನೆಯ ರೀತಿ ಎಂದರೆ ತಪ್ಪಾಗಲಾರದು.  ಇದು ಬೆಂಗಳೂರು ಕೋರಮಂಗಲದಲ್ಲಿರುವ ಮಕ್ಕಳ ಡೇ ಕೇರ್​ ಆಗಿದ್ದು, ಇದು ಬೆಳಗ್ಗೆ 8:30 ರಿಂದ ಮಧ್ಯಾಹ್ನ 1:30 ರವರೆಗೆ ಸೇವೆ ನೀಡುತ್ತದೆ.

ವಿಳಾಸ:
46, 1ನೇ ಮುಖ್ಯ ರಸ್ತೆ, ಎಸ್.ಟಿ. ಬೆಡ್, ಕಾವೇರಿ ಕಾಲೋನಿ, ಕೋರಮಂಗಲ, ಬೆಂಗಳೂರು, ಕರ್ನಾಟಕ - 560095

ಮೊಬೈಲ್​ ನಂಬರ್: 7349288321

ಇಮೇಲ್​: info.koramangala@ctbengaluru.in

IPSAA ಡೇಕೇರ್

ಪೋಷಕರು ನಿರಾತಂಕವಾಗಿ ತಮ್ಮ ಮಕ್ಕಳನ್ನು ಈ ಡೇಕೇರ್ನಲ್ಲಿ ಬಿಟ್ಟು ನೆಮ್ಮದಿ ಆಗಿರುವುದು ಈ ಸೆಂಟರ್​ನ ಗುರಿಯಾಗಿದೆ. ipsaa ಮಕ್ಕಳಿಗಾಗಿ ಒಂದು ದೊಡ್ಡ ಸುರಕ್ಷಿತ ಮನೆಯಂತಿದೆ, ಅಲ್ಲಿ ಶಾಂತ, ಕಾಳಜಿಯುಳ್ಳ ವಾತಾವರಣದಲ್ಲಿ ಮಕ್ಕಳು ದಿನವನ್ನು ಕಳೆಯುತ್ತಾರೆ. ಇಪ್ಸಾ ಡೇಕೇರ್ ಮತ್ತು ಪ್ರಿ-ಸ್ಕೂಲ್ ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ಮಕ್ಕಳ ಡೇಕೇರ್​ ಸೆಂಟರ್​ ಆಗಿದ್ದು, ನಿಮ್ಮ ಮಕ್ಕಳಿಗೆ ಉತ್ತಮ ಆಯ್ಕೆ ಎನ್ನಬಹುದು.

ವಿಳಾಸ: ಇಪ್ಸಾ ಡೇ-ಕೇರ್, ಜಿಆರ್ ಟೆಕ್ ಪಾರ್ಕ್, ಅಗ್ನಿ ಬ್ಲಾಕ್, ಹಂತ 1, , ವೈಟ್‌ಫೀಲ್ಡ್, ಬೆಂಗಳೂರು, ಕರ್ನಾಟಕ - 560008

ಮೊಬೈಲ್​ ನಂಬರ್: 9810048477

ಇಮೇಲ್​: pranab@ipsaa.in

ಇದನ್ನೂ ಓದಿ: ಬೆಳಗಿನ ತಿಂಡಿಗೆ ಈ ಐತಿಹಾಸಿಕ ರೆಸ್ಟೋರೆಂಟ್​ಗಳಿಗೆ ಒಮ್ಮೆ ವಿಸಿಟ್​ ಮಾಡಿ

ಡಿಸ್ಕವರಿ ಮಾಂಟೆಸ್ಸರಿ

ಮಾಂಟೆಸ್ಸರಿ ಮೆಟೀರಿಯಲ್ ಒಂದು ವಿಭಿನ್ನ ಡೇಕೇರ್​ ಆಗಿದ್ದು, ನಿಮ್ಮ ಪುಟ್ಟ ಮಕ್ಕಳಿಗೆ ಹೆಚ್ಚು ಸುರಕ್ಷಿತ ಸ್ಥಳವಾಗಿದೆ. ಇದು ಮಗುವಿಗೆ ತ್ವರಿತ ಕಲಿಕೆಯಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ಪೋಷಕರಿಗೆ ಮಕ್ಕಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ.

ವಿಳಾಸ: 23 4T ಧನಲಕ್ಷ್ಮಿ ಲೇಔಟ್ ವಿರೂಪಾಕ್ಷಪುರ ಕೊಡಿಗೇಹಳ್ಳಿ ತಿಂಡ್ಲು ರಸ್ತೆ ಮಹೇಶ್ ಭೂಪತಿ ಟೆನ್ನಿಸ್ ಗ್ರಾಮದ ಹತ್ತಿರ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು, ಕರ್ನಾಟಕ - 560097

ಮೊಬೈಲ್​ ನಂಬರ್: 8470001122

ಇಮೇಲ್​: Dhiraj.Arora@ieduvent.com

ಸೆಸೇಮ್ ಸ್ಟ್ರೀಟ್ ಪ್ರಿ ಸ್ಕೂಲ್

ಸೆಸೇಮ್ ಸ್ಟ್ರೀಟ್ ಪ್ರಿಸ್ಕೂಲ್ ನಿಮ್ಮ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಉತ್ತಮ ಶಿಕ್ಷಣ, ಆಟ ಎಲ್ಲವನ್ನು ಇದು ಒದಗಿಸುತ್ತದೆ. ನಿಮ್ಮ ಮಕ್ಕಳನ್ನು ನೀವು ಯಾವುದೇ ಚಿಂತೆ ಇಲ್ಲದೇ ಬಿಟ್ಟು ಕೆಲಸಕ್ಕೆ ಹೋಗಬಹುದು.

ಇದನ್ನೂ ಓದಿ: ಜಯನಗರದಲ್ಲಿ ಬೆಳಗಿನ ತಿಂಡಿಗೆ ಬೆಸ್ಟ್​ ಈ ರೆಸ್ಟೊರೆಂಟ್​ಗಳು - ನೀವೂ ಒಮ್ಮೆ ಟ್ರೈ ಮಾಡಿ

ಮೊಬೈಲ್​ ನಂಬರ್​: 7337737717

ಇಮೇಲ್​: sesamestreet.yelahanka@gmail.com

ವಿಳಾಸ: ಮನೆ ಸಂಖ್ಯೆ 582/82, 12ನೇ ಬಿ ಮುಖ್ಯ 19ನೇ ಅಡ್ಡ, 3ನೇ ಹಂತ, ಬಿ ಸೆಕ್ಟರ್ ಯಲಹಂಕ, ನ್ಯೂ ಟೌನ್ ಬೆಂಗಳೂರು - 560064
Published by:Sandhya M
First published: