Coffee Shops:ಬೆಂಗಳೂರಿನಲ್ಲಿ ಬೆಸ್ಟ್ ಕಾಫಿ ಸಿಗುವ ಟಾಪ್ 6 ಸ್ಥಳಗಳ ಲಿಸ್ಟ್ ಇಲ್ಲಿದೆ

Coffee Shops In Bengaluru: ಕಾಫಿ ಪ್ರಿಯರು ಕಾಫಿ ಬೇಕು ಅಂದ್ರೆ ಮದ್ಯರಾತ್ರಿ ಆದ್ರೂ ಸರಿ ಮಾಡಿಕೊಂಡು ಅತವಾ ಸಿಗುವ ಸ್ಥಳಕ್ಕೆ ಹೋಗುತ್ತಾರೆ. ಒಂದು ಕಪ್ ಕಾಫಿ ಒಂದು ದಿನವನ್ನು ರಿಫ್ರೆಶ್​ ಆಗಿರಿಸುವ ಶಕ್ತಿ ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಫಿ (Coffee) ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.  ಕಾಫಿ ಪ್ರಿಯರ ಒಂದು ಗುಂಪೇ ಇದೆ.  ಕಾಫಿಗಾಗಿ ಅವರು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗುತ್ತಾರೆ. ಕಾಫಿ ಪ್ರಿಯರು ಕಾಫಿ ಬೇಕು ಅಂದ್ರೆ ಮದ್ಯರಾತ್ರಿ ಆದ್ರೂ ಸರಿ ಮಾಡಿಕೊಂಡು ಅಥವಾ ಸಿಗುವ ಸ್ಥಳಕ್ಕೆ ಹೋಗುತ್ತಾರೆ. ಒಂದು ಕಪ್ ಕಾಫಿ ಒಂದು ದಿನವನ್ನು ರಿಫ್ರೆಶ್​ ಆಗಿರಿಸುವ ಶಕ್ತಿ ಹೊಂದಿದೆ. ಇಂಥಹ ಕಾಫಿ ಪ್ರಿಯರಿಗೆ ಬೆಂಗಳೂರಿನಲ್ಲಿರುವ ಬೆಸ್ಟ್ ಕಾಫಿ ಶಾಪ್​ಗಳ (Best Coffee Shops) ಲಿಸ್ಟ್ ಇಲ್ಲಿದೆ.  

ಜಗ್ಲಿ ಕಾಪಿ

ನೋಡಲು ಚಿಕ್ಕಾದಾಗಿ ಚೊಕ್ಕದಾಗಿರುವ ಈ ಅಂಗಡಿಯ ಕಾಫಿ ರಾಜರಾಜೇಶ್ವರಿ ನಗರದ ಜನರ ನೆಚ್ಚಿನ ಕಾಫಿ ಶಾಪ್ ಎಂದರೆ ತಪ್ಪಾಗಲಾರದು. ಇಲ್ಲಿನ ಕಾಫಿಯನ್ನು ಹುಡುಕಿಕೊಂಡು ಹಲವಾರು ಜನರು ಬರುತ್ತಾರೆ. ಇಲ್ಲಿ ಕಾಪಿ ಮಾತ್ರವಲ್ಲದೇ ವಡಪಾವ್, ಚುರುಮುರಿ, ನಿಪ್ಪಟ್ಟು ಮಸಾಲ ಹೀಗೆ ವಿಭಿನ್ನ ರೀತಿಯ ಸ್ನ್ಯಾಕ್ಸ್​ಗಳು ಸಹ ಲಭ್ಯವಿದೆ.

ಸ್ಥಳ:  ಬಿಇಎಂಎಲ್​ ಲೇಔಟ್​, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹತ್ತಿರ 8ನೇ ಮೇನ್, ರಾಜರಾಜೇಶ್ವರಿ ನಗರ

ಮ್ಯಾಟಿಯೊ

ಈ ಕ್ಲಾಸಿಕ್ ಕಾಫಿ ಶಾಪ್ ನ್ಯೂಯಾರ್ಕ್ ವಿಂಟೇಜ್ ವೈಬ್‌ಗಳನ್ನು ನೆನಪಿಸುವ ಚಿಕ್ಕ ಅಲಂಕಾರದೊಂದಿಗೆ ನಿಮ್ಮ ಗಮನವನ್ನು ಸೆಳೆಯುವುದು ಸತ್ಯ. ಹ್ಯಾಝೆಲ್‌ನಟ್ ಲ್ಯಾಟೆಸ್‌ನಿಂದ ಕ್ಯಾರಮೆಲ್ ಕ್ಯಾಪುಸಿನೋಸ್ ವಿವಿಧ ರೀತಿಯ ಕಾಫಿಗಳು ಲಭ್ಯವಿದ್ದು,  ಇದು ಬೆಂಗಳೂರಿನ ಕಾಫಿ ಅಭಿಮಾನಿಗಳ ನೆಚ್ಚಿನ ಕೆಫೆ ಎನ್ನಬಹುದು. ಇಲ್ಲಿನ ಬಿಸಿ ಚಾಕೊಲೇಟ್ ಎಲ್ಲರ ಹಾಟ್​ ಫೇವರೇಟ್​. ಇಂದಿರಾನಗರ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಈ ಕಾಫಿ ಕೆಫೆ ಇದ್ದು, ನಿಮ್ಮ ಸ್ನೇಹಿತರ ಜೊತೆ ಎಂಜಾಯ್ ಮಾಡಲು ಸೂಪರ್ ಸ್ಥಳ ಎನ್ನಬಹುದು.

ಸ್ಥಳ- ಚರ್ಚ್ ಸ್ಟ್ರೀಟ್, ಅಶೋಕ್ ನಗರ, ಬೆಂಗಳೂರುಮೆಲ್ಮಾಟ್ ಕಟ್ಟಡ, 508, ಫ್ಯಾಬಿಂಡಿಯಾ ಹತ್ತಿರ, CMH ರಸ್ತೆ, ಇಂದಿರಾನಗರ, ಬೆಂಗಳೂರು

ಇದನ್ನೂ ಓದಿ: ಫ್ರೆಂಡ್ಸ್​ ಜೊತೆ ಔಟಿಂಗ್ ಹೋಗ್ಬೇಕು ಅಂದ್ರೆ ಇಲ್ಲಿದೆ ಬೆಸ್ಟ್​ ಕೆಫೆಗಳ ಲಿಸ್ಟ್

DYU ಆರ್ಟ್ ಕಾಫಿ ಕೆಫೆ

ಹಳೆಯ ಬಂಗಲೆಯು ಕೆಫೆಯಾಗಿ ಮಾಡಲಾಗಿದ್ದು, ಕೋರಮಂಗಲದಲ್ಲಿರುವ ಡ್ಯು ಆರ್ಟ್ ಕೆಫೆಯು ಕಾಫಿ ನಿಜಕ್ಕೂ ಉತ್ತಮ ಅನುಭವ ನೀಡುತ್ತದೆ. ತೆರೆದ ಪ್ರಾಂಗಣ, ಅಲ್ಲೊಂದು ಇಲ್ಲೊಂದು ಹಸಿರು ಗಿಡಗಳು, ಸಿಮೆಂಟಿನ ಆಸನಗಳು, ಗೇಬಲ್ ಮೇಲ್ಛಾವಣಿ ಮತ್ತು ರೆಡ್-ಆಕ್ಸೈಡ್ ನೆಲಹಾಸು ಇದು ನಿಮಗೆ ಕೇರಳ ಶೈಲಿಯ ಮನೆಯನ್ನು ನೆನಪಿಸುತ್ತದೆ.

ಸ್ಥಳ: 23,  ಮಂಗಳ ಕಲ್ಯಾಣ ಮಂಟಪದ ಹತ್ತಿರ, ಖಾಬ್ ಕಾಲೋನಿ, ಕೋರಮಂಗಲ, ಬೆಂಗಳೂರು

ಕರ್ಮ ಕಾಪಿ

ಜಯನಗರದಲ್ಲಿರುವ ಕರ್ಮ ಕಾಫಿಯು ಒಂದು ಚಿಕ್ಕ ಕೆಫೆ. ವಿವಿಧ ಬಗೆಯ ಕಾಫಿಗಳು ನಿಮ್ಮ ಮನಸೋರೆಗೊಳಿಸುತ್ತವೆ. ರೆಡ್ ವೆಲ್ವೆಟ್ ಲ್ಯಾಟೆ ಮತ್ತು ತೆಂಗಿನಕಾಯಿ ಕಾಫಿ ಹೀಗೆ ಕೇಳುವುದಕ್ಕೂ ವಿಭಿನ್ನವಾಗಿರುತ್ತದೆ. ಮೆನುವಿನಲ್ಲಿ ಸ್ಯಾಂಡ್‌ವಿಚ್‌ಗಳು ಮತ್ತು ಸಲಾಡ್‌ಗಳಂತಹ ಸ್ನ್ಯಾಕ್ಸ್​ಗಳಿದ್ದು, ಇದು ಜಯನಗರದ ಹ್ಯಾಂಗ್‌ಔಟ್ ತಾಣವಾಗಿದೆ.

ಸ್ಥಳ: 81, 1 ನೇ ಮಹಡಿ, 36 ನೇ ಅಡ್ಡ ರಸ್ತೆ, 5 ನೇ ಬ್ಲಾಕ್, ಜಯನಗರ, ಬೆಂಗಳೂರು

 ಹಟ್ಟಿ ಕಾಫಿ

ಒಂದು ಕಪ್ ಸ್ಟ್ರಾಂಗ್ ಫಿಲ್ಟರ್ ಕಾಫಿ ಇಲ್ಲದಿದ್ದರೆ ಕಾಫಿ ಕುಡಿಯುವ ಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅನುಭವ ಬೇಕು ಅಂದ್ರೆ ನೀವು ಹಟ್ಟಿ ಕಾಫಿಗೆ ಹೋಗುವುದು ಉತ್ತಮ ಆಯ್ಕೆ. ಸಮೋಸಾದೊಂದಿಗೆ ಹಬೆಯಾಡುವ  ಸ್ಟ್ರಾಂಗ್ ಫಿಲ್ಟರ್ ಕಾಫಿ ಆಹಾ ಆ ರುಚಿಯನ್ನು ನೆನಸಿಕೊಂಡರೆ ಅದೇನೋ ಅನುಭವ. ಇವರದ್ದು ಹಲವಾರು ಬ್ರಾಂಚ್​ಗಳಿದ್ದು, ನೀವು ಎಲ್ಲಿ ಬೇಕಾದರೂ ಕಾಫಿ ಸವಿಯಬಹುದು.

ಸ್ಥಳ: ಸಾಯಿ ಸುರಕ್ಷ, 1090, 132ನೇ ಮೇನ್ ರೋಡ್, ಹೆಚ್​ಎಲ್​ 2ನೇ ಸ್ಟೇಜ್, ಇಂದಿರಾನಗರ, ಬೆಂಗಳೂರು

 ಕೆಫೆ ಕಾಫಿ ಡೇ

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಂಜಾಬಿ ಸ್ಟೈಲ್ ಆಹಾರ ಟೇಸ್ಟ್ ಮಾಡೋಕೆ ಇವೇ ಬೆಸ್ಟ್ ಸ್ಥಳಗಳು

ಕಾಫಿ ಎಂದ ಮೇಲೆ ಕೆಪೆ ಕಾಫಿ ಡೇ ಹೆಸರು ಹೇಳದಿದ್ದರೆ ಆಗುವುದಿಲ್ಲ. ಇಲ್ಲಿನ ಕಾಫಿ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಒಂದು ಕಪ್ ಕಾಫಿಯ ಜೊತೆ ನೀವಿಲ್ಲಿ ನಿಮ್ಮ ಸ್ನೇಹಿತರ ಜೊತೆ ಸುಂದರ ಕ್ಷಣಗಳನ್ನು ಅನುಭವಿಸಬಹುದು. ಇವರ ಹಲವಾರು ಬ್ರಾಂಚ್​ಗಳಿದ್ದು, ಅಲ್ಲಿನ ವಾತಾವರಣ ನಿಜಕ್ಕೂ ಆಹ್ಲಾದಕರ ಅನಿಸುತ್ತದೆ.
Published by:Sandhya M
First published: