Chocolates: ಡಿಫರೆಂಟ್ ಆಗಿರೋ ಚಾಕೊಲೇಟ್ ಸವಿಬೇಕಾ? ಇಲ್ಲಿ ಟ್ರೈ ಮಾಡಿ

Near Me Stories: ಬೆಂಗಳೂರಿನಂತಹ ನಗರದಲ್ಲಿ ನಿಮಗೆ ವಿಭಿನ್ನ ರೀತಿಯ ಚಾಕೊಲೇಟ್ಗಳು ಲಭಿಸುತ್ತದೆ. ನೀವು ಸಹ ಬೆಂಗಳೂರಿನಲ್ಲಿ ಬೆಸ್ಟ್ ಚಾಕೊಲೇಟ್ ಅಂಗಡಿ ಹುಡುಕುತ್ತಿದ್ರೆ ಇಲ್ಲಿದೆ ಲಿಸ್ಟ್.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಕೊಲೇಟ್ (Chocolates) ಅಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಚಾಕೊಲೇಟ್ ಬಹಳ ಇಷ್ಟ. ಇದರಲ್ಲಿ ಹಲವಾರು ವಿಧಗಳಿದೆ. ಡಾರ್ಕ್ ಚಾಕೊಲೇಟ್ (Dark chocolates), ಮಿಲ್ಕ್ ಚಾಕೊಲೇಟ್ ಹೀಗೆ. ಮೊದಲೆಲ್ಲ ಸ್ವೀಟ್ ಶಾಪ್, ದಿನಸಿ ಅಂಗಡಿ ಹಾಗೂ ಮೆಡಿಕಲ್ ಶಾಪ್ಗಳಲ್ಲಿ ಚಾಕೊಲೆಟ್ ಸಿಗುತ್ತಿತ್ತು, ಆದರೆ ಈಗ ಅದಕ್ಕಾಗಿ ಅಂಗಡಿಗಳಿವೆ. ಆ ಅಂಗಡಿಗಳಲ್ಲಿ ಒಮ್ಮೊಮ್ಮೆ ಕಂಡು ಕೇಳರಿಯದ ಚಾಕೊಲೇಟ್ಗಳು ಸಿಗುತ್ತದೆ. ಅದರಲ್ಲೂ ಬೆಂಗಳೂರಿನಂತಹ (Bengaluru) ನಗರದಲ್ಲಿ ನಿಮಗೆ ವಿಭಿನ್ನ ರೀತಿಯ ಚಾಕೊಲೇಟ್ಗಳು ಲಭಿಸುತ್ತದೆ. ನೀವು ಸಹ ಬೆಂಗಳೂರಿನಲ್ಲಿ ಬೆಸ್ಟ್ ಚಾಕೊಲೇಟ್ ಅಂಗಡಿ ಹುಡುಕುತ್ತಿದ್ರೆ ಇಲ್ಲಿದೆ ಲಿಸ್ಟ್.

ಜೋರಾಯ್, ಅಶೋಕ್ ನಗರ

ಜೋರಾಯ್ ಒಂದು ಐಷಾರಾಮಿ ಚಾಕೊಲೇಟ್ ಫ್ಯಾಕ್ಟರಿ ಆಗಿದ್ದು, ಇದರ ಒಳಗೆ ಹೋದರೆ ನಿವು ಡಿಸ್ನಿಯ ಯಾವುದೋ ಲೋಕಕ್ಕೆ ಹೋದ ಅನುಭವ ನೀಡುತ್ತದೆ. ಈ ಸ್ಥಳವು ಮೊದಲಿನಿಂದ ಚಾಕೊಲೇಟ್ ಅನ್ನು ತಯಾರಿಸುತ್ತದೆ. ಪಾಡ್‌ನಿಂದ ಕೋಕೋವನ್ನು ಹೊರತೆಗೆಯುವುದರಿಂದ, ಹುರಿದು, ನಿಬ್‌ಗಳನ್ನು ಮಾಡಿ ಮತ್ತು ಅಂತಿಮವಾಗಿ ಪ್ರೀಮಿಯಂ ಚಾಕೊಲೇಟ್‌ ಮಾಡುವವರೆಗೂ ಇಲ್ಲಿ ಎಲ್ಲವೂ ಮಾಡಲಾಗುತ್ತದೆ. ನೀವು ಚಾಕೊಲೇಟ್ ಪ್ರಿಯರಾಗಿದ್ದರೆ ಒಮ್ಮೆ ಮಿಸ್ ಮಾಡದೇ ವಿಸಿಟ್ ಮಾಡಿ.

ವಿಳಾಸ: 44, ಚರ್ಚ್ ಸ್ಯಾಟ್, ಹರಿದೇವಪುರ, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560001
ಮೊಬೈಲ್ ನಂಬರ್: 088800 66000
ಸಮಯ: ಬೆಳಗ್ಗೆ 11 ರಿಂದ ರಾತ್ರಿ 9.15

ಚಾಕೊಲೇಟ್ ಡಿಲಕ್ಸ್, ಕೆಜಿ ಹಳ್ಳಿ
ಈ ಸ್ಥಳ ಚಾಕೊಲೇಟ್ ಲವರ್​ಗಳಿಗೆ ಹೇಳಿ ಮಾಡಿಸಿದ ಸ್ಥಳ ಎನ್ನಬಹುದು. ಚಾಕೊಲೇಟ್‌ಗಳು, ಗೌರ್ಮೆಟ್ ಕೇಕ್‌ಗಳು ಮತ್ತು ಸ್ವೀಟ್ಗಳ ಸಂಗ್ರಹ ಹೊಂದಿರುವ ಈ ಸ್ಥಳ, ನಿಮ್ಮ ಡಯೆಟ್ ಹಾಳು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೇ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡಲು ಚಾಕೊಲೇಟ್ ಹುಡುಕುತ್ತಿದ್ರೆ ಈ ಸ್ಥಳ ಬೆಸ್ಟ್ ಎನ್ನಬಹುದು.

ವಿಳಾಸ: ದಿ ಕಲೆಕ್ಷನ್, ಯುಬಿ ಸಿಟಿ, ವಿಠಲ್ ಮಲ್ಯ ರೋಡ್, ಕೆಜಿ ಹಳ್ಳಿ, ಡಿ' ಸೋಜಾ ಲೇಔಟ್, ಅಶೋಕ್ ನಗರ್, ಬೆಂಗಳೂರು, ಕರ್ನಾಟಕ

ಇ ಮೇಲ್: : smoorchocolates.com
ಸಮಯ: ಬೆಳಗ್ಗೆ 10 ರಿಂದ ರಾತ್ರಿ 9

ಫ್ಯಾಬೆಲ್ಲೆಯ ಚಾಕೊಲೇಟ್ ಬೂಟಿಕ್, ರೆಸಿಡೆನ್ಸಿ ರೋಡ್
ಈ ಸ್ಥಳ ಐಟಿಸಿ ವಿಂಡ್ಸರ್‌ನ ಮುಂಭಾಗದ ಹಿಂದೆಯೇ ಇದೆ. ಇದರ ಬಳಿ ಹೋದಾಗ ಗಾಳಿಯಲ್ಲಿ ತೇಲುತ್ತಿರುವ ಬೆಚ್ಚಗಿನ ಚಾಕೊಲೇಟ್‌ನ ಪರಿಮಳವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಕೆಫೆ ಕೂಡ ಆಗಿದ್ದು, ನಿಮಗೆ ಇಲ್ಲಿ ಒಂದು ವಿಭಿನ್ನ ರೀತಿಯ ವೈಬ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಳಾಸ: ITC ಗಾರ್ಡೇನಿಯಾ, ರಮಣ ಹೋಟೆಲ್ ಎದುರು , ನಂಬರ್ 1, ರೆಸಿಡೆನ್ಸಿ ರಸ್ತೆ,, ಬೆಂಗಳೂರು, ಕರ್ನಾಟಕ 560025

ಸಮಯ: ಬೆಳಗ್ಗೆ 11 ರಿಂದ ರಾತ್ರಿ 11
ಮೊಬೈಲ್ ನಂಬರ್: 080668 25270

ಇದನ್ನೂ ಓದಿ: ರಾಜರಾಜೇಶ್ವರಿ ನಗರದ ಕಡೆ ಹೋದ್ರೆ ಈ ರೆಸ್ಟೋರೆಂಟ್ ಗಳಿಗೆ ಹೋಗೋದು ಮಿಸ್ ಮಾಡ್ಬೇಡಿ

ಚೋಕೋ ವರ್ಲ್ಡ್, ಜಯನಗರ

ಹೆಸರೇ ಹೇಳುವಂತೆ ನಿಮ್ಮನ್ನು ಈ ಸ್ಥಳ ಚಾಕೊಲೇಟ್ನ ಹೊಸ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ ಎಂದರೆ ತಪ್ಪಿಲ್ಲ. ಇಲ್ಲಿ ನಿಮಗೆ ಯಾವ ರೀತಿ ಚಾಕೊಲೇಟ್ ಬೇಕು ಹೇಳಿ ಎಲ್ಲಾ ರೀತಿಯ ಚಾಕೊಲೇಟ್ಗಳು ಲಭ್ಯವಿದೆ. ಅಲ್ಲದೇ ಬೊಕ್ಕೆಯ ರೀತಿಯ ಡಿಸೈನ್ ಮಾಡಿರುವ ಗಿಫ್ಟ್ ಮಾಡಬಹುದಾದ ಚಾಕೊಲೇಟ್ಗಳು ಸಹ ಇಲ್ಲಿ ಸಿಗುತ್ತದೆ.

ವಿಳಾಸ: 14 / ಎ, 27ನೇ ಕ್ರಾಸ್ ರೋಡ್, ಹೋಟೆಲ್ ನಂದಿನಿ ಮತ್ತು ಆನಂದ್ ಸ್ವೀಟ್ಸ್ ಹತ್ತಿರ, ಪಿ ದಿ ಬ್ಲಾಕ್, ಜೈಶಂಕರ್, ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 080 4146 9374
ಸಮಯ: ಬೆಳಗ್ಗೆ 10 ರಿಂದ ರಾತ್ರಿ 9.30

ಚಾಕೊಲೇಟ್ ಜಂಕ್ಷನ್, ಆರ್.ಟಿ ನಗರ

ಇದು ಕೂಡ ಚಾಕೊಲೇಟ್ಗಳಿಗೆ ಸೀಮಿತವಾಗಿರುವ ಒಂದು ಸುಂದರ ಸ್ಥಳವಾಗಿದ್ದು, ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಸಹ ಇಲ್ಲಿ ಒಮ್ಮೆ ಬಂದರೆ ಪದೇ ಪದೇ ಬರಬೆಕು ಅನಿಸುತ್ತದೆ. ಇಲ್ಲಿ ಸಹ ನೀವು ಇತರರಿಗೆ ಗಿಫ್ಟ್ ಕೊಡಲು ಅದ್ಭುತ ಚಾಕೊಲೇಟ್ಗಳು ಲಭ್ಯವಿದ್ದು, ನೀವು ಚಾಕೊಲೇಟ್ ಇಷ್ಟಪಡುವವರಾಗಿದ್ದರೆ, ಮಿಸ್ ಮಾಡದೇ ಹೋಗಿ.

ಇದನ್ನೂ ಓದಿ: ಹರ್ಬಲ್​ ಟೀ ಕುಡಿಬೇಕಾ? ಹಾಗಾದ್ರೆ ಬೆಂಗಳೂರಿನ ಈ ಶಾಪ್​ಗಳಿಗೆ ಹೋಗಿ ರಿಫ್ರೆಶ್​ ಆಗಿ

ವಿಳಾಸ: ಅಸ್ಸೇ ರೆಡ್, ಆರ್.ಟಿ ನಗರ, ಸಿಂಧಿ ಕಾಲೋನಿ, ಪುಲಿಕೇಶಿ ನಗರ, ಬೆಂಗಳೂರು, ಕರ್ನಾಟಕ 2001
ಸಮಯ: ಬೆಳಗ್ಗೆ 10 ರಿಂದ ರಾತ್ರಿ 7
ಮೊಬೈಲ್ ನಂಬರ್: 098866 56985
Published by:Sandhya M
First published: