Chinese Restaurants: ಸಿ ಫಾರ್ ಚೈನೀಸ್ ಫುಡ್ ಎನ್ನುವವರು ಈ ರೆಸ್ಟೋರೆಂಟ್​ಗಳಿಗೆ ಹೋಗಲೇಬೇಕು

Chinese Restaurant Near Me: ನೀವು ಚೈನೀಸ್ ಆಹಾರದ ಪ್ರಿಯರಾಗಿದ್ದರೆ ಬೆಂಗಳೂರಿನಲ್ಲಿ ಬೆಸ್ಟ್ ಚೈನೀಸ್​ ಹೋಟೆಲ್​ ಹುಡುಕುತ್ತಿದ್ರೆ ಬೆಂಗಳೂರಿನಲ್ಲಿರುವ ಅತ್ಯುತ್ತಮ ಚೈನೀಸ್ ರೆಸ್ಟೋರೆಂಟ್‌ಗಳ ಲಿಸ್ಟ್​ ನಾವು ಕೊಡಲಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿ ಫಾರ್ ಕ್ಯಾಟ್  (C For Cat) ಎಂದು ನಾವು ನಮ್ಮ ಮಕ್ಕಳಿಗೆ ಹೇಳಿಕೊಡುತ್ತೇವೆ, ಅವು ಹಾಗೆಯೇ ಹೇಳುತ್ತವೆ. ಆದರೆ ಆಹಾರ ಪ್ರಿಯರು (Food Lovers) ಖಂಡಿತವಾಗಿಯೂ ಸಿ ಫಾರ್ ಚೈನೀಸ್‌ (C For Chines) ಎನ್ನುತ್ತಾರೆ. ನೂಡಲ್ಸ್‌ನ ಬಿಸಿ ತಟ್ಟೆ, ನಟ್ಟಿ ಕುಂಗ್ ಪಾವೊ ಚಿಕನ್ ಹೀಗೆ ಹಲವಾರು ವಿಧಗಳಿದೆ. ನೀವು ಚೈನೀಸ್ ಆಹಾರದ ಪ್ರಿಯರಾಗಿದ್ದರೆ ಬೆಂಗಳೂರಿನಲ್ಲಿ (Bengaluru) ಬೆಸ್ಟ್ ಚೈನೀಸ್​ ಹೋಟೆಲ್​ ಹುಡುಕುತ್ತಿದ್ರೆ ಬೆಂಗಳೂರಿನಲ್ಲಿರುವ ಅತ್ಯುತ್ತಮ ಚೈನೀಸ್ ರೆಸ್ಟೋರೆಂಟ್‌ಗಳ ಲಿಸ್ಟ್​ ನಾವು ಕೊಡಲಿದ್ದೇವೆ.

 ಸಿಚುವಾನ್, ಎಚ್ಎಸ್ಆರ್

ನೀವು ಬೆಸ್ಟ್ ಚೈನೀಸ್ ಊಟವನ್ನು ಹುಡುಕುತ್ತಿದ್ರೆ ಸಿಚುವಾನ್ ಸೀಫುಡ್ ಲವರ್ಸ್​​ಗೆ ಭೇಟಿ ನೀಡಿ,ಇಲ್ಲಿನ ಮ್ಯಾಂಡರಿನ್ ಮೀನುಗಳನ್ನು ಪ್ರಯತ್ನಿಸಲು ಮರೆಯಬೇಡಿ. ಸಸ್ಯಾಹಾರಿಗಳು, ನೀವು ಅಲ್ಲಿನ ಮಶ್ರೂಮ್  ಟ್ರೈ ಮಾಡಬೇಕು. ವೋಕ್-ಟೋಸ್ಡ್ ಚೈನೀಸ್ ಫ್ರೈಡ್ ರೈಸ್‌ ಮಾತ್ರ ನಿಮಗೆ ಎಂದೂ ಮರೆಯಲಾಗದ ರುಚಿ ನೀಡುತ್ತದೆ. ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ ಅದ್ಭುತ ಚೈನೀಸ್ ರೆಸ್ಟೋರೆಂಟ್‌ಗಳಲ್ಲಿ ಇದೂ ಒಂದು.

ವಿಳಾಸ: 1552, 19ನೇ ಮುಖ್ಯ, ಸೆಕ್ಟರ್ 1, ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು, ಎಚ್‌ಎಸ್‌ಆರ್, ಬೆಂಗಳೂರು

ಸಮಯ: ಬೆಳಿಗ್ಗೆ 1 ರಿಂದ ಮಧ್ಯಾಹ್ನ 3 ಮತ್ತು ಸಂಜೆ 7 ರಿಂದ ರಾತ್ರಿ 11 ರವರೆಗೆ

ಬೆಂಗಳೂರು ಮ್ಯಾಂಡರಿನ್, ಇಂದಿರಾನಗರ

ಹೆಸರು ಕೇಳಿದಷ್ಟು ಆಸಕ್ತಿದಾಯಕವಾಗಿರುವ ಸ್ಥಳ ಇದು ಎನ್ನಬಹುದು. ಅಲ್ಲಿನ ವಾತಾವರಣವು ಆಹ್ವಾನಿಸುವಂತಿದೆ, ಚೀನೀ ಕಲಾಕೃತಿಗಳು ನಿಮ್ಮನ್ನ ವಿಭಿನ್ನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ಪ್ರಾನ್, ಚಾಂಗ್ ಶಾ ಫ್ರೈಡ್ ಚಿಕನ್ ಮತ್ತು ಶಾಂಗೈ ಫ್ರೈಡ್ ರೈಸ್‌ನಂತಹ ಬಾಯಲ್ಲಿ ನೀರೂರಿಸುವ ಆಹಾರಗಳನ್ನು ನೀವಿಲ್ಲಿ ಸವಿಯಬಹುದು. ಸಸ್ಯಾಹಾರಿಗಳು ಚಿಂತಿಸಬೇಕಿಲ್ಲ, ನೀವು ಅವರ ಕ್ರಿಸ್ಪಿ ಥ್ರೆಡ್ ತೋಫು, ವೆಜ್ ಸಿಚುವಾನ್ ಫ್ರೈಡ್ ರೈಸ್ ಮತ್ತು ಸ್ಟಿರ್-ಫ್ರೈಡ್ ಚೈನೀಸ್ ಗ್ರೀನ್ ಅನ್ನು ತಿನ್ನಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ಬೆಚ್ಚಗಿನ ಚಾಕೊಲೇಟ್ ಬ್ರೌನಿಯನ್ನು ಹಂಚಿಕೊಳ್ಳುವ ಮೂಲಕ ಸಂತೋಷದ ಸಮಯವನ್ನು ಕಳೆಯಬಹುದು.

ಇದನ್ನೂ ಓದಿ:ಬೆಂಗಳೂರಲ್ಲಿ ಸಖತ್ತಾಗಿರೋ North Indian ಊಟ ಸವಿಯಬೇಕು ಅಂದ್ರೆ ಈ ಸ್ಥಳಗಳಿಗೆ ಭೇಟಿ ಕೊಡಿ

ವಿಳಾಸ: 196, 3 ನೇ ಮಹಡಿ, ಡಬಲ್ ರೋಡ್, ಇಂದಿರಾನಗರ, ಬೆಂಗಳೂರು

ಸಮಯ: 12 ರಿಂದ 3:30 ರವರೆಗೆ ಮತ್ತು ಸಂಜೆ 7 ರಿಂದ 11 ರವರೆಗೆ

ಪಾಪ್ಸೀಸ್, ಕೋರಮಂಗಲ

ಕೋರಮಂಗಲ ಕಾಲೇಜಿಗೆ ಹೋಗುವ ವಿಧ್ಯಾರ್ಥಿಗಳ ಹಾಟ್​ ಫೇವರೇಟ್​ ಈ Popsies. ನಿಮಗಾಗಿ ಬೆಂಗಳೂರಿನಲ್ಲಿರುವ ಅದ್ಭುತವಾದ ಪಾಕೆಟ್ ಸ್ನೇಹಿ ಚೈನೀಸ್ ರೆಸ್ಟೋರೆಂಟ್ ಆಗಿದೆ. ಬಿದಿರಿನ ಬೆತ್ತದ ಪೀಠೋಪಕರಣಗಳನ್ನು ಒಳಗೊಂಡಿರುವ ಬೆಚ್ಚಗಿನ ಬೆಳಕಿನ ವಾತಾವರಣದಲ್ಲಿ ಸಣ್ಣ ಡೇಟಿಂಗ್ ಮಾಡಬಹುದು.

ಅಲ್ಲಿನ ಲಂಗ್ ಫಂಗ್ ಸೂಪ್, ಚೈನೀಸ್ ಫ್ರೈಡ್ ಚಿಕನ್ ಮತ್ತು ಡ್ರ್ಯಾಗನ್ ರೋಲ್‌ಗಳು ನಿಮಗೆ ಇಷ್ಟವಾಗದೇ ಇರಲಾರದು. ಮಸಾಲೆಯುಕ್ತ ಮಶ್ರೂಮ್, ಮಸಾಲೆಯುಕ್ತ ಹುನಾನ್ ಚಿಕನ್ ಮತ್ತು ಆರೋಗ್ಯಕರ ಮಲೇಷಿಯನ್ ಫ್ಲಾಟ್ ನೂಡಲ್ಸ್ ಅನ್ನು ಆರ್ಡರ್ ಮಾಡಲು ಮರೆಯದಿರಿ. ಅಷ್ಟೆ ಅಲ್ಲ! Popsies ಆಸಕ್ತಿದಾಯಕ Popsies ಸ್ಪೆಷಲ್ ಕಾಂಬೊವನ್ನು ಹೊಂದಿದೆ (ಇದು ಸಸ್ಯಾಹಾರಿ ಮತ್ತು ಚಿಕನ್ ಎರಡರಲ್ಲೂ ಲಭ್ಯವಿದೆ).

ವಿಳಾಸ: 11, 4ನೇ ಸಿ ಕ್ರಾಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂದೆ, ಕೋರಮಂಗಲ 5ನೇ ಬ್ಲಾಕ್, ಬೆಂಗಳೂರು

ಸಮಯ: 11:15 ರಿಂದ 4 ರವರೆಗೆ ಮತ್ತು ಸಂಜೆ 7 ರಿಂದ 11 ರವರೆಗೆ

ಹುನಾನ್, BEL ರಸ್ತೆ

ಹುನಾನ್‌ನಲ್ಲಿ, ನೀವು ನಿಮ್ಮ ಸಂಗಾತಿ ಜೊತೆ ರೋಮ್ಯಾಂಟಿಕ್ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡಬಹುದು. ಚಿಕನ್ ಲೆಟಿಸ್ ಕಪ್, ಚೈನೀಸ್ ಸ್ಕಾಲಿಯನ್ ಪ್ಯಾನ್‌ಕೇಕ್‌ಗಳು, ಜಾಸ್ಮಿನ್ ರೈಸ್‌ನೊಂದಿಗೆ ಕ್ಯಾರೆಟ್‌ ಕೆಂಪು ಕರಿ ನಿಮ್ಮ ಫೇವರೇಟ್​ ಆಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಬೆಂಗಳೂರಿನಲ್ಲಿರುವ ಈ ಅದ್ಭುತ ಚೈನೀಸ್ ರೆಸ್ಟೋರೆಂಟ್​ಗಳಲ್ಲಿ ಇದು ಒಂದು ಎನ್ನಬಹುದು.

ವಿಳಾಸ: 10, 1 ನೇ ಮಹಡಿ, ಹೊಸ ಬಿಇಎಲ್ ರಸ್ತೆ, ಬೆಂಗಳೂರು

ಸಮಯ: ಮಧ್ಯಾಹ್ನ 12 ರಿಂದ ಸಂಜೆ 4 ಮತ್ತು ಸಂಜೆ 7 ರಿಂದ 11:30 ರವರೆಗೆ

ಕೋಸ್ಟಲ್ ಫುಜಿಯಾನ್, ಜೆಪಿ ನಗರ

ಜೆಪಿ ನಗರದಲ್ಲಿರುವ ಚೈನೀಸ್ ರೆಸ್ಟೋರೆಂಟ್‌ಗೆ ನಿಮ್ಮ ಕುಟುಂಬವನ್ನು ಕರೆದುಕೊಂಡು ಬರುವುದು ಸೂಕ್ತ. ಇಲ್ಲಿ ಅವರ ಗರಿಗರಿಯಾದ ನೂಡಲ್ ಕೋಸ್ಡ್ ಥ್ರೆಡ್ ಚಿಕನ್ ಸ್ಟಾರ್ಟರ್ ಮತ್ತು ಅವರ ರಿಫ್ರೆಶ್ ಓರಿಯೆಂಟಲ್ ಸಲಾಡ್ ಅನ್ನು ಮಿಸ್​ ಮಾಡ್ದೇ ತಿನ್ನಿ.

ನೀವು ಅವರ ಡಾನ್ ಡಾನ್ ಮೇ ನೂಡಲ್ಸ್ ಮತ್ತು ಹುನಾನ್ ಸಾಸ್‌ನಲ್ಲಿ ಚಿಕನ್ ತಿನ್ನಬಹುದು. ಸುಂದರವಾದ ಟೆರೇಸ್ , ರುಚಿಕರವಾದ ಚೈನೀಸ್ ಆಹಾರಗಳು ಕುಟುಂಬದ ಜೊತೆ ಸಮಯ ಕಳೆಯಲು ಬೆಸ್ಟ್ ಸ್ಥಳ ಎನ್ನಬಹುದು.

ಇದನ್ನೂ ಓದಿ:ಬೆಂಗಳೂರಲ್ಲಿ ಸಮೋಸಾ ಸವಿಯಬೇಕು ಅಂದ್ರೆ ಈ 5 ಸ್ಥಳಗಳು ಬೆಸ್ಟ್ ನೋಡಿ

ವಿಳಾಸ: 25/1, ಸಂಪೂರ್ಣ ಹತ್ತಿರ, 24 ನೇ ಮುಖ್ಯ, 5 ನೇ ಹಂತ, ಜೆಪಿ ನಗರ, ಬೆಂಗಳೂರು

ಸಮಯ: ಮಧ್ಯಾಹ್ನ 12 ರಿಂದ 12 ರವರೆಗೆ
Published by:Sandhya M
First published: