Catering Services Near Me: ಹಬ್ಬದ ಅಡುಗೆಯನ್ನು ಈಗ ಮನೆಯಿಂದ್ಲೇ ಆರ್ಡರ್ ಮಾಡಿ, ರುಚಿಯಾದ ವೆರೈಟಿ ಊಟ ಕೂತಲ್ಲೇ ತಂದುಕೊಡ್ತಾರೆ

Catering Services Near Me: ಸದ್ಯ ಗೌರಿ- ಗಣೇಶ ಹಬ್ಬ ಹತ್ತಿರ ಬರುತ್ತಿದೆ. ಆಫೀಸ್​ ಕೆಲಸದ ಕಾರಣ ನಿಮಗೆ ಮನೆಯಲ್ಲಿ ಅಡುಗೆ ಮಾಡಲು ಸಮಯ ಸಿಗುವುದಿಲ್ಲ ಎಂದರೆ ಕ್ಯಾಟರಿಂಗ್ ಸರ್ವಿಸ್​ಗಳು ನಿಮಗೆ ಸಹಾಯ ಮಾಡುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶೇಷ ಸಂದರ್ಭಗಳು, ಹಬ್ಬ ಹರಿದಿನ (Festival), ಪಾರ್ಟಿ (Party) ಇದ್ದಾಗ ನಮಗೆ ಅಡುಗೆ (Cooking) ಮಾಡಲು ಸಮಯ ಸಾಕುವುದಿಲ್ಲ. ಸಣ್ಣ ಪಾರ್ಟಿ ಆದರೆ ಅಕ್ಕ ಪಕ್ಕದ ಅಂಗಡಿಯಿಂದ ಸ್ವೀಟ್​ (Sweet) ಹಾಗೂ ಜ್ಯೂಸ್​ (Juice) ತಂದಿಡಬಹುದು. ಆದರೆ ಮಧ್ಯಾಹ್ನದ ಊಟ ಅಥವಾ ಡಿನ್ನರ್ ಪಾರ್ಟಿ (Dinner Party) ಆದರೆ ಅದನ್ನು ಅರೇಂಜ್ ಮಾಡುವುದು ಸುಲಭದ ಮಾತಲ್ಲ. ಕೆಲಸದ ಬ್ಯುಸಿ ಶೆಡ್ಯೂಲ್​ ನಡುವೆ ಸದ್ಯ ಯಾವುದೇ ವಿಶೇಷ ಸಮಯದಲ್ಲಿ ಸ್ಪೆಷಲ್ ಅಡುಗೆಗಳನ್ನು ಮಾಡುವುದು ಕಷ್ಟವಾಗುತ್ತದೆ. ಸದ್ಯ ಗೌರಿ- ಗಣೇಶ ಹಬ್ಬ ಹತ್ತಿರ ಬರುತ್ತಿದೆ. ಆಫೀಸ್​ ಕೆಲಸದ ಕಾರಣ ನಿಮಗೆ ಮನೆಯಲ್ಲಿ ಅಡುಗೆ ಮಾಡಲು ಸಮಯ ಸಿಗುವುದಿಲ್ಲ ಎಂದರೆ ಕ್ಯಾಟರಿಂಗ್ ಸರ್ವಿಸ್​ಗಳು ನಿಮಗೆ ಸಹಾಯ ಮಾಡುತ್ತದೆ. ಬೇಕಾದ ಜಾಗಕ್ಕೆ, ಬೇಕಾದ ಆಹಾರಗಳನ್ನು ನಿಮಗೆ ತಲುಪಿಸುತ್ತವೆ. ಹಾಗಾದ್ರೆ ಬೆಂಗಳೂರಿನಲ್ಲಿರುವ ಬೆಸ್ಟ್ ಕ್ಯಾಟರಿಂಗ್ ಸರ್ವಿಸ್​​​ಗಳನ್ನು ನೀವು ಹುಡುಕುತ್ತಿದ್ರೆ ಇಲ್ಲಿದೆ ಲಿಸ್ಟ್.  

ರಾಧಿಕಾ ಕೇಟರ್, ಶಿವಾಜಿ ನಗರ, ಬೆಂಗಳೂರು

ನಿಮ್ಮ ಹಬ್ಬದ ದಿನ ವಿಶೇಷ ಅಡುಗೆ ತಿನ್ನಬೇಕು ಎನ್ನುವ ಆಸೆ ಇದ್ದು, ಅದನ್ನು ತಯಾರಿಸಲು ಸಮಯದ ಅಭಾವ ಇದ್ದರೆ, ರಾಧಿಕ ಕೇಟರ್ಸ್​ ಸಹಾಯ ಮಾಡುತ್ತದೆ. ಇಲ್ಲಿ ನಿಮಗೆ ಬೇಕಾದ ರುಚಿ ರುಚಿಯಾದ ಅಡುಗೆಯನ್ನು ಮಾಡಿಸಿ, ಮನೆಗೆ ತರಿಸಿಕೊಂಡು ಸವಿಯಬಹುದು. ನೀವು ಹೇಳಿದ ಸ್ವೀಟ್​, ರಸಂ, ಸಾಂಬಾರ್ ಹೀಗೆ ಎಲ್ಲವನ್ನೂ ಸಹ ಅವರು ನಿಮಗೆ ಬಜೆಟ್​ನಲ್ಲಿ ಮಾಡಿ ಕೊಡುತ್ತಾರೆ.

ವಿಳಾಸ: ಸಂಖ್ಯೆ. 144, HCP ರಸ್ತೆ, ಶಿವಾಜಿ ನಗರ, ಬೆಂಗಳೂರು – 560051

ಸಮಯ: ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯ ವರೆಗೆ

ಶ್ರೀ ಮೂಕಾಂಬಿಕಾ, ಕಲ್ಯಾಣ್ ನಗರ್, ಬೆಂಗಳೂರು

ನೀವು ಕಲ್ಯಾಣ ನಗರದ ಸುತ್ತ ಮುತ್ತಲಿದ್ದರೆ ಈ ಕೇಟರಿಂಗ್ ಸರ್ವಿಸ್​​​ ಬೆಸ್ಟ್​. ನಿಮಗೆ ಹಬ್ಬ ಪಾತ್ರವಲ್ಲದೇ, ಯಾವುದೇ ಸಣ್ಣ ಕಾರ್ಯಕ್ರಮಗಳಿಗೆ ಸಹ ಅಡುಗೆ ಮಾಡಿಕೊಡುತ್ತಾರೆ. ಹೋಳಿಗೆ ಬೇಕು ಅಂದ್ರೆ ಹೋಳಿಗೆ ಹಾಗೆಯೇ ಯಾವುದೇ ರೀತಿಯ ರಸಂ, ಗೊಜ್ಜು ಹೀಗೆ ಎಲ್ಲವೂ ಇಲ್ಲಿ ಲಭ್ಯವಿದೆ. ಗೌರಿ ಹಬ್ಬದ ದಿನ ಇಲ್ಲಿಂದ ಊಟ ತರಿಸಿ ಎಂಜಾಯ್ ಮಾಡಿ.

ವಿಳಾಸ: ಡಿಎಸ್​ ಮ್ಯಾಕ್ಸ್ ಸುಶೀಲಾ ಸೈಕಾನ್​, ನಂಬರ್ 413, ಹೆಣ್ಣೂರ್ ವಿಲೇಜ್ ರೋಡ್​, ಕಲ್ಯಾಣ್ ನಗರ್, ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 078921 67189

ಸಮಯ: ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ

SS ಕ್ಯಾಟರರ್ಸ್, ಬೇಗೂರು, ಬೆಂಗಳೂರು

ಬೆಂಗಳೂರಿನ ಬೆಸ್ಟ್ ಕ್ಯಾಟರಿಂಗ್ ಸರ್ವಿಸ್​​​ ಎನ್ನುವ ಹೆಸರನ್ನು ಇದು ಪಡೆದುಕೊಂಡಿದೆ. ಇಲ್ಲಿ ಅದೆಷ್ಟೇ ದೊಡ್ಡ ಸಮಾರಂಭಗಳಿಗೂ ಅಡುಗೆ ಸರ್ವಿಸ್​​ ಸಿಗುತ್ತದೆ. ನೀವೂ ಅದೆಷ್ಟೇ ವೆರೈಟಿ ಅಡುಗೆ ಬೇಕು ಎಂದು ಇಷ್ಟಪಟ್ಟರೆ, ಇಲ್ಲಿಂದ ಮಾಡಿಸಬಹುದು. ಹಾಗೆಯೇ ಈ ಬಾರಿ ಹಬ್ಬಕ್ಕೆ ವೆರೈಟಿ ಕೋಸಂಬರಿಗಳನ್ನು ಮಾಡಿಸಿ ನೀವು ಸವಿಯಬಹುದು. ಹಾಗೆಯೇ ಹಬ್ಬಕ್ಕೆ ನೀವು ಅತಿಥಿಗಳನ್ನು ಸಹ ಯಾವುದೇ ಚಿಂತೆಯಿಲ್ಲದೇ ಆಹ್ವಾನಿಸಬಹುದು.

ವಿಳಾಸ: ನಂಬರ್.155/3, ಬಿಳೇಕಳ್ಳಿ, ಭರತ್ ಇಂಡಸ್ಟ್ರಿಯಲ್,  ಐಐಎಂ ಬಿಜಿ ರೋಡ್ ಎದುರು, ಹೋಬಳಿ, ಬೇಗೂರ್, ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 099800 53307

ಸಮಯ: ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ

ಇದನ್ನೂ ಓದಿ: ಮದುವೆಗೆ ಹೂಂ ಎನ್ನುವ ಮುನ್ನ ಈ ವಿಚಾರಗಳು ನೆನಪಿನಲ್ಲಿರಲಿ

ಶ್ರೀ ಅನ್ನಪೂರ್ಣೇಶ್ವರಿ, ಆರ್​ಆರ್​ ನಗರ, ಬೆಂಗಳೂರು

ಸುಮಾರು 10 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿರುವ ಈ ಕ್ಯಾಟರಿಂಗ್ ಸರ್ವಿಸ್​​​, ನಿಮ್ಮ ಹಬ್ಬವನ್ನು ವಿಶೇಷಕರವಾಗಿಸುತ್ತದೆ. ನೀವು ಇಲ್ಲಿ ಕೇವಲ ಸದಾ ಊಟ ಮಾತ್ರವಲ್ಲದೇ, ಕೆಲವು ಸ್ಪೆಷಲ್​ ಐಟಂಗಳನ್ನು ಸಹ ಹೆದರದೇ ಮಾಡಿಸಬಹುದು. ಇಲ್ಲಿ ಒಮ್ಮೆ ಆರ್ಡರ್​ ಮಾಡಿದರೇ ನಿಮ್ಮ ಮನೆಯ ಪ್ರತಿ ಕಾರ್ಯಕ್ರಮಕ್ಕೂ ಇಲ್ಲಿಂದಲೇ ತರಿಸಿಕೊಳ್ಳುತ್ತೀರಿ.

ವಿಳಾಸ: 365, ಐಡಿಯಲ್ ಹೋಮ್ಸ್ ಲೇಔಟ್, ಕೆಂಚೇನಹಳ್ಳಿ, RR ನಗರ, ಬೆಂಗಳೂರು, ಕರ್ನಾಟಕ 560098

ಮೊಬೈಲ್​ ನಂಬರ್: 091139 76001

ಸಮಯ: 24 ಗಂಟೆಗಳು

ಶ್ರೀ ಐಶ್ವರ್ಯ, ಬನಶಂಕರಿ, ಬೆಂಗಳೂರು

ನೀವು ಬನಶಂಕರಿಯ ಸುತ್ತ ಮುತ್ತ ಇದ್ರೆ ಈ ಕೇಟರಿಂಗ್ ಸರ್ವಿಸ್​​ ನಿಮಗೆ ಒಳ್ಳೆಯ ಊಟಗಳನ್ನು ನೀಡುತ್ತದೆ. ಈ ಬಾರಿ ಗೌರಿ ಹಬ್ಬಕ್ಕೆ ಸ್ಪೆಷಲ್​ ಫುಡ್​ಗಳನ್ನು ಮಾಡಿಸಿ, ಎಂಜಾಯ್ ಮಾಡಿ. ನಿಮಗೆ ಕೇವಲ ಹಬ್ಬದ ಅಡುಗೆ ಮಾತ್ರ ಅಲ್ಲ, ಮೋದಕ ಸೇರಿದಂತೆ ಅನೇಕ ಪದಾರ್ಥಗಳನ್ನು ಇಲ್ಲಿ ಮಾಡಿಕೊಡುತ್ತಾರೆ.

ಇದನ್ನೂ ಓದಿ: ಮೊಸರನ್ನು ಅಪ್ಪಿ ತಪ್ಪಿ ಈ ಆಹಾರಗಳ ಜೊತೆ ಮಿಕ್ಸ್ ಮಾಡಬಾರದಂತೆ

ವಿಳಾಸ: ನಂಬರ್ 231 6ನೇ ಕ್ರಾಸ್ ಭುವನೇಶ್ವರಿ ನಗರ್, ಭುವನೇಶ್ವರಿ ನಗರ್ ಪಾರ್ಕ್ ಹತ್ತಿರ, ಬನಶಂಕರಿ 3ನೇ  ಸ್ಟೇಜ್, ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 081971 40270

ಸಮಯ: ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ
Published by:Sandhya M
First published: