ಇಂದಿರಾನಗರ (Indira Nagar) ಮತ್ತು ಎಂಜಿ ರಸ್ತೆಯಂತೆಯೇ (M.G.Road) ಹೆಚ್ಚು ಪ್ರಸಿದ್ದ ಎಂದರೆ ಮಲ್ಲೇಶ್ವರಂ (Malleshwaram) , ಮುಖ್ಯವಾಗಿ ಇದು ಜನವಸತಿ ಪ್ರದೇಶವಾಗಿದ್ದು, ಇಲ್ಲಿ ಜನರ ಓಡಾಟ ಹೆಚ್ಚಿದೆ. ಹಾಗೆಯೇ ಇಲ್ಲಿ ಕೆಫೆ (Cafes) ಮತ್ತು ರೆಸ್ಟೋರೆಂಟ್ಗಳು (Restaurants) ಸಹ ಹಲವಾರಿದೆ. ನೀವು ಸಹ ಅಲ್ಲಿ ವಾಸಿಸುವವರಾಗಿದ್ದು ಅಥವಾ ಅಲ್ಲಿಗೆ ಹೆಚ್ಚು ಭೇಟಿ ನೀಡುವವರಾಗಿದ್ದರೆ, ಮಲ್ಲೇಶ್ವರಂನಲ್ಲಿ ಭೇಟಿ ನೀಡಲೇಬೇಕಾದ ಕೆಲ ಕೆಫೆಗಳ ಲಿಸ್ಟ್ ಇಲ್ಲಿದೆ.
ಕ್ಲೀನ್ ಸ್ಲೇಟ್ ಕೆಫೆ
ಈ ಸಣ್ಣ ಕೆಫೆ ನಿಜಕ್ಕೂ ಸುಂದರ ವಾತಾವರಣವನ್ನು ಹೊಂದಿದ್ದು, ಇಲ್ಲಿ ನೀವು ನಿಮಗೆ ಬೇಕಾದ ಹಾಗೆ ಅಲಂಕಾರ ಮಾಡಿಕೊಂಡು ನಿಮ್ಮ ಗೆಳೆಯರ ಜನ್ಮದಿನವನ್ನು ಸಹ ಆಚರಿಸಲು ಸಹ ಅವಕಾಶ ನೀಡುತ್ತದೆ. ಅಲ್ಲದೇ ಇಲ್ಲಿನ ಆಹಾರಗಳು ಸಹ ಬಹಳ ರುಚಿಯಾಗಿದ್ದು, ಮಲ್ಲೇಶ್ವರಂನ ಬೆಸ್ಟ್ ಕೆಫೆ ಎನ್ನಬಹುದು. ಇಲ್ಲಿ ಕೆಲ ಆಟಗಳನ್ನು ಸಹ ಆಡಲು ಅವಕಾಶವಿದ್ದು, ಪನೀರ್ ಟಿಕ್ಕಾವನ್ನು ಟ್ರೈ ಮಾಡಲೇಬೇಕು.
ವಿಳಾಸ: ಶಾಪ್ ನಂಬರ್.2, 14th ಕ್ರಾಸ್ ರೋಡ್, ಮಲ್ಲೇಶ್ವರಂ ವೆಸ್ಟ್, ಬೆಂಗಳೂರು, ಕರ್ನಾಟಕ 56003
ಮೊಬೈಲ್ ನಂಬರ್:
063613 53220
ಸಮಯ: 8 ಗಂಟೆಯಿಂದ – ರಾತ್ರಿ 12 ಗಂಟೆ
ಬೈ 2 ಕಾಫಿ
ಈ ಕೆಫೆ ದಕ್ಷಿಣ ಭಾರತದ ಆಹಾರವನ್ನು ಹೊಂದಿದ್ದು, ಬೆಳಗಿನ ತಿಂಡಿ ಸಹ ಇಲ್ಲಿ ಲಭ್ಯವಿದೆ. ಇಲ್ಲಿನ ಇಡ್ಲಿ ಬಹಳಷ್ಟು ಜನರಿಗೆ ಇಷ್ಟ. ಹಾಗೆಯೇ ಹೆಸರೇ ಹೇಳುವಂತೆ ಇಲ್ಲಿನ ಕಾಫಿಯ ರುಚಿಯನ್ನು ಒಮ್ಮೆ ಟ್ರೈ ಮಾಡಿದರೆ ಮರೆಯುವುದಿಲ್ಲ.
ವಿಳಾಸ: ನಂ-151, 3ನೇ ಮುಖ್ಯ, 7ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 560003
ಮೊಬೈಲ್ ನಂಬರ್:
096322 03201
ಸಮಯ: 10 ಗಂಟೆಯಿಂದ – ರಾತ್ರಿ 11 ಗಂಟೆ
ಬ್ರಿವ್ ಮಾಸ್ಟರ್ ಕೆಫೆ ಕಾಫಿ ಶಾಪ್
ತುಂಬಾ ಸ್ವಚ್ಛವಾಗಿರುವ ಈ ಕೆಫೆ ಒಮ್ಮೆ ಭೇಟಿ ನೀಡಿದವರನ್ನು ಪದೇ ಪದೇ ಕರೆಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಇಲ್ಲಿನ ಕಾಫಿಯ ಪರಿಮಳ ಮತ್ತು ರುಚಿ ಇಷ್ಟವಾಗದೇ ಇರದು. ಹಾಗೆಯೇ ಇಲ್ಲಿನ ಆಹಾರಗಳ ಬಗ್ಗೆ ಮಾತನಾಡಲು ಹೋದರೆ ಅವುಗಳ ರುಚಿಯನ್ನು ವರ್ಣಿಸುವುದು ಸಹ ಅಸಾಧ್ಯ. ಇಲ್ಲಿನ ಸ್ಯಾಂಡ್ವಿಚ್ ಅನ್ನು ನೀವು ಮಿಸ್ ಮಾಡ್ದೇ ಟ್ರೈ ಮಾಡಲೇಬೇಕು.
ವಿಳಾಸ: 235/1, 15ನೇ ಮತ್ತು 16ನೇ ಅಡ್ಡರಸ್ತೆಯ ನಡುವೆ, ಸಂಪಿಗೆ ರಸ್ತೆ, ಬೆಂಗಳೂರು, ಕರ್ನಾಟಕ 560003
ಸಮಯ: 10.30 ಗಂಟೆಯಿಂದ – ರಾತ್ರಿ 1 ಗಂಟೆ
ಇದನ್ನೂ ಓದಿ: ಬೆಂಗಳೂರಲ್ಲಿ ಬಾಯಲ್ಲಿ ನೀರೂರಿಸೋ ಷವರ್ಮಾ ಇಲ್ಲೇ ಸಿಗೋದು, ಹೋಗಿದ್ದೀರಾ?
ಬಿಸ್ಕಾ ಕಾಫಿ
ಈ ಕೆಫೆ ಸಣ್ಣದಾದರೂ ಸಹ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದೆ ಎನ್ನಬಹುದು. ಇಲ್ಲಿನ ಓನರ್ ಸಹ ಎಲ್ಲರೊಂದಿಗೂ ಬೆರೆಯುವ ಗುಣವನ್ನು ಹೊಂದಿದ್ದು, ನಿಮ್ಮ ಗೆಳೆಯರ ಜೊತೆ ಹೋಗಲು ಉತ್ತಮವಾದ ಸ್ಥಳ ಎನ್ನಬಹುದು. ಇಲ್ಲಿ ನಿಮಗೆ ರುಚಿಕರವಾದ ಆಹಾರದ ಜೊತೆಗೆ ವೆರೈಟಿ ಕಾಫಿ ಮತ್ತು ಟೀಗಳ ಸಹ ಲಭ್ಯವಿದೆ.
ವಿಳಾಸ: 1ನೇ, 4ನೇ ಕ್ರಾಸ್ ರೆಡ್, ವ್ಯಾಲಿಕ್ವಾಲ್, ಕೋದಂಡರಾಮಪುರ, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 2001
ಮೊಬೈಲ್ ನಂಬರ್:
096209 01818
ಸಮಯ: 9 ಗಂಟೆಯಿಂದ – ರಾತ್ರಿ 12 ಗಂಟೆ
ಕಲ್ಮನೆ ಕಾಫಿ
ಈ ಕೆಫೆ ಮಲ್ಲೇಶ್ವರಂ ಜನರ ನೆಚ್ಚಿನ ಕೆಫೆ ಎನ್ನಬಹುದು. ಇಲ್ಲಿನ ವಾಲ್ನಟ್ ಕೇಕ್ ಎಂದರೆ ಯುವಕ ಯುವತಿಯರಿಗೆ ಬಹಳ ಇಷ್ಟ. ಹಲವಾರು ಜನರು ಇಲ್ಲಿ ತಮ್ಮ ಗೆಳಯರೊಂದಿಗೆ ಬಂದು ಕಾಲ ಕಳೆಯುತ್ತಾರೆ. ಕೇವಲ ವಾಲ್ ನಟ್ ಕೇಕ್ ಮಾತ್ರವಲ್ಲ ಇಲ್ಲಿನ ಬರ್ಗರ್ ಸಹ ವಿಭಿನ್ನವಾಗಿದ್ದು, ಮಲ್ಲೇಶ್ವರಂಗೆ ಹೋದಾಗ ಇಲ್ಲಿಗೆ ಮಿಸ್ ಮಾಡದೇ ಭೇಟಿ ನೀಡಿ.
ಇದನ್ನೂ ಓದಿ: ಈ ವರ್ಷ ಯಾವೆಲ್ಲಾ ವೆರೈಟಿ ಆಹಾರ ಫೇಮಸ್? ಏನಿದೆ 2022ರ ಟ್ರೆಂಡ್?
ವಿಳಾಸ: ಮಂತ್ರಿ ಸ್ಕ್ವೇರ್ 1, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕಸಮಯ: 10 ಗಂಟೆಯಿಂದ – ರಾತ್ರಿ 11 ಗಂಟೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ