Buffet Restaurants: ಜಯನಗರದ ಬೆಸ್ಟ್​ ಬಫೆಟ್​ ರೆಸ್ಟೊರೆಂಟ್​ಗಳಿವು - ಆ ಕಡೆ ಹೋದ್ರೆ ಮಿಸ್​ ಮಾಡ್ದೇ ಹೋಗಿ

Near Me Restaurants: ಇದೊಂದು ಬೆಸ್ಟ್ ರೆಸ್ಟೋರೆಂಟ್ ಆಗಿದ್ದು, ಇದು ದೈನಂದಿನ ಊಟ ಮತ್ತು ರಾತ್ರಿಯ ಊಟಕ್ಕೆ ಬಫೆಟ್‌ ಆಯ್ಕೆ ಉತ್ತಮ ಎನ್ನಬಹುದು. ಇದರಲ್ಲಿ ಛಾವಣಿಯ ಲೌಂಜ್ ಬಾರ್ ಜೊತೆಗೆ ಪ್ರತ್ಯೇಕ ಚೈನೀಸ್ ಮತ್ತು ಪರ್ಷಿಯನ್ ರೆಸ್ಟೋರೆಂಟ್‌ಗಳು ಸಹ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿಗರಿಗೆ (Bengaluru) ವೀಕೆಂಡ್  (Weekend) ಬಂತು ಅಂದ್ರೆ ಸಾಕು ಹೊರಗಡೆ ಹೋಗಿ ಆರಾಮವಾಗಿ ದಿನ ಕಳೆಯುವ ಅನಿಸುತ್ತದೆ. ಅಲ್ಲದೇ, ಕೆಲವರು ಯಾವುದಾದರೂ ಒಳ್ಳೆಯ ಹೋಟೆಲ್ (Hotel) ಹೋಗಿ ರುಚಿ ರುಚಿಯಾದ ಊಟ ಮಾಡುವ ಎನ್ನುವ ಆಸೆ ಇರುತ್ತದೆ. ಗೂಗಲ್ ಮಾಡಿ, ಆ ಆ್ಯಪ್ ಈ ಆ್ಯಪ್ ಹೀಗೆ ಎಲ್ಲಾ ಕಡೆ ತಡಕಾಡಿ ಒಂದು ಕಡೆ ಹೋಗುತ್ತಾರೆ. ಹಾಗೆಯೇ ಹಲವಾರು ಜನರಿಗೆ ಬಫೆಟ್ ಸೌಲಭ್ಯ ಹೊಂದಿರುವ ಹೋಟೆಲ್ಗಳು ಎಂದರೆ ಬಹಳ ಇಷ್ಟ. ಬೆಂಗಳೂರಿನಂತಹ ದೊಡ್ಡ ಊರುಗಳಲ್ಲಿ ಬಫೆಟ್ ಹೋಟೆಲ್ಗಳಿಗೆ (Buffet hotel) ಕಡಿಮೆ ಇಲ್ಲ. ಆದರೆ ನೀವಿರುವ ಏರಿಯಾದಲ್ಲಿ ಯಾವ ಹೋಟೆಲ್ಗಳು ಬೆಸ್ಟ್ ಎಂಬುದು ಗೊತ್ತಿರುವುದಿಲ್ಲ. ಇವತ್ತು ನಾವು ಜಯನಗರದಲ್ಲಿನ ಬೆಸ್ಟ್ ಬಫೆಟ್ ಹೋಟೆಲ್ಗಳ ಕೊಟ್ಟಿದ್ದು, ನಿಮಗೆ ಇಷ್ಟದ ಹೋಟೆಲ್ ನೀವು ಆಯ್ಕೆ ಮಾಡಿಕೊಳ್ಳಿ.

ದಿ ವಿಲೇಜ್: ಸೋಲ್ ಆಫ್ ಇಂಡಿಯಾ
ಈ ಹೋಟೆಲ್ ಒಳಗೆ ಒಮ್ಮೆ ಹೋದ್ರೆ ನಿಮಗೆ ಯಾವುದೋ ಹಳ್ಳಿಗೆ ಹೋಗಿದೀವಿ ಅಂತ ಅನಿಸುವುದು ಮಾತ್ರ ಪಕ್ಕಾ. ವಿಭಿನ್ನ ರೀತಿಯಾಗಿ ನಿರ್ಮಾಣವಾಗಿರುವ ಹೋಟೆಲ್ ಎಲ್ಲರ ಗಮನ ಸೆಳೆಯುತ್ತದೆ. ಹಳ್ಳಿಯ ರೀತಿಯ ಕಂಬಗಳು, ಕುರ್ಚಿಗಳು ಸೂಪರ್ ಅನ್ಬೋದು. ಇನ್ನು ಈ ಹೋಟೆಲ್ ಒಳಗೆ ಊಟದ ಪದಾರ್ಥಗಳನ್ನು ತಳ್ಳುಗಾಡಿಯಲ್ಲಿ ಇಟ್ಟಿರಲಾಗುತ್ತದೆ. ಅಲ್ಲಿನ ಜಗಮಗಿಸುವ ಲೈಟ್ಗಳು ನಿಮಗೆ ಎಂಜಾಯ್ ಮಾಡಲು ಮತ್ತೊಂದು ಕಾರಣ ಎನ್ನಬಹುದು. ಈ ಹೋಟೆಲ್ 3 ಬ್ರಾಂಚ್ಗಳಿದ್ದು ಒಂದರಲ್ಲಿ ನಾನ್ವೆಜ್ ಆಹಾರ ಲಭ್ಯವಿದೆ. ಇನ್ನುಳಿದ ಕಡೆ ವೆಜ್. ಆದರೆ ಯಾವುದೇ ಆಹಾರವಾಗಲಿ ಇಲ್ಲಿನ ರುಚಿಯೇ ಬೇರೆ ಎನ್ನುತ್ತಾರೆ ಈಗಾಗಲೇ ಭೇಟಿ ನೀಡಿದವರು.

ವಿಳಾಸ: ಸೆಂಟ್ರಲ್ ಮಾಲ್ II, 6ನೇ ಮಹಡಿ, ಪ್ಲಾಟ್ ನಂ.45/1, 45/2, 45ನೇ ಅಡ್ಡ ರಸ್ತೆ, KSRTC ಲೇಔಟ್, 2ನೇ ಹಂತ, JP ನಗರ, ಬೆಂಗಳೂರು, ಕರ್ನಾಟಕ 560069
ಮೊಬೈಲ್ ನಂಬರ್: 080 4210 0524

ಕೇಬಲ್ ಕಾರ್

ಸ್ಯಾನ್ ಫ್ರಾನ್ಸಿಕೋದ ಕೇಬಲ್ ಕಾರ್ ರೆಸ್ಟೋರೆಂಟ್ ಮಾದರಿಯ ಈ ಬೆಂಗಳೂರಿನ ರೆಸ್ಟೋರೆಂಟ್ ವಿಭಿನ್ನ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿನ ಪ್ರತಿಯೊಂದು ಆಹಾರಗಳನ್ನು ಮಿಸ್ ಮಾಡದೇ ಟ್ರೈ ಮಾಡಲೇಬೇಕು. ಅದರಲ್ಲೂ ಬೇಬಿ ಕಾರ್ನ್ ಗೋಲ್ಟನ್ ಫ್ರೈ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದರೆ ತಪ್ಪಾಗಲಾರದು. ಇನ್ನು ಇಲ್ಲಿ ಬಫೆಟ್ನಲ್ಲಿ ನೀಡುವ ವಿವಿಧ ರೀತಿಯ ಭಕ್ಷ್ಯಗಳು ಬೆರಳು ಚೀಪುವಂತಿರುತ್ತದೆ.

ವಿಳಾಸ: ಮಾರನಹಳ್ಳಿ ರಸ್ತೆ, ಟಿಎಂಕೆ ಲೇಔಟ್, 1ನೇ ಹಂತ, ಜೆ.ಪಿ. ನಗರ, ಬೆಂಗಳೂರು, ಕರ್ನಾಟಕ 560078

ಮೊಬೈಲ್ ನಂಬರ್: 099000 59322

ಗುಫ್ಹಾ (ಗುಹೆ)
"ಕಾಂಟಿನೆಂಟಲ್, ಚೈನೀಸ್ ಮತ್ತು ಭಾರತೀಯ ಆಹಾರಗಳನ್ನು ಒದಗಿಸುವ ಈ ರೆಸ್ಟೋರೆಂಟ್ ಬೆಸ್ಟ್ ಥೀಮ್ ರೆಸ್ಟೋರೆಂಟ್ಗಳಲ್ಲಿ ಒಂದು ಎನ್ನಬಹುದು. ಇಲ್ಲಿ ಬಫೆಟ್ ಸೌಲಭ್ಯ ಕೂಡ ಇದ್ದು, ಅದಕ್ಕಾಗಿಯೇ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ನಾನ್ ವೆಜ್ ಆಹಾರಗಳು ಹೆಚ್ಚು ಪ್ರಸಿದ್ದವಾಗಿದ್ದು, ನೀವು ಇಲ್ಲಿ ಜನ್ಮದಿನವನ್ನು ಸಹ ಆಚರಿಸಬಹುದು.

ವಿಳಾಸ: 79/8, ಕರ್ಣೀಯ ರಸ್ತೆ, ಜಯ ನಗರ 1ನೇ ಬ್ಲಾಕ್, ಜಯನಗರ 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560001
ಮೊಬೈಲ್ ನಂಬರ್: 099809 09053

ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ

ಸಬ್ಜ್
ಈ ರೆಸ್ಟೋರೆಂಟ್ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರ. ಜಯನಗರದ ಈ ಸ್ಥಳ ಬೆಂಗಳೂರಿನಲ್ಲಿ ಹೆಚ್ಚು ಪ್ರಸಿದ್ದ ಎನ್ನಬಹುದು. ನೀವು ಮಧ್ಯಾಹ್ನ ರುಚಿಕರವಾದ ಊಟ ಹುಡುಕುತ್ತಿದ್ರೆ , ಇದು ಉತ್ತಮವಾದ ಸ್ಥಳ ಎನ್ನಬಹುದು. ಇಲ್ಲಿ ನಿಮ್ಮ ರುಚಿಗೆ ತಕ್ಕಂತೆ ಆಹಾರಗಳು ಸಿಗಲಿದ್ದು, ಬೆಲೆ ಕೂಡ ನಿಮ್ಮ ಮಿತಿಯಲ್ಲಿರುತ್ತದೆ.

ವಿಳಾಸ: ಕಾಸ್ಮೋಪಾಲಿಟನ್ ಕ್ಲಬ್, ನೆಲ ಮಹಡಿ, 22ನೇ ಅಡ್ಡ ರಸ್ತೆ, ಜಯನಗರ 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560011
ಮೊಬೈಲ್ ನಂಬರ್: 080 4166 3006

ಸೋಫ್ರಾಹ್
ಇದೊಂದು ಬೆಸ್ಟ್ ರೆಸ್ಟೋರೆಂಟ್ ಆಗಿದ್ದು, ಇದು ದೈನಂದಿನ ಊಟ ಮತ್ತು ರಾತ್ರಿಯ ಊಟಕ್ಕೆ ಬಫೆಟ್‌ ಆಯ್ಕೆ ಉತ್ತಮ ಎನ್ನಬಹುದು. ಇದರಲ್ಲಿ ಛಾವಣಿಯ ಲೌಂಜ್ ಬಾರ್ ಜೊತೆಗೆ ಪ್ರತ್ಯೇಕ ಚೈನೀಸ್ ಮತ್ತು ಪರ್ಷಿಯನ್ ರೆಸ್ಟೋರೆಂಟ್‌ಗಳು ಸಹ ಇದೆ. ತಂದೂರಿ ಚಿಕನ್, ಮಟನ್ ಬಿರಿಯಾನಿ, ಮಟನ್ ರೋಗನ್ ಜೋಶ್ ಮತ್ತು ಪಾಲಕ್ ಪನೀರ್‌ ನಿಮ್ಮನ್ನು ಪದೇ ಪದೇ ಇಲ್ಲಿಗೆ ಕರೆತರುತ್ತದೆ.

ಇದನ್ನೂ ಓದಿ: ಖಡಕ್ ರೊಟ್ಟಿ, ಗಟ್ಟಿ ಚಟ್ನಿ ತಿನ್ಬೇಕು ಅಂದ್ರೆ ಬೆಂಗಳೂರಿನ ಈ ಟಾಪ್ 5 ಸ್ಥಳಗಳಿಗೆ ಮಿಸ್​ ಮಾಡ್ದೇ ಹೋಗಿ

ವಿಳಾಸ: 722, 2, 36ನೇ ಅಡ್ಡ ರಸ್ತೆ, 4ನೇ ಟಿ ಬ್ಲಾಕ್ ಪೂರ್ವ, ಪಟ್ಟಾಭಿರಾಮ್ ನಗರ, ಜಯನಗರ, ಬೆಂಗಳೂರು, ಕರ್ನಾಟಕ 560070
Published by:Sandhya M
First published: