Biriyani Restaurants: ಬಾಯಿ ನೀರೂರಿಸುವ ಬೆಸ್ಟ್ ಬಿರಿಯಾನಿ ಸಿಗುವ ಬೆಂಗಳೂರಿನ ಟಾಪ್ 5 ಸ್ಥಳಗಳಿವು

Biriyani Centers: ಆಹಾರಪ್ರಿಯರ ಕನಸು ನನಸಾಗುವಂತೆ ನೋಡಿಕೊಳ್ಳುತ್ತದೆ ಮತ್ತು ವೈವಿಧ್ಯಮಯ ಬಿರಿಯಾನಿಗಳನ್ನು ಪೂರೈಸುವ ವಿವಿಧ ರೆಸ್ಟೋರೆಂಟ್‌ಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಬಿರಿಯಾನಿ ನೀಡುವ ಸ್ಥಳಗಳ ಲಿಸ್ಟ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೈದರಾಬಾದಿನ (Hyderabad) ನಂತರ, ಬೆಂಗಳೂರು (Bengaluru) ದೇಶದಾದ್ಯಂತ ಹೆಚ್ಚು ಮಸಾಲೆಯುಕ್ತ ಮತ್ತು ರುಚಿಕರವಾದ ಬಿರಿಯಾನಿಗಳನ್ನು (Biriyani) ನೀಡುವ ಮುಂದಿನ ಸ್ಥಳವಾಗಿದೆ. ಬೆಂಗಳೂರು ಪ್ರತಿಯೊಬ್ಬ ಆಹಾರಪ್ರಿಯರ ಕನಸು ನನಸಾಗುವಂತೆ ನೋಡಿಕೊಳ್ಳುತ್ತದೆ ಮತ್ತು ವೈವಿಧ್ಯಮಯ ಬಿರಿಯಾನಿಗಳನ್ನು ಪೂರೈಸುವ ವಿವಿಧ ರೆಸ್ಟೋರೆಂಟ್‌ಗಳನ್ನು (Restaurants) ಹೊಂದಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಬಿರಿಯಾನಿ ನೀಡುವ ಸ್ಥಳಗಳ ಲಿಸ್ಟ್ ಇಲ್ಲಿದೆ.  

ಅಂಬೂರ್ ಸ್ಟಾರ್ ಬ್ರಿಯಾನಿ, ಬಿಟಿಎಂ

ಈ ಪ್ರಸಿದ್ಧ ರೆಸ್ಟೋರೆಂಟ್ ಚೈನ್​ BTM ನಗರದ ಉತ್ತಮ ಬಿರಿಯಾನಿ ಸಿಗುವ ಸ್ಥಳ ಎನ್ನಬಹುದು. ಅಲ್ಲದೇ ಇದು ಬೆಂಗಳೂರಿನ ಅತ್ಯುತ್ತಮ ಬಿರಿಯಾನಿ ಸ್ಥಳಗಳಲ್ಲಿ ಒಂದಾಗಿದೆ. ಪ್ರಾನ್ ಬಿರಿಯಾನಿಯು ಅಂಬೂರ್ ಸ್ಟಾರ್ ಬಿರಿಯಾನಿಯ ಸಿಗ್ನೇಚರ್ ಎಂದರೆ ತಪ್ಪಾಗಲಾರದು. ಇಲ್ಲಿ ನೀವೂ ಟ್ರೈ ಮಾಡಬೇಕಾಗಿರುವ ಹಲವಾರು ಆಹಾರಗಳಿವೆ. ಇಲ್ಲಿನ ಚಿಕನ್ ಬಿರಿಯಾನಿ ರುಚಿ ಅದ್ಭುತವಾಗಿರುತ್ತದೆ. ಹಾಗೆಯೇ ಇಲ್ಲಿನ ವಾತಾವರಣ ಸಹ ನಿಮಗೆ ಸಂತೋಷವನ್ನುಂಟು ಮಾಡುತ್ತದೆ.

ವಿಳಾಸ: 5, ನೆಲ ಮಹಡಿ, ಫೋರಂ ಮಾಲ್ ಎದುರು, ಭುವನಪ್ಪ ಲೇಔಟ್, ಬಿಟಿಎಂ

ಬೆಂಗಳೂರು ಪ್ಯಾರಡೈಸ್, ಇಂದಿರಾನಗರ

ಇದನ್ನೂ ಓದಿ: : ಬೆಂಗಳೂರಿನಲ್ಲಿ ರುಚಿ ರುಚಿಯಾದ ಸ್ವೀಟ್ಸ್​ ಸಿಗುವ ಟಾಪ್​ 5 ಅಂಗಡಿಗಳಿವು

ಬೆಂಗಳೂರಿನಲ್ಲಿರುವ ಅತ್ಯುತ್ತಮ ಬಿರಿಯಾನಿಗಳನ್ನು ನೀಡುವ ಇಂದಿರಾನಗರದಲ್ಲಿರುವ ಪ್ಯಾರಡೈಸ್ ರೆಸ್ಟೊರೆಂಟ್‌ಗೆ ಒಮ್ಮೆ ನೀವು ಭೇಟಿ ನೀಡಿದರೆ ಮತ್ತೆ ಮತ್ತೆ ಹೋಗುವುದು ಪಕ್ಕಾ. ಈ ಸ್ಥಳವು ವರ್ಷಗಳಿಂದ ಇತಿಹಾಸವನ್ನು ನಿರ್ಮಿಸುತ್ತಿದೆ.  ರಿಚ್ಮಂಡ್ ರಸ್ತೆಯಲ್ಲಿರುವ ಬೆಂಗಳೂರಿನ ಈ ಅತ್ಯುತ್ತಮ ಬಿರಿಯಾನಿ ಸ್ಥಳ ಪಾಕೆಟ್ ಸ್ನೇಹಿ ಕೂಡ ಎನ್ನಬಹುದು.  ಸೂಚನೆ- ಪ್ಯಾರಡೈಸ್ ರೆಸ್ಟೋರೆಂಟ್ ಸೋಮವಾರ ಬಾಗಿಲು ತೆಗೆಯುವುದಿಲ್ಲ.

ವಿಳಾಸ: 484, ಸಿಗ್ನೇಚರ್ ಸ್ಕ್ವೇರ್, CMH ರಸ್ತೆ, ಇಂದಿರಾನಗರ, ಬೆಂಗಳೂರು

ಗುಂಡಪ್ಪ ದೊನ್ನೆ ಬಿರಿಯಾನಿ, ಸೇಂಟ್ ಮಾರ್ಕ್ಸ್ ರಸ್ತೆ

ಬೆಂಗಳೂರಿನಲ್ಲಿ ಅತ್ಯುತ್ತಮ ಬಿರಿಯಾನಿಯನ್ನು ನೀಡುತ್ತಿರುವ ಹಾಗೂ ಹಲವಾರು ವರ್ಷಗಳಿಂದ ಸುದ್ದಿ ಮಾಡುತ್ತಿರುವ ಬೆಂಗಳೂರಿನ ಮತ್ತೊಂದು ಜನಪ್ರಿಯ ರೆಸ್ಟೋರೆಂಟ್ ಎಂದರೆ ಗುಂಡಪ್ಪ ದೊನ್ನೆ ಬಿರಿಯಾನಿ ಮನೆ. ಈ ಸ್ಥಳದಲ್ಲಿ ಕೇವಲ ಎರಡು ವಿಧದ ಬಿರಿಯಾನಿಗಳು ಮಾತ್ರ ಲಭಿಸುತ್ತದೆ.  ಆದರೆ ಅದರ ರುಚಿ ಮಾತ್ರ ಅದ್ಭುತ. ರೆಸ್ಟೋರೆಂಟ್ ನಗರದಾದ್ಯಂತ ಎರಡು ಔಟ್‌ಲೆಟ್‌ಗಳನ್ನು ಹೊಂದಿದೆ. ನಿಮಗೆ ಉತ್ತಮವಾದ ಬಿರಿಯಾನಿ ಬೇಕಾದರೆ ಈ ಸ್ಥಳಕ್ಕೆ ಭೇಟಿ ನೀಡಿ.

ವಿಳಾಸ: 14/13, ಸೇಂಟ್ ಮಾರ್ಕ್ಸ್ ರಸ್ತೆ, ಬೆಂಗಳೂರು

ಮನಿಸ್ ದಮ್ ಬಿರಿಯಾನಿ, ಜೀವನ್ ಭೀಮಾ ನಗರ

ಮನಿಸ್ ದಮ್ ಬಿರಿಯಾನಿ ಮನೆಯೂ ನಿಜಕ್ಕೂ ಬೆಂಗಳೂರಿನ ಬೆಸ್ಟ್ ಅಂಗಡಿಗಳಲ್ಲಿ ಒಂದು ಎನ್ನಬಹುದು. ಎಲ್ಲಾ ಬಿರಿಯಾನಿ ಪ್ರಿಯರಿಗೆ ಬಹಳ ಇಷ್ಟವಾಗುವ ಸ್ಥಳ ಎಂದರೆ ತಪ್ಪಾಗಲಾರದು. ಇಲ್ಲಿ ವಿಶೇಷವಾಗಿ ಬಿರಿಯಾನಿಯನ್ನು ಅಂಬೂರ್ ಶೈಲಿಯಲ್ಲಿ ತಯಾರಿಸಲಾಗುತ್ತದೆ. ನೀವು ಈ ರೆಸ್ಟೋರೆಂಟ್​ಗೆ ಸ್ನೇಹಿತರ ಜೊತೆಗೆ ಹೋಗಿ ಎಂಜಾಯ್ ಮಾಡಬಹುದು. ಇಲ್ಲಿನ ವಾತಾವರಣ ನಿಮಗೆ ಸಂತೋಷವನ್ನು ನೀಡುತ್ತದೆ. ಅಲ್ಲದೇ ಇಲ್ಲಿ ವೆಜ್​ ಬಿರಿಯಾನಿ ಸಹ ಇದ್ದು, ಅದನ್ನು ಬೇರೆ ತಯಾರಿಸುತ್ತಾರೆ.

ವಿಳಾಸ: 474, ಗ್ರೌಂಡ್ ಮಹಡಿ, 10ನೇ ಮುಖ್ಯ, ಎಚ್ಎಎಲ್ 3ನೇ ಹಂತ, ಜೀವನ್ ಭೀಮಾ ನಗರ, ಬೆಂಗಳೂರು

ಅಮ್ಮಿಸ್ ಬಿರಿಯಾನಿ, ಇಂದಿರಾನಗರ

ಬೆಂಗಳೂರಿನಲ್ಲಿ ಅತ್ಯುತ್ತಮ ಬಿರಿಯಾನಿ ಖರೀದಿಸಲು ನೀವು ಹೆಚ್ಚು ದುಡ್ಡ ಖರ್ಚು ಮಾಡುವ ಅಗತ್ಯವಿಲ್ಲ. ಇಂದಿರಾನಗರದಲ್ಲಿರುವ ಅಮ್ಮಿಸ್​ ಬಿರಿಯಾನಿ ಕೆಫೆಯು ನಿಮಗೆ ಕಡಿಮೆ ಹಣದಲ್ಲಿ ಅತ್ಯುತ್ತಮ ಬಿರಿಯಾನಿ ನೀಡುತ್ತದೆ. ಅವರ ಬಳಿ 14 ವಿಧದ ಬಿರಿಯಾನಿಗಳಿದ್ದು, ಇದರಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ವಿಧಗಳಿವೆ. ವಿಶೇಷವಾಗಿ ಮಟನ್ ಬಿರಿಯಾನಿ ಎಲ್ಲರಿಗೂ ಇಷ್ಟವಾಗುತ್ತದೆ.  ಈ ಸ್ಥಳವು ಬೆಂಗಳೂರಿನ ಅತ್ಯುತ್ತಮ ಬಿರಿಯಾನಿ ಸ್ಥಳವಾಗಿದೆ.

ಇದನ್ನೂ ಓದಿ: ಬೆಂಗ್ಳೂರಲ್ಲೇ ಜಪಾನಿ ಖಾದ್ಯ ಸವಿಯೋಕೆ ಈ ರೆಸ್ಟೊರೆಂಟ್​ಗಳಿಗೆ ಭೇಟಿ ಕೊಡಿ, ಇಲ್ಲಿನ Sushi ಜಪಾನಿಯರಿಗೂ ಇಷ್ಟವಂತೆ!

ವಿಳಾಸ: 29/1, 2 ನೇ ಹಂತ, CMH ರಸ್ತೆ, ಇಂದಿರಾನಗರ, ಬೆಂಗಳೂರು
Published by:Sandhya M
First published: