Bajji Near Me: ಕಾಫಿ ಜೊತೆ ದಾವಣಗೆರೆ ಬಿಸಿ ಬಿಸಿ ಬಜ್ಜಿ ತಿನ್ನೋದೇ ಖುಷಿ, ಬೆಂಗಳೂರಿನ ಈ ಸ್ಥಳಗಳಲ್ಲಿ ಸಿಗೋ ಮಿರ್ಚಿಗಿಲ್ಲ ಸಾಟಿ

Best Bajji Center Near Me: ಸಾಮಾನ್ಯವಾಗಿ ಈ ಮಿರ್ಜಿ ಬಜ್ಜಿ ಎಂದರೆ ಎಲ್ಲರಿಗೂ ಬಹಳ ಇಷ್ಟ. ಅದರಲ್ಲೂ ಸ್ವಲ್ಪ ಸ್ಪೆಷಲ್​ ಇದ್ದು, ರುಚಿ ಸಹ ಹೆಚ್ಚಿದ್ದರೆ, ಜನ ಮುಗಿ ಬಿದ್ದು ಹೋಗುತ್ತಾರೆ. ಬೆಂಗಳೂರಿನ (Bengaluru) ಕೆಲ ವಿಶೇಷ ಸ್ಥಳಗಳಲ್ಲಿ ಮಾತ್ರ ಈ ದಾವಣಗೆರೆ ಮಿರ್ಜಿ ಬಜ್ಜಿ ಸಿಗುವುದು. ಆ ಸ್ಥಳಗಳ ಪಟ್ಟಿ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಾವಣಗೆರೆ (Davanagere) ಎಂದರೆ ತಕ್ಷಣ ನೆನಪಾಗುವುದು ಬೆಣ್ಣೆ ದೋಸೆ (Benne Dose) ಬೆಂಗಳೂರಿನಲ್ಲಿ (Bengaluru) ದಾವಣಗೆರೆ ಬೆಣ್ಣೆ ದೋಸೆಯನ್ನು ಹುಡುಕಿಕೊಂಡು ಜನರು ಹಲವಾರು ಸ್ಥಳಗಳಿಗೆ ಹೋಗುತ್ತಾರೆ. ಆದರೆ ಜನರಿಗೆ ದೋಸೆ ಮಾತ್ರ ಅಲ್ಲ ಮತ್ತೊಂದು ಆಹಾರ ಪದಾರ್ಥ ಸಹ ಈಗ ನೆನಪಾಗುತ್ತದೆ. ಅದು ದಾವಣಗೆರೆ ಮಿರ್ಜಿ ಬಜ್ಜಿ (Davangere Mirchi Bajji). ಹೌದು, ದೋಸೆಯನ್ನು ಇಷ್ಟಪಡುವ ರೀತಿಯೇ ಇದನ್ನು ಸಹ ಬಹಳ ಇಷ್ಟಪಡುತ್ತಾರೆ ಮತ್ತು ಹುಡುಕಿಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಈ ಮಿರ್ಜಿ ಬಜ್ಜಿ ಎಂದರೆ ಎಲ್ಲರಿಗೂ ಬಹಳ ಇಷ್ಟ. ಅದರಲ್ಲೂ ಸ್ವಲ್ಪ ಸ್ಪೆಷಲ್​ ಇದ್ದು, ರುಚಿ ಸಹ ಹೆಚ್ಚಿದ್ದರೆ, ಜನ ಮುಗಿ ಬಿದ್ದು ಹೋಗುತ್ತಾರೆ. ಬೆಂಗಳೂರಿನ (Bengaluru) ಕೆಲ ವಿಶೇಷ ಸ್ಥಳಗಳಲ್ಲಿ ಮಾತ್ರ ಈ ದಾವಣಗೆರೆ ಮಿರ್ಜಿ ಬಜ್ಜಿ ಸಿಗುವುದು. ಆ ಸ್ಥಳಗಳ ಪಟ್ಟಿ ಇಲ್ಲಿದೆ.  

ದಾವಣಗೆರೆ ಬಜ್ಜಿ ಸೆಂಟರ್, ಸರ್ಜಾಪುರ ರಸ್ತೆ, ಬೆಂಗಳೂರು

ಇದರ ಹೆಸರೇ ಹೇಳುವಂತೆ ಈ ಸ್ಥಳದಲ್ಲಿ ದಾವಣಗೆರೆಯ ಬಜ್ಜಿ ಬಹಳ ಫೇಮಸ್​. ಇಲ್ಲಿ ಒಮ್ಮೆ ಬಜ್ಜಿ ತಿಂದರೆ ನೀವು ಪದೇ ಪದೇ ಭೇಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸ್ಥಳಕ್ಕೆ ವೀಕೆಂಡ್​ನಲ್ಲಿ ಹೋದರೆ ಫುಲ್ ಕ್ಯೂ ಇರುತ್ತದೆ.

ವಿಳಾಸ: ಸಿಲ್ವರ್ ಕೌಂಟಿ ರಸ್ತೆ, ಲೇಕ್‌ಡ್ಯೂ ರೆಸಿಡೆನ್ಸಿ- ಹಂತ 2, ಕೆಎಸ್‌ಆರ್‌ಪಿ ಕ್ಯಾಂಪಸ್, ಚೂಡಸಂದ್ರ, ಸರ್ಜಾಪುರ ರಸ್ತೆ, ಬೆಂಗಳೂರು

ಮೊಬೈಲ್​ ನಂಬರ್: 070228 48324

ಸಮಯ: 11:30am–10pm

ಶ್ರೀ ಅನ್ನಪೂರ್ಣೇಶ್ವರಿ ಬಜ್ಜಿ ಸೆಂಟರ್, ಬಿಟಿಎಂ, ಬೆಂಗಳೂರು

ಈ ಬಜ್ಜಿ ಸೆಂಟರ್​ನಲ್ಲಿ ದಾವಣಗೆರೆ ಮಿರ್ಜಿ ಬಜ್ಜಿ ತಿನ್ನೋಕೆ ಜನ ಗಂಟೆ ಗಟ್ಟಲೆ ಕಾದಿರುವ ಇತಿಹಾಸ ಕೂಡ ಇದೆ. ಇಲ್ಲಿ ಕೇವಲ ಒಂದು ರೀತಿಯ ಬಜ್ಜಿ ಅಲ್ಲ, ಆಲೂ ಬಜ್ಜಿ, ಬಾಳೆಕಾಯಿ ಬಜ್ಜಿ ಎಲ್ಲವೂ ಫುಲ್ ಫೇಮಸ್​. ನಿಮಗೆ ಈ ಸ್ಥಳ ಹತ್ತಿರವಿದ್ದರೆ ಸಂಜೆ ಕಾಫಿ ಜೊತೆ ಇಲ್ಲಿಂದ ಬಜ್ಜಿ ತಂದು ಸವಿಯಬಹುದು.

ವಿಳಾಸ: ಶಾಪ್ ನಂಬರ್. 35/2, ಬಿಟಿಎಂ ಫಸ್ಟ್​ ಸ್ಟೇಜ್, ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 096324 83936

ಸಮಯ: 10am–10pm

ಶ್ರೀ ವಿನಾಯಕ ಬಜ್ಜಿ ಸೆಂಟರ್, ಬಸವನಗುಡಿ, ಬೆಂಗಳೂರು

ಸಾಮಾನ್ಯವಾಗಿ ಬಜ್ಜಿ ರುಚಿ ಎಲ್ಲೆಡೆ ಒಂದೇ ರೀತಿ ಇರುವುದಿಲ್ಲ. ನಿಮಗೆ ವಿಶಿಷ್ಟವಾದ​ ರುಚಿ ಬೇಕು ಎಂದರೆ ಈ ಶ್ರೀ ವಿನಾಯಕ ಬಜ್ಜಿ ಸೆಂಟರ್​ಗೆ ಹೋಗಬಹುದು. ಮಳೆಗಾಲದಲ್ಲಿ ಒಂದು ಲೋಟ ಕಾಫಿ ಹಾಗೂ ಬಜ್ಜಿ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಬಹುದು.

ಇದನ್ನೂ ಓದಿ: ನವರಾತ್ರಿ ಹಬ್ಬದ ಸಮಯದಲ್ಲಿ ಈ ಸ್ಪೆಷಲ್​ ರೆಸಿಪಿಗಳನ್ನು ಮಿಸ್​ ಮಾಡ್ಬೇಡಿ

ವಿಳಾಸ: WHVC+45Wಎನ್​ ಆರ್​ ಕಾಲೋನಿ, ಬಸವನಗುಡಿ, ಬೆಂಗಳೂರು, ಕರ್ನಾಟಕ

ಮೊಬೈಲ್ ನಂಬರ್: 099729 39092

ಸಮಯ: 9am–10pm

ಶ್ರೀ ಸ್ವಾಮಿ ಬಜ್ಜಿ ಸೆಂಟರ್ ಬೆಂಗಳೂರು

ಇದು ಬೆಂಗಳೂರಿನಲ್ಲಿ ದಾವಣಗೆರೆ ಮಿರ್ಜಿ ಬಜ್ಜಿ ಸಿಗುವ ಅದ್ಭುತ ಸ್ಥಳಗಳಲ್ಲಿ ಒಂದು. ನಿಮ್ಮ ಗೆಳೆಯರ ಜೊತೆ ಸಂಜೆ ಹೋಗಿ ಇಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿ ಬಜ್ಜಿ ಸವಿದು ಬನ್ನಿ. ವೀಕೆಂಡ್​ ಸಮಯದಲ್ಲಿ ಇಲ್ಲಿ ಸಹ ಕ್ಯೂ ಇರುತ್ತದೆ.

ವಿಳಾಸ: ಫುಡ್ ಸ್ಟ್ರೀಟ್​, ವಿಶ್ವೇಶ್ವರಪುರ, ಬಸವನಗುಡಿ, ಬೆಂಗಳೂರು, ಕರ್ನಾಟಕ

ಸಮಯ:4:30–10pm

ಶ್ರೀ ಬಜ್ಜಿ ಸೆಂಟರ್, ಕತ್ರಿಗುಪ್ಪೆ 

ಈ ಜಾಗದ ಬಗ್ಗೆ ಹೆಚ್ಚಿನ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಇಲ್ಲಿ ನಿಮಗೆ ವೆರೈಟಿ ಬಜ್ಜಿಗಳು ಸಹ ಸಿಗುತ್ತದೆ. ನಿಮಗೆ ಈ ಸ್ಥಳ ಹತ್ತಿರವಿದ್ದರೆ ಸಂಜೆಯೇ ಹೋಗಿ ಎಂಜಾಯ್ ಮಾಡಿ ಬನ್ನಿ.

ಇದನ್ನೂ ಓದಿ: ಒತ್ತಡ ಕಡಿಮೆ ಮಾಡಲು ಅರೋಮಾಥೆರಪಿ ಎಷ್ಟು ಪ್ರಯೋಜನಕಾರಿ ನೋಡಿ

ವಿಳಾಸ: WHP6+5CC, ಕತ್ರಿಗುಪ್ಪೆ ಮುಖ್ಯ ರಸ್ತೆ, ವಿದ್ಯಾಪೀಠ ಲೇಔಟ್, ಅಶೋಕ್ ನಗರ, ಶ್ರೀನಿವಾಸನಗರ, ಬನಶಂಕರಿ, ಬೆಂಗಳೂರು, ಕರ್ನಾಟಕ 560050

ಮೊಬೈಲ್ ನಂಬರ್: 095911 18636

ಸಮಯ: 7:30am–9pm
Published by:Sandhya M
First published: