ಕಣ್ಣುಗಳು (Eyes) ಅತ್ಯಂತ ಸೂಕ್ಷ್ಮವಾದ ಅಂಗಗಳಾಗಿವೆ. ಇದಕ್ಕೆ ವಿಶೇಷ ಎಚ್ಚರಿಕೆ ಮತ್ತು ಕಾಳಜಿಯ ಅಗತ್ಯವಿರುತ್ತದೆ. ಏಕೆಂದರೆ ಕೆಲವು ಕಣ್ಣಿನ ಸಮಸ್ಯೆಗಳು ಸಂಪೂರ್ಣ ಕುರುಡುತನಕ್ಕೆ ಕಾರಣವಾಗಬಹುದು. ಮಧುಮೇಹ (Sugar) ಮತ್ತು ಅಧಿಕ ರಕ್ತದೊತ್ತಡದಂತಹ (Blood Pressure) ದೀರ್ಘಕಾಲದ ಕಾಯಿಲೆಗಳು ರೆಟಿನಾದ ಮೇಲೆ ಪರಿಣಾಮ ಬೀರಿ ಕಣ್ಣಿನ ಮಂದ ದೃಷ್ಟಿಗೆ ಕಾರಣವಾಗಬಹುದು. ಹಾಗಾಗಿ ನಿಯಮಿತವಾಗಿ ಕಣ್ಣಿನ ತಪಾಸಣೆಯಿಂದ ಅನೇಕ ಕಣ್ಣಿನ ಸಮಸ್ಯೆಗಳನ್ನು (Eye Problems) ತಡೆಗಟ್ಟಬಹುದು. ಡಾ. ಬಸು ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ. ಮನ್‌ದೀಪ್ ಸಿಂಗ್ ಬಸು ಅವರು ಆಯುರ್ವೇದವನ್ನು (Ayurveda Medicine) ಅನುಸರಿಸುವ ಮೂಲಕ ಕಣ್ಣಿನ ಸಮಸ್ಯೆಗಳನ್ನು ನಿವಾರಿಸಬಹುದು ಎಂಬುದಾಗಿ ಹೇಳುತ್ತಾರೆ. ಆಯುರ್ವೇದವು ಎಲ್ಲಾ ನೈಸರ್ಗಿಕ ವಿಧಾನವನ್ನು ಶಿಫಾರಸು ಮಾಡುತ್ತದೆ ಎಂಬುದಾಗಿ ಅವರು ಹೇಳುತ್ತಾರೆ.
ದೃಷ್ಟಿ ತೊಂದರೆಗೆ ಮನೆಮದ್ದು
ದೃಷ್ಟಿ ತೊಂದರೆಯನ್ನು ಹೊಂದಿರುವವರು ಬಾದಾಮಿ, ಕರಿಮೆಣಸು ಮತ್ತು ಜೇನುತುಪ್ಪದ ಮಿಶ್ರಣದಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇದಕ್ಕಾಗಿ ಬೆಳಗ್ಗೆ 2-4 ಪುಡಿಮಾಡಿದ ಕರಿಮೆಣಸು ಮತ್ತು ಬೆಚ್ಚಗಿನ ಹಾಲಿನ ಗಾಜಿನೊಂದಿಗೆ 4-5 ನೆನೆಸಿದ ಬಾದಾಮಿ ಸೇವಿಸಿ. ಇದು ದೃಷ್ಟಿ ಹೆಚ್ಚಿಸುವ ಅತ್ಯುತ್ತಮ ಔಷಧಿಗಳಲ್ಲಿ ಒಂದಾಗಿದೆ ಎಂಬುದಾಗಿ ಡಾ. ಬಸು ಹೇಳುತ್ತಾರೆ.
ಅಂತೆಯೇ, ಪ್ರತಿದಿನ 2 ರಿಂದ 5 ಟೇಬಲ್‌ಸ್ಪೂನ್ ಆಮ್ಲಾ ರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇನ್ನು ಅವರು ಕಣ್ಣಿನ ಸಮಸ್ಯೆಗೆ ಆಯುರ್ವೇದದ ಹಲವು ವಿಧಾನಗಳನ್ನು ಶಿಫಾರಸು ಮಾಡುತ್ತಾರೆ.
1.ನಾಸ್ಯಂ: ದಿನಕ್ಕೆ ಒಮ್ಮೆ ಎರಡು ಹನಿಗಳಷ್ಟು ದೇಸಿ ಹಸುವಿನ ತುಪ್ಪವನ್ನು ಎರಡೂ ಮೂಗಿನ ಹೊಳ್ಳೆಗಳಲ್ಲಿ ಹಾಕಿಕೊಳ್ಳುವುದು.
2.ಐವಾಶ್: ತ್ರಿಫಲ ನೀರಿನಿಂದ ದಿನಕ್ಕೆ ಎರಡು ಬಾರಿ ನಿಮ್ಮ ಕಣ್ಣುಗಳನ್ನು ತೊಳೆಯಿರಿ. ತ್ರಿಫಲ ಸೂತ್ರದಲ್ಲಿ ಬಳಸಲಾಗುವ ಮೂರು ಹಣ್ಣುಗಳೆಂದರೆ ಆಮ್ಲಾ, ಹರಿತಕಿ ಮತ್ತು ಬಿಭಿತಕಿ. ಇದನ್ನು ನಂಬಲಾಗದಷ್ಟು ಪರಿಣಾಮಕಾರಿ ಬೀರುವ ಕಣ್ಣಿನ ಕಂಡಿಷನರ್ ಎಂದು ಶಿಫಾರಸು ಮಾಡಲಾಗಿದೆ. ಅಲ್ಲದೇ ಇದು ದೇಹದ ಎಲ್ಲಾ ಮೂರು ದೋಷಗಳಾದ ವಾತ, ಪಿತ್ತ, ಕಫದ ಮೇಲೆ ನಿಯಂತ್ರಣವನ್ನು ಹೊಂದಿದೆ. ಅಂದರೆ ವಾತದ ಮೇಲೆ ಹರಿತಕಿ, ಪಿತ್ತದ ಮೇಲೆ ಅಮಲಕಿ ಮತ್ತು ಕಫದ ಮೇಲೆ ವಿಭಿತಕಿ ಪರಿಣಾಮ ಬೀರುತ್ತವೆ ಎನ್ನಲಾಗುತ್ತದೆ.
3.ಪಾದಾಭ್ಯಂಗ: ಆಯುರ್ವೇದದಲ್ಲಿ ದೃಷ್ಟಿಯನ್ನು ಹೆಚ್ಚಿಸಲು, ಪಾದಾಭ್ಯಂಗವನ್ನು ಮಾಡಲು ಸಹ ಸೂಚಿಸಲಾಗಿದೆ. ಮಲಗುವ ಮುನ್ನ ನಿಮ್ಮ ಪಾದಗಳನ್ನು ದೇಸಿ ಹಸುವಿನ ತುಪ್ಪದಿಂದ ಆಗಾಗ್ಗೆ ಮಸಾಜ್ ಮಾಡಬಹುದು.
4. ತ್ರಾಟಕ ಕರ್ಮ: ತ್ರಾಟಕ ಕರ್ಮವನ್ನು ಪ್ರತಿದಿನ ಮಾಡಬಹುದು. ತ್ರಾಟಕ ಕರ್ಮವು ಧ್ಯಾನ ಭಂಗಿಯಾಗಿದೆ. ಇದರಲ್ಲಿ ನೀವು ಕತ್ತಲೆಯ ಕೋಣೆಯಲ್ಲಿ ಮೆಣದಬತ್ತಿಯ ಮುಂದೆ ಕುಳಿತುಕೊಂಡು ನಿಮ್ಮ ದೃಷ್ಟಿ ಸುಧಾರಿಸಲು ಸ್ವಲ್ಪ ಸಮಯದವರೆಗೆ ಒಂದು ಹಂತದಲ್ಲಿ ನೋಡುವುದಾಗಿದೆ. ಇನ್ನೂ ಶಾರದಾ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸಿಬಾರಾಮ್ ಖಾರಾ ಅವರ ಪ್ರಕಾರ, ಕಣ್ಣಿನ ಹಲವಾರು ಕಾಯಿಲೆಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ.
ದೃಷ್ಟಿಯನ್ನು ಸುಧಾರಿಸಲು ಆಯುರ್ವೇದಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಗಳಿವೆ ಎಂಬುದಾಗಿ ಅವರು ವಿವರಿಸುತ್ತಾರೆ. ಅವುಗಳು ಯಾವವು ಅನ್ನೋದನ್ನು ನೋಡೋದಾದ್ರೆ,
*ತ್ರಿಫಲ ಕಷಾಯ ಅಥವಾ ತ್ರಿಫಲಚೂರ್ಣವನ್ನು ಜೇನುತುಪ್ಪ ಅಥವಾ ತುಪ್ಪದೊಂದಿಗೆ ಸೇವಿಸುವುದು ಕಣ್ಣುಗಳಿಗೆ ಒಳ್ಳೆಯದು.
* ಪಿತ್ತಜ ಕಣ್ಣಿನ ಸಮಸ್ಯೆಗಳಿಗೆ ತುಪ್ಪದೊಂದಿಗೆ ತ್ರಿಫಲಚೂರ್ಣವನ್ನು ಬಳಸಲು ಶಿಫಾರಸು ಮಾಡಲಾಗಿದೆ. ಹಾಗೆಯೇ ವಟಜ ಕಣ್ಣಿನ ಕಾಯಿಲೆಗಳಿಗೆ ಎಳ್ಳೆಣ್ಣೆ, ಕಫಜ ಕಣ್ಣಿನ ಕಾಯಿಲೆಗಳಿಗೆ ಜೇನುತುಪ್ಪವನ್ನು ಬಳಸಲು ಶಿಫಾರಸು ಮಾಡಲಾಗಿದೆ.
* ತ್ರಿಫಲಾಕಾಶಯದಿಂದ (ತ್ರಿಫಲ ಕಷಾಯ) ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ತೊಳೆಯುವುದರಿಂದಲೂ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
*ಪ್ರತಿದಿನ ಬೆಳಿಗ್ಗೆ ನೀರು ಕುಡಿದ ನಂತರ ನಿಮ್ಮ ಕಣ್ಣುಗಳನ್ನು ತೊಳೆಯುವ ಮೂಲಕ ಕಣ್ಣಿನ ಸೋಂಕನ್ನು ತಡೆಗಟ್ಟಬಹುದು.
* ತಿಂದ ನಂತರ ಒದ್ದೆಯಾದ ಅಂಗೈಯಿಂದ ನಿಮ್ಮ ಕಣ್ಣುಗಳನ್ನು ಮಸಾಜ್ ಮಾಡುವುದರಿಂದ ನಿಮ್ಮ ಕಣ್ಣುಗಳನ್ನು ಹಾನಿಕಾರಕ ಅಂಶಗಳಿಂದ ರಕ್ಷಿಸಬಹುದು.
* ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ನಿಮ್ಮನ್ನು ರಿಫ್ರೆಶ್ ಮಾಡುತ್ತವೆ. ಆದರೆ ಬೆಚ್ಚಗಿನ ನೀರನ್ನು ನೆತ್ತಿಯ ಮೇಲೆ ಸುರಿದುಕೊಳ್ಳುವುದು ನಿಮ್ಮ ಕೂದಲು ಹಾಗೂ ಕಣ್ಣು ಚೈತನ್ಯ ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು.
* ದೈನಂದಿನ ದಿನಚರಿಯ ಭಾಗವಾಗಿ, ಅಂಜನಾ (ಕೊಲಿರಿಯಮ್) ಮತ್ತು ನಸ್ಯ (ಮೂಗಿನ ಹೊಳ್ಳೆಗಳ ಮೂಲಕ ಔಷಧಗಳನ್ನು ಹಾಕುವುದು) ರೂಢಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಇದರಿಂದ ಕಣ್ಣುಗಳನ್ನು ರಕ್ಷಿಸಲು ಮತ್ತು ಕಣ್ಣಿನಿಂದ ಹೆಚ್ಚುವರಿ ಕಫವನ್ನು ಹೊರಹಾಕಲು ಸಾಧ್ಯ ಎನ್ನಲಾಗುತ್ತದೆ.
*ತ್ರಿಫಲ, ತುಪ್ಪ, ಬಾರ್ಲಿ, ಗೋಧಿ, ಶಾಸ್ತಿಕ ಶಾಲಿ (ಹಳೆಯ ಅಕ್ಕಿ), ಸೈಂಧವ ಲವಣ, ದ್ರಾಕ್ಷ, ದಾಳಿಂಬೆ, ಶತಾವರಿ ಮತ್ತು ಹಸಿರು ಕಾಳುಗಳನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು ಎಂದು ಹೇಳಲಾಗದೆ.
ಈ ಆಯುರ್ವೇದ ಔಷಧಿಗಳ ಜೊತೆಗೆ ಅತಿಯಾಗಿ ತಿನ್ನುವುದು, ಕೋಪ, ದುಃಖ, ಹಗಲು ಮಲಗುವುದು ಅಥವಾ ರಾತ್ರಿಯಲ್ಲಿ ಎಚ್ಚರಗೊಂಡು ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ