Artificial Jewelry: ನಿಮ್ಮ ನೆಚ್ಚಿನ ಸೀರಿಯಲ್ ನಟಿಯರು ಧರಿಸುವ ಆಭರಣ ಬೇಕು ಅಂದ್ರೆ, ಬೆಂಗಳೂರಿನ ಈ ಏರಿಯಾಗಳಿಗೆ ಹೋಗಿ

Near Me Stories: ಹಲವರಿಗೆ ಈ ಆಭರಣಗಳು ಎಲ್ಲಿ ಸಿಗುತ್ತದೆ ಎಂಬುದು ಗೊತ್ತಿಲ್ಲ. ಅದಕ್ಕೆ ನಾವಿಲ್ಲಿ ನಿಮ್ಮ ನೆಚ್ಚಿನ ಸೀರಿಯಲ್​ ನಟಿಯರು ಧರಿಸುವ ಆಭರಣಗಳು ಎಲ್ಲಿ ಸಿಗುತ್ತದೆ ಎಂಬುದರ ಲಿಸ್ಟ್​ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಭರಣ (Jewelry) ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ/ ಅದರಲ್ಲೂ ಭಾರತೀಯರಲ್ಲಿ (Indians)  ಸಣ್ಣ ಮನೆಯ ಗೃಹ ಪ್ರವೇಶದಿಂದ ಹಿಡಿದು ದೊಡ್ಡ ಮದುವೆಯ ಕಾರ್ಯಕ್ರಮದಲ್ಲಿ ಹೆಂಗಳೆಯರು ಆಭರಣ ಧರಿಸಿಯೇ ಧರಿಸುತ್ತಾರೆ. ಈ ಆಭರಣಗಳು ನಮ್ಮ ಜೀವನದಲ್ಲಿ ಎಷ್ಟು ಹಾಸು ಹೊಕ್ಕಾಗಿದೆ ಎಂದರೆ ಧಾರಾವಾಹಿಗಳಲ್ಲಿ ಅಭಿನಯಿಸುವ ವಿಲನ್​ ಪಾತ್ರಧಾರಿಗಳು (Serial Stars) ಸಹ ವಿಭಿನ್ನ ಶೈಲಿಯ , ದೊಡ್ಡ ದೊಡ್ಡ ಕಿವಿ ಓಲೆ, ಸರಗಳನ್ನು ಧರಿಸುತ್ತಾರೆ. ಅವರು ಧರಿಸುವ ಆಭರಣಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತದೆ. ಆದರೆ ಹಲವರಿಗೆ ಈ ಆಭರಣಗಳು ಎಲ್ಲಿ ಸಿಗುತ್ತದೆ ಎಂಬುದು ಗೊತ್ತಿಲ್ಲ. ಅದಕ್ಕೆ ನಾವಿಲ್ಲಿ ನಿಮ್ಮ ನೆಚ್ಚಿನ ಸೀರಿಯಲ್​ ನಟಿಯರು ಧರಿಸುವ ಆಭರಣಗಳು ಎಲ್ಲಿ ಸಿಗುತ್ತದೆ ಎಂಬುದರ ಲಿಸ್ಟ್​ ಇಲ್ಲಿದೆ.  

ಕಮರ್ಷಿಯಲ್ ಸ್ಟ್ರೀಟ್​

ಇದೊಂದು ಏರಿಯಾದಲ್ಲಿ ಏನು ಸಿಗಲ್ಲ ಕೇಳಿ. ಬಟ್ಟೆಯಿಂದ ಹಿಡಿದು ಅಡುಗೆ ಮನೆ ವಸ್ತುವಿನವರೆಗೆ ಇಲ್ಲಿ ಎಲ್ಲವೂ ಸಿಗುತ್ತದೆ. ಹಾಗೆಯೇ ನಿಮ್ಮ ನೆಚ್ಚಿನ ಸೀರಿಯಲ್​ ನಟಿಯರು ಸಹ ಇಲ್ಲಿನ ಅಂಗಡಿಗಳಿಂದ ವಿಭಿನ್ನ ರೀತಿಯ ಸರ, ಬಳಿ, ಕಿವಿಯೋಲೆಗಳನ್ನು ಖರೀದಿ ಮಾಡೋದಂತೆ. ನೀವು ಒಮ್ಮೆ ಇದರ ಒಳಗೆ ಹೊಕ್ಕರೆ ಸಾಕು ಯಾವುದೋ ಲೋಕಕ್ಕೆ ಬಂದಿದ್ದೀವಿ ಅಂತ ಅನಿಸುವುದು ಸಹಜ. ನಿಮಗೂ ಅದೇ ತರಹದ ಆಭರಣಗಳು ಬೇಕು ಅಂದ್ರೆ ಇಲ್ಲಿಗೆ ಹೋಗಿ.

 ಜಯನಗರ

ಕಮರ್ಷಿಯಲ್​ ಸ್ಟ್ರೀಟ್​ ನಂತರ ಈ ರೀತಿಯ ಆಭರಣಗಳಿಗೆ ಹೆಚ್ಚು ಫೇಮಸ್​ ಎಂದರೆ ಅದು ಜಯನಗರ ಮಾರ್ಕೆಟ್​. ಇಲ್ಲಿ ಸಹ ನೀವು ರಸ್ತೆ ಬದಿಯಲ್ಲಿ ವಿಭಿನ್ನ ಶೈಲಿಯ ಆಭರಣಗಳನ್ನು ಮಾರುವ ಹೆಂಗಸರು ಕಾಣಿಸುತ್ತಾರೆ. ಅವರ ಬಳಿ ಇರುವ ಆಭರಣಗಳ ಬೆಲೆ ಕಡಿಮೆ ಜೊತೆಗೆ ನಿಮ್ಮ ಎಲ್ಲಾ ಬಟ್ಟೆಗಳಿಗೆ ಸೂಕ್ತವಾಗುವ ಆಭರಣಗಳು ಇಲ್ಲಿ ಲಭ್ಯವಿದೆ.   ಅಲ್ಲದೇ ಇಲ್ಲಿ ಕೆಲ ಅಂಗಡಿಗಳು ಸಹ ಇದ್ದು, ಈ ಅಂಗಡಿಗಳಲ್ಲಿ ಕೂಡ ಈ ರೀತಿಯ ಆಭರಣಗಳು ಸಿಗುತ್ತದೆ. ಯಾವ ಅಂಗಡಿಗಳು ಬೆಸ್ಟ್​ ಎನ್ನುವ ಲಿಸ್ಟ್​ ಇಲ್ಲಿದೆ.

ಕಂದಲಾ ಹೌಸ್​ ಆಫ್​ ಜ್ಯುವೆಲರಿ

ಅಮನ್ಯ ಸ್ಟೋರ್​

ವೆಲ್ವೆಟ್​ ಬಾಕ್ಸ್

ಪೆಸ್ಸ

ಇದನ್ನೂ ಓದಿ: ಬೆಂಗಳೂರಿನ ಈ ಅಂಗಡಿಗಳಲ್ಲಿ ವೆರೈಟಿ ಹೋಳಿಗೆ ಸಿಗುತ್ತೆ, ಯುಗಾದಿಗೆ ಇದೇ ಬೆಸ್ಟ್!

ವಿಜಯನಗರ

ಶಾಪಿಂಗ್ , ಈಟಿಂಗ್​ ಎಲ್ಲದಕ್ಕೂ ಈ ಸ್ಥಳ ಬೆಸ್ಟ್​ ಎನ್ನಬಹುದು. ಇಲ್ಲಿ ಕೇವಲ ಬಟ್ಟೆಗಳು ಮತ್ತು ಚಾಟ್​ ಸ್ಟ್ರೀಟ್​ ಅಲ್ಲದೇ ಎಲ್ಲಾ ಸಮಾರಂಭಗಳಿಗೂ ಸೂಕ್ತವಾಗುವ ಮತ್ತು ಸೀರಿಯಲ್​ ನಟಿಯರು ಧರಿಸುವ ಆಭರಣಗಳು ಇಲ್ಲಿ ಸಿಗುತ್ತದೆ. ನೀವು ಮೆಟ್ರೊ ನಿಲ್ದಾಣದ ಬಲ ಭಾಗದ ಕಡೆ ಒಂದು ರೌಂಡ್​ ಹೋದ್ರೆ ಬ್ಯಾಗ್​ ತುಂಬಾ ಅತಿ ಕಡಿಮೆ ಬೆಲೆಗೆ ಬಹಳಷ್ಟು ಖರೀದಿ ಮಾಡಿ ಬರುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ನಿಮಗಿಲ್ಲಿ ಕಾರ್ಯಕ್ರಮಗಳಿಗೆ ಬಾಡಿಗೆಗೆ ಸಹ ಆಭರಣಗಳು ಲಭಿಸುತ್ತದೆ.

ಮಲ್ಲೇಶ್ವರಂ

ಈ ಏರಿಯಾ ಬೆಂಗಳೂರಿನ ಹೃದಯ ಎಂದರೆ ತಪ್ಪಲ್ಲ. ಮೆಜೆಸ್ಟಿಕ್​ ನಂತರ ಹೆಚ್ಚು ಪ್ರಸಿದ್ಧ ನಗರ ಇದು. ಇಲ್ಲಿನ ಹೂವಿನ ಮಾರುಕಟ್ಟೆ,  ರೋಡ್​ ಸೈಡ್​ ಶಾಪಿಂಗ್​ ಹೀಗೆ ಲಿಸ್ಟ್​ ಮಾಡಿದ್ರೆ ಮುಗಿಯುವುದಿಲ್ಲ.  ಇಲ್ಲಿ ಸಹ ಜಯನಗರದ ರೀತಿಯೇ ರಸ್ತೆಯ ಬದಿಯಲ್ಲಿ ಶಾಪಿಂಗ್ ಮಾಡಲು ಹಲವಾರಿದೆ. ಹಾಗೆಯೇ ಇಲ್ಲಿ ಅತಿ ಕಡಿಮೆ ಬೆಲೆಗೆ ನಿಮಗೆ ಬಟ್ಟೆಗಳು, ಆಭರಣ ಸಿಗುತ್ತದೆ. ಅಷ್ಟೇ ಅಲ್ಲದೇ ಇಲ್ಲಿ ಸಿಗುವ ಸರ, ಬಳೆಗಳನ್ನು ನೋಡಿದ್ರೆ ಯಾವುದನ್ನ ಖರೀದಿ ಮಾಡಬೇಕು, ಯಾವುದನ್ನ ಬಿಡಬೇಕು ಎಂಬ ಅನುಮಾನ ಕಾಡದೇ ಇರದು.

ಇದನ್ನೂ ಓದಿ: ಮದುವೆಗೆ ಲೇಟೆಸ್ಟ್ ಡಿಸೈನ್ ಚಿನ್ನಾಭರಣ ಬೇಕು ಎಂದ್ರೆ ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ಕೊಡಿ!

 ಮೆಜೆಸ್ಟಿಕ್​

ಇಲ್ಲಿಗೆ ಹೆಚ್ಚಿನ ಜನರು ಶಾಪಿಂಗ್​ ಮಾಡೋಕೆ ಅಂತನೆ ಹೋಗುವುದಿಲ್ಲ, ಆದರೆ ಈ ಕಡೆ ಹೋದಾಗ ಮಾತ್ರ ಅಲ್ಲಿ ಆಭರಣಗಳನ್ನು ಖರೀದಿ ಮಾಡಲೇಬೇಕು. ಇಲ್ಲಿ ಅತಿ ಕಡಿಮೆ ಬೆಲೆಗೆ ನಿಮಗೆ ನಿಮ್ಮ ನೆಚ್ಚಿನ  ನಟಿಯರು ಧರಿಸುವ ಆಭರಣಗಳು ಸಿಗುತ್ತದೆ. ಹಾಗಾಗಿ ನಿಮಗೂ ಸಹ ಆ ರೀತಿ ಸರ, ಬಳೆ ಬೇಕು ಅಂದ್ರೆ ಇಲ್ಲಿದೆ ವಿಸಿಟ್​ ಮಾಡಿ.
Published by:Sandhya M
First published: