Andhra Restaurant Near Me: ಬೆಂಗಳೂರಲ್ಲಿ ಆಂಧ್ರ ಸ್ಪೆಷಲ್ ಊಟ ಹುಡುಕ್ತಿದ್ದೀರಾ? ಹಾಗಿದ್ರೆ ಈ ರೆಸ್ಟೋರೆಂಟ್‌ಗಳಿಗೆ ಮಿಸ್ ಮಾಡದೇ ವಿಸಿಟ್ ಕೊಡಿ!

Best Andhra Restaurant In Bengaluru: ಹೈದರಾಬಾದಿ ಬಿರಿಯಾನಿ ಅಥವಾ ರೈಸ್​, ಪಪ್ಪು ಮತ್ತು ರಸಂನೊಂದಿಗೆ ಬಾಳೆ ಎಲೆಯಲ್ಲಿ ಅದನ್ನು ತಿಂದರೆ ಆಹಾ, ಎಂಥಾ ರುಚಿ ಗೊತ್ತಾ? ಇದನ್ನು ವರ್ಣಿಸುವುದು ನಿಜಕ್ಕೂ ಕಷ್ಟ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಂಧ್ರ  ಸ್ಪೆಷಲ್​ ಊಟ (Andra Special Lunch) ಎಂದರೆ ಸ್ಪೈಸಿ ಪ್ರಿಯರಿಗೆ (Spicy Food Lovers) ಬಹಳ ಇಷ್ಟವಾಗುತ್ತದೆ. ಇದು ಬೆಂಗಳೂರಿನ (Bengaluru) ಜನರ ಫೇವರೇಟ್​ ಕೂಡ ಎನ್ನಬಹುದು. ಜನರು ವೀಕೆಂಡ್​ ಸಮಯದಲ್ಲಿ (Weekend Time)  ಹುಡುಕಿಕೊಂಡು ಹೋಗುತ್ತಾರೆ. ಅವರ ಸ್ಪೈಸಿ ಆಹಾರವನ್ನು ಸವಿಯುವುದೇ ಒಂದು ಅದ್ಬುತ ಅನುಭವ ಎನ್ನಬಹುದು. ಹೈದರಾಬಾದಿ ಬಿರಿಯಾನಿ ಅಥವಾ ರೈಸ್​, ಪಪ್ಪು ಮತ್ತು ರಸಂನೊಂದಿಗೆ ಬಾಳೆ ಎಲೆಯಲ್ಲಿ ಅದನ್ನು ತಿಂದರೆ ಆಹಾ, ಎಂಥಾ ರುಚಿ ಗೊತ್ತಾ? ಇದನ್ನು ವರ್ಣಿಸುವುದು ನಿಜಕ್ಕೂ ಕಷ್ಟ. ನೀವು ಬೆಂಗಳೂರಿನಲ್ಲಿ ಬೆಸ್ಟ್​ ಆಂಧ್ರ ಶೈಲಿಯ ಆಹಾರವನ್ನು ಹುಡುಕುತ್ತಿದ್ದರೆ ಕೆಲ ಬೆಸ್ಟ್​ ಸ್ಥಳಗಳ ಲಿಸ್ಟ್​ ಇಲ್ಲಿದೆ.  

ಮೇಘನಾ, ಜಯನಗರ, ಬೆಂಗಳೂರು

ಮೇಘನಾ ಬಿರಿಯಾನಿ ಈ ಸ್ಥಳದ ಬಗ್ಗೆ ಹೆಚ್ಚಿನ ಪರಿಚಯ ನೀಡುವ ಅವಶ್ಯಕತೆ ಇಲ್ಲ. ಇದರ ಹೆಸರನ್ನು ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತದೆ. ಇಲ್ಲಿ ಮುಖ್ಯವಾಗಿ ನಾನ್​ ವೆಜ್​ ಆಹಾರವನ್ನು ಟ್ರೈ ಮಾಡಲೇಬೇಕು ಎನ್ನುತ್ತಾರೆ. ಚಿಕನ್ ಚಿಲ್ಲಿ, ಕಬಾಬ್​ ಬೋನ್‌ಲೆಸ್ ಚಿಕನ್ ಬಿರಿಯಾನಿ,  ಮೇಘನಾ ಚಿಕನ್ 555, ಮಟನ್ ಪೆಪ್ಪರ್ ಫ್ರೈ ಮತ್ತು ನಾಟಿ ಚಿಕನ್ ಫ್ರೈ ಮಿಸ್​ ಮಾಡಿಕೊಳ್ಳಬಾರದು.  ಹಾಗೆಯೇ ಇಲ್ಲಿ ಆಂಧ್ರ ಸ್ಪೆಷಲ್​ ಲಂಚ್ ಅಥವಾ ಡಿನ್ನರ್​ ಬೇಕು ಎಂದರೆ ಈ ಸ್ಥಳವನ್ನು ಮರೆಯಬೇಡಿ.

ವಿಳಾಸ: 52, ಮೊದಲ ಮಹಡಿ, 33ನೇ ಮುಖ್ಯ ರಸ್ತೆ,4ನೇ ಬ್ಲಾಕ್​, ಜಯನಗರ

ಮೊಬೈಲ್ ನಂಬರ್: 8022448080

ಸಮಯ: ಬೆಳಗ್ಗೆ 10 ರಿಂದ ರಾತ್ರಿ 12 ರ ವರೆಗೆ

ನಾಗಾರ್ಜುನ, ಅಶೋಕ ನಗರ, ಬೆಂಗಳೂರು

ಇದು ಬೆಂಗಳೂರಿನ ಆಹಾರ ಪ್ರಿಯರ ನೆಚ್ಚಿನ ಸ್ಥಳಗಳಲ್ಲಿ ಒಂದು. ಇಲ್ಲಿನ ಚಿಲ್ಲಿ ಚಿಕನ್​ ಮಿಸ್​ ಮಾಡಲೇಬಾರದಂತೆ. ಈ ಸ್ಥಳ ನಾನ್​ ವೆಜ್​ ಪ್ರಿಯರಿಗೆ ಬಹಳ ಇಷ್ಟವಾಗುತ್ತದೆ. ನಿಮ್ಮ ಫ್ಯಾಮಿಲಿ ಜೊತೆ ಲಂಚ್ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ.

ವಿಳಾಸ: ಮೆಯು ಸ್ಕ್ವೇರ್, 174/1, ಬನ್ನೇರುಘಟ್ಟ ಮುಖ್ಯ ರಸ್ತೆ, ಡಾಲರ್ ಲೇಔಟ್, ಜೆಪಿ ನಗರ, ಬೆಂಗಳೂರು

ಮೊಬೈಲ್ ನಂಬರ್: +918041300400

ಸಮಯ: ಬೆಳಗ್ಗೆ 10 ರಿಂದ ರಾತ್ರಿ 11 ಗಂಟೆಗೆ

ಭೀಮಾ, ಅಶೋಕ್ ನಗರ್, ಬೆಂಗಳೂರು

ನೀವು ಒಮ್ಮೆಈ ಸ್ಥಳಕ್ಕೆ ಭೇಟಿ ನೀಡಿದರೆ ಪದೇ ಪದೆ ಹೋಗುತ್ತಾರೆ. ಅವರ ಆಂಧ್ರದ ಊಟವನ್ನು ಪ್ರಯತ್ನಿಸಲೇ ಬೇಕು. ಬಿಸಿ ಪಪ್ಪು ಅಥವಾ ದಾಲ್, ಚಿಕನ್ 65 ಮತ್ತು ಫ್ರೈ ಮಾಡಿದ ಸೀರ್ ಮೀನಿನ ರುಚಿ ನಿಮ್ಮನ್ನ ಇಲ್ಲಿಗೆ ಮತ್ತೆ ಮತ್ತೆ ಬರುವಂತೆ ಮಾಡುತ್ತದೆ.

ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆಯದು ಅಂತ ಇವುಗಳನ್ನು ಅತಿಯಾಗಿ ತಿಂದ್ರೆ ಅಪಾಯವೇ ಜಾಸ್ತಿ

ವಿಳಾಸ: ಆಶಾ ಬಿಲ್ಡಿಂಗ್, ಗ್ರೌಂಡ್ ಮಹಡಿ, 31, ಚರ್ಚ್ ಸ್ಟ್ರೀಟ್, ಅಶೋಕ್ ನಗರ, ಬೆಂಗಳೂರು

ಮೊಬೈಲ್ ನಂಬರ್: +918025587389

ಸಮಯ: ಬೆಳಗ್ಗೆ 11 ರಿಂದ ರಾತ್ರಿ 12 ಗಂಟೆಗೆ

ನಂದನ ಪ್ಯಾಲೇಸ್​ - ಆರ್ ಆರ್ ನಗರ, ಬೆಂಗಳೂರು

ನಿಮಗೆ ಇಲ್ಲಿ ಬೆಸ್ಟ್​ ಆಂಧ್ರ ಸ್ಪೆಷಲ್ ಮೀಲ್ಸ್​ ಸಿಗುತ್ತದೆ. ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಇಲ್ಲಿಗೆ ಹೋಗಬಹುದು ಅಥವಾ ಇಲ್ಲಿಂದ ಆರ್ಡರ್ ಸಹ ಮಾಡಬಹುದು. ಇಲ್ಲಿನ ಊಟವನ್ನು ಮಿಸ್​ ಮಾಡಿಕೊಳ್ಳಬೇಡಿ.

ವಿಳಾಸ: 5 ನೇ ಹಂತ BEML ಲೇಔಟ್, 162, ರಸ್ತೆ, ಎದುರು. ಎಸ್‌ಬಿಐ ಬ್ಯಾಂಕ್, ಚನ್ನಸಂದ್ರ, ಆರ್‌ಆರ್ ನಗರ, ಬೆಂಗಳೂರು, ಕರ್ನಾಟಕ 560098

ಮೊಬೈಲ್ ನಂಬರ್: 080 4613 1111

ಸಮಯ: 11:30am–4pm, 6:30–11pm

ನಂದಿನಿ, ಆಂಧ್ರ ರೆಸ್ಟೋರೆಂಟ್ ,  ಸೇಂಟ್ ಮಾರ್ಕ್ಸ್ ರಸ್ತೆ, ಬೆಂಗಳೂರು

ನಂದಿನಿ ರೆಸ್ಟೊರೆಂಟ್​ ಬಗ್ಗೆ ನಾವು ಹೆಚ್ಚಾಗಿ ಹೇಳಬೇಕಿಲ್ಲ. ಜನರಿಗೆ ನಂದಿನಿ ಎಂದರೆ ಕ್ಯಾರಿಯರ್ ಮೀಲ್ಸ್​ ನೆನಪಾಗುತ್ತದೆ. ನಿಮ್ಮ ಮನೆಗೆ ಸಡನ್​ ಆಗಿ ಬರುವ ಅತಿಥಿಗಳಿಗೆ ನೀವು ಬೇಗ ಆರ್ಡರ್​ ಮಾಡಿ ತರಿಸಿಕೊಡಬಹುದು. ಇದು ಆಂಧ್ರ ಸ್ಟೈಲ್​ ರುಚಿಯನ್ನು ಸವಿಯಲು ಬೆಸ್ಟ್​ ಸ್ಥಳ ಎನ್ನಬಹುದು.

ಇದನ್ನೂ ಓದಿ: ಮೈದುಂಬಿ ಹರಿಯುತ್ತಿರುವ ಈ ಸುಂದರ ಜಲಪಾತಗಳನ್ನು ನೀವೂ ಕಣ್ತುಂಬಿಕೊಳ್ಳಿ

ವಿಳಾಸ: 01, ಸೇಂಟ್ ಮಾರ್ಕ್ಸ್ ರಸ್ತೆ, ಶ್ರೀನಿವಾಸ್ ನಗರ, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560001

ಮೊಬೈಲ್ ನಂಬರ್:  080 4123 3333

ಸಮಯ: 11:30am–4pm, 6:30–11pm
Published by:Sandhya M
First published: