Rakshi Shops Near Me: ಅಣ್ಣಂಗೆ ಕಟ್ಟೋಕೆ ಸೂಪರ್ ರಾಖಿ ಬೇಕಾ? ಹಾಗಾದ್ರೆ ಬೆಂಗಳೂರಿನ ಈ ಸ್ಥಳಗಳು ಬೆಸ್ಟ್​ ಅಂತೆ ನೋಡಿ

Best and Unique Rakhi Shops Near Me: ಬೆಂಗಳೂರಿನಲ್ಲಿ ನಿಮಗೆ ಬೇಕಾದ ರೀತಿಯಲ್ಲಿ, ಹಲವಾರು ವಿಧಗಳಲ್ಲಿ ಹಲವೆಡೆ ರಾಖಿ ಸಿಗುತ್ತದೆ. ನಿಮಗೆ ವಿಶಿಷ್ಟ ರೀತಿಯಲ್ಲಿ ಬೇಕು ಎಂದರೆ ಕೆಲ ವಿಶೇಷ ಸ್ಥಳಗಳಿಗೆ ಹೋಗಿ ಖರೀದಿ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಕ್ಷಾ ಬಂಧನ (Raksha Bandhan) ಹತ್ತಿರ ಬಂದಿದೆ. ಸಹೋದರ – ಸಹೋದರಿಯ (Brother and Sister)  ಅದ್ಬುತ ಸಂಬಂಧವನ್ನು ಸಾರುವ ಈ ಹಬ್ಬ ಬಹಳ ಪ್ರಮುಖ. ಈಗಾಗಲೇ ನೀವು ರಾಖಿ ಖರೀದಿ ಮಾಡಿ ಆಗಿದ್ರೆ ಮಂದಿನ ಬಾರಿ ಹೋಗಿ, ಇಲ್ಲದಿದ್ದರೆ ನಾವು ನಿಮಗೆ ಸಹಾಯ ಮಾಡ್ತೀವಿ.  ಬೆಂಗಳೂರಿನಲ್ಲಿ ನಿಮಗೆ ಬೇಕಾದ ರೀತಿಯಲ್ಲಿ, ಹಲವಾರು ವಿಧಗಳಲ್ಲಿ ಹಲವೆಡೆ ರಾಖಿ ಸಿಗುತ್ತದೆ. ನಿಮಗೆ ವಿಶಿಷ್ಟ ರೀತಿಯಲ್ಲಿ ಬೇಕು ಎಂದರೆ ಕೆಲ ವಿಶೇಷ ಸ್ಥಳಗಳಿಗೆ ಹೋಗಿ ಖರೀದಿ ಮಾಡಬೇಕು. ಹಾಗಾದ್ರೆ ಬೆಂಗಳೂರಿನಲ್ಲಿ ಬೆಸ್ಟ್ ರಾಖಿ ಸಿಗುವ ಜಾಗಗಳನ್ನು (Near Me Rakhi Shops) ಹುಡುಕುತ್ತಿದ್ದರೆ, ಇಲ್ಲಿದೆ ಟಾಪ್​ 5 ಲಿಸ್ಟ್​.

ಜಯನಗರ ಕಾಂಪ್ಲೆಕ್ಸ್

​ಈ ಸ್ಥಳ ಪಾಕೆಟ್​ ಸ್ನೇಹಿ ಬಟ್ಟೆಗಳಿಗೆ ಹೆಚ್ಚು ಫೇಮಸ್​. ಇಲ್ಲಿ ಕೇವಲ ಬಟ್ಟೆ ಮಾತ್ರವಲ್ಲ ಬಹುತೇಕ ಮನೆಗೆ ಬೇಕಾಗುವ ಎಲ್ಲಾ ವಸ್ತುಗಳು ಲಭ್ಯವಿದೆ. ಬಿಡಿಭಾಗಗಳು, ಹಬ್ಬದ ಅಲಂಕಾರಿಕ ವಸ್ತುಗಳು, ಆಭರಣ ಮಳಿಗೆಗಳು ಮತ್ತು ಫ್ಯಾನ್ಸಿ ಸ್ಟೋರ್‌ಗಳು ಹೀಗೆ ಎಲ್ಲವೂ ಇದೆ. ರಕ್ಷಾ ಬಂಧನ ಸಮಯದಲ್ಲಿ ನೀವು ಇಲ್ಲಿಗೆ ಒಮ್ಮೆ ವಿಸಿಟ್ ಮಾಡಿದರೆ, ನಿಮಗೆ ಹಲವಾರು ಆಯ್ಕೆಗಳು ಸಿಗುತ್ತದೆ. ಕೇವಲ ವಿಭಿನ್ನ ರಾಖಿ ಮಾತ್ರವಲ್ಲದೇ, ನಿಮ್ಮ ಬಜೆಟ್​ಗೆ ತಕ್ಕಂತೆ ಇದೆ ಲಭ್ಯವಿದೆ.

ಚಿಕ್ಕಪೇಟೆ

ಈ ಸ್ಥಳದ ಬಗ್ಗೆ ನಾವು ಹೆಚ್ಚು ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ ಎನ್ನಬಹುದು. ಇಲ್ಲಿಯೂ ಸಹ ನಿಮಗೆ ಯಾವ ವಸ್ತುಗಳು ಸಿಗುವುದಿಲ್ಲ ಎಂಬುದಿಲ್ಲ. ಎಲ್ಲವೂ ಲಭ್ಯವಿದೆ. ಹಾಗೆಯೇ ರಾಖಿ ಸಹ. ನಿಮಗೆ ನಿಮ್ಮ ಸಹೋದರನಿಗೆ ಅವರ ಹೆಸರಿರುವ ರಾಖಿ ಕೊಡಬೇಕು ಎಂದರೆ ಆ ರೀತಿಯ ರಾಖಿ ಕೂಡ ಇಲ್ಲಿ ಸಿಗುತ್ತದೆ. ಒಂದು ಕ್ಷಣ ನಿಮಗೆ ಯಾವುದನ್ನು ಖರೀದಿ ಮಾಡಬೇಕು, ಮಾಡಬಾರದು ಎಂಬ ಗೊಂದಲ ಹುಟ್ಟುತ್ತದೆ. ನಿಮ್ಮ ಎಲ್ಲಾ ಹಬ್ಬದ ಶಾಪಿಂಗ್​ಗೆ ಈ ಸ್ಥಳ ಬೆಸ್ಟ್​ ಎನ್ನಬಹುದು.



ಇದನ್ನೂ ಓದಿ: ಜಯನಗರದ ಬೆಸ್ಟ್ ಸ್ವೀಟ್ಸ್​ ಶಾಪ್​ಗಳ ಲಿಸ್ಟ್ ಇಲ್ಲಿದೆ - ಆ ಕಡೆ ಹೋದ್ರೆ ಮಿಸ್​ ಮಾಡ್ದೇ ಹೋಗಿ

ಹಲಸೂರು ಮಾರ್ಕೆಟ್​

ದಕ್ಷಿಣ ಬೆಂಗಳೂರು ನಿಮಗೆ ತುಂಬಾ ದೂರ ಅನಿಸಿದರೆ, ಚಿಕ್ಕಪೇಟೆ ಹಾಗೂ ಜಯನಗರ ಹೋಗಲು ಕಷ್ಟವಾದರೆ ನೀವು  ಹಲಸೂರಿನ ಮಾರುಕಟ್ಟೆಗೆ ಹೋಗಬಹುದು, ಇಲ್ಲಿ ನಿಮಗೆ ರಾಖಿಗಳು, ಕೆಲವು ಫ್ಯಾನ್ಸಿ ಸ್ಟೋರ್‌ಗಳಿದ್ದು, ಕಡಿಮೆ ಬೆಲೆಗೆ ಇಲ್ಲಿ ನಿಮಗೆ ಬೇಕಾದ ರಾಖಿ ಸಿಗುತ್ತದೆ. ನೀವು ಹೆಚ್ಚು ಖರೀದಿ ಮಾಡಿದರೆ, ಡಿಸ್ಕೌಂಟ್​ ಸಹ ಲಭ್ಯವಿರುತ್ತದೆ.

ಗಾಂಧಿ ಬಜಾರ್

​ಈ ಸ್ಥಳ ಸಹ ಜಯನಗರ ಹಾಗೂ ಚಿಕ್ಕಪೇಟೆ ರೀತಿಯಲ್ಲಿಯೇ ಬಟ್ಟೆ ಹಾಗೂ ಇತರ ವಸ್ತುಗಳ ಶಾಪಿಂಗ್​ಗೆ ಹೆಚ್ಚು ಪ್ರಸಿದ್ದ. ಇಲ್ಲಿ ಸಹ ಬಜೆಟ್​ ಸ್ನೇಹಿ ವಸ್ತುಗಳು ಲಭ್ಯವಿದೆ. ನಿಮಗೆ ಈ ಸ್ಥಳ ಹತ್ತಿರ ಎಂದಾದರೆ ಇಲ್ಲಿಗೆ ಹೋಗಿ ನೀವು ರಾಖಿ ತರುವುದು ಸೂಕ್ತ . ಇಲ್ಲಿ ಗಿಫ್ಟ್​ಗಳು ಸಹ ಲಭ್ಯವಿದೆ. ನೀವು ರಾಖಿಯ ಜೊತೆ ಇಷ್ಟದ ಗಿಫ್ಟ್​ ಸಹ ನೀವು ಕೊಡಬಹುದು.

ಇದನ್ನೂ ಓದಿ: ಸ್ಪೈಸಿ ಚಿಕನ್ ಐಟಮ್ ಬೇಕಾ? ಹಾಗಾದ್ರೆ ಜಯನಗರದ ಈ ರೆಸ್ಟೊರೆಂಟ್​ಗಳಿಗೆ ಹೋಗಿ



ಫೂಟ್​ ಪ್ರಿಂಟ್ಸ್​ ಫಾರ್​ ಎವರ್, ವರ್ತೂರ್,ಬೆಂಗಳೂರು

ಈ ಸ್ಥಳದಲ್ಲಿ ನಿಮಗೆ ವಿಶೇಷ ರೀತಿಯ ರಾಖಿಗಳು ಸಿಗುತ್ತದೆ. ನೀವು ಮೊದಲೇ ಹೋಗಿ ನಿಮಗೆ ಬೇಕಾದ ರಾಖಿಯನ್ನು ಸಹ ಹೇಳಿ ಮಾಡಿಸಬಹುದು. ನಿಮ್ಮ ಅಣ್ಣ ಅಥವಾ ತಮ್ಮನ ಫೋಟೋ ಸಹ ನೀವು ಹಾಕಿಸಿ ಕೊಡಬಹುದು. ರಾಖಿಗಳನ್ನು ಮಾತ್ರವಲ್ಲದೇ ಗಿಫ್ಟ್ ಹ್ಯಾಂಪರ್‌ಗಳನ್ನು ಸಹ ಖರೀದಿಸಬಹುದು, ಅದನ್ನೂ ಸಹ ಮೊದಲೇ ಹೇಳಿ ಮಾಡಿಸಬಹುದು. ನಿಮಗೆ ಈ ಅಂಗಡಿ ದೂರ ಎನಿಸಿದರೆ ಆನ್​ಲೈನ್​ ಮೂಲಕ ಸಹ ಇಲ್ಲಿಂದ ಆರ್ಡರ್​ ಮಾಡಬಹುದು,
Published by:Sandhya M
First published: