Teeth Pain Remedies: ಹಲ್ಲು ನೋವಿನ ಸಮಸ್ಯೆಗೆ ಇಲ್ಲಿದೆ ಸೂಪರ್ ಮನೆಮದ್ದು

ಹಲ್ಲಿನಿಂದ ಬರುವ ನೋವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ. ಕ್ಯಾಲ್ಸಿಯಂ ಕೊರತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೆ ಇರುವುದರಿಂದ ಹಲ್ಲಿನಲ್ಲಿ ಕುಳಿ ಹಾಗೂ ಹುಳುಕು ಉಂಟಾಗುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಲ್ಲುಗಳು (Teeth) ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅವುಗಳ ರಕ್ಷಣೆ ಅಷ್ಟೇ ಅಗತ್ಯ. ಹಲ್ಲಿನಿಂದ ಬರುವ ನೋವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ. ಕ್ಯಾಲ್ಸಿಯಂ (Calcium) ಕೊರತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೆ ಇರುವುದರಿಂದ ಹಲ್ಲಿನಲ್ಲಿ ಕುಳಿ ಹಾಗೂ ಹುಳುಕು (infected by worms) ಉಂಟಾಗುತ್ತವೆ. ಇವು ದಿನ ಕಳೆದಂತೆ ಹೆಚ್ಚುತ್ತಾ ಹೋಗಿ, ಹಲ್ಲಿನ ಬೇರುಗಳಿಗೆ ಪಸರಿಸುತ್ತವೆ. ಹಲ್ಲಿನ ಬೇರುಗಳಲ್ಲಿ ಉಂಟಾಗುವ ಹುಳುಕು, ನೋವು (Pain) ಹಾಗೂ ಸೆಳೆತದಿಂದ ಸಾಕಷ್ಟು ನೋವು ಉಂಟಾಗುವುದು. ಅತಿಯಾದ ಹಲ್ಲುನೋವಿಗೆ ಪ್ರಮುಖವಾಗಿ ಹಲ್ಲಿನ ಬುಡದಲ್ಲಿ ಆದ ಸೋಂಕು ಕಾರಣವಾಗಿದೆ. ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಹಲ್ಲುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು ಹೇಗೆ ಎಂದು ತಿಳಿದುಕೊಳ್ಳೋಣ.

  ತಂಪಾದ ನೀರು, ಬಿಸಿಯಾದ ವಸ್ತು, ಸಿಹಿ ತಿಂಡಿ ಹಾಗೂ ಗಟ್ಟಿಯಾದ ಆಹಾರವನ್ನು ಸೇವಿಸಿದಾಗ ಹುಳುಕಾದ ಹಲ್ಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಣಾಮ ಹಲ್ಲಿನ ಸುತ್ತಲ ಪ್ರದೇಶದಿಂದ ತಲೆ ಬುರುಡೆಯವರೆಗೂ ನೋವು ಉಂಟಾಗುವುದು. ಕೆಲವೊಮ್ಮೆ ಹಲ್ಲು ನೋವಿನಿಂದ ಕಿವಿನೋವು ಮತ್ತು ತಲೆನೋವು ಸಹ ಕೆರಳುವ ಸಾಧ್ಯತೆಗಳಿರುತ್ತವೆ. ಹಲ್ಲು ನೋವಿನ ಕಾರಣಕ್ಕೆ ನಿಧಾನವಾಗಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಯೋಚಿಸುವ ಸ್ಥಿತಿಯು ಎದುರಾಗುವುದು.

  ಇದನ್ನೂ ಓದಿ: Unhealthy Foods: ಈ ಆಹಾರಗಳ ಸೇವನೆ ನಮ್ಮ ದೇಹಕ್ಕೆ ಅನಾರೋಗ್ಯಕರ - ಇವುಗಳಿಂದ ದೂರವಿರಿ

  ಪರಿಣಾಮಕಾರಿ ಮನೆ ಮದ್ದನ್ನು ಸೇವಿಸಬಹುದು

  ಮನೆ ಮದ್ದುಗಳು ಯಾವುದೇ ಅಡ್ಡ ಪರಿಣಾಮವನ್ನು ಉಂಟುಮಾಡದೆ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುವುದು. ಹಲ್ಲಿನ ಸಮಸ್ಯೆ ದವಡೆಯಲ್ಲಿ ನೋವು, ಸಡಿಲವಾದ ವಸಡು, ಸೋಂಕು, ಹುಳುಕಲ್ಲು ಹಾಗೂ ವಸಡು ಸೋರಿಕೆಯಿಂದ ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ನಾವು ಪರಿಣಾಮಕಾರಿ ಮನೆ ಮದ್ದನ್ನು ಸೇವಿಸಬಹುದು. ನೀವು ಆಗಾಗ ಹಲ್ಲು ನೋವಿನಿಂದ ಬಳಲುತ್ತೀರಿ ಅಥವಾ ನಿಮ್ಮವರು ಹಲ್ಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದರೆ ಈ ಉಪಯುಕ್ತವಾದ ಮನೆ ಮದ್ದನ್ನು ಬಳಸಿಕೊಂಡು ನೋವಿನಿಂದ ಮುಕ್ತರಾಗಿ.

  ಉಗುರು ಬೆಚ್ಚನೆಯ ಉಪ್ಪುನಿಂದ ಬಾಯಿಯನ್ನು ಮುಕ್ಕಳಿಸುತ್ತಾ ಇರಿ

  ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಅರ್ಧ ಟೇಬಲ್ ಚಮಚ ಉಪ್ಪು ನೀರು ಸೇರಿಸಿ, ಚೆನ್ನಾಗಿ ಕಲಿಸಿಕೊಂಡು, ಈ ನೀರಿನಿಂದ ದಿನಕ್ಕೆ ಎರಡು ಮೂರು ಬಾರಿ ಬಾಯಿಯನ್ನು ಮುಕ್ಕಳಿಸುತ್ತಾ ಇರಿ. ಇದರಿಂದ ಸೋಂಕು ಉಂಟಾಗಿದ್ದ ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ಸೋಂಕು ಹಾಗೂ ನೋವು ಕಡಿಮೆಯಾಗುತ್ತದೆ.

  ಈರುಳ್ಳಿಯನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ನೋವಿರುವ ಹಲ್ಲುಗಳ ಭಾಗದಲ್ಲಿಟ್ಟು ಅಗಿಯಿರಿ

  ಸಾಮಾನ್ಯವಾಗಿ ಈರುಳ್ಳಿಯಲ್ಲಿರುವ ನಂಜುನಿರೋಧಕ ಗುಣಗಳು, ಎಂತಹ ಹಲ್ಲು ನೋವನ್ನು ಕೂಡ ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಂದು ವೇಳೆ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಹಸಿ ಈರುಳ್ಳಿಯನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ನೋವಿರುವ ಹಲ್ಲುಗಳ ಭಾಗದಲ್ಲಿಟ್ಟು ಅಗಿಯಿರಿ. ಇಲ್ಲದಿದ್ದರೆ ಹತ್ತು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿಕೊಂಡಿರಿ.

  ಇದನ್ನೂ ಓದಿ: Health Tips: ತುಂಬಾ ಹೊತ್ತು ಕುಳಿತುಕೊಳ್ಳೋದ್ರಿಂದ ಹೃದಯಾಘಾತವಾಗುತ್ತಾ? ತಜ್ಞರು ಏನ್ ಹೇಳ್ತಾರೆ?

  ಹಲ್ಲುನೋವು ಬಂದಾಗ ಬೆಳ್ಳುಳ್ಳಿಯನ್ನು ಬಳಸಿ

  ಬೆಳ್ಳುಳ್ಳಿಯನ್ನು ಪುರಾತನ ಕಾಲದಿಂದಲೂ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ. ಇದರಲ್ಲಿ ಆಲಿಸಿನ್ ಎನ್ನುವ ಸಂಯುಕ್ತ ಇರುವುದನ್ನು ಕಾಣಬಹುದು. ಅಲ್ಲದೆ ಶಕ್ತಿ ಶಾಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವುದು. ಹಲ್ಲುನೋವು ಬಂದಾಗ ಬೆಳ್ಳುಳ್ಳಿಯನ್ನು ಹೀಗೆ ಬಳಸಿ...

  *ಕೆಲವು ತಾಜಾ ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ.
  *ಸಿಪ್ಪೆಯನ್ನು ಬಿಡಿಸಿ, ಜಜ್ಜಿಕೊಳ್ಳಿ ಅಥವಾ ಪುಡಿಮಾಡಿಕೊಳ್ಳಿ.
  *ಅದನ್ನು ಉಪ್ಪಿನೊಂದಿಗೆ ಬೆರೆಸಿ.
  *ಉಪ್ಪಿನೊಂದಿಗೆ ಬೆರೆತ ಬೆಳ್ಳುಳ್ಳಿ ಮಿಶ್ರಣವನ್ನು ಪೀಡಿತ ಪ್ರದೇಶ ಅಥವಾ ನೋವಿನ ಜಾಗದಲ್ಲಿ ಇರಿಸಿ.
  *ನೋವು ಬಹುಬೇಗ ಕಡಿಮೆಯಾಗುವುದು.
  *ಅಗತ್ಯವಿದ್ದಾಗ ಈ ಸುಲಭ ಕ್ರಮವನ್ನು ಅನುಸರಿಸಬಹುದು.
  Published by:Swathi Nayak
  First published: