Benefits of Potato: ತಲೆನೋವು ಅನ್ನೋರು ಆಲೂಗಡ್ಡೆ ತಿಂದು ನೋಡಿ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಇದು ಬೆಸ್ಟ್ ಮದ್ದು

ಹಲವಾರು ಪೋಷಕಾಂಶಗಳನ್ನು ಹೊಂದಿರುವಂತಹ ಆಲೂಗಡ್ಡೆಯನ್ನು ಸಸ್ಯಾಹಾರಿಗಳು ಯಥೇಚ್ಛವಾಗಿ ಬಳಕೆ ಮಾಡುವುದು. ವಿಶ್ವದ ಯಾವುದೇ ಭಾಗಕ್ಕೆ ಹೋದರೂ ನಿಮಗೆ ಸಿಗುವಂತಹ ಒಂದು ಸಾಮಾನ್ಯ ತರಕಾರಿ

ಆಲೂಗಡ್ಡೆ

ಆಲೂಗಡ್ಡೆ

  • Share this:
    ಹಲವಾರು ಪೋಷಕಾಂಶಗಳನ್ನು ಹೊಂದಿರುವಂತಹ ಆಲೂಗಡ್ಡೆಯನ್ನು ಸಸ್ಯಾಹಾರಿಗಳು ಯಥೇಚ್ಛವಾಗಿ ಬಳಕೆ ಮಾಡುವುದು. ವಿಶ್ವದ ಯಾವುದೇ ಭಾಗಕ್ಕೆ ಹೋದರೂ ನಿಮಗೆ ಸಿಗುವಂತಹ ಒಂದು ಸಾಮಾನ್ಯ ತರಕಾರಿ (Vegetable) ಎಂದರೆ ಅದು ಆಲೂಗಡ್ಡೆ (Potato).  ಆಲೂಗಡ್ಡೆ ತುಂಬಾ ಶೀತ (Cold), ಹಾಗಾಗಿ ಚಳಿಗಾಲದಲ್ಲಿ ಇದನ್ನು ಸೇವನೆ ಮಾಡಲೇಬಾರದು ಎಂದೆಲ್ಲ ಅಂದುಕೊಂಡಿರುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ಆಲೂಗಡ್ಡೆ ತನ್ನಲ್ಲಿ ನಾರಿನ ಅಂಶವನ್ನು ಮತ್ತು ಪೊಟ್ಯಾಷಿಯಂ (Potassium) ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿದೆ. ಹೀಗಾಗಿ ನಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಆಲೂಗೆಡ್ಡೆಯಿಂದ ಇರುವ ಇತರ ಉಪಯೋಗಗಳನ್ನು ನೋಡೋಣ...

    ಮೆದುಳಿನ ಆರೋಗ್ಯ ಸುಧಾರಿಸುವುದು

    ಆಲೂಗಡ್ಡೆಯಲ್ಲಿ ಇರುವಂತಹ ಅಲ್ಪಾ ಲಿಪೊಲಿಕ್ ಎನ್ನುವಂತಹ ಸಹ ಕಿಣ್ವವು ಅರಿವಿನ ಸಂಪೂರ್ಣ ಆರೋಗ್ಯ ಸುಧಾರಣೆ ಮಾಡುವುದು. ಅಲ್ಝೈಮರ್ ಕಾಯಿಲೆ ಹೊಂದಿರುವವರಿಗೆ ಇದು ಸಹಕಾರಿ ಎಂದು ಹೇಳಲಾಗುತ್ತದೆ. ಇದರಲ್ಲಿ ಹಲವಾರು ವಿಟಮಿನ್ ಗಳು ಮತ್ತು ಖನಿಜಾಂಶಗಳಿದ್ದು, ಇದು ಮೆದುಳಿನ ಕ್ರಿಯೆ ಸುಧಾರಣೆ ಮಾಡುವುದು. ವಿಟಮಿನ್ ಬಿ6 ನರವ್ಯವಸ್ಥೆಯ ಆರೋಗ್ಯ ಕಾಪಾಡುವುದು.

    ಇದನ್ನೂ ಓದಿ: Cooking Oil Effects: ಅಡುಗೆಗೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಬಳಕೆ ಮಾಡುವುದು ಎಷ್ಟು ಹಾನಿಕರ ಗೊತ್ತಾ?

    ಆಲೂಗಡ್ಡೆಯ ನಾರಿನಾಂಶವು ಜೀರ್ಣಕ್ರಿಯೆ ಸುಧಾರಣೆ

    ಆಲೂಗಡ್ಡೆಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಾಗವಾಗಿಸುವುದು. ನಾರಿನಾಂಶವು ಜೀರ್ಣಕ್ರಿಯೆಗೆ ನೆರವಾಗುವುದು ಮತ್ತು ಕರುಳಿನ ಕ್ರಿಯೆಗಳು ಸರಾಗವಾಗಿ ಆಗಲು ಮತ್ತು ಮಲಬದ್ಧತೆ ಕಡಿಮೆ ಮಾಡುವುದು. ಬಟಾಟೆಯು ಅತಿಸಾರದಿಂದ ಚೇತರಿಸಿಕೊಳ್ಳಲು ಸಹಕಾರಿ. ಬಟಾಟೆಯಲ್ಲಿ ಇರುವಂತಹ ಪೊಟಾಶಿಯಂ ಅಂಶವು ಅತಿಸಾರ ವೇಳೆ ಕಳಕೊಂಡಿರುವಂತಹ ಖನಿಜಾಂಶ ಪಡೆಯಲು ನೆರವಾಗುವುದು.

    ಆಲೂಗಡ್ಡೆಯನ್ನು ಸೇವನೆ ಮಾಡುವುದರಿಂದ  ಕಿಡ್ನಿ ಸ್ಟೋನ್ ನಿವಾರಣೆ

    ಆಲೂಗಡ್ಡೆಯನ್ನು ಸೇವನೆ ಮಾಡುವುದರಿಂದ ಮೂತ್ರ ಪಿಂಡದ ಕಲ್ಲುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.ಆಲೂಗಡ್ಡೆಯ ಸಿಪ್ಪೆಯಲ್ಲಿ ತಾಮ್ರ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ಬಿ-ವಿಟಮಿನ್‌ಗಳಿದ್ದು ಇವುಗಳು ಆರೋಗ್ಯಕ್ಕೆ ಸಹಕಾರಿಯಾಗಿವೆ.

    ಅತಿಸಾರ ಸಮಸ್ಯೆಯಿಂದ ಬಳಲುವವರಿಗೆ ಆಲೂಗಡ್ಡೆ ಅತ್ಯಂತ ಉತ್ತಮ ಆಹಾರ

    ಅತಿಸಾರ ಸಮಸ್ಯೆಯಿಂದ ಬಳಲುವವರಿಗೆ ಆಲೂಗಡ್ಡೆ ಅತ್ಯಂತ ಉತ್ತಮ ಆಹಾರ. ಇದು ತೆಳುವಾದ ಆಹಾರವಾಗಿದ್ದು ಜೀರ್ಣ ಮಾಡಿಕೊಳ್ಳಲು ಸುಲಭವಾದ್ದರಿಂದ ಅತಿಸಾರಕ್ಕೆ ಇದು ರಾಮಬಾಣ. ಆದರೆ ತಿಳಿಯದೆ ಇದನ್ನೇ ಹೆಚ್ಚಾಗಿ ಸೇವಿಸಿದರೆ ತೊಂದರೆಯೂ ಆಗಬಹುದು.

    ಇದನ್ನೂ ಓದಿ: Benefits of Millets: ಮಧುಮೇಹಿಗಳ ಆರೋಗ್ಯಕ್ಕೆ ಬೆಸ್ಟ್ ಫುಡ್ ಅಂತೆ ಸಿರಿ ಧಾನ್ಯ

    ಕ್ಯಾಲೋರಿಕ್ ಅಂಶ ಕಡಿಮೆ ಇದ್ದು ತೂಕ ಇಳಿಕೆಗೆ ಸಹಕಾರಿ 

    ಆಲೂಗಡ್ಡೆ ಸೇವೆನೆ ಮಾಡುವುದರಿಂದ ತೂಕ ಹೆಚ್ಚಳಾವುತ್ತೆ ಎನ್ನುವ ತಪ್ಪು ಕಲ್ಪನೆ ಇದೆ.. ಆದ್ರೆ ಆಲೂಗಡ್ಡೆಯಲ್ಲಿ ಕ್ಯಾಲೋರಿಕ್ ಅಂಶ ಕಡಿಮೆ ಇದ್ದು, ಇದು ಧೀರ್ಘಕಾಲದವರೆಗೆ ಹಸಿವಿನ ಭಾವನೆ ಮೂಡದಂತೆ ತಡೆಯುತ್ತದೆ. ಅಲ್ಲದೆ ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ.

    ಆಲೂಗಡ್ಡೆ ರಸ ಕೂಡ ತಲೆನೋವನ್ನು ಕಡಿಮೆ ಮಾಡುತ್ತದೆ

    ಆಲೂಗಡ್ಡೆ ರಸ ಕೂಡ ನಿಮ್ಮ ತಲೆನೋವನ್ನು ಕಡಿಮೆ ಮಾಡುತ್ತದೆ. ಒಂದು ಸ್ವಚ್ಛ ಬಟ್ಟೆಯನ್ನು ತೆಗೆದುಕೊಳ್ಳಿ. ಆಲೂಗಡ್ಡೆ ರಸವನ್ನು ಸಿದ್ಧಪಡಿಸಿಕೊಂಡು ಅದರಲ್ಲಿ ಬಟ್ಟೆಯನ್ನು ಅದ್ದಿ, ಆ ಬಟ್ಟೆಯನ್ನು ತಲೆಗೆ ಬಿಗಿಯಾಗಿ ಕಟ್ಟಿಕೊಳ್ಳಿ. ಬಟ್ಟೆ ಬಿಸಿಯಾದ ತಕ್ಷಣ ತೆಗೆದು ಮತ್ತೆ ರಸದಲ್ಲಿ ಅದ್ದಿ ಕಟ್ಟಿಕೊಳ್ಳಿ.

    ಆಲೂಗಡ್ಡೆ ಸಿಪ್ಪೆಯಿಂದಲೂ ನಿಮ್ಮ ತಲೆ ನೋವನ್ನು ಕಡಿಮೆ ಮಾಡಬಹುದು. ಆಲೂಗಡ್ಡೆಯಿಂದ ಸಬ್ಜಿ ತಯಾರಿಸಿ. ತೆಗೆದ ಸಿಪ್ಪೆಯನ್ನು ತಲೆಗೆ ಬಟ್ಟೆಯ ಸಹಾಯದಿಂದ ಕಟ್ಟಿಕೊಳ್ಳಿ. ಇದರಿಂದಲೂ ನಿಮ್ಮ ತಲೆನೋವು ಮಾಯವಾಗಲಿದೆ.

    ಋತುಚಕ್ರದ ಮೊದಲಿನ ಲಕ್ಷಣಗಳನ್ನು ನಿವಾರಿಸುವುದು

    ಋತುಚಕ್ರದ ಮೊದಲು ಕಂಡುಬರುವಂತಹ ಕೆಲವೊಂದು ಸಮಸ್ಯೆಗಳನ್ನು ಬಟಾಟೆ ರಸವು ಕಡಿಮೆ ಮಾಡುವುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಆಲೂಗಡ್ಡೆಯಲ್ಲಿ ಇರುವಂತಹ ಉನ್ನತ ಮಟ್ಟದ ಕಾರ್ಬ್ಸ್ ಅಂಶವು ಟ್ರೈಪ್ಟೊಫಾನ್ ಅಂಶವನ್ನು ಉತ್ತೇಜಿಸುವುದು ಮತ್ತು ದೇಹದಲ್ಲಿ ಸೆರೊಟೊನಿನ್ ಉತ್ಪತ್ತಿಯನ್ನು ಹೆಚ್ಚಿಸುವುದು. ಇದರಿಂದ ಮನಸ್ಥಿತಿ ಉತ್ತಮವಾಗುವುದು ಮತ್ತು ಆತಂಕ ಕಡಿಮೆ ಆಗುವುದು.
    Published by:Swathi Nayak
    First published: