Papaya Benefits: ದಿನಕ್ಕೆ ಒಂದು ಕಪ್​ ಪಪ್ಪಾಯ ಹಣ್ಣು ತಿಂದ್ರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

Health Tips: ಬೆಳಗಿನ ಉಪಾಹಾರ ಸಮಯದಲ್ಲಿ ಪಪ್ಪಾಯಿಯನ್ನು ತಿನ್ನುವುದರಿಂದ ಹೊಟ್ಟೆಯು ಸ್ವಚ್ಛವಾಗಿರುತ್ತದೆ. ಪಪ್ಪಾಯಿಯ ತಾಜಾತನವು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪರಂಗಿ ಅಥವಾ ಪಪ್ಪಾಯಿ (Papaya) ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದೆ. ಇದು ತುಂಬಾ ರುಚಿಯ ಜೊತೆಗೆ, ಅನೇಕ ಆರೋಗ್ಯ (Health) ಗುಣಗಳಿಂದ ಕೂಡಿದೆ. ಪರಂಗಿ ಹಣ್ಣಿನ ಸೇವನೆಯಿಂದ ಉಂಟಾಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಕೆಲವರು ಪಪ್ಪಾಯಿಯನ್ನು ಬೆಳಗಿನ ಉಪಹಾರವಾಗಿ ತಿನ್ನುತ್ತಾರೆ. ಇದು ಅನೇಕ ಜೀವಸತ್ವಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದರಲ್ಲಿ ವಿಟಮಿನ್ ‘ಎ’ (Vitamin A)  ವಿಟಮಿನ್ ‘ಸಿ’ ಕ್ಯಾಲ್ಸಿಯಂ (Calcium), ಪ್ರೋಟಿನ್ ಮತ್ತು ಪೊಟ್ಯಾಸಿಯಂ ಹೇರಳವಾಗಿದೆ. ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಪ್ಪಾಯ ಉಳಿದ ಹಣ್ಣುಗಳಿಗೆ ಹೋಲಿಸಿದರೆ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು.

  ಋತುಸ್ರಾವದ ನೋವಿಗೆ ಉತ್ತಮ ಪರಿಹಾರ

  ಇದು ರಕ್ತ ಸಂಚಾರವನ್ನು ಸರಾಗವಾಗಿ ನಡೆಸುತ್ತದೆ. ಹಾಗಾಗಿ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ಕಂಡು ಬರುವ ನೋವು ಮತ್ತು ರಕ್ತ ಸ್ರಾವ ನಿಯಂತ್ರಣ ಆಗಲು ಸಹಕಾರಿಯಾಗಿರುತ್ತದೆ ಎಂದು ಹೇಳಬಹುದು. ಇದಕ್ಕೆ ಬಹು ಮುಖ್ಯ ಕಾರಣ ಎಂದರೆ ಪರಂಗಿ ಹಣ್ಣಿನಲ್ಲಿ ಕಂಡು ಬರುವ  ಪಪ್ಪಾಯಿನ್ ಎಂಬ ಅಂಶ.  ಋತುಸ್ರಾವದ ಅವಧಿಯಲ್ಲಿರುವ ಮಹಿಳೆಯರು ಪರಂಗಿ ಹಣ್ಣನ್ನು ಸೇವನೆ ಮಾಡಬಹುದು ಮತ್ತು ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

  ಆರ್ಥರೈಟಿಸ್ ಸಮಸ್ಯೆಗೆ ಪರಿಹಾರ ಆಗುತ್ತದೆ

  ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳು ಹೆಚ್ಚು ಸಿಗುತ್ತವೆ. ಹಾಗಾಗಿ ಪರಂಗಿ ಹಣ್ಣು ನಿಮ್ಮನ್ನು ಆರ್ಥ್ರೈಟಿಸ್ ಸಮಸ್ಯೆಯಿಂದ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು ಇದಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ನಡೆದಿರುವ ಒಂದು ಅಧ್ಯಯನದಲ್ಲಿ ವಿಟಮಿನ್ ಸಿ ಅಂಶ ಕಡಿಮೆ ಇರುವ ಆಹಾರಗಳನ್ನು ಯಾರು ಸೇವಿಸುತ್ತಾರೆ ಅವರಿಗೆ ಮುಂದಿನ ದಿನಗಳಲ್ಲಿ ಮೂಳೆಗಳಿಗೆ ಸಂಬಂಧ ಪಟ್ಟ ಆರ್ಥ್ರೈಟಿಸ್ ಸಮಸ್ಯೆ ಕಂಡು ಬರುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: Health Tips: ಅನೇಕ ಆರೋಗ್ಯ ಸಮಸ್ಯೆಗಳಿಗೆ ಈ ಕರ್ಬೂಜ ಹಣ್ಣೇ ಮದ್ದು; ಇದರ ಪ್ರಯೋಜನ ಪಡೆದುಕೊಳ್ಳಿ

  ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ

  ಕಣ್ಣುಗಳ ಒಳಪದರವನ್ನು ತಂಪಾಗಿ ನೋಡಿಕೊಂಡು ದೃಷ್ಟಿಯನ್ನು ಹೆಚ್ಚು ಮಾಡುವ ಗುಣ ಪರಂಗಿ ಹಣ್ಣಿನಲ್ಲಿ ಕಂಡು ಬರುತ್ತದೆ.  ಫ್ಲೇವನಾಯ್ಡ್ ಅಂಶಗಳು ಮತ್ತು ವಿಟಮಿನ್ ಎ ಅಂಶ ಯಥೇಚ್ಛವಾಗಿ ಸಿಗುವ ಕಾರಣದಿಂದ ಕಣ್ಣುಗಳಿಗೆ ಪರಂಗಿಹಣ್ಣು ತುಂಬಾ ಒಳ್ಳೆಯದು ಎಂಬ ಮಾತಿದೆ. ಕಣ್ಣುಗಳ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮನೆಯಲ್ಲಿ ಇರುವವರು ಕೂಡ ಪರಂಗಿ ಹಣ್ಣಿನ ಸೇವನೆ ಮಾಡಿದರೆ ಬಹಳಷ್ಟು ಬೇಗನೆ ಹುಷಾರಾಗಬಹುದು. ವಯಸ್ಸಾದಂತೆ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಪರಂಗಿ ಹಣ್ಣು ಬರಲು ಬಿಡುವುದಿಲ್ಲ.

  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

  ವಿಟಮಿನ್ ಎ ಮತ್ತು ವಿಟಮಿನ್ ಸಿ ಪಪ್ಪಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.  ಪಪ್ಪಾಯಿಯನ್ನು ಬಳಸುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ವಿಟಮಿನ್ ಸಿ ದೇಹದ ಬೆಳವಣಿಗೆಗೆ ಅವಶ್ಯಕವಾಗಿದೆ. ಅದಕ್ಕಾಗಿಯೇ ಪಪ್ಪಾಯಿ ತಿನ್ನಲು ಸಲಹೆ ನೀಡಲಾಗುತ್ತದೆ.

  ಇದನ್ನೂ ಓದಿ: Stress Relief Tea: ನಿತ್ಯ ಕಾಡೋ ಒತ್ತಡ, ಸುಸ್ತನ್ನು ಕಡಿಮೆ ಮಾಡಲು ಈ ಚಹಾ ಕುಡಿಯಿರಿ

  ​ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸುಲಭ ತಂತ್ರ

  ಈಗಾಗಲೇ ಅತಿಯಾದ ಬೊಜ್ಜಿನ ಅಂಶವನ್ನು ತಮ್ಮ ದೇಹದಲ್ಲಿ ಹೊಂದಿ ಹೆಚ್ಚು ತೂಕವನ್ನು ಪಡೆದಿರುವ ಜನರು ಆರೋಗ್ಯಕರವಾದ ದೇಹದ ತೂಕದ ನಿರ್ವಹಣೆಯಲ್ಲಿ ಅನುಕೂಲವಾಗುವಂತೆ ಪರಂಗಿಹಣ್ಣನ್ನು ನಿಯಮಿತವಾಗಿ ಪ್ರತಿದಿನವೂ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಒಂದು ಮೀಡಿಯಂ ಗಾತ್ರದ ಪರಂಗಿ ಹಣ್ಣಿನಲ್ಲಿ ಕೇವಲ 120 ಕ್ಯಾಲೋರಿಗಳು ಮಾತ್ರ ಸಿಗುತ್ತವೆ ಎಂಬುದು ಆರೋಗ್ಯ ತಜ್ಞರ ಲೆಕ್ಕಾಚಾರ.

  ಪಪ್ಪಾಯಿಯ ತಾಜಾತನವು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ

  ಬೆಳಗಿನ ಉಪಾಹಾರ ಸಮಯದಲ್ಲಿ ಪಪ್ಪಾಯಿಯನ್ನು ತಿನ್ನುವುದರಿಂದ ಹೊಟ್ಟೆಯು ಸ್ವಚ್ಛವಾಗಿರುತ್ತದೆ. ಪಪ್ಪಾಯಿಯ ತಾಜಾತನವು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅದೇ ಸಮಯದಲ್ಲಿ, ಅದರ ರುಚಿ ಕೂಡ ತಂಪಾಗಿರುತ್ತದೆ. ಬೇಸಿಗೆಯಲ್ಲಿ ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸದಿದ್ದರೆ, ನೀವು ಪಪ್ಪಾಯಿಯನ್ನು ಸೇವಿಸಲು ಪ್ರಾರಂಭಿಸಬೇಕು. ಕೆಲವೇ ದಿನಗಳಲ್ಲಿ ನೀವು ಈ ಸಮಸ್ಯೆಯಿಂದ ಮುಕ್ತರಾಗುತ್ತೀರಿ.
  Published by:Swathi Nayak
  First published: